ಬೆಂಗಳೂರು: ಆರೆಸ್ಸೆಸ್‌ನಂಥ ನೂರು ಸಂಘಟನೆಗಳು ಬಂದರೂ ಈ ದೇಶ ಹಾಳು ಮಾಡಲು ಸಾಧ್ಯವಿಲ್ಲ. ಯಾಕೆಂದರೆ, ಇಲ್ಲಿರುವ ಹಿಂದುಳಿದ, ದಲಿತ, ಅಲ್ಪಸಂಖ್ಯಾತರು ಈ ದೇಶದ ಆತ್ಮವಿದ್ದಂತೆ. ಅವರು ಈ ದೇಶ ಕಾಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ಎಂದರೆ ರೂಮರ್ ಸ್ಪ್ರೆಡಿಂಗ್ ಸಂಘ. ನಾವೆಲ್ಲ ದಕ್ಷಿಣ ಭಾರತೀಯರು ಪುಣ್ಯವಂತರು, ಮಹಾರಾಷ್ಟ್ರದಲ್ಲಿ ಅಂಬೇಡ್ಕರ್, ಕರ್ನಾಟಕದಲ್ಲಿ ಬಸವಣ್ಣ, ಕೇರಳದಲ್ಲಿ ನಾರಾಯಣಗುರು, ತಮಿಳುನಾಡಿನಲ್ಲಿ ಪೆರಿಯಾರ್ ಸೇರಿ ಹಲವು ಸಾಮಾಜಿಕ ಹರಿಕಾರರು ಹುಟ್ಟಿ ದಕ್ಷಿಣ ಭಾರತ ರಕ್ಷಿಸಿದ್ದಾರೆ ಎಂದರು. ಮಹಾತ್ಮ ಗಾಂಧಿ ಅವರನ್ನು ನಾಥೂರಾಮ್ ಗೋಡ್ಸೆ ಹತ್ಯೆ ಮಾಡಿದಾಗ ಸರ್ದಾರ್ ವಲ್ಲಭಬಾಯಿ ಪಟೇಲ್ ಆರೆಸ್ಸೆಸ್ ಸಂಘಟನೆಯನ್ನು ಪ್ರಥಮ ಬಾರಿಗೆ ನಿಷೇಧಿಸಿದರು. ಈಗ ಪ್ರಧಾನಿ ಮೋದಿ ಪಟೇಲ್ ಪ್ರತಿಮೆ ಸ್ಥಾಪಿಸಿ ಅವರಿಗೆ ಅರ್ಪಿಸಿದ್ದಾರೆ. ಅಂದರೆ ಮೋದಿ ಅವರಿಗೂ ಈ ಸಂಘಟನೆ ನಿಷೇಧಿಸಿದ್ದು ಸರಿ ಅಂತ ಅನಿಸಿದೆ ಎಂದು ವ್ಯಂಗ್ಯವಾಡಿದರು.
11:21 PM (IST) Sep 14
09:22 PM (IST) Sep 14
08:55 PM (IST) Sep 14
ರಕ್ಷಿತ್ ಶೆಟ್ಟಿ ಹಾಗೂ ಅನಂತ್ ನಾಗ್ ನಟನೆಯ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾವನ್ನು JioHotstarನಲ್ಲಿ ವೀಕ್ಷಿಸಬಹುದು. ತಂದೆ-ಮಗನ ಭಾವನಾತ್ಮಕ ಕಥೆಯ ಜೊತೆಗೆ ಕ್ರೈಂ ಮತ್ತು ಸಸ್ಪೆನ್ಸ್ ಹೊಂದಿರುವ ಈ ಕನ್ನಡ ಥ್ರಿಲ್ಲರ್ ಸಿನಿಮಾ ಇಂದಿಗೂ ಸಿನಿಪ್ರಿಯರ ಫೇವರಿಟ್.
08:05 PM (IST) Sep 14
ಕನ್ನಡ ಬಿಗ್‌ಬಾಸ್ ಶೋನಿಂದ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಹಿರಿಯ ಸ್ಪರ್ಧಿ, ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ದಿಢೀರ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಷ್ಟಕ್ಕೂ ಅವರಿಗೆ ಏನು ಆಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.
07:58 PM (IST) Sep 14
07:37 PM (IST) Sep 14
ಮುದ್ದಾಗಿದ್ದ ಸಂಸಾರವನ್ನು ತೊರೆದು ಪತ್ನಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಳು. ಒಂದು ತಿಂಗಳ ಬಳಿಕ ಆಕೆ ಪತ್ತೆ ಆಗಿದ್ದಾಳೆ. ಪತಿ ಅಲ್ಲಿಗೆ ಹೋಗಿ 'ಮನೆಗೆ ಬಾ' ಎಂದು ಬೇಡಿಕೊಂಡ. ಆದರೆ ತಾನು ಬರಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾಳೆ. ಅಷ್ಟಕ್ಕೂ ಆಕೆ ಯಾರ ಜೊತೆ ವಾಸಿಸುತ್ತಿದ್ದಾಳೆ ಗೊತ್ತಾ? ಲವರ್ ಜೊತೆಗೂ ಅಲ್ಲ, ಅಪ್ಪ-ಅಮ್ಮನ ಜೊತೆಗೂ ಅಲ್ಲ.
06:48 PM (IST) Sep 14
ಬೆಂಗಳೂರು ಕೇಂದ್ರ ನಗರ ಪಾಲಿಕೆಯ 119 ಬೆಲೆಬಾಳುವ ಆಸ್ತಿಗಳ ಗುತ್ತಿಗೆ ಅವಧಿ ಹಲವು ವರ್ಷಗಳ ಹಿಂದೆಯೇ ಮುಗಿದರೂ, ಅವುಗಳನ್ನು ವಶಕ್ಕೆ ಪಡೆಯಲು ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂಪಾಯಿ ಆದಾಯ ನಷ್ಟವಾಗುತ್ತಿದ್ದು, ನ್ಯಾಯಾಲಯದ ವ್ಯಾಜ್ಯಗಳ ನೆಪ ಹೇಳಲಾಗುತ್ತಿದೆ.
06:45 PM (IST) Sep 14
ಕಳೆದ ಜುಲೈ ತಿಂಗಳಿಗಿಂತ ಆಗಸ್ಟ್‌ನಲ್ಲಿ ಹಣದುಬ್ಬರ ಪ್ರಮಾಣ ಏರಿಕೆ ಆಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಆ ಮೂಲಕ ಸಾಮನ್ಯ ಜನರಿಗೆ ಮತ್ತೆ ಹೊರೆಯಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಈ ಕುರಿತ ಒಂದು ಸ್ಟೋರಿ ಇಲ್ಲಿದೆ…
06:03 PM (IST) Sep 14
05:57 PM (IST) Sep 14
05:36 PM (IST) Sep 14
ನಟ ಜಗ್ಗೇಶ್ ಅವರು ಶಿವರಾಜ್ ಕುಮಾರ್ ಅವರ ಮನೆಗೆ ತೆರಳಿ ರಾಖಿ ಕಟ್ಟಿದ್ದಾರೆ. ಇದಕ್ಕೆ ಪ್ರತಿಯಾಗಿ ಶಿವಣ್ಣ ಮತ್ತು ಗೀತಾ ದಂಪತಿ ಜಗ್ಗೇಶ್ ಅವರಿಗೆ ದುಬಾರಿ ವರ್ಸಾಚೆ ವಾಚ್‌ವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
05:18 PM (IST) Sep 14
05:13 PM (IST) Sep 14
ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಎಲಿಮಿನೇಷನ್‌ನಲ್ಲಿ ಪ್ರಥಮಾ ಮನೆಯಿಂದ ಹೊರಬಂದಿದ್ದಾರೆ. ಒಂದು ವಾರ ವಿಮಾನದಲ್ಲೇ ಇದ್ದ ಪ್ರಥಮಾ, ಎಲಿಮಿನೇಷನ್ ಬಳಿಕ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
04:52 PM (IST) Sep 14
‘ಮಂಗಳಗೌರಿ’ ಹೆಸರಿನ ಹೊಸ ಕನ್ನಡ ಸಿನಿಮಾವನ್ನು KVN Productions ಗಣೇಶ ಚತುರ್ಥಿಯಂದು ಘೋಷಿಸಿದೆ. ಇದೇ ಮೊದಲ ಬಾರಿಗೆ ಮಾಲಾಶ್ರೀ ಮತ್ತು ರುಕ್ಮಿಣಿ ವಸಂತ್ ಒಂದೇ ಚಿತ್ರದಲ್ಲಿ ನಟಿಸುತ್ತಿದ್ದು, ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ಸಿನಿಮಾದ ಫಸ್ಟ್ ಲುಕ್ ಕುತೂಹಲ ಮೂಡಿಸಿದೆ.
