Published : Aug 02, 2026, 06:38 AM ISTUpdated : Aug 02, 2026, 10:47 PM IST

Karnataka News Live: ತುಂಗಭದ್ರಾ ನೀರಿಗಾಗಿ ಕಾಯುತ್ತಿದ್ದ ರೈತರಿಗೆ ಸಿಹಿಸುದ್ದಿ - ಎನ್.ಎಸ್. ಬೋಸರಾಜು ಭರವಸೆ

ಸಾರಾಂಶ

 ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರವಾಗಿ ವಿರೋಧ ಪಕ್ಷದ ನಾಯಕರ ಅಭಿಪ್ರಾಯ ಪಡೆದು, ರಾಜ್ಯದ ಮುಂದಿನ ಕ್ರಮ ನಿರ್ಧರಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಭಾನುವಾರ ಸರ್ವ ಪಕ್ಷ ಸಭೆ ನಡೆಯಲಿದೆ.

ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಹರಿವು ಕುಸಿತ ಕಂಡಿದ್ದು, ಇಂಥ ಸಂಕಷ್ಟದ ಸ್ಥಿತಿಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ಅಸಾಧ್ಯ ಎಂದು ರಾಜ್ಯ ಸರ್ಕಾರ ಹೇಳಿದೆ. ಹೀಗಿರುವಾಗಲೂ ತಮಿಳುನಾಡಿಗೆ ಪ್ರತಿದಿನ 3500 ಕ್ಯುಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶಿಸಿದೆ. ಈ ಆದೇಶ ಪಾಲನೆ ಅಥವಾ ತಿರಸ್ಕಾರ ಹಾಗೂ ರಾಜ್ಯದ ಮುಂದಿರುವ ಆಯ್ಕೆಗಳ ಕುರಿತು ಚರ್ಚಿಸಲು ಮುಖ್ಯಮಂತ್ರಿ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವ ಪಕ್ಷ ಸಭೆ ನಡೆಸಲಾಗುತ್ತಿದೆ.

ಜತೆಗೆ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ನಿಯಂತ್ರಣ ಸಮಿತಿ ಆದೇಶ ಪಾಲಿಸದಿದ್ದರೆ ಮುಂದೆ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾದರೆ, ಯಾವೆಲ್ಲ ಅಂಶಗಳನ್ನು ಮುಂದಿಟ್ಟುಕೊಂಡು ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆಯೂ ಚರ್ಚಿಸಿ ನಿರ್ಧರಿಸಲಾಗುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್‌ ಕೂಡ ನೀರು ಬಿಡಲು ಆದೇಶಿಸಿದರೆ, ಆಗ ರಾಜ್ಯ ಸರ್ಕಾರ ಯಾವ ನಡೆ ಇಡಬೇಕು ಎಂಬ ಬಗ್ಗೆಯೂ ವಿಪಕ್ಷಗಳಿಂದ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ.

10:47 PM (IST) Aug 02

ತುಂಗಭದ್ರಾ ನೀರಿಗಾಗಿ ಕಾಯುತ್ತಿದ್ದ ರೈತರಿಗೆ ಸಿಹಿಸುದ್ದಿ - ಎನ್.ಎಸ್. ಬೋಸರಾಜು ಭರವಸೆ

Tungabhadra Reservoir: ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಲು ಸರಕಾರ ಬದ್ಧವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗು ಕಾಂಗ್ರೆಸ್ ಮುಖಂಡ ಎನ್.ಎಸ್.ಬೋಸರಾಜು ಹೇಳಿದರು.

Read Full Story

10:32 PM (IST) Aug 02

ಸಿನಿಮಾ ಚಿತ್ರೀಕರಣದ ಫೇವರಿಟ್ ಸ್ಥಳ ಇಂದು ಶಿಥಿಲ - ವೆಸ್ಲಿ ಸೇತುವೆಯ ದುಸ್ಥಿತಿ ನೋಡಿ

Chamarajanagar News: ಆಧುನಿಕ ತಂತ್ರಜ್ಞಾನವೇ ಇಲ್ಲದ ಕಾಲದಲ್ಲಿ, ಕೇವಲ ಸುಣ್ಣದ ಗಾರೆ ಮತ್ತು ಕಲ್ಲು ಕಂಬಗಳಿಂದಲೇ ನಿರ್ಮಿಸಲಾದ ಆ ಅದ್ಭುತ ನಿಮಾರ್ಣಕ್ಕೆ ಈಗ ಕಾಲದ ಕುತ್ತು ಬಂದೊದಗಿದೆ.

Read Full Story

10:32 PM (IST) Aug 02

OMG - 7ನೇ ತರಗತಿ ಹುಡ್ಗಂಗೆ 'I LOVE YOU' ಎಂದ ಸಾಯಿಪಲ್ಲವಿ; ತಗ್ಲಾಕ್ಕೊಂಡು ಹೊಡೆತ ತಿಂದಿದ್ದು ಯಾರಿಂದ?

