Published : Aug 18, 2026, 05:21 AM ISTUpdated : Aug 18, 2026, 10:29 PM IST

Karnataka News Live: ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ನಾಳೆ ಅಂತ್ಯಕ್ರಿಯೆ!

ಸಾರಾಂಶ

ಬೆಂಗಳೂರು: ಜಿಲ್ಲಾ ಕಾಂಗ್ರೆಸ್‌ ಸಮಿತಿಗಳಿಗೆ ಅಧ್ಯಕ್ಷರ ನೇಮಕ ಸಂಬಂಧ ಹೈಕಮಾಂಡ್‌ ನಾಯಕರೊಂದಿಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್‌ ಹಾಗೂ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ತೆರಳಲಿದ್ದಾರೆ.

ರಾಜ್ಯದ 35 ಜಿಲ್ಲಾ ಕಾಂಗ್ರೆಸ್‌ ಸಮಿತಿಗಳಿಗೆ ಹೊಸದಾಗಿ ಅಧ್ಯಕ್ಷರ ನೇಮಕ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರವಹಿಸುವವರನ್ನು ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಪ್ರತಿ ಜಿಲ್ಲೆಗಳಿಗೂ ವೀಕ್ಷಕರನ್ನು ನೇಮಿಸಿ ಪಟ್ಟಿ ಸಿದ್ಧಪಡಿಸಲಾಗುತ್ತಿದ್ದು, ಅಂತಿಮ ಹಂತದಲ್ಲಿದೆ. ಅದರ ಕುರಿತು ಹೈಕಮಾಂಡ್‌ ನಾಯಕರೊಂದಿಗೆ ಚರ್ಚೆ ನಡೆಸಲು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಮಂಗಳವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.

ಮತ್ತೊಂದೆಡೆ ಆ.19ರಂದು ದೆಹಲಿಯ ಇಂದಿರಾ ಭವನದಲ್ಲಿ ನಡೆಯಲಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಪಾಲ್ಗೊಳ್ಳಲು ಸಿದ್ದರಾಮಯ್ಯ ದೆಹಲಿಗೆ ತೆರಳುತ್ತಿದ್ದಾರೆ.

10:29 PM (IST) Aug 18

ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ; ನಾಳೆ ಅಂತ್ಯಕ್ರಿಯೆ!

ಮಾಜಿ ಶಿಕ್ಷಣ ಸಚಿವ ಹಾಗೂ ತಿಪಟೂರು ಕ್ಷೇತ್ರದ ಜನಪ್ರಿಯ ಶಾಸಕರಾಗಿದ್ದ ಬಿ.ಸಿ. ನಾಗೇಶ್ ವಿಧಿವಶರಾಗಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಂಡಿದ್ದ ಅವರು, ಸರಳ ಸಜ್ಜನಿಕೆಯ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದರು. ಅವರ ನಿಧನಕ್ಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಶೋಕ ವ್ಯಕ್ತವಾಗಿದೆ.
Read Full Story

10:10 PM (IST) Aug 18

ಧಾರವಾಡದಲ್ಲಿ ಮೂವರು ರೈತರ ಸಾವು - ಸಚಿವರ ಬರ ವೀಕ್ಷಣೆ ವೇಳೆ ಸಂತ್ರಸ್ತರಿಗೆ ಸಿಗದ ಸಾಂತ್ವನ; ಸೌಜನ್ಯಕ್ಕೂ ಬರಲಿಲ್ಲ ಎಂದು ಆಕ್ರೋಶ

ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಮೂವರು ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದರೂ, ಜಿಲ್ಲಾಡಳಿತ ಸೌಜನ್ಯಕ್ಕೂ ಅವರ ಮನೆಗೆ ಭೇಟಿ ನೀಡದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Read Full Story

10:04 PM (IST) Aug 18

Dharwad - ಡಿಸಿ ಕಚೇರಿಯಲ್ಲಿ ನೌಕರನ ಆತ್ಮ*ತ್ಯೆ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ - ಪ್ರಧಾನಿ ಮೋದಿಗೆ ಪತ್ರ ಬರೆದು ಕೈ ಕೊಯ್ದುಕೊಂಡ ನೌಕರ!

ಧಾರವಾಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆಗೆ ಆಘಾತಕಾರಿ ತಿರುವು ಸಿಕ್ಕಿದೆ. ಸ್ನೇಹದ ಸೋಗಿನಲ್ಲಿ ಪರಿಚಯವಾದ ನೆರೆಹೊರೆಯವರು ಖಾಸಗಿ ವಿಡಿಯೋ ರೆಕಾರ್ಡ್ ಮಾಡಿ, ಅದನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ್ದೇ ಈ ಕೃತ್ಯಕ್ಕೆ ಕಾರಣವೆಂದು ತನಿಖೆಯಿಂದ ತಿಳಿದುಬಂದಿದೆ.

Read Full Story

10:04 PM (IST) Aug 18

ಕರಾವಳಿ ರೈಲ್ವೆ ಬೇಡಿಕೆಗಳು - ಗೋಮಟೇಶ್ವರ ಎಕ್ಸ್‌ಪ್ರೆಸ್‌ ಮಂಗಳೂರು ಸೆಂಟ್ರಲ್‌ ವರೆಗೆ ವಿಸ್ತರಿಸಲು ಮನವಿ

ಮಂಗಳೂರು ಭಾಗದ ಹಲವು ವರ್ಷಗಳ ರೈಲ್ವೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿಯು ಪಾಲಕಾಡು ವಿಭಾಗದ ಪ್ರಬಂಧಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಗೋಮಟೇಶ್ವರ ಎಕ್ಸ್‌ಪ್ರೆಸ್‌ ವಿಸ್ತರಣೆ, ಹೊಸ ರೈಲುಗಳ ಆರಂಭ, ನಿಲ್ದಾಣ ನವೀಕರಣ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಇವುಗಳನ್ನು ಆದ್ಯತೆಯ ಮೇಲೆ ಪರಿಗಣಿಸುವುದಾಗಿ ಡಿ.ಆರ್.ಎಂ. ಭರವಸೆ ನೀಡಿದ್ದಾರೆ.
Read Full Story

09:22 PM (IST) Aug 18

ಸಿದ್ದರಾಮಯ್ಯ ಬರಲೇ ಇಲ್ಲ, ಯತೀಂದ್ರ ತಡವಾಗಿ ಬಂದ್ರು.. CLP ಮೀಟಿಂಗ್‌ಗೆ ಘಟಾನುಘಟಿಗಳೇ ಗೈರು..!

ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಮೊದಲ ಸಿಎಲ್‌ಪಿ ಸಭೆಗೆ ಸಿದ್ದರಾಮಯ್ಯ ಗೈರಾಗಿದ್ದು, ಮಂತ್ರಿಗಿರಿ ಹಂಚಿಕೆ ವಿಚಾರದಲ್ಲಿನ ಅಸಮಾಧಾನ ಇನ್ನೂ ತಣಿದಿಲ್ಲ ಎಂಬ ಸೂಚನೆ ನೀಡಿದೆ. ಈ ಕುರಿತ ಸ್ಟೋರಿ ಇಲ್ಲಿದೆ..

Read Full Story

09:08 PM (IST) Aug 18

ಬೆಂಗಳೂರು ಇಸ್ಕಾನ್ ವಿವಾದ, ಯಾರಿಗೆ ಒಲಿಯಲಿದೆ ರಾಜಾಜಿನಗರದ ಹರೇ ಕೃಷ್ಣ ಮಂದಿರ?  ಹೊಸ ಪೀಠ ರಚನೆಗೆ ಸುಪ್ರೀಂ ಸಮ್ಮತಿ!

ಬೆಂಗಳೂರಿನ ಹರೇ ಕೃಷ್ಣ ದೇವಸ್ಥಾನದ ಮಾಲೀಕತ್ವದ ಕುರಿತು ಇಸ್ಕಾನ್ ಮುಂಬೈ ಮತ್ತು ಬೆಂಗಳೂರು ನಡುವಿನ ದೀರ್ಘಕಾಲದ ಕಾನೂನು ಹೋರಾಟದಲ್ಲಿ, ಸುಪ್ರೀಂ ಕೋರ್ಟ್ ತನ್ನ ಹಿಂದಿನ ತೀರ್ಪಿನ ಮರುಪರಿಶೀಲನಾ ಅರ್ಜಿಯ ವಿಚಾರಣೆಗೆ ಹೊಸ ಪೀಠವನ್ನು ಸ್ಥಾಪಿಸಲು ಪರಿಗಣಿಸುತ್ತಿದೆ. ನ್ಯಾಯಪೀಠದ ಭಿನ್ನಾಭಿಪ್ರಾಯದ ನಂತರ ಈ ಪ್ರಕರಣವು ಇದೀಗ ಅಂತಿಮ ಹಂತದ ಕಾನೂನು ಹೋರಾಟಕ್ಕೆ ತಲುಪಿದೆ.
Read Full Story

08:49 PM (IST) Aug 18

'ನನ್ನ ಏಕೈಕ ಕೆಲಸ ಬಡವರಿಗೆ ಸಹಾಯ ಮಾಡೋದು..' ವಿಧಾನಸಭೆ ಉಪಸಭಾಧ್ಯಕ್ಷರಾಗಿ ಆಯ್ಕೆಯಾದ ಮಂಕಾಳ ವೈದ್ಯ ಭಾವುಕ ಭಾಷಣ!

ಭಟ್ಕಳ ಶಾಸಕ ಮಂಕಾಳ ಸುಬ್ಬಾ ವೈದ್ಯ ಅವರು ರಾಜ್ಯ ವಿಧಾನಸಭೆಯ ನೂತನ ಉಪಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸದನದಲ್ಲಿ ಮಾತನಾಡಿದ ಅವರು, ಹೋಟೆಲ್ ಕೆಲಸದಿಂದ ರಾಜಕೀಯ ಪ್ರವೇಶಿಸಿ, ಪಕ್ಷೇತರನಾಗಿ ಗೆದ್ದು ಬಂದ ತಮ್ಮ ಕಷ್ಟದ ರಾಜಕೀಯ ಹಾದಿಯನ್ನು ಭಾವುಕರಾಗಿ ವಿವರಿಸಿದರು.
Read Full Story

08:32 PM (IST) Aug 18

ಮಂಕಾಳ್‌ ವೈದ್ಯ ಸಜ್ಜನ ವ್ಯಕ್ತಿ, ಅವರ ಮನವೊಲಿಸಲು ಕಷ್ಟವಾಯಿತು - ಸಿಎಂ ಡಿಕೆ ಶಿವಕುಮಾರ್‌ ಬಣ್ಣನೆ

ಮೀನುಗಾರ ಕುಟುಂಬದ ಹಿನ್ನೆಲೆಯ ಮಂಕಾಳ್ ವೈದ್ಯ ಅವರು ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಅವರನ್ನು ತಾವೇ ಮನವೊಲಿಸಿ ಈ ಜವಾಬ್ದಾರಿ ನೀಡಿದ್ದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸದನದಲ್ಲಿ ತಿಳಿಸಿದರು.

Read Full Story

08:06 PM (IST) Aug 18

ಜಾರಕಿಹೊಳಿ‌ ನಿವಾಸದಲ್ಲಿ ನಾಗರಪಂಚಮಿಯ ಪವಾಡ - ಶಾಸಕರು ಪೂಜೆ ಸಲ್ಲಿಸ್ತಿದ್ದಂತೆಯೇ ಬೆರಗಾದ ಭಕ್ತರು..!

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಾಗರಪಂಚಮಿ ಪೂಜೆ ಮುಗಿಸಿದ ಬೆನ್ನಲ್ಲೇ ಅವರ ನಿವಾಸದ ಆವರಣದಲ್ಲಿ ಜೀವಂತ ನಾಗರಹಾವು ಪ್ರತ್ಯಕ್ಷವಾಗಿದೆ. ನಾಗದೇವರ ಮೂರ್ತಿಯ ಬಳಿ ಹಾವು ಕಾಣಿಸಿಕೊಂಡ ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ 'ಪವಾಡ' ಎಂದು ವೈರಲ್ ಆಗುತ್ತಿದೆ.

Read Full Story

07:42 PM (IST) Aug 18

ಗಣೇಶ ಭಕ್ತರಿಗೆ ಬೆಲೆ ಏರಿಕೆ ಶಾಕ್ - ಈ ಬಾರಿ ಶೇ. 15 ರಿಂದ 25 ರಷ್ಟು ದುಬಾರಿಯಾಗಲಿದೆ ಗಣಪತಿ ಮೂರ್ತಿ!

ಈ ಬಾರಿಯ ಗಣೇಶ ಚತುರ್ಥಿಗೆ ಕಚ್ಚಾವಸ್ತುಗಳ ಬೆಲೆ, ಕಾರ್ಮಿಕರ ಕೂಲಿ ಮತ್ತು ಸಾರಿಗೆ ವೆಚ್ಚ ಹೆಚ್ಚಳದಿಂದಾಗಿ ಗೌರಿ-ಗಣೇಶ ಮೂರ್ತಿಗಳ ಬೆಲೆ ಶೇ. 15 ರಿಂದ 25 ರಷ್ಟು ದುಬಾರಿಯಾಗಲಿದೆ. ಹುಬ್ಬಳ್ಳಿ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಈ ಬೆಲೆ ಏರಿಕೆ ಪರಿಣಾಮ ಬೀರಲಿದೆ.

Read Full Story

07:36 PM (IST) Aug 18

ಮೊದಲ ಟೆಸ್ಟ್‌ ಗೆಲುವು ಬಹುತೇಕ ಖಚಿತ - ಲಂಕಾ ವಿರುದ್ಧ 4ನೇ ದಿನ ಭಾರತ ಭರ್ಜರಿ ಆಟ

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತದ ಗೆಲುವು ಖಚಿತವಾಗಿದ್ದು, ಅಂತಿಮ ದಿನವಾದ ನಾಳೆ ಟೀಮ್ ಇಂಡಿಯಾಕ್ಕೆ ಕೇವಲ 6 ವಿಕೆಟ್‌ಗಳ ಅವಶ್ಯಕತೆಯಿದೆ. ದ್ವಿತೀಯ ಇನ್ನಿಂಗ್ಸ್‌ನಲ್ಲಿ 66 ರನ್ ಬಾರಿಸಿದ ರಿಷಬ್ ಪಂತ್, ಟೆಸ್ಟ್ ಕ್ರಿಕೆಟ್‌ನಲ್ಲಿ 100 ಸಿಕ್ಸರ್ ಸಿಡಿಸಿದ ಮೊದಲ ಭಾರತೀಯ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದರು.

Read Full Story

07:13 PM (IST) Aug 18

ಡಿಕೆಶಿಯ ಅತ್ಯಂತ ನಂಬಿಕಸ್ತ ಸಾರಥಿ ಅಂದ್ರೆ ಕೃಷ್ಣ ಬೈರೇಗೌಡ.. ಇದೀಗ ಮತ್ತೊಂದು ಪವರ್‌ಫುಲ್ ಜವಾಬ್ದಾರಿ..!

ಸಚಿವ ಕೃಷ್ಣ ಬೈರೇಗೌಡರ ಕಾರ್ಯಕ್ಷಮತೆ ಮತ್ತು ಕ್ಲೀನ್ ಇಮೇಜ್‌ಗೆ ಮೆಚ್ಚುಗೆ ಸೂಚಿಸಿರುವ ಸಿಎಂ ಡಿಕೆಶಿ, ಅವರಿಗೆ ಸಂಸದೀಯ ವ್ಯವಹಾರಗಳ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ವಿಚಾರದಲ್ಲಿ ಈಗಾಗಲೇ ಜನಮನ್ನಣೆ ಗಳಿಸಿರುವ ಬೈರೇಗೌಡರು, ಸರ್ಕಾರದ ಅತ್ಯಂತ ನಂಬಿಕಸ್ತ ಸಚಿವರಾಗಿ ಹೊರಹೊಮ್ಮಿದ್ದಾರೆ.

Read Full Story

06:22 PM (IST) Aug 18

ಜೈಲಿನಲ್ಲಿ ದರ್ಶನ್ ಭೇಟಿಯಾದ ವಿಜಯಲಕ್ಷ್ಮೀ, ತಾಯಿ ಮೀನಾ - ಧನ್ವೀರ್ ಕೂಡ ಭೇಟಿ, ಕುತೂಹಲ!

ಕಾನೂನು ಹೋರಾಟದಲ್ಲಿ ಹಿನ್ನಡೆ, ಸೊಳ್ಳೆ ಕಾಟ, ಜೈಲಲ್ಲಿನ ಕಿರಿಕಿರಿ ಸೇರಿದಂತೆ ಅನೇಕ ನೋವುಗಳನ್ನು ಅನುಭವಿಸುತ್ತಿದ್ದ ನಟ ದರ್ಶನ್‌ಗೆ ಇವತ್ತು ಕೊಂಚ ಸಮಾಧಾನ ಸಿಕ್ಕಿದೆ. ಕುಟುಂಬಸ್ಥರ ಭೇಟಿ ಹಿನ್ನೆಲೆಯಲ್ಲಿ ಮಾನಸಿಕವಾಗಿ ಗಟ್ಟಿಯಾಗಿದ್ದಾರೆ.

Read Full Story

06:22 PM (IST) Aug 18

Cricket - ವಿರಾಟ್ ಕೊಹ್ಲಿಯ 18 ವರ್ಷದ ಕ್ರಿಕೆಟ್ ಪಯಣ! ಕಟ್ಟಾ ಅಭಿಮಾನಿಗಳಿಗೂ ತಿಳಿಯದ ಅಚ್ಚರಿ ದಾಖಲೆಗಳಿವು!

ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 18 ವರ್ಷಗಳನ್ನು ಪೂರೈಸಿರುವ ವಿರಾಟ್ ಕೊಹ್ಲಿ, ತಮ್ಮ ವೃತ್ತಿಜೀವನದಲ್ಲಿ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಈ ಲೇಖನವು ಅವರ ಶತಕಗಳಾಚೆಗಿನ, ಹೆಚ್ಚು ಪ್ರಚಾರಕ್ಕೆ ಬಾರದ ಆದರೆ ಅತ್ಯಂತ ಮಹತ್ವದ 5 ಅಪರೂಪದ ವಿಶ್ವದಾಖಲೆಗಳ ಮೇಲೆ ಬೆಳಕು ಚೆಲ್ಲುತ್ತದೆ.
Read Full Story

05:50 PM (IST) Aug 18

Car News; ಸ್ಟೈಲಿಶ್ ಲುಕ್, ಪವರ್‌ಫುಲ್ ಎಂಜಿನ್; ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಧುಮುಕಿದ ಸ್ಕೋಡಾ ಸ್ಲಾವಿಯಾ!