04:23 PM (IST) Sep 14
ರಶ್ಮಿಕಾ ಮಂದಣ್ಣ ಅವರ ಮುಖದ ಬದಲಾವಣೆ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಡಾ. ಮಿಥುನ್ ಪಾಂಚಾಲ್ ಇನ್‌ಸ್ಟಾಗ್ರಾಂನಲ್ಲಿ ವಿಶ್ಲೇಷಣೆ ನೀಡಿದ್ದು, ರಶ್ಮಿಕಾ ಅವರ ಮುಖದ ಶೇಪ್, ಮೂಗು ಹಾಗೂ ತುಟಿಗಳಲ್ಲಿನ ಬದಲಾವಣೆಗಳ ಬಗ್ಗೆ ಮಾತನಾಡಿದ್ದಾರೆ.
03:43 PM (IST) Sep 14
ಮುಸ್ಲಿಂ ಮುಖಂಡ ಅಜ್ಗರ್ ಅವರು ಗಣೇಶೋತ್ಸವಕ್ಕಾಗಿ 5 ಲಕ್ಷ ರೂಪಾಯಿ ಧನಸಹಾಯ ನೀಡುವ ಮೂಲಕ ಕೋಮು ಸೌಹಾರ್ದತೆಗೆ ಮಾದರಿಯಾಗಿದ್ದಾರೆ. ಸಮಾಜದಲ್ಲಿ ಒಗ್ಗಟ್ಟು ಮತ್ತು ಶಾಂತಿಯನ್ನು ಸಾರುವ ಅವರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
03:39 PM (IST) Sep 14
03:20 PM (IST) Sep 14
ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಥಿಯೇಟರ್ ಬಳಿಕ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಜೀ5ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂಬ ವರದಿಗಳು ಹರಿದಾಡುತ್ತಿವೆ. ಸಿನಿಮಾ ಯಾವಾಗ, ಎಲ್ಲಿ ನೋಡಬಹುದು? ಇಲ್ಲಿದೆ ಸಂಪೂರ್ಣ ಮಾಹಿತಿ.
03:04 PM (IST) Sep 14
ಸ್ವಾತಂತ್ರ್ಯ ಪೂರ್ವದ ಹಗರಿಬೊಮ್ಮನಹಳ್ಳಿ ರೈಲು ನಿಲ್ದಾಣವು ಇಲಾಖೆಗೆ ಉತ್ತಮ ಆದಾಯ ತಂದುಕೊಡುತ್ತಿದ್ದರೂ, ಪ್ರಯಾಣಿಕರಿಗೆ ಕನಿಷ್ಠ ಸೌಲಭ್ಯಗಳಿಲ್ಲದೆ ನರಕಸದೃಶವಾಗಿದೆ. ಶುದ್ಧ ಕುಡಿಯುವ ನೀರು, ಶೌಚಾಲಯ, ಸೂಕ್ತ ಪ್ಲಾಟ್‌ಫಾರ್ಮ್ ಮತ್ತು ಸುರಕ್ಷತಾ ವ್ಯವಸ್ಥೆಗಳ ಕೊರತೆ ಇದೆ
02:59 PM (IST) Sep 14
01:47 PM (IST) Sep 14
01:30 PM (IST) Sep 14
ಮೈಸೂರಿನ ವಿವಾದಿತ ಇನ್ಸ್‌ಪೆಕ್ಟರ್ ಧನಂಜಯ್ ಮೇಲೆ ದಲಿತ ಯುವಕರಿಗೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಇದರ ಬೆನ್ನಲ್ಲೇ, 2014ರಲ್ಲಿ ಅವರ ಮೇಲೆ ದಾಖಲಾಗಿದ್ದ ಅ*ಚಾರ ಪ್ರಕರಣವೂ ಬೆಳಕಿಗೆ ಬಂದಿದೆ. ಬಿಜೆಪಿ ಅಮಾನತಿಗೆ ಆಗ್ರಹಿಸಿದರೆ, ಸಚಿವ ಪ್ರಿಯಾಂಕ್ ಖರ್ಗೆ ತನಿಖಾ ವರದಿ ಬಳಿಕ ಕ್ರಮ ಎಂದು ಹೇಳಿದ್ದಾರೆ.
12:58 PM (IST) Sep 14
ಟಿ. ನರಸೀಪುರದಲ್ಲಿ ಗಣೇಶೋತ್ಸವದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿ ಸಾರ್ವಜನಿಕ ಆಕ್ರೋಶಕ್ಕೆ ಗುರಿಯಾಗಿರುವ ಸಿಪಿಐ ಧನಂಜಯ ಅವರ ಕರಾಳ ಭೂತಕಾಲ ಇದೀಗ ಬಯಲಾಗಿದೆ. ಈ ವಿವಾದದ ಬೆನ್ನಲ್ಲೇ, 12 ವರ್ಷಗಳ ಹಿಂದಿನ ಅತ್ಯಾ*Chaರ, ವಂಚನೆ ಪ್ರಕರಣ ಮತ್ತು ದಲಿತ ಯುವಕರ ಮೇಲೆ ನಡೆಸಿದ ಅಮಾನವೀಯ ಲಾಕಪ್ ಹಿಂಸೆಯಂತಹ ಆಘಾತಕಾರಿ ಕೃತ್ಯಗಳು ಮತ್ತೆ ಮುನ್ನೆಲೆಗೆ ಬಂದಿವೆ.
12:37 PM (IST) Sep 14
ಬಾಲಿವುಡ್ ನಿರ್ಮಾಪಕ 'ಕೆಜಿಎಫ್' ಸಿನಿಮಾದಲ್ಲಿನ ಯಶ್ ಲುಕ್ ಬಗ್ಗೆ ಟೀಕಿಸಿದ್ದಾರೆ. ಉದ್ದ ಕೂದಲು ಮತ್ತು ಗಡ್ಡ ಬಿಟ್ಟ ನಾಯಕರು ರಾಕ್ಷಸರಂತೆ ಕಾಣುತ್ತಾರೆ ಎಂದಿರುವ ಅವರು, ಇಂದಿನ ಮಾಸ್ ಸಿನಿಮಾಗಳಲ್ಲಿನ ಹಿಂಸೆಯ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ.
11:42 AM (IST) Sep 14
11:41 AM (IST) Sep 14
ಬೆಂಗಳೂರು ಕೇಂದ್ರ ನಗರ ನಿಗಮದ 119 ಆಸ್ತಿಗಳ ಗುತ್ತಿಗೆ ಅವಧಿ ಮುಗಿದರೂ, ಅಧಿಕಾರಿಗಳು ಅವುಗಳನ್ನು ಮರಳಿ ಪಡೆದಿಲ್ಲ. ಇದರಿಂದಾಗಿ ನಿಗಮವು ಹಳೆಯ ದರದಲ್ಲಿಯೇ ಗುತ್ತಿಗೆ ಮುಂದುವರಿಸಿ ಆದಾಯ ಕಳೆದುಕೊಳ್ಳುತ್ತಿದೆ.