ಅಂದು ಶಾಲಾ ದಿನಗಳಲ್ಲಿ ಸಾಯಿ ಪಲ್ಲವಿ ಬರೆದ ಆ ಒಂದು ಪತ್ರ ಇಂದು ವೈರಲ್ ಆಗುತ್ತಿರುವುದು ಅವರ ಸ್ಟಾರ್‌ಡಮ್‌ಗೆ ಸಾಕ್ಷಿ. ಮುಗ್ಧ ಹುಡುಗಿಯಾಗಿ ಪತ್ರ ಬರೆದು ಏಟು ತಿಂದಿದ್ದ ಸಾಯಿ ಪಲ್ಲವಿ, ಇಂದು ಇಡೀ ಭಾರತವೇ ಪೂಜಿಸುವ 'ಸೀತಾಮಾತೆ' ಆಗಿದ್ದಾರೆ..

Read Full Story

09:59 PM (IST) Aug 02

'ಏನ್ರೀ... ನಮ್ಮ ಕನ್ನಡ ಸಿನಿಮಾಗಳಲ್ಲಿ ಕಂಟೆಂಟ್ ಇಲ್ವಾ?' - ಡಿಂಪಲ್ ಕ್ವೀನ್ ರಚಿತಾ ರಾಮ್ ಬೇಸರ

ಸ್ಯಾಂಡಲ್‌ವುಡ್‌ನಲ್ಲಿ ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಬೆಂಬಲದ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಡಿಂಪಲ್ ಕ್ವೀನ್, ನಟಿ ರಚಿತಾ ರಾಮ್ ಈ ಬಾರಿ ತಮ್ಮ ಮನದಾಳದ ಬೇಸರವನ್ನು ಬಹಿರಂಗವಾಗಿ ಹಂಚಿಕೊಂಡಿದ್ದಾರೆ.

Read Full Story

09:35 PM (IST) Aug 02

ಅಯ್ಯೋ ದಿವ್ಯಾ ಭಾರತಿ.. ಕೊನೆಯದಾಗಿ 'ನನ್ನನ್ನು ಉಳಿಸಿ' ಅಂತ ಕೂಗಿಕೊಂಡ್ರಾ? ಆದ್ರೆ, ಯಾರೂ ಉಳಿಸಲಿಲ್ಲ ಪಾಪ..!!

ಅಂತಿಮವಾಗಿ ಶ್ರೀದೇವಿ ಅವರು ದಿವ್ಯಾ ಅವರ ಸ್ಥಾನವನ್ನು ತುಂಬಿದರು ಮತ್ತು ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತು. ಆದರೂ, ಶೂಟಿಂಗ್ ಸೆಟ್‌ನಲ್ಲಿ ದಿವ್ಯಾ ಭಾರತಿ ಅವರ ನೆನಪುಗಳು ಚಿತ್ರತಂಡವನ್ನು ಸದಾ ಕಾಡುತ್ತಿದ್ದವು ಎನ್ನುತ್ತದೆ ಚಿತ್ರತಂಡ. ಆದರೆ, ಕೊನೆಯ ದಿನ ದವ್ಯಾ ಭಾರತಿ ಹಾಗೆ ಹೇಳಿದ್ರು..!

Read Full Story

08:32 PM (IST) Aug 02

Tirupati Laddu - 311 ವರ್ಷವಾದ್ರೂ ಬದಲಾಗದ ರುಚಿ - ಮನೆಯಲ್ಲೇ ತಿರುಪತಿ ಲಡ್ಡು ಮಾಡೋದು ಹೇಗೆ?

ತಿರುಪತಿ ತಿಮ್ಮಪ್ಪನ ದೇವಸ್ಥಾನದ ಫೇಮಸ್ ಶ್ರೀವಾರಿ ಲಡ್ಡು ಇತ್ತೀಚೆಗೆ 311ನೇ ವರ್ಷದ ಮೈಲಿಗಲ್ಲು ತಲುಪಿದೆ. ಈ ಲಡ್ಡು ಯಾಕೆ ಇಷ್ಟು ಸ್ಪೆಷಲ್? ಇದರ ಇತಿಹಾಸವೇನು? ಅದೇ ರುಚಿಯಲ್ಲಿ ಮನೆಯಲ್ಲೇ ಇದನ್ನು ಮಾಡೋದು ಹೇಗೆ? ತಿಳಿಯೋಣ ಬನ್ನಿ.