ಸ್ಕೋಡಾ ಆಟೋ ಇಂಡಿಯಾ ತನ್ನ ಜನಪ್ರಿಯ ಸೆಡಾನ್ 'ಸ್ಲಾವಿಯಾ'ದ ಹೊಸ ಫೇಸ್‌ಲಿಫ್ಟೆಡ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಮಾದರಿಯು ಆಕರ್ಷಕ ಬಾಹ್ಯ ವಿನ್ಯಾಸ, ಡಿಜಿಟಲ್ ಡಿಸ್ಪ್ಲೇ ಹಾಗೂ ವೆಂಟಿಲೇಟೆಡ್ ಸೀಟುಗಳಂತಹ ಆಧುನಿಕ ಕ್ಯಾಬಿನ್ ವೈಶಿಷ್ಟ್ಯಗಳನ್ನು ಹೊಂದಿದೆ.

Read Full Story

05:33 PM (IST) Aug 18

ಜೈಲಿಗೆ ಹಾಕ್ಲಿ, ನೇಣಿಗೇ ಹಾಕ್ಲಿ..ವಂದೇ ಮಾತರಂ ಎರಡು ಚರಣ ಮಾತ್ರ ನಾವು ಹಾಡೋದು - KPCC ಅಧ್ಯಕ್ಷ ಬಿಕೆ ಹರಿಪ್ರಸಾದ್‌

ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು, 'ವಂದೇ ಮಾತರಂ' ಗೀತೆಯ ಮೊದಲ ಎರಡು ಚರಣಗಳನ್ನು ಮಾತ್ರ ಹಾಡುವ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಪದ್ಧತಿಯನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ.

Read Full Story

05:19 PM (IST) Aug 18

ಗಾಢ ನಿದ್ದೆಯಲ್ಲೂ ಮಾಸ್ಟರ್ ಬ್ಲಾಸ್ಟರ್‌ಗೆ ಕಾಡಿದ್ದು ಅದೊಂದೇ ಚಿಂತೆ! ಪಾಕ್‌ನಲ್ಲಿ ನಡೆದ ಘಟನೆ ನೆನಪಿಸಿಕೊಂಡು ಭಾವುಕರಾದ ಸಚಿನ!

ಮಾಜಿ ಕ್ರಿಕೆಟಿಗ ಸಲೀಲ್ ಅಂಕೋಲ ಅವರು ಸಚಿನ್ ತೆಂಡೂಲ್ಕರ್ ಅವರೊಂದಿಗಿನ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 1989ರ ಪಾಕಿಸ್ತಾನ ಪ್ರವಾಸದ ವೇಳೆ ಸಚಿನ್ ನಿದ್ರೆಯಲ್ಲಿ ನಡೆದು ಸಹ ಆಟಗಾರನ ಕೋಣೆಯ ಬಾಗಿಲು ತಟ್ಟಿದ ಸ್ವಾರಸ್ಯಕರ ಘಟನೆಯನ್ನು ಈ ಸ್ಟೋರಿ ವಿವರಿಸುತ್ತದೆ.

Read Full Story

05:06 PM (IST) Aug 18

ಯಶವಂತಪುರ, KSR ಬೆಂಗಳೂರು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳೇ ಇಲ್ಲ - ರೈಲ್ವೆ ಇಲಾಖೆಗೆ CAG ತರಾಟೆ

ಭಾರತೀಯ ನಿಯಂತ್ರಕ ಮತ್ತು ಮಹಾಲೇಖಾಪಾಲರ (CAG) ವರದಿಯು ಬೆಂಗಳೂರಿನ ಕೆಎಸ್‌ಆರ್ ಮತ್ತು ಯಶವಂತಪುರ ಸೇರಿದಂತೆ ರಾಜ್ಯದ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಸೌಲಭ್ಯದ ತೀವ್ರ ಕೊರತೆಯನ್ನು ಬಯಲುಮಾಡಿದೆ.

Read Full Story

04:51 PM (IST) Aug 18

Dharwad Protest - ನಾವು ಮಾಡಿದ್ದಾದರೂ ಏನು ಅಪರಾಧ ಸ್ವಾಮಿ? ಧಾರವಾಡ ಬೀದಿಯಲ್ಲಿ ಕನಸುಗಳ ಹೊಸಕಿ ಹಾಕಿತಾ ಖಾಕಿ ದರ್ಪ! ನೊಂದ ಉದ್ಯೋಗಾಂಕ್ಷಿಗಳಿಂದ ಸ್ಟ್ರೇಟ್‌ ಸವಾಲ್!

ಸರ್ಕಾರಿ ಉದ್ಯೋಗಕ್ಕಾಗಿ ಧಾರವಾಡದಲ್ಲಿ ಶಾಂತಿಯುತ ಪ್ರತಿಭಟನೆಗೆ ಮುಂದಾದ ಉದ್ಯೋಗಾಂಕ್ಷಿಗಳ ಧ್ವನಿಯನ್ನು ಪೊಲೀಸ್ ಇಲಾಖೆ ಹತ್ತಿಕ್ಕಿದೆ. ಪ್ರತಿಭಟನೆಗೆ ಅನುಮತಿ ನಿರಾಕರಿಸಿ, ಸಂಘಟನೆಯ ಅಧ್ಯಕ್ಷ ಕಾಂತಕುಮಾರ್ ಅವರನ್ನು ಬಂಧಿಸುವ ಮೂಲಕ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆಯು ವ್ಯವಸ್ಥೆಯ ವಿರುದ್ಧ ಯುವ ಸಮೂಹದ ನೋವು ಮತ್ತು ಅಸಹಾಯಕತೆಯನ್ನು ಬಿಂಬಿಸುತ್ತದೆ

Read Full Story

04:13 PM (IST) Aug 18

MMDR ಕಾಯ್ದೆ ತಿದ್ದುಪಡಿ - ಕರ್ನಾಟಕಕ್ಕೆ ₹15,786 ಕೋಟಿ ತೆರಿಗೆ ಪಾವತಿಸುವ ಭೀತಿಯಲ್ಲಿ ಎನ್‌ಎಂಡಿಸಿ!

ಕರ್ನಾಟಕ ಸರ್ಕಾರದ ಪೂರ್ವಾನ್ವಯ ಖನಿಜ ತೆರಿಗೆ ಮಸೂದೆಯಿಂದಾಗಿ, ಕೇಂದ್ರ ಸರ್ಕಾರದ ಗಣಿಗಾರಿಕೆ ಸಂಸ್ಥೆ ಎನ್‌ಎಂಡಿಸಿ ₹15,785.72 ಕೋಟಿಗಳಷ್ಟು ಬೃಹತ್ ತೆರಿಗೆಯನ್ನು ಪಾವತಿಸುವ ಸಂಭಾವ್ಯ ಅಪಾಯವನ್ನು ಎದುರಿಸುತ್ತಿದೆ.

Read Full Story

04:00 PM (IST) Aug 18

ಮೈಸೂರು ದಸರಾ 2026 - ಗಜಪಯಣಕ್ಕೆ ಸಜ್ಜಾದ ಗಜಪಡೆ, ಕಳೆದ ವರ್ಷ ಅಂಬಾರಿ ಹೊತ್ತಿದ್ದದ ಅಭಿಮನ್ಯುಗೆ ಕೊಕ್‌

2026ರ ಮೈಸೂರು ದಸರಾ ಮಹೋತ್ಸವಕ್ಕಾಗಿ 12 ಆನೆಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. 60 ವರ್ಷ ತುಂಬಿದ ಕಾರಣ, ಈ ಹಿಂದೆ ಅಂಬಾರಿ ಹೊತ್ತಿದ್ದ ಪ್ರಸಿದ್ಧ ಆನೆ ಅಭಿಮನ್ಯುವಿಗೆ ವಿಶ್ರಾಂತಿ ನೀಡಲು ನಿರ್ಧರಿಸಲಾಗಿದೆ. ಮೊದಲ ತಂಡದ ಗಜಪಡೆಯು ಆಗಸ್ಟ್ 26 ರಂದು ಮೈಸೂರಿನತ್ತ 'ಗಜಪಯಣ' ಆರಂಭಿಸಲಿದೆ.
Read Full Story

03:57 PM (IST) Aug 18

ಆಂಧ್ರದಲ್ಲಿ ಅಣ್ಣ-ತಮ್ಮನ ಜುಗಲ್‌ಬಂದಿ.. ನಾಯ್ಡು ಸರ್ಕಾರದಲ್ಲಿ ಪವನ್ ಕಲ್ಯಾಣ್‌ಗೆ ಆನೆಬಲ..!

ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಅವರು ನಾಯ್ಡು ಸರ್ಕಾರದಲ್ಲಿ ತಮ್ಮ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸಹೋದರನಿಗೆ ಸಂಪುಟ ದರ್ಜೆಯ ಸ್ಥಾನಮಾನ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತ ಸ್ಟೋರ ಇಲ್ಲಿದೆ..

Read Full Story

03:32 PM (IST) Aug 18

Chamarajanagara - ಹನೂರು ಶೂಟೌಟ್ ಕೇಸ್‌ಗೆ ಬಿಗ್‌ಟ್ವಿಸ್ಟ್; ಸ್ಥಳದಲ್ಲಿ ಸಿಕ್ಕ ಹೊಸ ಚಪ್ಪಲಿ, ಸತ್ಯ ಬಿಚ್ಚಿಟ್ಟ ಎಸಿಎಫ್ ಮರಿಸ್ವಾಮಿ

ಕಾವೇರಿ ವನ್ಯಧಾಮದ ಶೂಟೌಟ್ ಪ್ರಕರಣದ ಕುರಿತು ಎಸಿಎಫ್ ಮರಿಸ್ವಾಮಿ ಹೇಳಿಕೆ ನೀಡಿದ್ದು, ಮೃತಪಟ್ಟವರು ಬೇಟೆಯಾಡುವ ಉದ್ದೇಶದಿಂದಲೇ ಬಂದಿದ್ದರು ಎಂದಿದ್ದಾರೆ. ಆತ್ಮರಕ್ಷಣೆಗಾಗಿ ನಮ್ಮ ಸಿಬ್ಬಂದಿ ಗುಂಡು ಹಾರಿಸಿದ್ದು, ಘಟನಾ ಸ್ಥಳದಲ್ಲಿ 34 ಕೆಜಿ ಮಾಂಸ ಕೂಡ ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

01:18 PM (IST) Aug 18

Toxic Countdown Day 09 - ಟಾಕ್ಸಿಕ್ ಕೌಂಟ್‌ಡೌನ್ 09.. ರಾಕಿಂಗ್ ಸ್ಟಾರ್ ಈ ಸಿನಿಮಾದಲ್ಲಿ ಏನೆಲ್ಲಾ ಇದೆ? ಸ್ಪೆಷಲ್‌ ಸ್ಟೋರಿ ಇಲ್ಲಿದೆ ನೋಡಿ!

ಇತ್ತೀಚೆಗೆ ನಟ ಯಶ್ ಅವರು ಭಾರತದ ಫೇಮಸ್ ಟಿವಿ ಶೋ ಆಪ್‌ ಕಿ ಅದಾಲತ್‌ನಲ್ಲಿ ಭಾಗವಹಿಸಿ, ಸಿನಿಮಾದ ಬಗ್ಗೆ ಹಾಗೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಕೊಡುವ ಮೂಲಕ ಸಾಕಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇಂದು 09ರ ಕೌಂಟ್‌ಡೌನ್‌ನಲ್ಲಿರುವ ಟಾಕ್ಸಿಕ್ ಬಿಡುಗಡೆ ನಾಳೆ 08.

