LIVE NOW
Published : Jul 16, 2026, 07:12 AM ISTUpdated : Jul 16, 2026, 11:43 PM IST

Karnataka News Live: 'ಇದು ನನ್ನ ಕೊನೆಯ ಸಿನಿಮಾ ನಿರ್ಮಾಣ'... ಡಾಲಿ ಧನಂಜಯ ಹೀಗೆ ಹೇಳಿದ್ದೇಕೆ?

ಸಾರಾಂಶ

ತೀರ್ಥಹಳ್ಳಿ: ಆಗುಂಬೆ ಘಾಟ್‌ ಮಾರ್ಗದ ಅಗಲೀಕರಣಕ್ಕೆ ಸಂಬಂಧಿಸಿ ತಾಂತ್ರಿಕ ತಜ್ಞರ ಅಭಿಪ್ರಾಯದ ಆಧಾರದಲ್ಲಿ ಕೇಂದ್ರ ಸರ್ಕಾರದ ತೀರ್ಮಾನ ಅಂತಿಮವಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಆಗುಂಬೆ ಮಾರ್ಗದ ಅಗಲೀಕರಣ ಮತ್ತು ಸುರಂಗ ಮಾರ್ಗ ನಿರ್ಮಾಣ ಎರಡಕ್ಕೂ ಅವಕಾಶವಿದ್ದು, ರಾಜ್ಯ ಸರ್ಕಾರದ ಪೂರ್ಣ ಸಹಕಾರವೂ ಇದೆ. ಅಂತಿಮ ತೀರ್ಮಾನ ಕೇಂದ್ರ ಸರ್ಕಾರದ್ದು ಎಂದರು. 

ಹುಲಿಕಲ್ ಘಾಟಿಯ ಬಗ್ಗೆ ಪ್ರತಿಕ್ರಿಯಿಸಿ, ಹುಲಿಕಲ್ ಘಾಟಿಯ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಕಾರು ಮತ್ತು ಪ್ರಯಾಣಿಕರ ಬಸ್ಸುಗಳಿಗೆ ಅನುಮತಿ ನೀಡಲಾಗಿದೆ. ಉಳಿದಂತೆ ಭಾರಿ ವಾಹನಗಳ ಸಂಚಾರದ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.

11:43 PM (IST) Jul 16

'ಇದು ನನ್ನ ಕೊನೆಯ ಸಿನಿಮಾ ನಿರ್ಮಾಣ'... ಡಾಲಿ ಧನಂಜಯ ಹೀಗೆ ಹೇಳಿದ್ದೇಕೆ?

ನಿಮಗೆ ನನ್ನ ಮೇಲೆ ದ್ವೇಷ ಇದ್ದರೆ ನೇರವಾಗಿ ಎದುರು ಬಂದು ಮಾತಾಡಿ, ಬಚ್ಚಿಟ್ಟುಕೊಂಡು ಸಿನಿಮಾ ಮೇಲೆ ಹೊಡೀಬೇಡಿ. ಮದರ್‌ ಪ್ರಾಮಿಸ್‌ ಒಂದೊಳ್ಳೆ ಸಿನಿಮಾ ಅಂತ ಗುರುತಿಸಿಕೊಂಡಿದೆ ಎಂದರು ಡಾಲಿ ಧನಂಜಯ.

Read Full Story

10:58 PM (IST) Jul 16

ಬೆಂಗಳೂರಿನಲ್ಲಿ ರಾತ್ರೋರಾತ್ರಿ 2500 ಕೆಜಿ ದ್ರಾಕ್ಷಿ ಕದ್ದ ಕಳ್ಳರು, ಕಣ್ಣೀರಿಟ್ಟ ರೈತ!

ಚಿಕ್ಕಬಳ್ಳಾಪುರದ ರೈತ ಬಸವರಾಜ್ ಅವರ ತೋಟದಿಂದ ಕಟಾವಿಗೆ ಸಿದ್ಧವಾಗಿದ್ದ 2.5 ಟನ್ 'ರೆಡ್ ಗ್ಲೋಬ್' ದ್ರಾಕ್ಷಿಯನ್ನು ಕಳ್ಳರು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ ರೈತ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ಕಣ್ಣೀರು ಹಾಕುತ್ತಿದ್ದಾರೆ.

Read Full Story

09:24 PM (IST) Jul 16

Om ನನ್ನ ನೆಚ್ಚಿನ ಸಿನಿಮಾ - ಉಪ್ಪಿ ನಿರ್ದೇಶನ, ಶಿವಣ್ಣ ಅಭಿನಯವನ್ನು ಕೊಂಡಾಡಿದ ಪೃಥ್ವಿರಾಜ್

Om Kannada Movie: ಭಾರತೀಯ ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾಗಿರುವ ಖ್ಯಾತ ನಟ, ನಿರ್ದೇಶಕ ಪೃಥ್ವಿರಾಜ್ ಸುಕುಮಾರನ್ ಮತ್ತೊಮ್ಮೆ ಕನ್ನಡ ಸಿನಿಮಾಗಳ ಮೇಲಿನ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

Read Full Story

07:05 PM (IST) Jul 16

ಮದ್ವೆಗೆ ಮುಂಚೆ ರಾಧಿಕಾ ಜೊತೆ ಯಶ್​ ಸುತ್ತಾಟ - ಜನರ ಮಾತು ಕೇಳಿ ರೋಸಿಹೋದ್ರಂತೆ ಅಮ್ಮ ಪುಷ್ಪಾ

ಯಶ್ ಅವರ ತಾಯಿ ಪುಷ್ಪಾ ಅರುಣ್‌ಕುಮಾರ್ ಅವರು, ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪ್ರೀತಿಯ ದಿನಗಳ ಬಗ್ಗೆ ಮಾತನಾಡಿದ್ದಾರೆ. ಮದುವೆಗೂ ಮುನ್ನ ಅವರಿಬ್ಬರು ಸುತ್ತಾಡುತ್ತಿದ್ದಾಗ ಜನರು ಆಡುತ್ತಿದ್ದ ಮಾತುಗಳಿಗೆ ತಾವು ಹೇಗೆ ಪ್ರತಿಕ್ರಿಯಿಸುತ್ತಿದ್ದೆ ಎಂಬುದನ್ನು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
Read Full Story

05:41 PM (IST) Jul 16

Sa Re Ga Ma Pa Kannada Audition 2026 - ಬೆಂಗಳೂರಿನಲ್ಲಿ ಸರೆಗಮಪ ಶೋ ಆಡಿಷನ್‌ ಯಾವಾಗ?

Saregamapa Kannada Show: ಜೀ ಕನ್ನಡ ಸಂಗೀತ ಕಾರ್ಯಕ್ರಮ 'ಸರಿಗಮಪ' ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಡಿಷನ್‌ ಕೂಡ ಆಗಿದೆ. ಹಾಗಿದ್ದರೆ ಯಾವಾಗ? ಎಲ್ಲಿ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

05:40 PM (IST) Jul 16

ಥೇಟ್ ಶಿವನಂತೆ ಅಕುಲ್ ಬಾಲಾಜಿ ಹೊಸ ಮನೆಗೆ ಎಂಟ್ರಿ ಕೊಟ್ಟ ಶಿವಣ್ಣ - ವಿಡಿಯೋ ವೈರಲ್

ವಿಡಿಯೋದಲ್ಲಿ ಶಿವರಾಜ್‌ಕುಮಾರ್, ಸಾಂಪ್ರದಾಯಿಕ ಕಪ್ಪು ಬಣ್ಣದ ಬಟ್ಟೆ, ಹಣೆಗೆ ತಿಲಕ, ಕಿವಿಯಲ್ಲಿ, ಕೊರಳಲ್ಲಿ ಮತ್ತು ಕೈಯಲ್ಲಿ ರುದ್ರಾಕ್ಷಿ ಮಾಲೆ ಧರಿಸಿ ಮನೆಯೊಳಗೆ ಪ್ರವೇಶಿಸುತ್ತಿರುವ ದೃಶ್ಯಗಳು ಗಮನ ಸೆಳೆಯುತ್ತವೆ.

Read Full Story

05:04 PM (IST) Jul 16

'RX ಬೈಕ್ ಕಥೆಯೊಂದಿಗೆ ಬರುತ್ತಿದೆ 'ರಾ.. ರಾ.. RX' - ಯತಿರಾಜ್ ಹೊಸ ಕನಸಿಗೆ ಚಾಲನೆ

Ra Ra RX Kannada Movie: ಪತ್ರಕರ್ತ, ಕಲಾವಿದ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಯತಿರಾಜ್ ಇದೀಗ ತಮ್ಮ ಹೊಸ ಕನಸಿನ ಸಿನಿಮಾ 'ರಾ.. ರಾ.. RX' ಮೂಲಕ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.

Read Full Story

05:01 PM (IST) Jul 16

ಬೆಂಗಳೂರಿನಲ್ಲಿ ಹೊಸ ಕ್ರಾಂತಿಗೆ ಮುಂದಾದ Yulu, ರಾಜಧಾನಿಯಲ್ಲಿ ಫ್ಲೀಟ್ ಹೆಚ್ಚಿಸಲು ಮುಂದಾದ ಎಲೆಕ್ಟ್ರಿಕ್ ಬೈಕ್!

ಎಲೆಕ್ಟ್ರಿಕ್ ಸ್ಕೂಟರ್ ಕಂಪನಿ 'ಯುಲು' ಕ್ವಿಕ್ ಕಾಮರ್ಸ್ ಬೇಡಿಕೆಯಿಂದಾಗಿ ಭಾರಿ ಬೆಳವಣಿಗೆ ಸಾಧಿಸುತ್ತಿದೆ. 2027ರ ವೇಳೆಗೆ ಬೆಂಗಳೂರಿನಲ್ಲಿ ತನ್ನ ವಾಹನಗಳ ಸಂಖ್ಯೆಯನ್ನು 35,000ಕ್ಕೆ ಹೆಚ್ಚಿಸುವ ಗುರಿ ಹೊಂದಿದ್ದು, ಇತ್ತೀಚೆಗೆ 2 ಬಿಲಿಯನ್ ಕಿ.ಮೀ. ಪ್ರಯಾಣದ ಮೈಲಿಗಲ್ಲು ದಾಟಿದೆ. ಕಂಪನಿಯು ಈಗ ಗೃಹ-ಸೇವೆಗಳ ವಿಭಾಗಕ್ಕೂ ವಿಸ್ತರಿಸುತ್ತಿದೆ.
Read Full Story

04:56 PM (IST) Jul 16

GBA ಮಾದರಿಯಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಕೂಡ ವಿಭಜನೆ?

ರಾಜಧಾನಿಯ ಕಾನೂನು ಸುವ್ಯವಸ್ಥೆ ಬಲಪಡಿಸಲು, ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ಅನ್ನು ಎರಡು ಅಥವಾ ಮೂರು ಭಾಗಗಳಾಗಿ ವಿಭಜಿಸಲು ಕರ್ನಾಟಕ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಪ್ರಸ್ತಾವನೆಯನ್ನು ಖಚಿತಪಡಿಸಿದ್ದಾರೆ.

Read Full Story

04:38 PM (IST) Jul 16

ಯಶ್ ಜೊತೆ ಕೆಲಸ ಮಾಡಿದ ನಿರ್ದೇಶಕ ಈಗ ಹೀರೋ... 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ವಿಶೇಷವೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸೂಪರ್ ಹಿಟ್ 'ರಾಜಾಹುಲಿ' ಚಿತ್ರದ ಸಹಾಯಕ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದ್ದ ಹೊನ್ನರಾಜ್, ಇದೀಗ 'ಮಿಸ್ಟರ್ ಅಂಡ್ ಮಿಸಸ್ ರಾಜಾಹುಲಿ' ಚಿತ್ರದ ಮೂಲಕ ಹೊಸ ಅಧ್ಯಾಯ ಆರಂಭಿಸಿದ್ದಾರೆ.

Read Full Story

04:32 PM (IST) Jul 16

ಕರಾವಳಿಯ ಕಂಬಳಕ್ಕೆ ಗುಡ್ ನ್ಯೂಸ್ ನೀಡಿದ ರಾಜ್ಯ ಸರ್ಕಾರ - 23 ಕೂಟಗಳಿಗೆ ಬಂಪರ್‌ ಅನುದಾನ ಘೋಷಣೆ

ರಾಜ್ಯ ಸರ್ಕಾರವು ಕರಾವಳಿಯ 23 ಕಂಬಳ ಕೂಟಗಳಿಗೆ ತಲಾ 5 ಲಕ್ಷದಂತೆ ಒಟ್ಟು 1.15 ಕೋಟಿ ರೂಪಾಯಿ ಅನುದಾನ ಘೋಷಿಸಿದೆ. ಈ ನಿರ್ಧಾರವನ್ನು ಕಂಬಳ ಸಮಿತಿ ಸ್ವಾಗತಿಸಿದ್ದು, ಇದೇ ವೇಳೆ ಮೈಸೂರು ಕಂಬಳ ಆಯೋಜನೆಗೆ ಸಂಬಂಧಿಸಿದ ವಿವಾದದ ಬಗ್ಗೆ ಸಮಿತಿ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Read Full Story

04:22 PM (IST) Jul 16

'ಅತಿಕಾಯ'ದಲ್ಲಿ ನಿರೂಪ್ ಭಂಡಾರಿಗೆ ಜೋಡಿಯಾದ ಸ್ವಾತಿಷ್ಟ ಕೃಷ್ಣನ್ - ರಗಡ್ ಲುಕ್ ವೈರಲ್

'ಅತಿಕಾಯ' ಚಿತ್ರದಲ್ಲಿ ಅವರು ಇದುವರೆಗೂ ಕಾಣಿಸದ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಜೋಡಿಯಾಗಿ ಪ್ರತಿಭಾವಂತ ನಟಿ ಸ್ವಾತಿಷ್ಟ ಕೃಷ್ಣನ್ ಅಭಿನಯಿಸುತ್ತಿರುವುದು ಚಿತ್ರದ ಮತ್ತೊಂದು ವಿಶೇಷ.

Read Full Story

04:18 PM (IST) Jul 16

ಮಂಗಳೂರು - ಉಪ್ಪಿನಂಗಡಿಯಲ್ಲಿ ಖೋಟಾನೋಟು ದಂಧೆ ಪತ್ತೆ, ಪ್ರಿಂಟಿಂಗ್ ಮೆಷಿನ್, RBI ಸೀಲ್ ಸಹಿತ 7 ಮಂದಿ ಅರೆಸ್ಟ್!

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ಖೋಟಾನೋಟು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ನಕಲಿ ನೋಟುಗಳು ಹಾಗೂ ಮುದ್ರಣ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
Read Full Story

04:14 PM (IST) Jul 16

ಬಾತ್‌ಟಬ್‌ನಲ್ಲಿ ಮಗುವಿಗೆ ಸ್ನಾನ ಮಾಡಿಸಿದ್ದ ಮೆಸ್ಸಿ; 19 ವರ್ಷಗಳ ಬಳಿಕ ಅದೇ ಮಗು ಈಗ ವಿಶ್ವಕಪ್ ಫೈನಲ್‌ನಲ್ಲಿ ಎದುರಾಳಿ!

ಫುಟ್‌ಬಾಲ್ ದಂತಕಥೆ ಮೆಸ್ಸಿ ಮತ್ತು ಉದಯೋನ್ಮುಖ ತಾರೆ ಲ್ಯಾಮಿನ್ ಯಮಾಲ್ 2026ರ ವಿಶ್ವಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿದ್ದಾರೆ. 19 ವರ್ಷಗಳ ಹಿಂದೆ, 2007ರಲ್ಲಿ ನಡೆದ ಒಂದು ಚಾರಿಟಿ ಫೋಟೋಶೂಟ್‌ನಲ್ಲಿ ಮೆಸ್ಸಿ, ಹಸುಗೂಸಾಗಿದ್ದ ಯಮಾಲ್‌ನನ್ನು ಎತ್ತಿಕೊಂಡಿದ್ದ ಅಪರೂಪದ ಚಿತ್ರ ವೈರಲ್‌ ಆಗಿದೆ.

Read Full Story

04:09 PM (IST) Jul 16

Rukmini Radha Krishna Movie - 'ರುಕ್ಮಿಣಿ ರಾಧಾ ಕೃಷ್ಣ' ಮೂಲಕ ಬೆಳ್ಳಿ ತೆರೆ ಮೇಲೆ ನಟಿ ಮೋಕ್ಷಿತಾ ಪೈ

Rukmini Radha Krishna Kannada Movie: ಪಾರು ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ಅವರು 'ರುಕ್ಮಿಣಿ ರಾಧಾಕೃಷ್ಣ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಎರಡು ಹಾಡುಗಳು ರಿಲೀಸ್‌ ಆಗಿವೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story

03:54 PM (IST) Jul 16

ಉಡುಪಿ - ಹೌಸ್ ಕೀಪಿಂಗ್ ಮಗಳು, ಕನ್ನಡ ಶಾಲೆಯ ಹಳ್ಳಿ ಪ್ರತಿಭೆ ಸ್ಪೂರ್ತಿ ಶೆಟ್ಟಿ'ಮಿಸ್ ಯೂನಿವರ್ಸ್ ಇಂಡಿಯಾ' ಫೈನಲಿಸ್ಟ್!

ಉಡುಪಿಯ ಸಾಮಾನ್ಯ ಕುಟುಂಬದ ಸ್ಪೂರ್ತಿ ಶೆಟ್ಟಿ 'ಮಿಸ್ ಯೂನಿವರ್ಸ್ ಇಂಡಿಯಾ' ಸೌಂದರ್ಯ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಪ್ರಾದೇಶಿಕ ಸುತ್ತಿನಲ್ಲಿ ಸೋತರೂ 'ವೈಲ್ಡ್ ಕಾರ್ಡ್ ಎಂಟ್ರಿ' ಮೂಲಕ ರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿರುವ ಇವರ ಯಶೋಗಾಥೆ ಹಲವರಿಗೆ ಸ್ಪೂರ್ತಿದಾಯಕವಾಗಿದೆ.

Read Full Story

03:52 PM (IST) Jul 16

ಕೈಫ್ ಕೊಟ್ಟಿದ್ದು 10ಕ್ಕೆ 4 ಅಂಕ.. ಬೆನ್ನಲ್ಲೇ ಗಂಭೀರ್ ಮೇಲೆ ಮತ್ತೊಬ್ಬ ದಂತಕತೆ ಆಕ್ರೋಶ..!

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಅವರು ಎರಡು ವರ್ಷ ಪೂರೈಸಿದ್ದಾರೆ. ಬೆನ್ನಲ್ಲೇ ಅವರ ಕಾರ್ಯ ಕ್ಷಮತೆ ಬಗ್ಗೆ ಮಾಜಿ ಕ್ರಿಕೆಟಿಗರು ಪ್ರಶ್ನೆ ಮಾಡಿದ್ದಾರೆ. ಮೊಹ್ಮದ್ ಕೈಫ್ 10ಕ್ಕೆ 4 ಅಂಕ ನೀಡಿದ ಬೆನ್ನಲ್ಲೇ ಜಹೀರ್ ಖಾನ್ ಕೂಡ ರೇಟ್ ನೀಡಿದ್ದಾರೆ. ಎಷ್ಟು ಎಂದು ತಿಳಿದುಕೊಳ್ಳಲು ಸ್ಟೋರಿ ಓದಿ.

Read Full Story

03:23 PM (IST) Jul 16

ಇದು ಟಿ20 ಅಲ್ಲ, ರನ್ ಸುನಾಮಿ...! ನಿಕೋಲಸ್ ಪೂರನ್ ಅತಿವೇಗದ ಶತಕ ನೀರಲ್ಲಿ ಹೋಮ; 266 ರನ್ ಚೇಸ್ ಮಾಡಿ ವಿಶ್ವದ ಗಮನ ಸೆಳೆದ ಪಂದ್ಯ!

ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ, ವಾಷಿಂಗ್ಟನ್ ಫ್ರೀಡಂ ತಂಡವು ಎಂಐ ನ್ಯೂಯಾರ್ಕ್‌ ವಿರುದ್ಧ 267 ರನ್‌ಗಳನ್ನು ಯಶಸ್ವಿಯಾಗಿ ಬೆನ್ನಟ್ಟಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಹೊಸ ವಿಶ್ವದಾಖಲೆ ನಿರ್ಮಿಸಿದೆ. ಸ್ಟೀವ್ ಸ್ಮಿತ್ ಮತ್ತು ಅಂಡ್ರಿಸ್ ಗೌಸ್ ಅವರ ಅಮೋಘ ಶತಕಗಳ ನೆರವಿನಿಂದ ಈ ಐತಿಹಾಸಿಕ ಗೆಲುವು ಸಾಧ್ಯವಾಯಿತು.
Read Full Story

01:26 PM (IST) Jul 16

ನನಗ್ಯಾರು ಫ್ರೆಂಡ್ಸ್ ಇಲ್ಲ ರೀ ಅಂತಾ ಕಣ್ಣೀರಿಟ್ಟ ಮಹಾನಟಿ ವರ್ಷಾ ಡಿಗ್ರಜೆ; ವಿಡಿಯೋ

ಜೀ ಕನ್ನಡದ ಮಹಾನಟಿ ಖ್ಯಾತಿಯ ನಟಿ ವರ್ಷಾ ಡಿಗ್ರಜೆ, ತಮಗೆ ಸ್ನೇಹಿತರಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಕಣ್ಣೀರಿಟ್ಟಿದ್ದಾರೆ. ಶಾಲಾ ದಿನಗಳಲ್ಲಿ ತಾನು ಮಾಡಿದ ತರಲೆ ಕೆಲಸಗಳಿಂದಾಗಿ ಯಾರು ತನ್ನೊಂದಿಗೆ ಸ್ನೇಹ ಬೆಳೆಸಲಿಲ್ಲ ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ.

Read Full Story

01:25 PM (IST) Jul 16

KEA KRIES Recruitment 2026 ರಾಜ್ಯದ ಮೊರಾರ್ಜಿ ಶಾಲೆಗೆ ಶಿಕ್ಷಕರ ನೇಮಕಾತಿ - 1087 ಹುದ್ದೆಗಳ ಬೃಹತ್ ಅವಕಾಶ!

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KRIES) 1,087 ಶಿಕ್ಷಕರ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ನೇಮಕಾತಿಯನ್ನು ನಡೆಸುತ್ತಿದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Read Full Story

01:10 PM (IST) Jul 16

ಬೆಂಗಳೂರು-ಮುಂಬೈ ವಂದೇ ಭಾರತ್ - ಕಲಬುರಗಿ ಮಾರ್ಗ ಬದಲಾವಣೆ ಮಾಡಿ ಬೇರೆ ಕಡೆ ತಿರುಗಿಸಲು ಹುನ್ನಾರ ನಡೀತಿದ್ಯಾ?

ಕೇಂದ್ರ ಸರ್ಕಾರ ಘೋಷಿಸಿದ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿನ ಮಾರ್ಗವನ್ನು ಕಲಬುರಗಿಯಿಂದ ಹುಬ್ಬಳ್ಳಿ-ಬೆಳಗಾವಿಗೆ ಬದಲಾಯಿಸಲು ನಡೆಯುತ್ತಿರುವ ಪ್ರಯತ್ನವನ್ನು ತೀವ್ರವಾಗಿ ಖಂಡಿಸಲಾಗಿದೆ. ಈ ರಾಜಕೀಯ ಒತ್ತಡಕ್ಕೆ ಮಣಿದು ಮಾರ್ಗ ಬದಲಿಸಿದರೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
Read Full Story

12:25 PM (IST) Jul 16

ಚಿಕ್ಕಮಗಳೂರು - ಹಣಕ್ಕಾಗಿ ಹೆತ್ತ ಮಗಳನ್ನೇ ವಿದೇಶದಲ್ಲಿ ವೇಶ್ಯಾವಾಟಿಕೆಗೆ ಮಾರಿದ ಪೋಷಕರು, ಆಫ್ರೀಕಾದಲ್ಲಿ ಯುವತಿ ಆರ್ತನಾದ!

ಚಿಕ್ಕಮಗಳೂರಿನ ಪೋಷಕರು ಹಣದಾಸೆಗೆ  ಮಗಳನ್ನು ಪಶ್ಚಿಮ ಆಫ್ರಿಕಾದ ಸೆನೆಗಲ್‌ನಲ್ಲಿ ವೇಶ್ಯಾವಾಟಿಕೆಗೆ ಮಾರಾಟ ಮಾಡಿದ್ದಾರೆ. ಯುವತಿಯು ವಿಡಿಯೋ ಮೂಲಕ ಸಹಾಯ ಯಾಚಿಸಿದ ನಂತರ, ಭಾರತೀಯ ರಾಯಭಾರ ಕಚೇರಿಯ ನೆರವಿನಿಂದ ಆಕೆಯನ್ನು ರಕ್ಷಿಸಲಾಗಿದೆ. ಇದೀಗ ಪಾಪಿ ಪೋಷಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ ಕೇಳಿಬಂದಿದೆ.

Read Full Story

11:46 AM (IST) Jul 16

ಸಚಿವ ಸ್ಥಾನ ಆಕಾಂಕ್ಷಿಗಳಿಗೆ ರಾಹುಲ್ ಗಾಂಧಿ ಪರ್ಫಾರ್ಮೆನ್ಸ್' ಶಾಕ್; ಅಂತಂತ್ರದಲ್ಲಿ ಹಿರಿಯ ನಾಯಕರ ಭವಿಷ್ಯ

ಕರ್ನಾಟಕ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಹೈಕಮಾಂಡ್ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ರಾಹುಲ್ ಗಾಂಧಿಯವರು ನಿಗದಿಪಡಿಸಿದ ಕಠಿಣ ಮಾನದಂಡಗಳ ಆಧಾರದ ಮೇಲೆ ಸಚಿವರ ಆಯ್ಕೆ ನಡೆಯಲಿದ್ದು, ಹಲವು ಹೊಸ ಮುಖಗಳಿಗೆ ಅವಕಾಶ ಸಿಗುವ ಮತ್ತು ಕೆಲ ಹಿರಿಯರಿಗೆ ಕೊಕ್ ಸಿಗುವ ಸಾಧ್ಯತೆಯಿದೆ.
Read Full Story

11:32 AM (IST) Jul 16

GBA - ಫುಟ್ಪಾತ್ ಒತ್ತುವರಿ ತೆರವು ಆಯ್ತು, ಈಗ ನಗರದಲ್ಲಿ ಅಡ್ಡಾದಿಡ್ಡಿ ನಿಲ್ಲೋ ಖಾಸಗಿ ಬಸ್‌ಗಳೇ ನೆಕ್ಷ್ಟ್ ಟಾರ್ಗೆಟ್?

ಸಚಿವ ಕೃಷ್ಣ ಭೈರೇಗೌಡರ ಸೂಚನೆಯಂತೆ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಖಾಸಗಿ ಬಸ್‌ಗಳ ಮೇಲೆ ಕ್ರಮ. . ಟ್ರಾಫಿಕ್ ಸಿಗ್ನಲ್‌ಗಳ 75 ಮೀಟರ್ ಅಂತರದಲ್ಲಿ ಬಸ್ ನಿಲುಗಡೆ ನಿಷೇಧಿಸುವ ನಿಯಮ ಜಾರಿಯಾಗಲಿದ್ದು, ಮೆಜೆಸ್ಟಿಕ್, ಕಲಾಸಿಪಾಳ್ಯದಂತಹ ಪ್ರಮುಖ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮ.

Read Full Story

11:22 AM (IST) Jul 16

ಮುಂಬೈನಿಂದ ವೃದ್ಧನನ್ನು ಬಲವಂತವಾಗಿ ಉಡುಪಿಗೆ ಕರೆತಂದು ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ಕುಟುಂಬ!

ಮುಂಬೈನಲ್ಲಿ ವಾಸವಿದ್ದ 67 ವರ್ಷದ ಜಗದೀಶ್ ಶೆಟ್ಟಿ ಎಂಬುವವರನ್ನು ಅವರ ಪತ್ನಿ ಮತ್ತು ಮಕ್ಕಳೇ ಉಡುಪಿಗೆ ಕರೆತಂದು ಇಂದ್ರಾಳಿ ರೈಲು ನಿಲ್ದಾಣದ ಬಳಿ ಬಿಟ್ಟು ಹೋಗಿದ್ದಾರೆ. ದೈಹಿಕ ಮತ್ತು ಮಾನಸಿಕ ಹಿಂಸೆಯ ಬಗ್ಗೆ ವೃದ್ಧರು ದೂರು ನೀಡಿದ್ದು, ಮಣಿಪಾಲ ಪೊಲೀಸರು ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

10:11 AM (IST) Jul 16

Bidadi Township - ಬಿಡದಿ ರೈತ ಹೋರಾಟಕ್ಕೆ ಬಿಜೆಪಿ ಎಂಟ್ರಿ! ನಾಳೆ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ!

ಬಿಡದಿ ಟೌನ್‌ಶಿಪ್‌ ಕೈಬಿಡುವಂತೆ ಆಗ್ರಹಿಸಿ ಜು.17ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬಿಜೆಪಿಯ ಎಲ್ಲ ಶಾಸಕರು, ಸಂಸದರು, ಮಾಜಿ ಸಂಸದರು ಸೇರಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪಾದಿಸಿದರು.

Read Full Story

10:09 AM (IST) Jul 16

ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಈಗ ಹೇಗಿದೆ? ವೈದ್ಯರು ನೀಡಿರುವ ಸ್ಪಷ್ಟ ಮಾಹಿತಿ ಇಲ್ಲಿದೆ

ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.

Read Full Story

09:36 AM (IST) Jul 16

ಹೈಪ್ರೊಫೈಲ್ ಮರ್ಡರ್‌ಗೆ ಬೆಚ್ಚಿಬಿದ್ದ ಧಾರವಾಡ, ವೈದ್ಯ ಪತಿಗೆ ಅನಸ್ತೇಷಿಯಾ ಕೊಟ್ಟು ವೈದ್ಯೆ ಪತ್ನಿ ಕೊಂದಿರುವ ಶಂಕೆ!

ಧಾರವಾಡದ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ, ನೇತ್ರತಜ್ಞೆ ಡಾ. ಪ್ರಿಯಾಂಕಾ ತನ್ನ ಪತಿ, ಅರವಳಿಕೆ ತಜ್ಞ ಡಾ. ಕಿರಣ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾಳೆ. ಈ ಕೃತ್ಯವನ್ನು ಮುಚ್ಚಿಹಾಕಲು ತನ್ನ 8 ವರ್ಷದ ಮಗನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದು, ಸದ್ಯ ಮಗು ಸಾವು-ಬದುಕಿನ ನಡುವೆ ಹೋರಾಡುತ್ತಿದೆ.

Read Full Story

09:29 AM (IST) Jul 16

Belagavi - ಜುಲೈ 22ರಿಂದ 28ರವರೆಗೆ ಹಲವು ರೈಲುಗಳು ಭಾಗಶಃ ರದ್ದು, ಸಂಚಾರದಲ್ಲಿ ಬದಲಾವಣೆ,

ಲೊಂಡಾ ರೈಲು ನಿಲ್ದಾಣದಲ್ಲಿ ಇಂಜಿನಿಯರಿಂಗ್ ಕಾಮಗಾರಿಯಿಂದಾಗಿ ಜು.22ರಿಂದ 28ರವರೆಗೆ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಿರಜ್-ಲೊಂಡಾ ಮತ್ತು ಮಿರಜ್-ಕ್ಯಾಸಲ್ ರಾಕ್ ಮಾರ್ಗದ ನಾಲ್ಕು ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದ್ದು, ಕೆಲವು ರೈಲುಗಳು ವಿಳಂಬವಾಗಿ ಸಂಚರಿಸಲಿವೆ.
Read Full Story

09:25 AM (IST) Jul 16

ರಾಯಚೂರಲ್ಲಿ ದಾರುಣ ಘಟನೆ.. ಬೀದಿ ನಾಯಿಗಳ ದಾಳಿಗೆ ಒಂದೂವರೆ ವರ್ಷದ ಕಂದಮ್ಮ ಬಲಿ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಬೀದಿ ನಾಯಿಗಳ ಹಿಂಡು ದಾಳಿ ನಡೆಸಿದ ಪರಿಣಾಮ 18 ತಿಂಗಳ ಮಗು ಸಾವನ್ನಪ್ಪಿದೆ. ಮನೆಯಿಂದ ಹೊರಬಂದ ಮಗುವಿನ ಮೇಲೆ ಚಿಕನ್ ಅಂಗಡಿ ಬಳಿ ಜಮಾಯಿಸಿದ್ದ ನಾಯಿಗಳು ದಾಳಿ ಮಾಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮಗು ಕೊನೆಯುಸಿರೆಳೆದಿದೆ.
Read Full Story

08:56 AM (IST) Jul 16

Hubballi - 1909ರಲ್ಲಿ 13 ವಿದ್ಯಾರ್ಥಿಗಳೊಂದಿಗೆ ಆರಂಭವಾದ ಶತಮಾನ ಕಂಡ ಶಾಲೆಗೆ ಹೊಸ ರೂಪ

115 ವರ್ಷಗಳ ಇತಿಹಾಸ ಹೊಂದಿರುವ ಹಳೇಹುಬ್ಬಳ್ಳಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ನಂ. 19, ಇದೀಗ ₹2.50 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡದೊಂದಿಗೆ ಆಧುನಿಕ ರೂಪ ಪಡೆಯಲು ಸಜ್ಜಾಗಿದೆ. ಸಿದ್ಧಾರೂಢರು ಅಡಿಗಲ್ಲು ಹಾಕಿದ್ದ ಈ ಶಾಲೆಯು, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 12 ಕೊಠಡಿಗಳುಳ್ಳ ಸ್ಮಾರ್ಟ್‌ ಶಾಲೆಯಾಗಿ ಅಭಿವೃದ್ಧಿ ಹೊಂದಲಿದೆ.
Read Full Story

08:40 AM (IST) Jul 16

ಹಗ್ಗವೇ ಸೇತುವೆ - ಬಾಐನೆಕಿದು ಗ್ರಾಮದ ಬಾಣೂರಿನ BLO ಕರ್ತವ್ಯನಿಷ್ಠೆ; ಮೂರು ಮನೆಗಾಗಿ ಸಾಹಸ

ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಪ್ರದೇಶದಲ್ಲಿ, ಮತಗಟ್ಟೆ ಮಟ್ಟದ ಅಧಿಕಾರಿಗಳು ರಸ್ತೆ ಸಂಪರ್ಕವಿಲ್ಲದ ಮೂರು ಮನೆಗಳನ್ನು ತಲುಪಲು ಹಗ್ಗದ ಮೂಲಕ ಹೊಳೆ ದಾಟಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕಾಗಿ, ಅನಾರೋಗ್ಯಪೀಡಿತ ಮತದಾರರೂ ಸೇರಿದಂತೆ ಎಲ್ಲರ ವಿವರಗಳನ್ನು ಖಚಿತಪಡಿಸಿಕೊಳ್ಳಲು ಅವರು ಈ ಸಾಹಸಮಯ ಕರ್ತವ್ಯವನ್ನು ನಿರ್ವಹಿಸಿದರು.
Read Full Story

07:56 AM (IST) Jul 16

ಪತಿ ವಿರುದ್ಧವೇ 9 ಕೇಸ್‌ ದಾಖಲಿಸಿದ ಪತ್ನಿ - ಗಂಡನ 'ಬದುಕು ಜಟಕಾಬಂಡಿ' ಕಥೆ!

ಇಂಗ್ಲೆಂಡ್‌ನಿಂದ ಮರಳಿದ ಪತಿಯು ತನ್ನ ಮನೆಗೆ ಪ್ರವೇಶಿಸಿದ್ದಕ್ಕೆ ಪತ್ನಿ ಅತಿಕ್ರಮ ಪ್ರವೇಶದ ದೂರು ದಾಖಲಿಸಿದ್ದಾರೆ. ಇದು ಪತ್ನಿ ದಾಖಲಿಸಿದ 9ನೇ ಪ್ರಕರಣವಾಗಿದ್ದು, ಈ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ತನ್ನದೇ ಮನೆಗೆ ಪ್ರವೇಶಿಸಿದ್ದಕ್ಕೆ ಪತಿಯ ಮೇಲೆ ಅತಿಕ್ರಮ ಪ್ರವೇಶದ ಕೇಸ್ ಹಾಕಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
Read Full Story

07:36 AM (IST) Jul 16

BDA - ಕಾರಂತ ಬಡಾವಣೆಯಲ್ಲಿ ಸೈಟ್‌ ಬೇಕಿದ್ದರೆ ಜುಲೈ ಒಳಗೆಯೇ ಅರ್ಜಿ ಹಾಕಿ, ಬೆಲೆ ಎಷ್ಟು?

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಹೈಕೋರ್ಟ್‌ ಅನುಮತಿಯ ನಂತರ ಡಾ. ಶಿವರಾಮ ಕಾರಂತ ಬಡಾವಣೆಯ ನಿವೇಶನಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲು ಸಿದ್ಧತೆ ನಡೆಸಿದೆ. ಜುಲೈ ಅಂತ್ಯದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕಾರ ಆರಂಭವಾಗಲಿದ್ದು, ಭೂಮಾಲೀಕರು, ಕಂದಾಯ ನಿವೇಶನದಾರರು ಹಾಗೂ ಸಾರ್ವಜನಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಪಾರದರ್ಶಕತೆಗಾಗಿ ಸಾಫ್ಟ್‌ವೇರ್‌ ಮೂಲಕ ನಡೆಯಲಿದೆ.
Read Full Story

07:34 AM (IST) Jul 16

ಸ್ತ್ರೀಯರ ಒಳ ಉಡುಪು ರಾತ್ರಿ ಕದ್ದು ಮತ್ತೆ ತಂದಿಡುತ್ತಿದ್ದ ಸೈಕೋ ಡೆಲವರಿ ಬಾಯ್ ಅರೆಸ್ಟ್!

ಮನೆ ಹೊರಗೆ ಒಣ ಹಾಕುತ್ತಿದ್ದ ಒಳ ಉಡುಪುಗಳನ್ನು ರಾತ್ರಿ ಕಳವು ಮಾಡುತ್ತಿದ್ದ ಕಿಡಿಗೇಡಿಯೊಬ್ಬನನ್ನು ಇಬ್ಬರು ಯುವತಿಯರು ಪತ್ತೆ ಹಚ್ಚಿ ಇಂದಿರಾನಗರ ಠಾಣೆ ಪೊಲೀಸರಿಗೆ ಹಿಡಿದು ಕೊಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Read Full Story

More Trending News