Read Full Story

07:49 PM (IST) Aug 02

'ಸುದೀಪ್ ಮೇಲಿನ ಕೋಪವನ್ನು ಸಾನ್ವಿ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ' - ಚಕ್ರವರ್ತಿ ಚಂದ್ರಚೂಡ್‌ ಕಿಡಿ

Sanvi Sudeep Tattoo: ಕಿಚ್ಚ ಸುದೀಪ್‌ ಅವರ ಪುತ್ರಿ ಸಾನ್ವಿ ಸುದೀಪ್ ಬೆನ್ನಿನ ಮೇಲೆ ಹಾಕಿಸಿಕೊಂಡಿರುವ ಗಣೇಶನ ಟ್ಯಾಟೂ ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಚರ್ಚೆಗೆ ಕಾರಣವಾಗಿದೆ.

Read Full Story

07:08 PM (IST) Aug 02

ತೀರ್ಥಹಳ್ಳಿಯಲ್ಲಿ ಗುಡ್ಡ ಕುಸಿತ ದುರಂತ - ಕೊಪ್ಪಳದ 4 ವರ್ಷದ ಮಗು ಸೇರಿ ಮೂವರು ಸಾವು

Thirthahalli Landslide: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ದುಡಿಯಲು ಹೋಗಿದ್ದ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಕಕ್ಕರಗೋಳ್ ಗ್ರಾಮದ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

Read Full Story

06:42 PM (IST) Aug 02

ಮಳೆಗಾಲದಲ್ಲಿ ಕಡಿಮೆ ನೀರು ಕುಡೀತೀರಾ? ಹುಷಾರ್, ಈ ಗಂಭೀರ ಸಮಸ್ಯೆಗಳು ಬರಬಹುದು!

Monsoon Hydration: ಮಳೆಗಾಲದಲ್ಲೂ ನಮ್ಮ ದೇಹಕ್ಕೆ ಬೇಕಾದ ನೀರಿನ ಪ್ರಮಾಣ ಕಡಿಮೆಯಾಗಲ್ಲ. ಮೆದುಳು, ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಲು ಸಾಕಷ್ಟು ನೀರು ಬೇಕೇಬೇಕು.

Read Full Story

06:09 PM (IST) Aug 02

ಧ್ರುವ್ ವಿಕ್ರಮ್ ಜೊತೆ ಬ್ರೇಕಪ್ ಆಯ್ತಾ? ಅನುಪಮಾ ಪರಮೇಶ್ವರನ್ ಹೊಸ ಪೋಸ್ಟ್ ವೈರಲ್

Anupama Parameswaran Breakup: ದಕ್ಷಿಣ ಭಾರತದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಅನುಪಮಾ ಪರಮೇಶ್ವರನ್ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಆದರೆ ಈ ಬಾರಿ ಕಾರಣ ಅವರ ಹೊಸ ಸಿನಿಮಾ ಅಲ್ಲ.

Read Full Story

05:17 PM (IST) Aug 02

'ಉಪೇಂದ್ರ' ಚಿತ್ರದ ಶೂಟಿಂಗ್ ನೆನಪು ಬಿಚ್ಚಿಟ್ಟ ನಟಿ ಪ್ರೇಮಾ - ರಿಯಲ್ ಸ್ಟಾರ್ ಬಗ್ಗೆ ಹೀಗಾ ಹೇಳೋದು?

2000ರ ಆರಂಭದಲ್ಲಿ ಕನ್ನಡ ಹಾಗೂ ತೆಲುಗು ಚಿತ್ರರಂಗದ ಬಹುಬೇಡಿಕೆಯ ನಾಯಕಿಯಾಗಿದ್ದ ನಟಿ ಪ್ರೇಮಾ, ಸಂದರ್ಶನವೊಂದರಲ್ಲಿ ತಮ್ಮ ಸಿನಿ ಬದುಕಿನ ಹಲವು ಅಪರೂಪದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Read Full Story

04:41 PM (IST) Aug 02

ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್‌ಗೆ ಬೆಂಗಳೂರಿನಲ್ಲಿ ಈ 4 ಹೋಟೆಲ್‌ಗಳು ಫೇವರಿಟ್ - ಯಾವುದು ಗೊತ್ತಾ?

ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ನಟಿ ಆಶಿಕಾ ರಂಗನಾಥ್‌ ಸಿನಿಮಾಗಳಷ್ಟೇ ಅಲ್ಲ, ತಮ್ಮ ಫುಡ್ ಲವ್‌ಗೂ ಸಾಕಷ್ಟು ಜನಪ್ರಿಯರು. ಹೊಸಹೊಸ ಖಾದ್ಯಗಳನ್ನು ಸವಿಯುವುದು ಅವರ ನೆಚ್ಚಿನ ಹವ್ಯಾಸ.

Read Full Story

04:32 PM (IST) Aug 02

ಕಹಾನಿ ಮೆ ಟ್ವಿಸ್ಟ್.. ರಾಮಾಯಣದ 'ರಾವಣರಾಜ್ಯ'ದಲ್ಲೀಗ ದುರ್ಯೋಧನ ಫ್ಯಾನ್ಸ್ ತುಂಟಾಟ; ಟೇಕ್ ಇಟ್ ಈಸಿ!

ನಟ ದರ್ಶನ್ ಐತಿಹಾಸಿಕ ಸಿನಿಮಾ ಸಂಗೊಳ್ಳಿ ರಾಯಣ್ಣ ರೋಲ್ ಮಾಡಿದ್ರು. ಅಂದು ಸಂಗೊಳ್ಳಿ ರಾಯಣ್ಣ ಲುಕ್ ನಲ್ಲಿ ದರ್ಶನ್​ಅವರನ್ನು ನೋಡಿ ಬಹಳಷ್ಟು ಜನರು ಮೆಚ್ಚಿಕೊಂಡಿದ್ರು. ಈಗ ಅದೇ ಸಿನಿರಸಿಕರು ನಟ ಯಶ್ ಅವರನ್ನು ರಾವಣಾಸುರನ ಪಾತ್ರದಲ್ಲಿ ನೋಡಿ ಶಹಬ್ಬಾಸ್ ಎಂದಿದ್ದಾರೆ. ಆದರೆ ಏನಾಗ್ತಿದೆ ಈಗ?

Read Full Story

03:53 PM (IST) Aug 02

ಸಲಿಂಗ ಕಾಮದ ಆಸೆ ಹುಟ್ಟಿಸಿ ಲಕ್ಷ ಲಕ್ಷ ಲೂಟಿ.. ಬೆಂಗಳೂರಲ್ಲಿ ಸೀಕ್ರೆಟ್ ಗ್ಯಾಂಗ್ ಆಕ್ಟೀವ್

ಡೇಟಿಂಗ್ ಆ್ಯಪ್‌ಗಳ ಮೂಲಕ ಸಲಿಂಗ ಸಂಬಂಧದ ಆಮಿಷವೊಡ್ಡಿ ಯುವಕರನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ದರೋಡೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಜಿಗಣಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಆನೇಕಲ್ ಮೂಲದ ನಾಲ್ವರು ಯುವಕರು ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.
Read Full Story

03:28 PM (IST) Aug 02

ಕರ್ನಾಟಕ ಸಂಕಷ್ಟಕ್ಕೆ ಸರ್ವಪಕ್ಷ ಒಗ್ಗಟ್ಟು - ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳ ಕಂಪ್ಲೀಟ್ ಮಾಹಿತಿ

ಕಾವೇರಿ ನೀರು ಹಂಚಿಕೆ ಕುರಿತ ಸರ್ವಪಕ್ಷ ಸಭೆಯಲ್ಲಿ ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ರೈತರ ಹಿತ ಕಾಯಲು ಸರ್ಕಾರ ಬದ್ಧವಾಗಿದ್ದು, ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಿ, ಕಾನೂನು ಹೋರಾಟವನ್ನು ಜಾಗರೂಕತೆಯಿಂದ ಮುಂದುವರಿಸಲು ಎಲ್ಲಾ ಪಕ್ಷಗಳು ಸಮ್ಮತಿಸಿವೆ.
Read Full Story

02:49 PM (IST) Aug 02

ಬೆಂಗಳೂರಲ್ಲಿ Boycott Swiggy..! ಹೋಟೆಲ್ ಮಾಲೀಕರ ಆಕ್ರೋಶಕ್ಕೆ ಕಾರಣವೇನು?

ಸಿಲಿಕಾನ್ ಸಿಟಿಯ ಹೋಟೆಲ್ ಉದ್ಯಮಿಗಳು ಹಾಗೂ ಆನ್‌ಲೈನ್ ಫುಡ್ ಡೆಲಿವರಿ ದೈತ್ಯ ಸ್ವಿಗ್ಗಿ ನಡುವಿನ ಸಂಘರ್ಷ ತಾರಕಕ್ಕೇರಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಆಗಸ್ಟ್ 15ರ ನಂತರ ಸ್ವಿಗ್ಗಿ ವೇದಿಕೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.

Read Full Story

01:52 PM (IST) Aug 02

ಕೈಯಲ್ಲಿ 8 ತಿಂಗಳ ಕೂಸು, ಕಣ್ಣಲ್ಲಿ ಸರ್ಕಾರಿ ಉದ್ಯೋಗದ ಕನಸು; ಅಮ್ಮನ ಜೊತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿತು 'ಖಾಕಿ ಮಡಿಲು'

ಬೆಂಗಳೂರಿನಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆ ಬರೆಯಲು ಬಂದ ತಾಯಿಯೊಬ್ಬರು ತನ್ನ ಎಂಟು ತಿಂಗಳ ಮಗುವನ್ನು ಹೊರಗೆ ಬಿಡಬೇಕಾಯಿತು. ತಾಯಿಗಾಗಿ ಅಳುತ್ತಿದ್ದ ಮಗುವನ್ನು ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಸಿಬ್ಬಂದಿ ಮಡಿಲಿಗೆ ತೆಗೆದುಕೊಂಡು, ಜೋಗುಳ ಹಾಡಿ ಆರೈಕೆ ಮಾಡಿದರು. ಈ ಮಾನವೀಯ ಘಟನೆಯು ತಾಯಿ ನಿರಾಳವಾಗಿ ಪರೀಕ್ಷೆ ಬರೆಯಲು ನೆರವಾಯಿತು.
Read Full Story

01:07 PM (IST) Aug 02

ಕಾನ್ಸ್‌ಟೇಬಲ್ ಪರೀಕ್ಷೆ ವೇಳೆ ಹಲವು ಅನುಮಾನ - ವಿಜಯಪುರದಲ್ಲಿ ಭುಗಿಲೆದ್ದ ಪರೀಕ್ಷಾರ್ಥಿಗಳ ಆಕ್ರೋಶ

ವಿಜಯಪುರದಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ವಿಳಂಬವಾದ ಕಾರಣ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಕಾಲೇಜಿನ ಗೇಟ್ ಮುರಿದು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.
Read Full Story

12:57 PM (IST) Aug 02

ಕನ್ನಡದ ಖ್ಯಾತ ನಟಿಗೆ ಸಾಯಿ ಪಲ್ಲವಿಗಿಂತ ಮೊದಲು 'ಸೀತೆ' ಪಾತ್ರದ ಅವಕಾಶ ಬಂದಿತ್ತು! ಆದ್ರೆ ಏಕೆ ಆಯ್ಕೆಯಾಗಿಲ್ಲ?

ಸಾಮಾನ್ಯವಾಗಿ ನಟಿಯರು ತಮಗೆ ಯಾವುದಾದರೂ ದೊಡ್ಡ ಸಿನಿಮಾದಲ್ಲಿ ಅವಕಾಶ ಸಿಗದೇ ಹೋದರೆ ಅದನ್ನು ಮುಚ್ಚಿಡುತ್ತಾರೆ ಅಥವಾ "ನಾನೇ ಆ ಸಿನಿಮಾವನ್ನು ರಿಜೆಕ್ಟ್ ಮಾಡಿದೆ" ಎಂದು ಬಿಲ್ಡಪ್ ಕೊಡುತ್ತಾರೆ. ಆದರೆ, ಈ ಕನ್ನಡದ ನಟಿ ಹೇಳಿದ್ದೇನು ಗೊತ್ತಾ? ನೋಡಿ..

Read Full Story

12:42 PM (IST) Aug 02

ಪೋಷಕರೇ ಎಚ್ಚರ! ಕುರ್‌ಕುರೆ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ನುಂಗಿ 5 ವರ್ಷದ ಬಾಲಕ ದಾರುಣ ಸಾವು!

ಕುರ್‌ಕುರೆ ಪಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್ ಗಿಫ್ಟ್ ಬಾಲ್ ಕುರ್‌ಕುರೆ ಎಂದುಕೊಂಡು ನುಂಗಿ ಐದು ವರ್ಷದ ಕಂದ ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ನಡೆದಿದೆ.

Read Full Story

12:32 PM (IST) Aug 02

ನೆಲ-ಜಲದ ವಿಷಯದಲ್ಲಿ ರಾಜಿ ಇಲ್ಲ - ಪತ್ನಿ ಅಗಲಿಕೆಯ ಶೋಕ, ಅನಾರೋಗ್ಯದ ನಡುವೆಯೂ ನಾಡಿನ ಹಿತಕ್ಕಾಗಿ ಮಿಡಿದ ಮಣ್ಣಿನ ಮಗ

ಕಾವೇರಿ ನದಿ ನೀರು ಹಂಚಿಕೆ ಕುರಿತ ಸರ್ವಪಕ್ಷ ಸಭೆಗೆ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ವೈಯಕ್ತಿಕ ಶೋಕ ಮತ್ತು ಅನಾರೋಗ್ಯದ ನಡುವೆಯೂ ತಮ್ಮ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ. ರಾಜ್ಯದ ಹಿತಾಸಕ್ತಿ ಕಾಪಾಡುವ ಸರ್ಕಾರದ ಕಾನೂನಾತ್ಮಕ ಪ್ರಯತ್ನಗಳಿಗೆ ಜೊತೆಗಿರುವುದಾಗಿ ಅವರು ಸಂದೇಶ ರವಾನಿಸಿದ್ದಾರೆ.
Read Full Story

11:55 AM (IST) Aug 02

ಬೆಂಗಳೂರು HRಗೆ ಅಶ್ಲೀಲ ಸಂದೇಶ ಕಳಿಸಿ ಕೊಲೆ ಬೆದರಿಕೆ ಹಾಕಿದ 24 ವರ್ಷದ ಉದ್ಯೋಗಕಾಂಕ್ಷಿ

ಬೆಂಗಳೂರಿನಲ್ಲಿ ಉದ್ಯೋಗ ಸಂದರ್ಶನದ ಫಲಿತಾಂಶ ಸಿಗದಿದ್ದಕ್ಕೆ ಕೋಪಗೊಂಡ 24 ವರ್ಷದ ಯುವಕನೊಬ್ಬ, ಹೆಚ್‌ಆರ್ ಸಿಬ್ಬಂದಿಗೆ ವಾಟ್ಸಪ್ ಮತ್ತು ಇ-ಮೇಲ್ ಮೂಲಕ ಅಶ್ಲೀಲ ಸಂದೇಶ ಹಾಗೂ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ದೊಮ್ಮಲೂರಿನ ಕಂಪನಿಯ ಉದ್ಯೋಗಿ ದೂರು ನೀಡಿದ್ದು, ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
Read Full Story

11:53 AM (IST) Aug 02

ವಿಚಾರಣೆಗೆ ಕರೆತಂದಿದ್ದ ವ್ಯಕ್ತಿ ನಿಗೂಢ ಸಾವು -ಹಗರಿಬೊಮ್ಮನಹಳ್ಳಿಯಲ್ಲಿ ನಡೀತಾ ಲಾಕಪ್ ಡೆತ್?

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ಖಲೀಲ್ ಎಂಬ ವ್ಯಕ್ತಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಪೊಲೀಸರು ಫಿಟ್ಸ್‌ನಿಂದ ಸಾವು ಸಂಭವಿಸಿದೆ ಎಂದು ಹೇಳಿದರೆ, ಇದು 'ಲಾಕಪ್ ಡೆತ್' ಎಂದು ಆರೋಪಿಸಿ ಕುಟುಂಬಸ್ಥರು ಮತ್ತು ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

Read Full Story

11:16 AM (IST) Aug 02

ತುಂಗಾ ಜಲಾಶಯದಿಂದ ನದಿಗೆ 75,000 ಕ್ಯೂಸೆಕ್‌ ನೀರು; ತುಂಗಭದ್ರಾ ಜಲಾಶಯಕ್ಕೆ ಒಳಹರಿವು

ತುಂಗಭದ್ರಾ ನದಿ ಪಾತ್ರದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮತ್ತು ಶಿವಮೊಗ್ಗದ ತುಂಗಾ ಜಲಾಶಯದಿಂದ 53,000 ದಿಂದ 75,000 ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿರುವುದರಿಂದ, ತುಂಗಭದ್ರಾ ಜಲಾಶಯದ ಒಳಹರಿವು ಇನ್ನೆರಡು ದಿನಗಳಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಯಿದೆ. ಶನಿವಾರ ಜಲಾಶಯಕ್ಕೆ 24,968 ಕ್ಯೂಸೆಕ್ ನೀರು ಹರಿದು ಬಂದಿದ್ದು, ನೀರಿನ ಮಟ್ಟ 1610 ಅಡಿ ತಲುಪಿದೆ.
Read Full Story

10:47 AM (IST) Aug 02

Bidadi Township Row - ಅಜ್ಜಿ ಚನ್ನಮ್ಮ ನಿಧನದಿಂದ ತಣ್ಣಗಾಗಿದ್ದ ಬಿಡದಿ ಟೌನ್‌ಶಿಪ್‌ ಹೋರಾಟ ಮತ್ತೆ ಶುರು!

ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ 'ಬಿಡದಿ ಉಳಿಸಿ, ರೈತರ ರಕ್ಷಿಸಿ' ಘೋಷಣೆಯೊಂದಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಆಗಸ್ಟ್ 9 ರಿಂದ 11ರ ವರೆಗೆ ಬೈರಮಂಗಲದಿಂದ ಬೆಂಗಳೂರಿನವರೆಗೆ ಈ ಯಾತ್ರೆ ನಡೆಯಲಿದೆ.

Read Full Story

10:21 AM (IST) Aug 02

leopard Vs Porcupine - ಮುಳ್ಳಹಂದಿ ಜೊತೆ ಕಾದಾಟಕ್ಕಿಳಿದು ಜೀವ ಕಳಕೊಂಡ ಚಿರತೆ!

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಹೊರವಲಯದಲ್ಲಿ ಚಿರತೆ ಕಳೆಬರ ಪತ್ತೆಯಾಗಿದೆ. ಮೇಲ್ನೋಟಕ್ಕೆ ಮುಳ್ಳಹಂದಿ ಬೇಟೆಯಾಡಲು ಮುಂದಾಗಿ ಅದರೊಂದಿಗೆ ಕಾದಾಟಕ್ಕಿಳಿದು ಸಾವನ್ನಪ್ಪಿರಬಹುದು ಎಂದ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.

Read Full Story

08:44 AM (IST) Aug 02

ದಾವಣಗೆರೆ - ದೇವರ ದರ್ಶನಕ್ಕೆ ಹೋದ ದಲಿತರ ಮೇಲೆ ಗ್ರಾಮಸ್ಥರಿಂದ ಹಲ್ಲೆ, ಬೆಳಲಗೆರೆಯಲ್ಲಿ ನಡೆದಿದ್ದೇನು?

ದಾವಣಗೆರೆ ಜಿಲ್ಲೆಯ ಬೆಳಲಗೆರೆ ಗ್ರಾಮದಲ್ಲಿ ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ದಲಿತ ಸಮುದಾಯದ ಯುವಕರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನತೆ ಉಂಟಾಗಿದ್ದು, ಅಧಿಕಾರಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿ, ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ ಹಾಕದಂತೆ ಎಚ್ಚರಿಕೆ

Read Full Story

08:21 AM (IST) Aug 02

ಬಿಕರ್ನಕಟ್ಟೆ-ಸಾಣೂರು ಹೆದ್ದಾರಿ ಮಣ್ಣು ಕುಸಿತ - ತಡೆಗೋಡೆ ನಡೆಸದೇ ಅವೈಜ್ಞಾನಿಕ ಕಾಮಗಾರಿ?

ಮಂಗಳೂರಿನ ಎಡಪದವು ಬಳಿ ರಾಷ್ಟ್ರೀಯ ಹೆದ್ದಾರಿ 169ರ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಣ್ಣು ಕುಸಿದಿದೆ. ತಡೆಗೋಡೆ ನಿರ್ಮಿಸದ ಕಾರಣ, ಮಳೆನೀರು ಕೃಷಿ ಭೂಮಿಗೆ ನುಗ್ಗಿ ಅಪಾರ ಹಾನಿಯಾಗಿದ್ದು, ಭಾರೀ ದುರಂತದ ಭೀತಿ ಎದುರಾಗಿದೆ.
Read Full Story

08:16 AM (IST) Aug 02

ಶಿವಮೊಗ್ಗ - ಚಲಿಸುತ್ತಿದ್ದ ವಾಹನದ ಮೇಲೆ ಬೃಹತ್ ಮರ ಉರುಳಿ ಬಿದ್ರೂ ಬದುಕುಳಿದ ಚಾಲಕ!

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ, ಚಲಿಸುತ್ತಿದ್ದ ಟಾಟಾ ಏಸ್ ವಾಹನದ ಮೇಲೆ ಬೃಹತ್ ಮರವೊಂದು ಉರುಳಿಬಿದ್ದಿದೆ. ಈ ದುರಂತದಲ್ಲಿ ವಾಹನದೊಳಗೆ ಸಿಲುಕಿದ್ದ ಚಾಲಕ ತೌಸಿಫ್ ಅವರನ್ನು ಪೊಲೀಸರು ಮತ್ತು ಸ್ಥಳೀಯರು ಹರಸಾಹಸಪಟ್ಟು ರಕ್ಷಿಸಿದ್ದು, ಚಾಲಕ ಗಂಭೀರ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
Read Full Story

08:09 AM (IST) Aug 02

Bengaluru To Belagavi ವಂದೇ ಭಾರತ್‌ ರೈಲು ಪ್ರಯಾಣ ತಪ್ಪಿಕೊಂಡವರಿಗೆ ಹಣ ರೀಫಂಡ್‌

Bengaluru Belagavi Vande Bharat Express train: ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲಿನ ವೇಳಾಪಟ್ಟಿ ಬದಲಾವಣೆ ಕುರಿತು ಕೆಲವು ಪ್ರಯಾಣಿಕರಿಗೆ ತಪ್ಪು ಸಂದೇಶ ರವಾನೆಯಾದ ಕಾರಣ, ಹಲವರು ರೈಲು ತಪ್ಪಿಸಿಕೊಂಡಿದ್ದಾರೆ.

Read Full Story

07:45 AM (IST) Aug 02

ಪಟ್ಟಣಕ್ಕೆ ಲಗ್ಗೆ ಇಟ್ಟ ಪ್ಲಾಸಿಕ್ ಗೊಂಬೆಗಳು; ಕೈಗೆಟುವ ದರದಲ್ಲಿ ಮಾರಾಟ, ಬೆಲೆ ಎಷ್ಟು?

ರಾಜಸ್ಥಾನದ ಅಲೆಮಾರಿ ಕುಟುಂಬಗಳು ಬೀಡುಬಿಟ್ಟಿದ್ದು, ಕೈಗೆಟುಕುವ ದರದಲ್ಲಿ ಗಾಳಿ ತುಂಬುವ ಪ್ಲಾಸ್ಟಿಕ್ ಗೊಂಬೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಕುದುರೆ, ನವಿಲು, ಆನೆಯಂತಹ ಆಕರ್ಷಕ ಗೊಂಬೆಗಳು ಕಡಿಮೆ ಬೆಲೆಗೆ ಸಿಗುತ್ತಿರುವುದರಿಂದ, ಮಕ್ಕಳಿಂದ ಹಿಡಿದು ಪಾಲಕರವರೆಗೂ ಎಲ್ಲರೂ ಖರೀದಿಗೆ ಮುಗಿಬೀಳುತ್ತಿದ್ದು, ವ್ಯಾಪಾರ ಜೋರಾಗಿ ನಡೆಯುತ್ತಿದೆ.

Read Full Story

07:31 AM (IST) Aug 02

Bengaluru ಖಾಲಿ ನಿವೇಶನ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ ಸಿಎಂ ಡಿಕೆ ಶಿವಕುಮಾರ್

ಸರ್ಕಾರ ಅಥವಾ ಸೊಸೈಟಿಯಿಂದ ಪಡೆದ ಖಾಲಿ ನಿವೇಶನಗಳಲ್ಲಿ 5 ವರ್ಷದೊಳಗೆ ಮನೆ ನಿರ್ಮಿಸದಿದ್ದರೆ ಅಂತಹ ನಿವೇಶನಗಳನ್ನು ಹಿಂಪಡೆಯಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಯಮ ಉಲ್ಲಂಘಿಸುವ ಮಾಲೀಕರಿಗೆ ದುಪ್ಪಟ್ಟು ತೆರಿಗೆ ವಿಧಿಸಿ, ಕಾನೂನು ಕ್ರಮ ಕೈಗೊಳ್ಳುವುದಾಗಿಯೂ ಅವರು ಎಚ್ಚರಿಸಿದ್ದಾರೆ.
Read Full Story

07:27 AM (IST) Aug 02

Green Bengaluru - ಬೆಂಗಳೂರಿಗರೇ ಗುಡ್‌ನ್ಯೂಸ್, ಸಸಿ ನೆಡಲು ಜಾಗ ಇದೆಯಾ? ಪಾಲಿಕೆಯ ಈ ನಂಬರ್‌ಗೆ ವಾಟ್ಸಪ್ ಮಾಡಿ ಸಾಕು

ಆಗಸ್ಟ್ 15 ರಿಂದ 'ಬೆಂಗಳೂರು ಹಸಿರೂರು' ಅಭಿಯಾನ ಆರಂಭವಾಗಲಿದ್ದು, ನಾಗರಿಕರು ತಮ್ಮ ಬಡಾವಣೆಗಳಲ್ಲಿ ಸಸಿಗಳನ್ನು ನೆಡಲು ಆಗಸ್ಟ್ 10ರೊಳಗೆ ಮನವಿ ಸಲ್ಲಿಸಬಹುದು. ಪಾಲಿಕೆಯು ಸ್ಥಳ ಪರಿಶೀಲನೆ ನಡೆಸಿ, ಸೂಕ್ತ ಸ್ಥಳಗಳಲ್ಲಿ ತಾನೇ ಸಸಿಗಳನ್ನು ನೆಡಲಿದೆ. ಈ ಅಭಿಯಾನದಡಿ 60 ಸಾವಿರ ಸಸಿ ನೆಡುವ ಗುರಿ ಹೊಂದಲಾಗಿದೆ.

Read Full Story

07:20 AM (IST) Aug 02

ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ - ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತ

ಹಾಸನ ಜಿಲ್ಲೆಯ ಯಡಕುಮರಿ ಬಳಿ ಭಾರಿ ಮಳೆಯಿಂದಾಗಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿದಿದೆ. ಈ ಕಾರಣದಿಂದ ಬೆಂಗಳೂರು-ಮಂಗಳೂರು ಮಾರ್ಗದ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು, ಹಲವು ರೈಲುಗಳನ್ನು ವಿವಿಧ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
Read Full Story

06:59 AM (IST) Aug 02

ಆಗಸ್ಟ್ 5ಕ್ಕೆ ಕಾರಂತ ಬಡಾವಣೆ ನಿವೇಶನಕ್ಕೆ ಅರ್ಜಿ; ಬೆಲೆ ಎಷ್ಟು? ಮಧ್ಯಮ ವರ್ಗಕ್ಕೆ ಸಿಗುತ್ತಾ?

ಬಹುನಿರೀಕ್ಷಿತ ಡಾ.ಕೆ.ಶಿವರಾಮ ಕಾರಂತ ಬಡಾವಣೆಯ ನಿವೇಶನಗಳಿಗೆ ಬಿಡಿಎ ಆಗಸ್ಟ್‌ 5ರಿಂದ ಆನ್‌ಲೈನ್‌ ಅರ್ಜಿ ಆಹ್ವಾನಿಸಿದೆ. ಈ ಬಡಾವಣೆಯಲ್ಲಿ ಭೂಮಿ ನೀಡಿದ ರೈತರಿಗೆ ಮತ್ತು ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಪ್ರಾಧಿಕಾರ ಸಿದ್ಧತೆ ನಡೆಸಿದೆ.

Read Full Story

More Trending News