Read Full Story

11:42 AM (IST) Aug 18

ಸಿದ್ಧಗಂಗಾ, ತಾಳಗುಪ್ಪ, ಯಶವಂತಪುರ ಎಕ್ಸ್‌ಪ್ರೆಸ್‌ ಅರಸೀಕೆರೆಯಲ್ಲಿ ಕೊನೆ; ರೈಲುಗಳ ಸಂಚಾರ ರದ್ದು

ಮಲ್ಲಸಂದ್ರ ಮತ್ತು ಗುಬ್ಬಿ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ನಡೆಯುತ್ತಿರುವ ಕಾಮಗಾರಿಯಿಂದಾಗಿ, ಆಗಸ್ಟ್ 2026ರ ನಿಗದಿತ ದಿನಾಂಕಗಳಲ್ಲಿ ಹಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ, ಭಾಗಶಃ ರದ್ದುಗೊಳಿಸಲಾಗಿದೆ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ. ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್, ಸಿದ್ಧಗಂಗಾ ಎಕ್ಸ್‌ಪ್ರೆಸ್ ಸೇರಿದಂತೆ ಪ್ರಮುಖ ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.
Read Full Story

11:24 AM (IST) Aug 18

ಲಂಚಾವತಾರ, ಭ್ರಷ್ಟಾಚಾರ ಮಟ್ಟಹಾಕಲು ಹೊಸ ವೆಬ್‌ಸೈಟ್ ಕಂಡು ಹಿಡಿದ ಬಿ.ಟೆಕ್ ವಿದ್ಯಾರ್ಥಿ! ಲಂಚ ಕೇಳಿದ್ರೆ ಸಿಂಪಲ್, ಹೀಗೆ ಮಾಡಿ!

ಬಿ.ಟೆಕ್ ವಿದ್ಯಾರ್ಥಿಯೊಬ್ಬರು ಸರ್ಕಾರಿ ಕಚೇರಿಗಳಲ್ಲಿನ ಲಂಚದ ಅನುಭವಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಹೊಸ ವೆಬ್‌ಸೈಟ್ ಒಂದನ್ನು ರಚಿಸಿದ್ದಾರೆ. ಈ ವೇದಿಕೆಯು ಇಲಾಖೆ ಮತ್ತು ನಗರವಾರು ದೂರುಗಳನ್ನು ಸಂಗ್ರಹಿಸಿ, ದೇಶದಲ್ಲಿನ ಭ್ರಷ್ಟಾಚಾರದ ಚಿತ್ರಣವನ್ನು ನೀಡುತ್ತದೆ, ಇದರಲ್ಲಿ ಪೊಲೀಸ್ ಇಲಾಖೆ ವಿರುದ್ಧ ಅತಿ ಹೆಚ್ಚು ದೂರುಗಳು ದಾಖಲಾಗಿವೆ.
Read Full Story

11:21 AM (IST) Aug 18

Shivamogga - ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ! ಹನುಮಂತ ದೇವರ ಕಾರ್ಣಿಕ ನುಡಿಯ ಅರ್ಥವೇನು?

ಭದ್ರಾವತಿ ತಾಲೂಕಿನ ಮೈದೊಳಲಿನಲ್ಲಿ ನಾಗರ ಪಂಚಮಿಯಂದು ನಡೆದ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ 'ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ' ಎಂಬ ಭವಿಷ್ಯವಾಣಿ ನುಡಿಯಲಾಗಿದೆ. ಈ ಕಾರ್ಣಿಕವು ಗ್ರಾಮೀಣ ಭಾಗದಲ್ಲಿ ಪ್ರಸಿದ್ಧಿಯನ್ನು ಹೊಂದಿದೆ.

Read Full Story

10:41 AM (IST) Aug 18

ಪ್ರತ್ಯೇಕ ಘಟನೆ; ನಾಗರ ಪಂಚಮಿಯಂದೆ ದುರಂತ, ಹಾವು ಕಡಿದು ವಾಟರ್‌ಮ್ಯಾನ್, ಮಹಿಳೆ ಸಾವು!

ಬೀದರ್ ಜಿಲ್ಲೆಯ ಸೋಲದಾಬಕಾ ಗ್ರಾಮದಲ್ಲಿ, ನೀರಿನ ಟ್ಯಾಂಕ್ ಬಳಿ ಕೆಲಸ ಮಾಡುತ್ತಿದ್ದ ವಾಟರ್‌ಮ್ಯಾನ್ ಭೀಮ ಜಾಧವ್ (48) ಮೃತಪಟ್ಟಿದ್ದಾರೆ. ಹಾಗೆಯೇ, ಬೆಳಗಾವಿ ಜಿಲ್ಲೆಯ ರಾಯಭಾಗದಲ್ಲಿ ಸತ್ಯವ್ವ ಶಿಂಗೆ (43) ಎಂಬ ಮಹಿಳೆ ಹಾವು ಕಡಿತದಿಂದ ಸಾವನ್ನಪ್ಪಿದ್ದಾರೆ.

Read Full Story

09:59 AM (IST) Aug 18

Chikkamagaluru - ಬಾಯಿ ಚಪ್ಪರಿಸಿ ಕೇಕ್ ತಿನ್ನುವ ಮುನ್ನ ಹುಷಾರ್! ಕೊಳೆತು, ವಾಸನೆ ಬರ್ತಿದ್ದ ಕೇಕ್ ಮಾರಾಟ, ಗ್ರಾಹಕನ ಆಕ್ರೋಶ

ಚಿಕ್ಕಮಗಳೂರಿನ ಕಳಸದ ಹೋಟೆಲ್‌ನಲ್ಲಿ ವಡೆಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದರೆ, ನಗರದ ಪ್ರತಿಷ್ಠಿತ ಬೇಕರಿಯೊಂದರಲ್ಲಿ ಅವಧಿ ಮೀರಿದ ಸಾಸ್ ಬಳಸಿ ತಯಾರಿಸಿದ ಕೊಳೆತ ಕೇಕ್ ಪತ್ತೆಯಾಗಿದೆ. ಈ ಘಟನೆಗಳು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿವೆ.

Read Full Story

09:16 AM (IST) Aug 18

Davanagere - 'ಅಶ್ವಿನಿ ಗೂಸು ಬೆಟ್ಟಕ್ಕೇರಿತಲೇ, ಭೂ ಲೋಕದ ಮುತ್ತು ಗಗನಕ್ಕೆ ಏರಿತಲೆ ಎಚ್ಚರ'; ಆತಂಕ ಮೂಡಿಸಿದ ನಾಗರಪಂಚಮಿ ಕಾರ್ಣಿಕ

ದಾವಣಗೆರೆಯ ಕಮ್ಮಾರಗಟ್ಟೆಯಲ್ಲಿ ನಡೆದ ಕಾರ್ಣಿಕೋತ್ಸವದಲ್ಲಿ 'ಭೂಲೋಕದ ಮುತ್ತು ಗಗನಕ್ಕೇರಿತಲೆ' ಎಂಬ ಭವಿಷ್ಯವಾಣಿ ನುಡಿಯಲಾಗಿದೆ. ಇದು ಮಳೆ ಕೊರತೆ ಹಾಗೂ ಆಹಾರಧಾನ್ಯಗಳ ಬೆಲೆ ಏರಿಕೆಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿದೆ.

Read Full Story

09:09 AM (IST) Aug 18

ನೈಸ್ ಯೋಜನೇಲಿ ಮಿಕ್ಕಿರೋ 6757 ಎಕ್ರೆ ಜಾಗದಲ್ಲೇ ಬಿಡದಿ ಟೌನ್‌ಶಿಪ್ ಮಾಡಬಹುದೇ? ಗವರ್ನರ್

ನೈಸ್‌ ಯೋಜನೆಗೆ ಬಳಕೆಯಾಗದೆ ಉಳಿದಿರುವ ಸುಮಾರು 6,757 ಎಕರೆ ಭೂಮಿಯನ್ನು ಹಿಂಪಡೆದು, ಪ್ರಸ್ತಾಪಿತ ಬಿಡದಿ ಟೌನ್‌ಶಿಪ್‌ ಯೋಜನೆಗೆ ಬಳಸುವಂತೆ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಕೃಷಿ ಭೂಮಿ ಸ್ವಾಧೀನವನ್ನು ತಪ್ಪಿಸಿ ರೈತರನ್ನು ಸ್ಥಳಾಂತರ ಸಂಕಷ್ಟದಿಂದ ಪಾರುಮಾಡಬಹುದು ಎಂದು ಸಾಮಾಜಿಕ ಕಾರ್ಯಕರ್ತರು ಮತ್ತು ರೈತ ಸಂಘಟನೆಗಳ ಮನವಿಯನ್ನು ಉಲ್ಲೇಖಿಸಿ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Read Full Story

08:55 AM (IST) Aug 18

Bengaluru - ಒಂದೇ ದಿನ ₹35 ಲಕ್ಷ ಮೌಲ್ಯದ HMT ವಾಚ್‌ ಮಾರಾಟ - ಹೆಚ್‌ಡಿ ಕುಮಾರಸ್ವಾಮಿ

ಸ್ವಾತಂತ್ರ್ಯ ದಿನಾಚರಣೆಯಂದು ಬೆಂಗಳೂರಿನಲ್ಲಿ ಎಚ್‌ಎಂಟಿ ವಾಚ್‌ಗಳು ಒಂದೇ ದಿನಕ್ಕೆ ₹35 ಲಕ್ಷದ ದಾಖಲೆ ಮೊತ್ತಕ್ಕೆ ಮಾರಾಟವಾಗಿವೆ. ವಿಶೇಷ ಆವೃತ್ತಿಯ ಕೈಗಡಿಯಾರಗಳಿಗಾಗಿ ಜನರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಖರೀದಿಸಿದ್ದು, ಈ ಅಭೂತಪೂರ್ವ ಪ್ರತಿಕ್ರಿಯೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
Read Full Story

07:51 AM (IST) Aug 18

ತೀರ್ಥಹಳ್ಳಿ ದುರಂತ - ಇಬ್ಬರು ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತ ಶ್ರೀಹುಚ್ಚೇಶ್ವರ ಶಾಲೆ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಗುಡ್ಡ ಕುಸಿತ ದುರಂತದಲ್ಲಿ ಪೋಷಕರನ್ನು ಕಳೆದುಕೊಂಡ ಕಕ್ಕರಗೋಳ ಗ್ರಾಮದ ಇಬ್ಬರು ಮಕ್ಕಳಿಗೆ ಬೂದಗುಂಪಾ ಗ್ರಾಮದ ಶ್ರೀಹುಚ್ಚೇಶ್ವರ ಹಿರಿಯ ಪ್ರಾಥಮಿಕ ಶಾಲೆ ಆಸರೆಯಾಗಿದೆ. ಶಾಲೆಯು ಮಕ್ಕಳ 8ನೇ ತರಗತಿಯವರೆಗಿನ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಂಡು ಮಾನವೀಯತೆ ಮೆರೆದಿದೆ.
Read Full Story

07:40 AM (IST) Aug 18

ಅರಬ್ಬಿ ಸಮುದ್ರದಲ್ಲಿ ಸತತ 3 ಗಂಟೆಗಳಿಂದ ಈಜುತ್ತಿದ್ದ ಮಾನಸಿಕ ಅಸ್ವಸ್ಥನ ರಕ್ಷಣೆ !

ಕಾಪುವಿನ ಅರಬ್ಬಿ ಸಮುದ್ರದಲ್ಲಿ ಸುಮಾರು 3 ಗಂಟೆಗಳ ಕಾಲ ಈಜುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ರಕ್ಷಿಸಲಾಗಿದೆ. ಶಾಸಕ ಯಶ್ಪಾಲ್ ಸುವರ್ಣ ಅವರ ಸೂಚನೆ ಮೇರೆಗೆ ಸ್ಥಳಕ್ಕೆ ಧಾವಿಸಿದ ಆಪತ್ಬಾಂಧವ ಈಶ್ವರ್ ಮಲ್ಪೆ ಅವರು ಯುವಕನನ್ನು ಮನವೊಲಿಸಿ ದಡಕ್ಕೆ ಕರೆತಂದರು.
Read Full Story

07:25 AM (IST) Aug 18

ಎಡಕುಮೇರಿ ಘಾಟ್‌ನಲ್ಲಿ ವಂದೇ ಭಾರತ್‌; ಸೋಮೇಶ್ವರ ರೈಲ್ವೇ ಗೇಟ್‌ ಬಂದ್‌, ಬದಲಿ ಮಾರ್ಗ

ಮಂಗಳೂರು-ಬೆಂಗಳೂರು ನಡುವಿನ ಎಡಕುಮೇರಿ ಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಇದರೊಂದಿಗೆ, ಸೋಮೇಶ್ವರ ರೈಲ್ವೆ ಗೇಟ್ ಬಂದ್, ದ.ಕ. ಜಿಲ್ಲೆಯ ಮಳೆ ಹಾಗೂ ಕುದ್ರೋಳಿ ಕ್ಷೇತ್ರದ ನಾಗರಪಂಚಮಿ ವಿಶೇಷ ಪೂಜೆಯ ಕುರಿತು ವರದಿ ವಿವರಿಸುತ್ತದೆ.
Read Full Story

07:14 AM (IST) Aug 18

ಹಿಡಕಲ್‌ ಡ್ಯಾಂ ಭರ್ತಿ - 10 ಗೇಟ್‌ ಮೂಲಕ ನೀರು ಹೊರಕ್ಕೆ, ಕುಡಿಯುವ ನೀರಿನ ಆತಂಕ ದೂರ

ಪಶ್ಚಿಮ ಘಟ್ಟಗಳಲ್ಲಿನ ನಿರಂತರ ಮಳೆಯಿಂದಾಗಿ ಬೆಳಗಾವಿಯ ಹಿಡಕಲ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ, ಜಲಾಶಯದ 10 ಗೇಟ್‌ಗಳನ್ನು ತೆರೆದು ಘಟಪ್ರಭಾ ನದಿಗೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.
Read Full Story

06:47 AM (IST) Aug 18

ರಾಜ್ಯದಲ್ಲಿ 206 ಆಹಾರ ಮಳಿಗೆಗಳಿಗೆ ನೋಟಿಸ್‌ - 930 ಹಾಸ್ಟೆಲ್‌ಗಳಲ್ಲಿ ತಪಾಸಣೆ, ಡಾಬಾ ಮೇಲೆ ದಾಳಿ

ಆಹಾರ ಸುರಕ್ಷತಾ ಇಲಾಖೆಯು ರಾಜ್ಯಾದ್ಯಂತ ಹಾಸ್ಟೆಲ್‌, ಬಸ್ ನಿಲ್ದಾಣ, ಡಾಬಾಗಳಲ್ಲಿ ನಡೆಸಿದ ತಪಾಸಣೆಯಲ್ಲಿ ವ್ಯಾಪಕ ಅನೈರ್ಮಲ್ಯ ಪತ್ತೆಯಾಗಿದೆ. ನೂರಾರು ಆಹಾರ ಮಳಿಗೆಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಶವರ್ಮಾ ಮತ್ತು ಕಬಾಬ್‌ನಂತಹ ಆಹಾರ ಪದಾರ್ಥಗಳು ಅಸುರಕ್ಷಿತ ಎಂದು ವರದಿಯಲ್ಲಿ ತಿಳಿದುಬಂದಿದೆ.
Read Full Story

06:38 AM (IST) Aug 18

ಶಿಕ್ಷಕರಿಬ್ಬರಿಗೆ H1N1, 500 ಮಕ್ಕಳಿಗೆ ಜ್ವರ? ಬೆಂಗಳೂರಿನ ಶಾಲೆಗೆ 2 ದಿನ ರಜೆ ಘೋಷಣೆ

ಬೆಂಗಳೂರಿನ ರಿಚ್ಮಂಡ್ ಟೌನ್‌ನಲ್ಲಿರುವ ಕ್ಲಾರೆನ್ಸ್ ಶಾಲೆಯ ಇಬ್ಬರು ಸಿಬ್ಬಂದಿಗೆ ಎಚ್1ಎನ್1 ಸೋಂಕು ದೃಢಪಟ್ಟಿದೆ. ನೂರಾರು ಮಕ್ಕಳಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಶಾಲೆಗೆ ರಜೆ ಘೋಷಿಸಲಾಗಿದ್ದು, ಪಾಲಿಕೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.
Read Full Story

06:24 AM (IST) Aug 18

Prajwal Revanna - ಸಹ ಕೈದಿಗಳಿಂದ ಕಜ್ಜಿ ಬರಹುದು - ಸೆಲ್ ಬದಲಿಸುವಂತೆ ಪ್ರಜ್ವಲ್ ಗೋಳಾಟ

ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಸಹ ಕೈದಿಗಳಿಂದ ಕಜ್ಜಿ, ಕೆಮ್ಮು ಮುಂತಾದ ಸೋಂಕು ಹರಡುವ ಭಯದಿಂದ ತಮ್ಮನ್ನು ಬೇರೆ ಸೆಲ್‌ಗೆ ವರ್ಗಾಯಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಮೊಬೈಲ್ ಪತ್ತೆ ಪ್ರಕರಣದ ನಂತರ ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದ್ದು, ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ.

Read Full Story

06:14 AM (IST) Aug 18

ಕುಡಿದು ‘ಯಾರಿವಳು ಯಾರಿವಳು’ ಎಂದು ಹಾಡಿದ ಮರುಳಾರಾಧ್ಯ ಶ್ರೀ! ಹಾಡು ಹಾಡಿದ ಖಾವಿಧಾರಿ

ಕಲಬುರಗಿ ಜಿಲ್ಲೆಯ ಮಾಶಾಳ ಮಠದ ಮರುಳಾರಾಧ್ಯ ಸ್ವಾಮೀಜಿ ಅವರು ಶ್ರಾವಣ ಮಾಸದಲ್ಲಿ ಮದ್ಯದ ಬಾಟಲಿ ಮುಂದಿಟ್ಟುಕೊಂಡು ಸಿನಿಮಾ ಹಾಡು ಹಾಡಿ ಮೋಜು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯು ಭಕ್ತರ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಹಿಂದೆಯೂ ಸ್ವಾಮೀಜಿ ಹಲವು ವಿವಾದಗಳಿಂದ ಸುದ್ದಿಯಾಗಿದ್ದರು.
Read Full Story

More Trending News