ಬೆಂಗಳೂರು: ಜಾತಿ ಗಣತಿ ವರದಿ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಏ.17ರಂದು ವಿಶೇಷಸಚಿವ ಸಂಪುಟ ಸಭೆ ನಿಗದಿಯಾಗಿರುವ ಬೆನ್ನಲ್ಲೇ ಗಣತಿಯಲ್ಲಿನ ಅಂಕಿ-ಅಂಶಗಳ ಬಗ್ಗೆ ವಿರೋಧ ಹೊಂದಿರುವ ಜಾತಿಗಳು ಚುರುಕಾಗಿವೆ. ವೀರಶೈವ ಲಿಂಗಾಯತ ಮಹಾಸಭೆ ಈ ವರದಿಯನ್ನು ವಿರೋಧಿಸುವ ಸಂಬಂಧ ನಿವೃತ್ತ ಜಡ್ಜ್‌ಗಳ ಸಮಿತಿ ರಚಿಸಲು ಮುಂದಾಗಿದೆ. ಒಕ್ಕಲಿಗರ ಮನದಿಂಗಿತ ಅರಿತು ಮುಂದೇನು ಮಾಡಬೇಕು ಎಂದು ಚರ್ಚಿಸಲು ಡಿಸಿಎಂ ಡಿ.ಕೆ.ಶಿವಕುಮಾರ್ ಮಂಗಳವಾರ ಜನಪ್ರತಿನಿಧಿಗಳ ಸಭೆ ಕರೆದಿದ್ದಾರೆ. ಮತ್ತೊಂದೆಡೆ, ಒಕ್ಕಲಿಗರ ಸಂಘವೂ ಮಂಗಳವಾರ ಸಭೆ ಸೇರುತ್ತಿದೆ. ಹೊಸದಾಗಿ ಸಮೀಕ್ಷೆ ಮಾಡಬೇಕು ಎಂದು ಸರ್ಕಾರದ ಹಾಲಿ ಮಂತ್ರಿ ಲಕ್ಷ್ಮಿ ಹೆಬ್ಬಾಳ್ಳರ್ ಬಹಿರಂಗವಾಗಿ ಆಗ್ರಹಿಸಿದ್ದಾರೆ. ಹೀಗಾಗಿ ಗಣತಿ ಭವಿಷ್ಯದ ಬಗ್ಗೆ ಭಾರಿ ಕುತೂಹಲ ಮೂಡಿದೆ. ಕರ್ನಾಟಕದಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕಿತ್ತು ಅದನ್ನು ಧರ್ಮಾಧಾರಿತವಾಗಿ ಹಂಚಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹರಿಹಾಯ್ದಿದ್ದಾರೆ

11:51 PM (IST) Apr 15
ಬಾಲಿವುಡ್ ಬಾದ್‍ಶಾ, ಶಾರುಖ್ ಖಾನ್ ತಮ್ಮ 300 ಕೋಟಿ ಮೌಲ್ಯದ ಲಾಸ್ ಏಂಜಲೀಸ್ ಮನೆಯನ್ನು ದಿನಕ್ಕೆ 2 ಲಕ್ಷ ರೂಪಾಯಿಗಳಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಈ ಐಷಾರಾಮಿ ಮನೆಯ ವೈಶಿಷ್ಟ್ಯಗಳೇನು?
ಪೂರ್ತಿ ಓದಿ11:16 PM (IST) Apr 15
ಬೆಂಗಳೂರಿನ 22 ವರ್ಷದ ಯುವತಿ ಜೊಮ್ಯಾಟೋ ಆ್ಯಪ್ ಮೂಲಕ ಆಹಾರವನ್ನು ಆರ್ಡರ್ ಮಾಡಿದಾಗ ವಿತರಣಾ ವ್ಯಕ್ತಿಯಿಂದ ಕಿರುಕುಳ ಅನುಭವಿಸಿದರು. ಈ ಬಗ್ಗೆ ದೂರು ನೀಡಿದ್ದು, ನನಗೆ ಜೀವ ಭಯ ಉಂಟಾಗಿದೆ ಎಂದು ಅಳಲು ತೊಡಿಕೊಂಡಿದ್ದಾರೆ.
ಪೂರ್ತಿ ಓದಿ10:11 PM (IST) Apr 15
ಕಾಸರಗೋಡಿನಲ್ಲಿ ಕುಡಿದ ಮತ್ತಿನಲ್ಲಿ ಅಂಗಡಿ ಮಾಲೀಕನೋರ್ವ ಪಕ್ಕದ ಅಂಗಡಿಯ ಮಹಿಳೆಯ ಮೇಲೆ ಥಿನ್ನರ್ ಎರಚಿ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ದೂರು ನೀಡಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಪೂರ್ತಿ ಓದಿ10:08 PM (IST) Apr 15
ಕೇವಲ ಹತ್ತೇ ಹತ್ತೇ ನಿಮಿಷದಲ್ಲಿ ಸಿಮ್ ನಿಮ್ ಮನೆ ಬಾಗಿಲಿಗೆ ಡೆಲಿವರಿ ಆಗಲಿದೆ. ಏರ್ಟೆಲ್ ಸಿಮ್‌ಗಾಗಿ ಶಾಪ್, ರೇಟೇಲ್ ಶಾಪ್ ಹೋಗಬೇಕಿಲ್ಲ. ಏನಿದು ಹೊಸ ಆಫರ್.
ಪೂರ್ತಿ ಓದಿ09:47 PM (IST) Apr 15
ಚಾಣಕ್ಯ ನೀತಿ: ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಮಹಿಳೆಯರ ಸ್ವಭಾವದ ಬಗ್ಗೆ ಬಹಳಷ್ಟು ಬರೆದಿದ್ದಾರೆ. ಮಹಿಳೆಯರಲ್ಲಿ ಹುಟ್ಟಿನಿಂದಲೇ ಇರುವ 5 ಕೆಟ್ಟ ಹವ್ಯಾಸಗಳ ಬಗ್ಗೆಯೂ ಚಾಣಕ್ಯರು ಹೇಳಿದ್ದಾರೆ. ಅವರು ಬರೆದದ್ದನ್ನು ಎಲ್ಲರೂ ಸತ್ಯ ಎಂದು ಒಪ್ಪುತ್ತಾರೆ.
ಪೂರ್ತಿ ಓದಿ09:31 PM (IST) Apr 15
ಅಕ್ರಮ ಸಂಬಂಧದ ಅಮಲಿನಲ್ಲಿ ಮಹಿಳೆ ಮಾಡಿದ ಕೆಲಸ ತಾಯಿ ಕುಲಕ್ಕೆ ಅಪಮಾನ ಮಾಡುವಂತ ಕೆಲಸ ಮಾಡಿದ್ದಾಳೆ. ತನ್ನದೇ ಮಗಳ ಸ್ನಾನದ ವಿಡಿಯೋ, ಡ್ರೆಸ್ ಚೇಂಜ್ ವಿಡಿಯೋ ರೆಕಾರ್ಡ್ ಮಾಡಿ ಹರಿಬಿಟ್ಟ ಘಟನೆ ನಡೆದಿದೆ. ಮಹಾ ತಾಯಿ ಯ ನಡೆ ಹಿಂದೆ ಒಂದು ಕಾರಣವಿದೆ.
ಪೂರ್ತಿ ಓದಿ09:08 PM (IST) Apr 15
ವೃದ್ಧ ದಂಪತಿಗಳು ಪ್ರೀತಿಯ ನೃತ್ಯದ ಮೂಲಕ ಝಡ್ ಜನರೇಷನ್ ಗೆ ಮಾದರಿಯಾಗಿದ್ದಾರೆ. ದೆಹಲಿಯ ಉದ್ಯಾನವನದಲ್ಲಿ ಹಾಡಿಗೆ ತಕ್ಕಂತೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಪೂರ್ತಿ ಓದಿ08:31 PM (IST) Apr 15
ಒಮ್ಮೆ ವಕ್ಪ್ ಆದರೆ ಮತ್ತೆ ಯಾವತ್ತೂ ವಕ್ಫ್, ಗ್ರಾಮಸ್ಥರೇ ಜಾಗ ಖಾಲಿ ಮಾಡಿ ಇಲ್ಲಾ ವಕ್ಫ್‌ಗೆ ಬಾಡಿಗೆ ಕೊಡಿ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಈ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿದೆ.
ಪೂರ್ತಿ ಓದಿ08:12 PM (IST) Apr 15
ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2025ರಲ್ಲಿ 4 ಭಾರತೀಯ ವಿಮಾನ ನಿಲ್ದಾಣಗಳು ಜಾಗತಿಕ ಟಾಪ್ 100 ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 32ನೇ ಸ್ಥಾನದೊಂದಿಗೆ ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.
ಪೂರ್ತಿ ಓದಿ07:20 PM (IST) Apr 15
ಆಯೋಧ್ಯೆ ಶ್ರೀರಾಮ ಮಂದಿರದ ಮೇಲ ಪವಿತ್ರ ಕಳಶ ಪ್ರತಿಷ್ಠಾಪಿಸಿದ ಬೆನ್ನಲ್ಲೇ ಎದುರಾದ ಬಾಂಬ್ ಬೆದರಿಕೆಯಿಂದ ಭದ್ರತೆ ಹೆಚ್ಚಿಸಲಾಗಿದೆ. ಇದರ ನಡುವೆ ಬೆದರಿಕೆ ಹಾಕಿದ ಮೂಲ ಎಲ್ಲಿ ಅನ್ನೋದು ಸೈಬರ್ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪೂರ್ತಿ ಓದಿ06:42 PM (IST) Apr 15
ಟ್ರಂಪ್ ತೆರಿಗೆ ಸುನಾಮಿಯಲ್ಲಿ ವಿಶ್ವದ ಪ್ರಮುಖ ಷೇರುಮಾರುಕಟ್ಟೆಗಳು ಪಾತಾಳಕ್ಕೆ ಕುಸಿದಿತ್ತು. ಭಾರತ ಕೂಡ ಹೊರತಾಗಿರಲಿಲ್ಲ. ಆದರೆ ಈ ಕುಸಿತವನ್ನು ಅಷ್ಟೇ ವೇಗದಲ್ಲಿ ಮೆಟ್ಟಿನಿಂತು ಆದ ನಷ್ಟವನ್ನೂ ಸಂಪೂರ್ಣವಾಗಿ ಭಾರತ ಸರಿದೂಗಿಸಿದೆ. ಈ ಮೂಲಕ ನಷ್ಟ ಸರಿದೂಗಿಸಿದ ವಿಶ್ವದ ಏಕೈಕ ಷೇರುಮಾರುಕಟ್ಟೆ ಅನ್ನೋ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಪೂರ್ತಿ ಓದಿ06:30 PM (IST) Apr 15
ವಿಜಯನಗರ ಶಾಸಕ ಎಂ.ಕೃಷ್ಣಪ್ಪ ಜನ್ಮದಿನದ ಪ್ರಯುಕ್ತ ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಹಾಕಿ ಬಸ್‌ಸ್ಟಾಪ್ ಮುಚ್ಚಲಾಗಿದೆ. ಡಿ.ಕೆ. ಶಿವಕುಮಾರ್ ಸೂಚನೆಗಳನ್ನು ಬಿಬಿಎಂಪಿ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಪೂರ್ತಿ ಓದಿ06:28 PM (IST) Apr 15
ಬೆಂಗಳೂರು ಹವಾಮಾನ ಕ್ರಿಯಾ ಕೋಶವು ಎರಡು ಫೆಲೋಶಿಪ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 30, 2025 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಪೂರ್ತಿ ಓದಿ06:13 PM (IST) Apr 15
ಸಂವಿಧಾನದ 21ನೇ ವಿಧಿಯನ್ವಯ ಮಹಿಳೆಗೆ ಮಗುವನ್ನು ಹೆರುವ ಅಥವಾ ಹೆರದಿರುವ ಹಕ್ಕಿದೆ ಎಂದು ನ್ಯಾಯಮೂರ್ತಿ ಅಶೋಕ್ ಬಿ. ಹಿಂಚಿಗೇರಿ ಹೇಳಿದ್ದಾರೆ. ಗರ್ಭಪಾತ ಕಾಯ್ದೆಯಲ್ಲಿ ಸುಧಾರಣೆಯ ಅವಶ್ಯಕತೆಯಿದ್ದು, ಗರ್ಭಿಣಿ ಮಹಿಳೆಯನ್ನು ಅಧಿಕಾರಶಾಹಿ ಪ್ರಕ್ರಿಯೆಗೆ ಒಳಪಡಿಸಬಾರದು ಎಂದು ಅವರು ತಿಳಿಸಿದರು.
ಪೂರ್ತಿ ಓದಿ06:02 PM (IST) Apr 15
ಸಿಕಂದರ್ ಬಳಿಕ ಸಣ್ಣ ಬ್ರೇಕ್ ಪಡೆದ ರಶ್ಮಿಕಾ ಮಂದಣ್ಣ ಇದೀಗ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ರಾತ್ರಿಯಿಡಿ ಶೂಟಿಂಗ್ ಮಾಡಿ ಬೆಳಗ್ಗೆ ನಿದ್ದೆ ಗಣ್ಣಿನಲ್ಲೇ ಮಹತ್ವದ ಸಂದೇಶ ಕೊಟ್ಟಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳಿಗೆ ವಿಡಿಯೋ ಮೂಲಕ ರಶ್ಮಿಕಾ ಮಂದಣ್ಣ ಹೇಳಿದ್ದೇನು?
05:55 PM (IST) Apr 15
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. 661 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿ ನೋಟಿಸ್ ಜಾರಿ ಮಾಡಿತ್ತು.
ಪೂರ್ತಿ ಓದಿ05:35 PM (IST) Apr 15
ಒಡಿಶಾದ ಪೂರಿ ಜಗನ್ನಾಥ ದೇವಸ್ಥಾನದ ಮೇಲೆ ಗರುಡ ಪಕ್ಷಿ ಧ್ವಜದಂತಹ ಬಟ್ಟೆಯನ್ನು ಹಿಡಿದು ಹಾರಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಘಟನೆಯು ಆಧ್ಯಾತ್ಮಿಕ ಚರ್ಚೆಗೆ ಕಾರಣವಾಗಿದ್ದು, ಕೆಲವರು ಇದನ್ನು ದೈವಿಕ ಚಿಹ್ನೆ ಎಂದರೆ, ಇನ್ನು ಕೆಲವರು ಕೆಟ್ಟ ಶಕುನ ಎಂದು ಭಾವಿಸಿದ್ದಾರೆ.
ಪೂರ್ತಿ ಓದಿ05:24 PM (IST) Apr 15
ವಿಶಾಖಪಟ್ಟಣದಲ್ಲಿ ಗಂಡ ಹೆಂಡತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡ ಹೆಂಡತಿ ನಡುವಿನ ಸಣ್ಣ ವಾಗ್ವಾದವೊಂದು ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನ ಕೈಗೆ ಬುದ್ದಿಕೊಟ್ಟ ಗಂಡ 8 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಂದಿದ್ದಾನೆ.
ಪೂರ್ತಿ ಓದಿ05:15 PM (IST) Apr 15
ಮಂಡ್ಯದಲ್ಲಿ ಬಾಲಕಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ಪೊಲೀಸರು ಸತ್ಯವನ್ನು ಬಯಲುಗೊಳಿಸಿ ನ್ಯಾಯ ಒದಗಿಸಿದರು. ಆದರೆ ಹುಬ್ಬಳ್ಳಿಯಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದಲ್ಲಿ ಹಲವು ಪ್ರಶ್ನೆಗಳು ಉಳಿದಿವೆ. ಈ ಎರಡೂ ಘಟನೆಗಳು ಭಾರತದಲ್ಲಿ ಮಕ್ಕಳ ಸುರಕ್ಷತೆ ಮತ್ತು ನ್ಯಾಯದಾನದ ಬಗ್ಗೆ ಚರ್ಚೆ ಹುಟ್ಟುಹಾಕಿವೆ.
ಪೂರ್ತಿ ಓದಿ04:57 PM (IST) Apr 15
ಭಾರತದಲ್ಲಿ ಹೆದ್ದಾರಿ ಟೋಲ್ ಸಂಗ್ರಹ ಫಾಸ್ಟ್ಯಾಗ್ ಮೂಲಕ ನಡೆಯುತ್ತಿದೆ. ಇದೀಗ ಮೇ. 1 ರಿಂದ ಸ್ಯಾಟಲೈಟ್ ಆಧಾರಿತ ಜಿಎನ್‌ಎಸ್‌ಎಸ್ ಟೋಲ್ ಸಂಗ್ರಹ ಆರಂಭಗೊಳ್ಳುತ್ತಿದೆ. ವಿಶೇಷ ಅಂದರೆ 20 ಕಿಲೋಮೀಟರ್ ಉಚಿತ ಪ್ರಯಾಣ ಸಿಗಲಿದೆ.
ಪೂರ್ತಿ ಓದಿ04:42 PM (IST) Apr 15
ಭಾರತೀಯ ಹವಾಮಾನ ಇಲಾಖೆಯು 2025ರಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಾನ್ಸೂನ್ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ.
ಪೂರ್ತಿ ಓದಿ04:38 PM (IST) Apr 15
ಮದುವೆಗೆ ನಿರಾಕರಿಸಿದ್ದಕ್ಕೆ ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್‌ಗೆ ಥಳಿಸಿದ ಪರಿಣಾಮವಾಗಿ ಆತನ ದೇಹದಲ್ಲಿ 13 ಮೂಳೆಗಳು ಮುರಿದಿವೆ. ಗುಲ್ಶನ್ ಎಂಬ ಯುವಕನಿಗೆ ಈ ಸ್ಥಿತಿ ಎದುರಾಗಿದ್ದು, ಆತ 17 ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.
ಪೂರ್ತಿ ಓದಿ04:27 PM (IST) Apr 15
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ತೆ-ಸೊಸೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಕೂಡಿಟ್ಟು ಬೋರ್‌ವೆಲ್ ಕೊರೆಸಿ, ತಮ್ಮ ತೋಟಕ್ಕೆ ನೀರು ತಂದುಕೊಂಡಿದ್ದಾರೆ. 13 ತಿಂಗಳ ಗೃಹಲಕ್ಷ್ಮಿ ಹಣದಿಂದ ಬೋರ್‌ವೆಲ್ ಕೊರೆಸಿದ್ದು, ಈಗ 3 ಇಂಚಿನಷ್ಟು ನೀರು ಬರುತ್ತಿದೆ.
ಪೂರ್ತಿ ಓದಿ04:12 PM (IST) Apr 15
ಭಾರತದ ಪೊಲೀಸ್ ಪಡೆಯಲ್ಲಿ ಹಿರಿಯ ಹುದ್ದೆಗಳಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇದೆ ಎಂದು ಹೊಸ ವರದಿಯೊಂದು ತಿಳಿಸಿದೆ. ಇಂಡಿಯಾ ಜಸ್ಟೀಸ್ ರಿಪೋರ್ಟ್ 2025 ರ ಪ್ರಕಾರ, ಪೊಲೀಸ್ ವ್ಯವಸ್ಥೆಯಲ್ಲಿರುವ ಮಹಿಳೆಯರಲ್ಲಿ ಶೇಕಡಾ 90 ರಷ್ಟು ಜನರು ಕಾನ್‌ಸ್ಟಾಬ್ಯುಲರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಪೂರ್ತಿ ಓದಿ04:08 PM (IST) Apr 15
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ ಆರೋಪದ ಮೇಲೆ ಗೂಗಲ್ ಇಂಡಿಯಾ ಮತ್ತು ಅದರ ಅಧಿಕಾರಿಗಳಿಗೆ ವಿಧಿಸಲಾದ ದಂಡದ ಶೇಕಡ 50 ರಷ್ಟು ಮೊತ್ತವನ್ನು ಬ್ಯಾಂಕ್ ಗ್ಯಾರಂಟಿಗಳ ರೂಪದಲ್ಲಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ. ಈ ಕುರಿತು ಇಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದೆ.
ಪೂರ್ತಿ ಓದಿ04:06 PM (IST) Apr 15
ಯಾದಗಿರಿ ಜಿಲ್ಲೆಯ ಕಡೇಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಕೆಮಿಕಲ್ ಕೈಗಾರಿಕೆಗಳಿಂದ ಹೊರಹೊಮ್ಮುವ ಗಾಳಿ ಮತ್ತು ತ್ಯಾಜ್ಯದಿಂದ ಸುತ್ತಮುತ್ತಲಿನ ಹಳ್ಳಿಗಳ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಮಂದ ದೃಷ್ಟಿ, ಚರ್ಮರೋಗಗಳು, ಹೃದಯ, ಮೆದುಳು, ಕ್ಷಯ, ಅಸ್ತಮಾ ಮತ್ತು ಕಿಡ್ನಿ ವೈಫಲ್ಯದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ ಎಂದು ವರದಿಯಾಗಿದೆ.
ಪೂರ್ತಿ ಓದಿ03:40 PM (IST) Apr 15
ಎಂ.ಎಸ್.ಧೋನಿ ಐಪಿಎಲ್‌ನಲ್ಲಿ 200 ಔಟ್ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಲಖನೌ ವಿರುದ್ಧ ಗೆಲುವು ಸಾಧಿಸಿದೆ. ಋತುರಾಜ್ ಗಾಯಕ್ವಾಡ್ ಬದಲು ಆಯುಶ್ ಮಾಥ್ರೆ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಪೂರ್ತಿ ಓದಿ03:33 PM (IST) Apr 15
ರಸ್ತೆ ಸಾರಿಗೆ ಸಚಿವಾಲಯವು ಕಿರಿದಾದ ಹೆದ್ದಾರಿಗಳಲ್ಲಿ ಟೋಲ್ ವಿನಾಯಿತಿ ಮತ್ತು ಖಾಸಗಿ ಕಾರುಗಳಿಗೆ ವಾರ್ಷಿಕ ಟೋಲ್ ಪಾಸ್ ಪ್ರಸ್ತಾವನೆಗಳನ್ನು ಹಣಕಾಸು ಸಚಿವಾಲಯಕ್ಕೆ ಕಳುಹಿಸಿದೆ. ಅನುಮೋದನೆ ದೊರೆತರೆ ವೈಯಕ್ತಿಕ ವಾಹನ ಚಾಲಕರಿಗೆ ಆರ್ಥಿಕ ಹೊರೆ ಕಡಿಮೆಯಾಗಲಿದೆ.
ಪೂರ್ತಿ ಓದಿ03:32 PM (IST) Apr 15
ಎರ್ನಾಕುಲಂನಲ್ಲಿ KSRTC ಬಸ್ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ 15ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ, ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.
ಪೂರ್ತಿ ಓದಿ03:21 PM (IST) Apr 15
ಒಂದೇ ವಾಕ್ಯದಲ್ಲಿ ರಿಸೈನ್ ಲೆಟರ್ ಬರೆದು ಕೆಲಸಕ್ಕೆ ರಾಜೀನಾಮೆ ನೀಡಲಾಗಿದೆ. ವಿಶೇಷ ಅಂದರೆ ಈ ರಾಜೀನಾಮೆ ಪತ್ರ ಕೊಟ್ಟಿರುವುದು ಟಾಯ್ಲೆಟ್ ಪೇಪರ್‌ನಲ್ಲಿ. ಒಂದು ವಾಕ್ಯದಲ್ಲಿ ತನ್ನ ರಾಜೀನಾಮೆ, ಯಾವ ಕಾರಣಕ್ಕಾಗಿ ಈ ಪೇಪರ್ ಬಳಸಿದ್ದೇನೆ ಹಾಗೂ ಕಂಪನಿಯ ಜನ್ಮ ಜಾಲಾಡಿದ ಘಟನೆ ನಡೆದಿದೆ.
ಪೂರ್ತಿ ಓದಿ03:21 PM (IST) Apr 15
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮುಡಾ ಪ್ರಕರಣದಲ್ಲಿ ಜನಪ್ರತಿನಿಧಿಗಳ ಕೋರ್ಟ್ ಬಿಗ್ ಶಾಕ್ ನೀಡಿದೆ. ಲೋಕಾಯುಕ್ತ ಪೊಲೀಸರಿಗೆ ತನಿಖೆ ಮುಂದುವರಿಸಲು ಸೂಚಿಸಿದ್ದು, ಬಿ ರಿಪೋರ್ಟ್ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಮೇ 7ರೊಳಗೆ ಲೋಕಾಯುಕ್ತ ಪೊಲೀಸರು ಅಂತಿಮ ವರದಿ ಸಲ್ಲಿಸಬೇಕು.
ಪೂರ್ತಿ ಓದಿ03:03 PM (IST) Apr 15
ದಾವಣಗೆರೆಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಸೀದಿಯಲ್ಲಿ ಗಂಡ ದೂರು ನೀಡಿದ ನಂತರ ಯುವಕರ ಗುಂಪೊಂದು ಆತನ ಪತ್ನಿ ಮೇಲೆ ಹಲ್ಲೆ ನಡೆಸಿದೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೂರ್ತಿ ಓದಿ02:54 PM (IST) Apr 15
ತಮಿಳುನಾಡಿನಲ್ಲಿ ವಕ್ಫ್ ಮಂಡಳಿಯು ಗ್ರಾಮವೊಂದಕ್ಕೆ ನೋಟಿಸ್ ನೀಡಿದ್ದು, ಆಸ್ತಿ ವಕ್ಫ್‌ಗೆ ಸೇರಿದೆ ಎಂದು ಹೇಳಿಕೊಂಡಿದೆ. ಕಾಂಗ್ರೆಸ್ ಶಾಸಕರು ವಕ್ಫ್ ಆಸ್ತಿಯ ಶಾಶ್ವತತೆಯ ಬಗ್ಗೆ ಹೇಳಿಕೆ ನೀಡಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಪೂರ್ತಿ ಓದಿ02:41 PM (IST) Apr 15
ಆ್ಯಂಬುಲೆನ್ಸ್‌ಗೆ ದುಡ್ಡಿಲ್ಲ, ಯಾರಿಗೆ ಕರೆ ಮಾಡಬೇಕು ಅನ್ನೋದು ಗೊತ್ತಿಲ್ಲ. ಇತ್ತ ತಂದೆಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ತಳ್ಳೋ ಸೈಕಲ್ ಗಾಡಿಯಲ್ಲಿ ಮಲಗಿಸಿ ತಂದೆಯನ್ನು ಆಸ್ಪತ್ರೆಗೆ ಬಾಲಕ ಕರೆ ತಂದ ವಿಡಿಯೋ ಹಲವು ಪ್ರಶ್ನೆ ಹುಟ್ಟು ಹಾಕಿದೆ.
01:48 PM (IST) Apr 15
ವಿಟಮಿನ್ ಬಿ12 ಕೊರತೆ ಭಾರತದಲ್ಲಿ ಸಾಮಾನ್ಯವಾಗಿದೆ, ಅದರಲ್ಲೂ ಯುವ ವೃತ್ತಿಪರರಲ್ಲಿ. ದಣಿವು, ತಲೆತಿರುಗುವಿಕೆ, ಮತ್ತು ಮರೆವು ಇದರ ಲಕ್ಷಣಗಳಾಗಿದ್ದು, ಸಸ್ಯಾಹಾರಿ ಆಹಾರ ಮತ್ತು ಜಡ ಜೀವನಶೈಲಿಯಿಂದ ಇದು ಉಂಟಾಗುತ್ತದೆ.
ಪೂರ್ತಿ ಓದಿ01:26 PM (IST) Apr 15
ಬರ್ಮಿಂಗ್‌ಹ್ಯಾಮ್‌ನಲ್ಲಿ ಕಸ ಸಂಗ್ರಹಕಾರರ ಪ್ರತಿಭಟನೆಯಿಂದ ನಗರದಲ್ಲಿ ಕಸದ ರಾಶಿ ಹೆಚ್ಚಾಗಿದೆ. ಇದರಿಂದ ಇಲಿಗಳ ಕಾಟ ಹೆಚ್ಚಾಗಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಪರಿಸ್ಥಿತಿ ನಿಭಾಯಿಸಲು ಮಿಲಿಟರಿ ಸಿಬ್ಬಂದಿಯನ್ನು ಕರೆಯಲು ಸರ್ಕಾರ ಮುಂದಾಗಿದೆ.
ಪೂರ್ತಿ ಓದಿ01:24 PM (IST) Apr 15
ಕೋಲ್ಕತ್ತಾದಲ್ಲಿ ನಡೆದ ಐಎಸ್‌ಎಲ್ ಫೈನಲ್‌ನಲ್ಲಿ ಬೆಂಗಳೂರು ಎಫ್‌ಸಿ ಅಭಿಮಾನಿಗಳು ಮತ್ತು ಮಾಲೀಕರ ಮೇಲೆ ಪಟಾಕಿ ಎಸೆದ ಘಟನೆಯನ್ನು ಬಿಎಫ್‌ಸಿ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತು ಎಐಎಫ್‌ಎಫ್ ಮತ್ತು ಎಫ್‌ಎಸ್‌ಡಿಎಲ್ ಗೆ ದೂರು ದಾಖಲಿಸಿದೆ.
ಪೂರ್ತಿ ಓದಿ01:22 PM (IST) Apr 15
ಅಮೆರಿಕದ ನಾಸಾದಲ್ಲಿ ಉನ್ನತ ಅಧಿಕಾರಿಯಾಗಿದ್ದ ಭಾರತೀಯ ಮೂಲದ ನೀಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ. ಅಧ್ಯಕ್ಷ ಟ್ರಂಪ್ ಅವರ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನಾಸಾ ತಿಳಿಸಿದೆ.
ಪೂರ್ತಿ ಓದಿ12:57 PM (IST) Apr 15
ನಟ ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸೈಫ್ ಅಲಿ ಖಾನ್‌ಗೆ ಚೂರಿ ಇರಿತ ಆಗಿರುವುದೇ ಅನುಮಾನ ಎನ್ನುವಂಥ ಮಾತುಗಳು ಕೇಳಿಬರುತ್ತಿವೆ. ಸೈಫ್ ಅಲಿ ಖಾನ್ ಮೇಲಿನ ದಾಳಿ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ಬೆರಳಚ್ಚುಗಳು ಹೊಂದಿಕೆಯಾಗುತ್ತಿಲ್ಲ.
ಪೂರ್ತಿ ಓದಿ12:52 PM (IST) Apr 15
ʼಸೀತಾರಾಮʼ ಧಾರಾವಾಹಿ ನಟಿ ವೈಷ್ಣವಿ ಗೌಡ ಅವರು ಪರರಾಜ್ಯದ ಅನುಕೂಲ್ ಮಿಶ್ರಾ ಜೊತೆ ಎಂಗೇಜ್ ಆಗಿದ್ದಾರೆ. ಈ ವೇಳೆ ವೈಷ್ಣವಿ ತಾಯಿ, ಭಾನು ಅವರು, “ಈ ಹಿಂದಿನ ಥರ ಅಲ್ಲ ಇದು” ಎಂದು ಹೇಳಿಕೆ ಕೊಟ್ಟಿದ್ದಾರೆ.