10:43 AM (IST) Sep 14
ಬಿಗ್‌ಬಾಸ್ ಮನೆಯಲ್ಲಿ ಕಾಮನ್ ಮ್ಯಾನ್ ಮತ್ತು ಸೆಲೆಬ್ರಿಟಿಗಳ ನಡುವಿನ ಸಂಘರ್ಷ ಮತ್ತೆ ಮುನ್ನೆಲೆಗೆ ಬಂದಿದೆ. ಕಿರಣ್ ಶಾಸ್ತ್ರಿ ಆಡಿದ 'ಡೋಲು-ಮೋಲು' ಎಂಬ ಮಾತಿನಿಂದ ಶುರುವಾದ ಜಗಳ, ಗಗನ್ ಮತ್ತು ಧನುಷ್ ನಡುವೆ ವೃತ್ತಿ ನಿಂದನೆಯ ಹಂತಕ್ಕೆ ತಲುಪಿದೆ.
10:37 AM (IST) Sep 14
ಗಣೇಶ ಚತುರ್ಥಿ ಹಬ್ಬದ ಸಂಭ್ರಮದ ನಡುವೆ, ಬೆಂಗಳೂರಿನ 'ಗೃಹಜ್ಯೋತಿ' ಯೋಜನೆ ಫಲಾನುಭವಿಗಳಿಗೆ ಬೆಸ್ಕಾಂ ದುಬಾರಿ ವಿದ್ಯುತ್ ಬಿಲ್ ನೀಡಿ ಆಘಾತ ನೀಡಿದೆ. ತಾಂತ್ರಿಕ ದೋಷದ ಕಾರಣ ಹೇಳಲಾಗುತ್ತಿದ್ದರೂ, ಸತತ ಎರಡನೇ ತಿಂಗಳೂ ಸಾವಿರಾರು ರೂಪಾಯಿಗಳ ಬಿಲ್ ಬಂದಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
09:55 AM (IST) Sep 14
07:47 AM (IST) Sep 14
ಸೆಸ್ಕ್ ಎಂಡಿ ಹುದ್ದೆಯಿಂದ ವರ್ಗಾವಣೆಗೊಂಡಿದ್ದ ಐಎಎಸ್ ಅಧಿಕಾರಿ ಎಂ.ಎಸ್. ಅರ್ಚನಾ, ಕಾನೂನು ಸಂಘರ್ಷದ ಮೂಲಕ ಒಂದೇ ದಿನದಲ್ಲಿ ಮರಳಿ ಅಧಿಕಾರ ಸ್ವೀಕರಿಸಿದ್ದಾರೆ. ಎನ್. ಚಂದ್ರಶೇಖರ್ ಅವರು ಮೈಸೂರಿಗೆ ಬಂದು ಅಧಿಕಾರ ಸಹ ಸ್ವೀಕರಿಸಿದ್ದರು.
07:30 AM (IST) Sep 14
ಸಾರಿಗೆ ಸಚಿವ ಭೈರತಿ ಸುರೇಶ್ ಅವರು ಮಂಡ್ಯ ಜಿಲ್ಲೆಗೆ 100 ಹೊಸ ಬಸ್‌ಗಳನ್ನು ಶೀಘ್ರದಲ್ಲೇ ಮಂಜೂರು ಮಾಡುವುದಾಗಿ ಭರವಸೆ ನೀಡಿದ್ದಾರೆ. ರಾಜ್ಯಾದ್ಯಂತ 1 ಸಾವಿರ ಹೊಸ ಬಸ್‌ಗಳ ಖರೀದಿ ಹಾಗೂ ಬಸ್ ನಿಲ್ದಾಣಗಳ ಉನ್ನತೀಕರಣಕ್ಕೂ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
07:21 AM (IST) Sep 14
ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ (ಎನ್‌ಎಲ್‌ಎಸ್‌ಐಯು) ಉಮರ್ ಖಾಲಿದ್ ಕುರಿತ ‘ಪ್ರಿಸನರ್ ನಂ. 626710’ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಎಬಿವಿಪಿ ವಿರೋಧದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಲಾಗಿದೆ.