ಕಲಬುರಗಿ: ಉಚಿತ ವಿದ್ಯುತ್ ಒದಗಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಯ ಮರುಪರಿಶೀಲನೆಗೆ ನಿಗದಿಪಡಿಸಿದ್ದ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಗೃಹಜ್ಯೋತಿ ಯೋಜನೆಯಿಂದ ಅನರ್ಹ ಫಲಾನುಭವಿಗಳನ್ನು ಹೊರಗಿಡುವ ಉದ್ದೇಶದಿಂದ ಜುಲೈ 1ರಿಂದ ಮನೆ-ಮನೆ ಸಮೀಕ್ಷೆ ಆರಂಭಿಸಲಾಗಿತ್ತು.
ಈ ಪ್ರಕ್ರಿಯೆ ಆಗಸ್ಟ್ 31ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, ಫಲಾನುಭವಿಗಳಿಂದ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮರುಪರಿಶೀಲನೆಗೆ ಸೆಪ್ಟೆಂಬರ್ 30ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಮನೆಗೆ ಸಮೀಕ್ಷಾ ಸಿಬ್ಬಂದಿ ಭೇಟಿ ನೀಡಿದ ಸಂದರ್ಭದಲ್ಲಿ ಮಾಲೀಕರು ಲಭ್ಯವಿಲ್ಲದಿರುವುದು, ಅಪಾರ್ಟ್‌ಮೆಂಟ್‌ಗಳಲ್ಲಿ ಸಮೀಕ್ಷಾ ಸಿಬ್ಬಂದಿಗೆ ಅಗತ್ಯ ಮಾಹಿತಿ ಹಾಗೂ ದಾಖಲೆಗಳು ದೊರೆಯದಿರುವುದು ಸೇರಿದಂತೆ ವಿವಿಧ ಕಾರಣಗಳಿಂದ ಮರುಪರಿಶೀಲನೆ ಪ್ರಕ್ರಿಯೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಗಡುವಿನೊಳಗೆ ಫಲಾನುಭವಿಗಳು ಮರುಪರಿಶೀಲನೆ ಪ್ರಕ್ರಿಯೆಗೆ ಅಗತ್ಯ ಸಹಕಾರ ನೀಡುವಂತೆ ಜೆಸ್ಕಾಂ ಮನವಿ ಮಾಡಿದೆ.
10:58 PM (IST) Sep 02
ಕೇಂದ್ರ ಸರ್ಕಾರದ 8ನೇ ವೇತನ ಆಯೋಗದ ಜಾರಿಗೆ ಸಂಬಂಧಿಸಿದಂತೆ ಪ್ರಮುಖ ಚರ್ಚೆಗಳು ನಡೆಯುತ್ತಿದ್ದು, ಇದು ಜನವರಿ 1, 2026 ರಿಂದ ಅನ್ವಯವಾಗಲಿದೆ. ಫಿಟ್‌ಮೆಂಟ್ ಫ್ಯಾಕ್ಟರ್, ಮೂಲ ವೇತನ ಮತ್ತು ಪಿಂಚಣಿಯಲ್ಲಿ ಭಾರಿ ಏರಿಕೆಯ ನಿರೀಕ್ಷೆಯಿದ್ದು, ಆಯೋಗವು ದೇಶಾದ್ಯಂತ ನೌಕರರ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ. ಹಾಗಾದರೆ ಪೇ ಮೆಂಟ್ ಎಷ್ಟು ಹೆಚ್ಚಾಗಲಿದೆ ಎನ್ನುವುದಕ್ಕೆ ಇಲ್ಲಿದೆ ಉತ್ತರ!
10:56 PM (IST) Sep 02
ಬೆಂಗಳೂರಿನ ಔಟರ್ ರಿಂಗ್ ರೋಡ್‌ನಲ್ಲಿನ ಟ್ರಾಫಿಕ್ ಜಾಮ್ ಕಡಿಮೆ ಮಾಡಲು, ಚಾಲನೆ ಮಾಡುವಾಗ ಆನ್‌ಲೈನ್ ಮೀಟಿಂಗ್‌ಗಳಲ್ಲಿ ಭಾಗವಹಿಸದಂತೆ ತಮ್ಮ ಉದ್ಯೋಗಿಗಳಿಗೆ ಸೂಚಿಸಲು ಸಂಚಾರ ಪೊಲೀಸರು ಐಟಿ ಕಂಪನಿಗಳಿಗೆ ಸಲಹೆ ನೀಡಿದ್ದಾರೆ.
10:28 PM (IST) Sep 02
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ದಶಕದ ನಂತರ ಡಾ. ಕೆ. ಶಿವರಾಮ ಕಾರಂತ ಬಡಾವಣೆಯಲ್ಲಿ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡುತ್ತಿದೆ. ಮೊದಲ ದಿನವೇ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, ನಿವೇಶನಗಳ ಸಂಖ್ಯೆ, ದರ, ಅಳತೆ ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ವಿವರ ಇಲ್ಲಿದೆ.
10:10 PM (IST) Sep 02
ಸಮೋಸಾ ಭಾರತದಲ್ಲಿ ಸೃಷ್ಟಿಯಾಗಿರುವ ಖಾದ್ಯ ಅಲ್ಲವೇ ಅಲ್ಲ. ಅದು ಭಾರತಕ್ಕೆ ಬಂದಿರುವ ಹಿಂದೆ ರೋಚಕ ಜರ್ನಿಯೇ ಇದೆ. ಮೊದಲ ಬಾರಿಗೆ ಹೈದರಾಬಾದ್‌ಗೆ ಬಂದಿದ್ದ ಸಮೋಸಾ ಇಂದು ದೇಶದ ಗಲ್ಲಿಗಲ್ಲಿಯಲ್ಲೂ ತಿನ್ನಲು ಸಿಗುತ್ತಿದೆ. ಈ ಕುರಿತ ರೋಚಕ ಸ್ಟೋರಿ ಇಲ್ಲಿದೆ.
09:12 PM (IST) Sep 02
ದಶಕಗಳಷ್ಟು ಹಳೆಯದಾದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳನ್ನು ತನಗೆ ಹಸ್ತಾಂತರಿಸಬೇಕೆಂದು ಮಹಾರಾಷ್ಟ್ರ ಸುಪ್ರೀಂ ಕೋರ್ಟ್‌ನಲ್ಲಿ ಶೀಘ್ರ ವಿಚಾರಣೆಗೆ ಮನವಿ ಮಾಡಿದೆ.
08:26 PM (IST) Sep 02
ಸಾಹಸ ಸಿಂಹ ವಿಷ್ಣುವರ್ಧನ್ ಅವರ ‘ಬಂಗಾರದ ಜಿಂಕೆ’ ಸಿನಿಮಾ ಕೇವಲ ನಿಧಿ ಹುಡುಕಾಟದ ಕಥೆಯಲ್ಲ. ವಿಚಿತ್ರ ಕನಸು, ನಿಗೂಢ ಗುಹೆ, ಹಿಂದಿನ ಜನ್ಮದ ನೆನಪು, ಪ್ರೀತಿ ಮತ್ತು ವರ್ಷಗಳ ಹಿಂದಿನ ಕೊಲೆಯ ರಹಸ್ಯ-ಇವೆಲ್ಲವನ್ನೂ ಒಳಗೊಂಡಿರುವ 1980ರ ಈ ಕನ್ನಡ ಚಿತ್ರದ ಕುತೂಹಲಕಾರಿ ಕಥೆ ಇಲ್ಲಿದೆ.
08:26 PM (IST) Sep 02
ಬಾಗಲಕೋಟೆ ತಾಲೂಕಿನ ಮುಗಳೊಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ, ತರಗತಿ ನಡೆಯುತ್ತಿದ್ದ ವೇಳೆ ಮೇಲ್ಛಾವಣಿ ಕುಸಿದು ನಾಲ್ವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡದ ಬಗ್ಗೆ ಹಲವು ಬಾರಿ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು, ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ.
07:45 PM (IST) Sep 02
ಪ್ರೀತಿಸಿದ ಜೋಡಿಯೊಂದು ಜಸ್ಟ್ 8 ತಿಂಗಳ ಹಿಂದಷ್ಟೇ ಮದುವೆ ಆಗಿತ್ತು. ಮುದ್ದಾಗಿದ್ದ ಈ ಜೋಡಿ ಮೇಲೆ ಬಿಎಂಟಿಸಿ ಬಸ್ಸಿನ ವಕ್ರದಷ್ಟಿ ಬಿದ್ದು, ಇಬ್ಬರನ್ನೂ ಬೇರ್ಪಡಿಸಿದೆ. ಭೀಕರ ಅಪಘಾತದಲ್ಲಿ ಪತಿ ಪ್ರಾಣ ಕಳೆದುಕೊಂಡಿದ್ದು, ಪತ್ನಿ ಕಂಗಾಲಾಗಿದ್ದಾಳೆ.
07:13 PM (IST) Sep 02
ಬಿಸಿಯೂಟ ಮಾಡುತ್ತಿದ್ದಾಗ ಹೃದಯಾಘಾತ ಸಂಭವಿಸಿ 9ನೇ ತರಗತಿ ವಿದ್ಯಾರ್ಥಿ ಪ್ರಾಣ ಕಳೆದುಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತ ಒಂದು ವರದಿ ಇಲ್ಲಿದೆ.
07:07 PM (IST) Sep 02
07:03 PM (IST) Sep 02
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಆಡಳಿತಾತ್ಮಕ ಹಿತದೃಷ್ಟಿಯಿಂದ ಬೃಹತ್ ಮಟ್ಟದ ವರ್ಗಾವಣೆ ನಡೆದಿದ್ದು, 69 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಮತ್ತು 18 ಡಿವೈಎಸ್‌ಪಿ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
07:02 PM (IST) Sep 02
06:02 PM (IST) Sep 02
ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮತ್ತು ಸಿಕ್ಸರ್‌ಗಳ ಮೂಲಕ ಛಾಪು ಮೂಡಿಸಿದ ಐದು ಪ್ರಸಿದ್ಧ ನಾಯಕರನ್ನು ಈ ಲೇಖನ ಪರಿಚಯಿಸುತ್ತದೆ. ಮಿಸ್ಬಾ-ಉಲ್-ಹಕ್, ಬ್ರೆಂಡನ್ ಮೆಕಲಮ್, ಎಂ.ಎಸ್. ಧೋನಿ, ಬ್ರಿಯಾನ್ ಲಾರಾ, ಮತ್ತು ಕ್ಲೈವ್ ಲಾಯ್ಡ್ ಅವರ ನಾಯಕತ್ವದ ಅವಧಿಯಲ್ಲಿನ ರನ್, ಸಿಕ್ಸರ್, ಮತ್ತು ಶತಕಗಳ ವಿವರವಾದ ವರದಿಯನ್ನು ಇಲ್ಲಿ ನೀಡಲಾಗಿದೆ.
06:01 PM (IST) Sep 02
ನಾಳೆ ಬಿಸಿಸಿಐ ಉನ್ನತ ಮಟ್ಟದ ಸಭೆ ನಡೆಸಲಿದೆ. ಈ ಸಭೆ ಬಳಿಕ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಬೇಸರದ ಸುದ್ದಿ ಹೊರ ಬೀಳುವ ಸಾಧ್ಯತೆ ಇದೆ. ಜೊತೆಗೆ ನಾಳಿನ ಸಭೆಯಲ್ಲಿ ಒಟ್ಟು ಐದು ಪ್ರಮುಖ ವಿಚಾರಗಳು ಚರ್ಚೆಗೆ ಬರಲಿವೆ.
05:39 PM (IST) Sep 02
05:33 PM (IST) Sep 02
ಇದುವರೆಗೆ ತಿರುಪತಿಗೆ ಹೋಗಲು ಮಧುಗಿರಿ ಭಾಗದ ಜನರು ಖಾಸಗಿ ವಾಹನ ಅಥವಾ ಬೇರೆ ಊರುಗಳ ಬಸ್‌ಗಳನ್ನು ಅವಲಂಬಿಸಬೇಕಿತ್ತು. ಈಗ ನೇರ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ದೊರೆತಿರುವುದರಿಂದ ಮಧ್ಯಮ ವರ್ಗದ ಜನರಿಗೆ ಮತ್ತು ಹಿರಿಯ ನಾಗರಿಕರಿಗೆ ತಿಮ್ಮಪ್ಪನ ದರ್ಶನ ಪಡೆಯಲು ಬಹಳ ಅನುಕೂಲವಾಗಲಿದೆ.
05:29 PM (IST) Sep 02
05:11 PM (IST) Sep 02
05:09 PM (IST) Sep 02
05:00 PM (IST) Sep 02
ಸ್ಟಾರ್ ಕ್ರಿಕೆಟಿಗ ತಮ್ಮ ಇಬ್ಬರು ಪತ್ನಿಯರ ನಡುವಿನ ಕೌಟುಂಬಿಕ ಕಲಹದಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೊದಲ ಪತ್ನಿ ಬಲವಂತದ ಗರ್ಭಪಾತ ಮತ್ತು ವಂಚನೆಯ ಗಂಭೀರ ಆರೋಪಗಳನ್ನು ಮಾಡಿದರೆ, ಎರಡನೇ ಪತ್ನಿ ಈ ಆರೋಪಗಳನ್ನು ಅಲ್ಲಗಳೆದು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಆರೋಪ-ಪ್ರತ್ಯಾರೋಪಗಳಿಂದ ಆ ಕ್ರಿಕೆಟರ್ ಖಾಸಗಿ ಬದುಕು ಬೀದಿಗೆ ಬಂದಿದೆ.
04:34 PM (IST) Sep 02
04:19 PM (IST) Sep 02
ಇಸ್ಲಾಂ ಪರ ಹೇಳಿಕೆ ವಿವಾದದ ನಂತರ, ಸಚಿವ ಬಸವರಾಜ ರಾಯರೆಡ್ಡಿ ಅವರು ವೇದಿಕೆಯೊಂದರಲ್ಲಿ ಸಾವಿನ ಕುರಿತು ಮಾರ್ಮಿಕವಾಗಿ ಮಾತನಾಡಿದ್ದಾರೆ. ಹಾಗಾದರೆ ಅವರು ಸಾವಿನ ಕುರಿತು ಹೇಳಿದ್ದೇನು? ಈ ಕುರಿತು ಕಂಪ್ಲಿಟ್ ಸ್ಟೋರಿ ಇಲ್ಲಿದೆ.
04:07 PM (IST) Sep 02
ಕಿಚ್ಚನ ಹುಟ್ಟುಹಬ್ಬದ ಸಂಭ್ರಮಕ್ಕೆ ಮೊದಲು ಕಿಕ್ ಕೊಟ್ಟಿದ್ದು 'ಬಿಲ್ಲ ರಂಗ ಭಾಷಾ' ಸಿನಿಮಾದ ರಗಡ್ ಪೋಸ್ಟರ್. ಆ ಪೋಸ್ಟರ್ ನೋಡಿ ಫ್ಯಾನ್ಸ್ ಫುಲ್ ಫಿದಾ ಆಗಿರುವಾಗಲೇ, ಸುದೀಪ್ ಮತ್ತೊಂದು ಬಿಗ್ ಅನೌನ್ಸ್‌ಮೆಂಟ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಅದೇನು ನೋಡಿ..
04:05 PM (IST) Sep 02
03:53 PM (IST) Sep 02
03:49 PM (IST) Sep 02
ಬೆಂಗಳೂರಿನ ಐತಿಹಾಸಿಕ ಕೆ.ಆರ್. ಮಾರ್ಕೆಟ್‌ನಲ್ಲಿ ಇನ್ನು ಮುಂದೆ ಸರಕು ಸಾಗಣೆ ವಾಹನಗಳು ಮತ್ತು ವ್ಯಾಪಾರಿಗಳಿಗೆ ಡಿಜಿಟಲ್ ಪ್ರವೇಶ ಶುಲ್ಕ ಕಡ್ಡಾಯವಾಗಲಿದೆ. ಈ ಹೊಸ ವ್ಯವಸ್ಥೆಯು ವಾಹನಗಳ ಪ್ರವೇಶಕ್ಕೆ ಹಾಗೂ ತರಲಾಗುವ ಸರಕುಗಳ ಪ್ರಮಾಣಕ್ಕೆ ಅನುಗುಣವಾಗಿ ಪ್ರತ್ಯೇಕ ಶುಲ್ಕವನ್ನು ನಿಗದಿಪಡಿಸಿದೆ.
03:13 PM (IST) Sep 02
ರೇಣುಕಾಸ್ವಾಮಿ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಲು ಒಪ್ಪಿರುವ ಪ್ರದೂಷ್ ಹೇಳಿಕೆ ದಾಖಲು ಪ್ರಕ್ರಿಯೆಯನ್ನು ಸೆಷನ್ಸ್ ನ್ಯಾಯಾಲಯ ಮುಂದೂಡಿದೆ. ದರ್ಶನ್ ಪರ ವಕೀಲರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ಆದೇಶ ಬಾಕಿ ಇರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
03:12 PM (IST) Sep 02
01:54 PM (IST) Sep 02
01:31 PM (IST) Sep 02
01:12 PM (IST) Sep 02
01:07 PM (IST) Sep 02
12:32 PM (IST) Sep 02
11:38 AM (IST) Sep 02
11:10 AM (IST) Sep 02
10:56 AM (IST) Sep 02
10:45 AM (IST) Sep 02
10:31 AM (IST) Sep 02
ಆರ್ಥಿಕ, ಕೌಟುಂಬಿಕ ಕಾರಣಗಳಿಂದಾಗಿ ಶಾಲೆಯಿಂದ ಹೊರಗುಳಿದಿದ್ದ ವಿದ್ಯಾರ್ಥಿನಿ. ಈ ವಿಚಾರ ತಿಳಿದು ಖುದ್ದು ನ್ಯಾಯಾಧೀಶರೇ ವಿದ್ಯಾರ್ಥಿನಿ ಮನೆಗೆ ತೆರಳಿ ಕುಟುಂಬಸ್ಥರನ್ನ ಭೇಟಿ ಮಾಡಿ ಶಿಕ್ಷಣ ಮಹತ್ವ ತಿಳಿಸಿ ವಿದ್ಯಾರ್ಥಿನಿಯನ್ನ ಮರಳಿ ಶಾಲೆಗೆ ಕರೆತಂದ ನ್ಯಾಯಾಧೀಶರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
09:24 AM (IST) Sep 02
ಖ್ಯಾತ ವಿಜ್ಞಾನಿ ದಿನೇಶ್ ಕುಮಾರ್ ಸಿಂಗ್ ಅವರನ್ನು ಬೆಂಗಳೂರಿನ ಯು ಆರ್ ರಾವ್ ಸ್ಯಾಟಲೈಟ್ ಸೆಂಟರ್ (URSC) ನ ನೂತನ ನಿರ್ದೇಶಕರಾಗಿ ನೇಮಿಸಲಾಗಿದೆ. ಅವರು ಎಂ. ಶಂಕರನ್ ಅವರಿಂದ ಅಧಿಕಾರ ಸ್ವೀಕರಿಸಲಿದ್ದು, ಬಿಜು ಎಸ್. ಆರ್. ಅವರು ಹ್ಯೂಮನ್ ಸ್ಪೇಸ್ ಫ್ಲೈಟ್ ಸೆಂಟರ್‌ನ (HSFC) ಹೊಸ ನಿರ್ದೇಶಕರಾಗಲಿದ್ದಾರೆ.
08:40 AM (IST) Sep 02
ಖಾರಿಫ್ ಋತುವಿನಲ್ಲಿ ಮಳೆ ಕೊರತೆಯಿಂದಾದ ಬೆಳೆ ನಷ್ಟಕ್ಕೆ, ಕಲಬುರಗಿ ಜಿಲ್ಲೆಯ 37,051 ರೈತರಿಗೆ 18 ಕೋಟಿ ರೂ. ಮಧ್ಯಂತರ ಬೆಳೆ ವಿಮೆ ಪರಿಹಾರ ಶೀಘ್ರದಲ್ಲೇ ಮಂಜೂರಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ಅಲ್ಲದೆ, ಆಗಸ್ಟ್ ತಿಂಗಳ ಮಳೆ ಕೊರತೆ ಆಧರಿಸಿ ಜಿಲ್ಲೆಯ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು.