ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ದರ ಇಳಿಕೆಯ ಪರ್ವ ಮುಂದುವರೆದಿದೆ. ಶುಕ್ರವಾರ ಒಂದೇ ದಿನ ಬೆಳ್ಳಿ ಕೇಜಿಗೆ 15,000 ರು. ಕುಸಿತ ಕಂಡು ಗ್ರಾಹಕರಿಗೆ ಸಂತಸ ಮೂಡಿಸಿದೆ. ಗುರುವಾರ 2.95 ಲಕ್ಷ ರು.ಗಳಷ್ಟಿದ್ದ ಕೆಜಿ ಬೆಳ್ಳಿ ದರ ಶುಕ್ರವಾರ 2,80,000ಕ್ಕೆ ಇಳಿದಿದೆ. ಇನ್ನು ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡುಬಂದಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನ 240 ರು . ಕುಸಿದು 14,280 ರು., 24 ಕ್ಯಾರೆಟ್‌ನ ಚಿನ್ನ ಗ್ರಾಂಗೆ 262 ರು. ಇಳಿದು 15578 ರು.ಗೆ ತಲುಪಿದೆ.

10:34 PM (IST) Feb 14
09:34 PM (IST) Feb 14
ಕಿರುತೆರೆಯಲ್ಲಿ ಬಹುಬೇಡಿಕೆಯ ಆ್ಯಂಕರ್ ಆಗಿರುವ ಅನುಶ್ರೀ, ತಮ್ಮ ನಿರರ್ಗಳ ಮಾತಿನಿಂದಲೇ ಜನಪ್ರಿಯರಾಗಿದ್ದಾರೆ. ಇತ್ತೀಚೆಗೆ 'ಡಾನ್ಸ್ ಕರ್ನಾಟಕ ಡಾನ್ಸ್' ವೇದಿಕೆಯಲ್ಲಿ ಕೋರಿಯೋಗ್ರಫರ್ ಒಬ್ಬರು ಅವರನ್ನು 'ಬಂಗಡೆ ಮೀನು' ಎಂದು ಹಾಸ್ಯ ಮಾಡಿದ್ದು, ಈ ವಿಡಿಯೋ ವೈರಲ್ ಆಗಿದೆ.
09:23 PM (IST) Feb 14
Relief for Kavya Gowda: High Court Stays FIR & Probe in Family Dispute ಕೌಟುಂಬಿಕ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನಟಿ ಕಾವ್ಯ ಗೌಡ ಮತ್ತು ಅವರ ಪತಿ ಸೋಮಶೇಖರ್ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
08:34 PM (IST) Feb 14
ಇವತ್ತಿನ ದಿನಗಳಲ್ಲಿ ಸಿಮ್ ಕಾರ್ಡ್ ಕೇವಲ ಕಾಲ್-ಮೆಸೇಜ್‌ಗೆ ಮಾತ್ರ ಸೀಮಿತವಾಗಿಲ್ಲ. ಯುಪಿಐ, ಬ್ಯಾಂಕ್ ಒಟಿಪಿ, ಇಮೇಲ್, ಸೋಶಿಯಲ್ ಮೀಡಿಯಾ ಮತ್ತು ಮ್ಯಾಪ್ಸ್‌ಗೂ ಇದೇ ದಾರಿ. ಹಾಗಾಗಿಯೇ, ಸಿಮ್ ಕಾರ್ಡ್‌ಗೆ ಸಂಬಂಧಿಸಿದ ವಂಚನೆಗಳು ಹೆಚ್ಚುತ್ತಿವೆ. 'ಸಿಮ್ ಸ್ವಾಪ್ ಫ್ರಾಡ್' ನಿಂದ ಬಚಾವಾಗುವುದು ಹೇಗೆ ನೋಡಿ..
07:15 PM (IST) Feb 14
ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬೆಂಗಳೂರು ಟರ್ಫ್ ಕ್ಲಬ್ ಅನ್ನು ಕುಣಿಗಲ್ ಸ್ಟಡ್ ಫಾರಂಗೆ ಸ್ಥಳಾಂತರಿಸಲು ರಾಜ್ಯ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಯೋಜನೆಯಂತೆ, 110.20 ಎಕರೆ ಜಮೀನನ್ನು 29 ವರ್ಷಗಳ ಗುತ್ತಿಗೆಗೆ ನೀಡಲಾಗಿದೆ.
06:32 PM (IST) Feb 14
ಶಿವರಾತ್ರಿಯಂದು ಮೈಸೂರಿನ ತ್ರಿಣೇಶ್ವರ ದೇವಸ್ಥಾನದಲ್ಲಿ ಶಿವಲಿಂಗಕ್ಕೆ 11 ಕೆಜಿ ತೂಕದ ಅಪರಂಜಿ ಚಿನ್ನದ ಮುಖವಾಡವನ್ನು ಧಾರಣೆ ಮಾಡಲಾಗುತ್ತದೆ. ಜಯಚಾಮರಾಜೇಂದ್ರ ಒಡೆಯರ್ ಅವರು 1954ರಲ್ಲಿ ನೀಡಿದ ಈ ಮುಖವಾಡದ ದರ್ಶನವು ವರ್ಷಕ್ಕೊಮ್ಮೆ ಮಾತ್ರ ಲಭ್ಯವಿದೆ.
06:32 PM (IST) Feb 14
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ತಂದೆ-ತಾಯಿಯನ್ನು ಹತ್ಯೆ ಮಾಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ರೋಹನ್ ಚಂದ್ರ ಭಟ್, ಇದೀಗ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದಾನೆ. ಸಹೋದರಿಯ ಮನವಿಯ ಮೇರೆಗೆ ನ್ಯಾಯಾಲಯದ ಅನುಮತಿ ಪಡೆದು, ಚಿತಾಗಾರಕ್ಕೆ ಬಂದು ವಿಧಿವಿಧಾನ ಪೂರ್ಣಗೊಳಿಸಿದ್ದಾನೆ.
05:50 PM (IST) Feb 14
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ-ದಾಬಸ್‌ಪೇಟೆ ಹೆದ್ದಾರಿಯಲ್ಲಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಒಂದೇ ಸ್ಥಳದಲ್ಲಿ ಪದೇ ಪದೇ ಅಪಘಾತಗಳಾಗುತ್ತಿರುವುದರಿಂದ ಪೊಲೀಸರು ಮತ್ತು ಹೈವೇ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಸರ್ವೇ ನಡೆಸಿದ್ದಾರೆ.
05:42 PM (IST) Feb 14
ಗತವೈಭವ ಸಿನಿಮಾದ ನಟ ದುಷ್ಯಂತ್ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಅವರು ರಿಲೇಶನ್‌ಶಿಪ್‌ನಲ್ಲಿದ್ದಾರೆ ಎನ್ನುವ ಸುಳಿವು ಕೊಟ್ಟಿದ್ದರು. ಈಗ ಎಂಗೇಜ್ ಆಗಿರೋ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
05:27 PM (IST) Feb 14
'ಕರ್ಣ' ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್, ಪ್ರೀತಿಯ ಬಗ್ಗೆ ತಮ್ಮದೇ ವ್ಯಾಖ್ಯಾನ ನೀಡಿದ್ದಾರೆ. ಬದುಕೇ ಬೇಡವೆನಿಸಿದಾಗ ಉತ್ಸಾಹ ಮೂಡಿಸುವುದೇ ಪ್ರೀತಿ ಎಂದಿರುವ ಅವರ ಮಾತುಗಳು ವೈರಲ್ ಆಗಿವೆ.
05:18 PM (IST) Feb 14
Actress Jyothi Rai Photos: ಕಿನ್ನರಿ ಸೇರಿದಂತೆ ಕನ್ನಡದ ಅನೇಕ ಧಾರಾವಾಹಿಗಳಲ್ಲಿ ಲೀಡ್ ಪಾತ್ರಗಳಲ್ಲಿ ನಟಿಸಿರುವ ಜ್ಯೋತಿ ರೈ ಸಣ್ಣಗಾಗಿ, ಈಗ ಸಿನಿಮಾದತ್ತ ಮುಖ ಮಾಡಿದ್ದಾರೆ. ಇಷ್ಟು ಚೆಂದ ಕಾಣಲು ಕಾರಣ ಏನು?
04:48 PM (IST) Feb 14
ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ನಾಪತ್ತೆಯಾಗಿದ್ದಾರೆ. ಫೆಬ್ರವರಿ 12ರಂದು ಟಿಲ್ಡೆನ್ ರೀಜನಲ್ ಪಾರ್ಕ್ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅವರ ಪತ್ತೆಗಾಗಿ ಸ್ಥಳೀಯ ಪೊಲೀಸ್ ಶೋಧ ಕಾರ್ಯ ನಡೆಸುತ್ತಿವೆ.
04:45 PM (IST) Feb 14
ಕನ್ನಡದ ಅನೇಕ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಡಿಂಪಲ್ ಕ್ವೀನ್ ಸಿನಿಮಾ ಖ್ಯಾತಿಯ ನಟಿ ರಚಿತಾ ರಾಮ್ ಅವರು ಈ ವರ್ಷ ಮದುವೆ ಆಗ್ತೀನಿ ಎಂದು ಅನೇಕ ಬಾರಿ ಹೇಳಿದ್ದರು. ಈಗ ಐ ಲವ್ ಯು ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
04:45 PM (IST) Feb 14
Man Arrested for Leaving Snake in Vande Bharat Express Toilet ಸಿಸಿಟಿವಿ ದೃಶ್ಯ ಮತ್ತು ಸುಳಿವು ಆಧರಿಸಿದ ತನಿಖೆಯ ನಂತರ, ಫೆಬ್ರವರಿ 12 ರಂದು (ಗುರುವಾರ) ಮುಂಬ್ರಾದಲ್ಲಿ ನಾಸಿಕ್ ಜಿಲ್ಲೆಯ ಜಗನ್ ಅರ್ಜುನ್ ಭಲೆ ಎಂಬ ಆರೋಪಿಯನ್ನು ಬಂಧಿಸಲಾಯಿತು.
04:18 PM (IST) Feb 14
Bask Bakery Koramangala Row: Customer Called 'Poor' Over Table Fee Query ಬೇಕರಿಯ ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಗ್ರಾಹಕರೊಬ್ಬರು ಕಾಮೆಂಟ್ ಮಾಡಿ ಅಲ್ಲಿನ ಅನುಭವವನ್ನು ಟೀಕಿಸಿದ್ದರು. ಅಲ್ಲಿನ 2 ಸಾವಿರ ರೂಪಾಯಿ ಟೇಬಲ್ ಶುಲ್ಕವನ್ನು ಅವರು ಪ್ರಶ್ನೆ ಮಾಡಿದ್ದಾರೆ.
04:05 PM (IST) Feb 14
ಶಿವರಾತ್ರಿ ಹಿನ್ನೆಲೆಯಲ್ಲಿ ಶ್ರೀಶೈಲಂಗೆ ತೆರಳುತ್ತಿದ್ದ ಯಾದಗಿರಿ ಜಿಲ್ಲೆಯ ಗೋಗಿ ಗ್ರಾಮದ ಮೂವರು ಭಕ್ತರು ಆಂಧ್ರಪ್ರದೇಶದ ಕಲಕುರ್ತಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕ್ರೂಸರ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ.
03:39 PM (IST) Feb 14
ಧಾರವಾಡದಲ್ಲಿ 20 ವರ್ಷದ ಯುವಕನೊಬ್ಬ ನೇಣಿಗೆ ಶರಣಾಗಿದ್ದು, ಈ ಸಾವಿನ ಹಿಂದೆ ಕೊರಿಯನ್ ಗೇಮ್‌ಗಳ ಅತಿಯಾದ ವ್ಯಸನವಿರುವ ಶಂಕೆ ವ್ಯಕ್ತವಾಗಿದೆ. ಸಾವಿಗೂ ಮುನ್ನ 'ನನ್ನ ಸಾವಿಗೆ ನಾನೇ ಕಾರಣ' ಎಂದು ಸೆಲ್ಫ್ ಮೆಸೇಜ್ ಕಳುಹಿಸಿದ್ದ.
03:02 PM (IST) Feb 14
ಟಿ20 ವಿಶ್ವಕಪ್‌ನಲ್ಲಿ ಜಿಂಬಾಬ್ವೆ-ಆಸ್ಟ್ರೇಲಿಯಾ ಪಂದ್ಯದ ಬಗ್ಗೆ ನಿಖರವಾಗಿ ಭವಿಷ್ಯ ನುಡಿದಿದ್ದ ವ್ಯಕ್ತಿಯೊಬ್ಬ, ಇದೀಗ ಭಾರತ-ಪಾಕಿಸ್ತಾನ ಪಂದ್ಯದಲ್ಲಿ ಭಾರತ ಸೋಲಲಿದೆ ಎಂದು ಹೇಳಿದ್ದಾನೆ. ಈತನ ಭವಿಷ್ಯವಾಣಿ ಆತಂಕ ಮೂಡಿಸಿದೆ.
02:55 PM (IST) Feb 14
ಅರ್ಜುನ್ ಸರ್ಜಾ-ಆಶಾರಾಣಿ ಜೋಡಿ 1988 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ನಂತರ ಆಶಾ ರಾಣಿ ಗಂಡ, ಮನೆ ಮತ್ತು ಮಕ್ಕಳು ಅಂತ ತೊಡಗಿಸಿಕೊಂಡರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಅನ್ನುವ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಐಶ್ವರ್ಯ ಚಿತ್ರರಂಗದಲ್ಲಿ, ಅಂಜನಾ ಓದಿನಲ್ಲಿ ಬ್ಯುಸಿಯಾಗಿದ್ದಾರೆ.
02:27 PM (IST) Feb 14
ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಗುರುದೇವ ಶ್ರೀ ಶ್ರೀ ರವಿ ಶಂಕರರೊಂದಿಗೆ ಮಹಾಶಿವರಾತ್ರಿ ಮಹೋತ್ಸವ ನಡೆಯಲಿದ್ದು ರುದ್ರ ಪೂಜೆ, ಉತ್ಸವ ಮತ್ತು ಮಧ್ಯರಾತ್ರಿಯ ಧ್ಯಾನದಲ್ಲಿ ಭಾಗವಹಿಸಲು ಎಲ್ಲರಿಗೂ ಮುಕ್ತ ಸ್ವಾಗತವಿದೆ. ಕಾರ್ಯಕ್ರಮದ ವಿವರ ಇಲ್ಲಿದೆ
01:43 PM (IST) Feb 14
ವಿಜಯಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಆದೇಶದಿಂದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್‌ಗೆ ಹಿನ್ನಡೆಯಾಗಿದೆ.
01:36 PM (IST) Feb 14
01:22 PM (IST) Feb 14
ಎಲ್ಲರ ಬದುಕಿನಲ್ಲಿ ಇರುವ ಹಾಗೆ ಶಾಲೆಯಲ್ಲಿ ಹುಡುಗಿಯ ಮೇಲೆ ಕ್ರಶ್ ಆಗುವುದು, ಗೆಳೆಯರೊಂದಿಗೆ ಆ ಬಗ್ಗೆ ಕಾಲೆಳೆಸಿಕೊಳ್ಳುವುದು ಇತ್ಯಾದಿ ಘಟ್ಟ ದಾಟಿದ ಮೇಲೆ ನಾನು ಲವ್ ಲೆಟರ್ ಬರೆಯಲು ಶುರು ಮಾಡಿದ್ದು. ಆದರೆ ಅದು ನನಗಲ್ಲ, ಸ್ನೇಹಿತರಿಗೆ.
01:05 PM (IST) Feb 14
ಚಿಕ್ಕಮಗಳೂರಿನ ಮದುವೆಗೆ ಬಂದಿದ್ದ ಪ್ರಿಯಾಂಕ ಎಂಬ ಮಹಿಳೆ ಬೇಲೂರಿನಲ್ಲಿ ನಿಗೂಢವಾಗಿ ಕಣ್ಮರೆಯಾಗಿದ್ದಾರೆ. ಸುಮಾರು 30 ಲಕ್ಷ ಮೌಲ್ಯದ ಚಿನ್ನಾಭರಣ ಧರಿಸಿದ್ದ ಆಕೆಯನ್ನು ಅಪಹರಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆಕೆಯ ಒಳ ಉಡುಪು ಹಾಗೂ ಬ್ಯಾಗ್ ಪತ್ತೆಯಾಗಿದೆ. ಪೊಲೀಸರ ವಿಳಂಬ ಧೋರಣೆಗೆ ಮಹಿಳೆ ಬಲಿ?
12:54 PM (IST) Feb 14
ಚಿಕ್ಕಮಗಳೂರು ಮತ್ತು ಮಲೆನಾಡು ಭಾಗದಲ್ಲಿ ನಿರಂತರವಾಗಿ ಹಾರಾಡುತ್ತಿದ್ದ ಲಘು ವಿಮಾನ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಡಳಿತ, ಇದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣಾ ಇಲಾಖೆಯು ನಡೆಸುತ್ತಿರುವ ಖನಿಜ ನಿಕ್ಷೇಪ ಪತ್ತೆಯ ವೈಜ್ಞಾನಿಕ ಸಮೀಕ್ಷೆಯಾಗಿದೆ.
12:53 PM (IST) Feb 14
ಇಡೀ ನಾಡು ಪ್ರೇಮಿಗಳ ದಿನ ಖುಷಿಯಲ್ಲಿದೆ. ಅನೇಕರು ವಿಭಿನ್ನವಾಗಿ ಈ ದಿನವನ್ನು ಆಚರಿಸಿದ್ದರೆ, ಇನ್ನೂ ಕೆಲವರು ಪ್ರೀತಿಗೆ ಒಂದು ದಿನ ಎಂದಿಲ್ಲ. ದಿನವೂ ವ್ಯಾಲಂಟೈನ್ಸ್ ಡೇ ಎಂದು ಹೇಳೋದುಂಟು. ಅಂದಹಾಗೆ ಕನ್ನಡದ ಈ ಸೆಲೆಬ್ರಿಟಿಗಳು ಲವ್‌ನಲ್ಲಿದ್ದಾರೆ ಎನ್ನಲಾಗ್ತಿದೆ. ಅಧಿಕೃತವಾಗಿ ಹೇಳೋದು ಯಾವಾಗ?
12:09 PM (IST) Feb 14
Promotion Bhagya for a Swamiji ರಾಜ್ಯ ಸರ್ಕಾರವು ಇತ್ತೀಚೆಗೆ 20 ಕೆಎಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ಆದೇಶ ಹೊರಡಿಸಿದ್ದು, ಈ ಪಟ್ಟಿಯಲ್ಲಿ ಸ್ವಯಂ ನಿವೃತ್ತಿ ಪಡೆದು ಪೀಠಾಧಿಪತಿಯಾಗಿರುವ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರ ಹೆಸರೂ ಸೇರಿದೆ.
12:07 PM (IST) Feb 14
ಬಹುಭಾಷಾ ನಟಿ ಮಮತಾ ಮೋಹನ್‌ದಾಸ್ ತಮ್ಮ ನೋವಿನ ಡೇಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ನಿಂದ ಗುಣಮುಖರಾದ ನಂತರ, ಅವರು ಚಿತ್ರರಂಗದ ನಟನೊಬ್ಬನೊಂದಿಗೆ ಡೇಟಿಂಗ್ ಮಾಡಿದ್ದರು, ಆದರೆ ಆತ ತನ್ನ ನಿಶ್ಚಿತಾರ್ಥವನ್ನು ಮುಚ್ಚಿಟ್ಟು ನಂಬಿಕೆ ದ್ರೋಹ ಮಾಡಿದ್ದನು ಎಂದು ಬಹಿರಂಗಪಡಿಸಿದ್ದಾರೆ.
11:51 AM (IST) Feb 14
Pani Puri Seller Home: ಬೀದಿಯಲ್ಲಿ ವ್ಯಾಪಾರ ಮಾಡೋರು, ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗಿಂತ ಹೆಚ್ಚು ಸಂಪಾದನೆ ಮಾಡುವ ಉದಾಹರಣೆ ಸಾಕಷ್ಟಿದೆ. ಹೀಗಿರುವಾಗ ಬೆಂಗಳೂರಿನಲ್ಲಿ ಪಾನಿಪುರಿ ಮಾರುವ ಈ ವ್ಯಕ್ತಿ ಶ್ರವಣಬೆಳಗೊಳದಲ್ಲಿ ಮನೆ ಕಟ್ಟಿದ್ದಾರೆ. ಸುಂದರ ವಿಡಿಯೋ ನೋಡಿ.
11:43 AM (IST) Feb 14
ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿ, ಖಾಲಿ ಹುದ್ದೆ ಭರ್ತಿ, ಸಮರ್ಪಕ ಔಷಧ ಪೂರೈಕೆ ಸೇರಿ ವಿವಿಧ ಬೇಡಿಕೆ ಈಡೇರಿಸದಿದ್ದರೆ ಮಾ.11 ರಿಂದ ಮಾ.15ರವರೆಗೆ ಹೊರ ರೋಗಿಗಳ ಸೇವೆ ನಿಲ್ಲಿಸಿ ಕೇವಲ ತುರ್ತು ಸೇವೆ ಮಾತ್ರ ಒದಗಿಸುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಎಚ್ಚರಿಕೆ ನೀಡಿದೆ.
11:28 AM (IST) Feb 14
ದಾವಣಗೆರೆಯ ಮೆಹಬೂಬ್ ನಗರದಲ್ಲಿ ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ನೀಡುವಂತೆ ಕೇಳಿದ್ದಕ್ಕೆ ಪೌರಕಾರ್ಮಿಕ ಕರಿಬಸಪ್ಪ ಅವರ ಮೇಲೆ ಇಬ್ಬರು ಪುಂಡರು ಹಲ್ಲೆ ನಡೆಸಿದ್ದಾರೆ. ಈ ಘಟನೆಯನ್ನು ಖಂಡಿಸಿ ಸಹೋದ್ಯೋಗಿಗಳು ಪ್ರತಿಭಟನೆ ನಡೆಸಿದ ನಂತರ, ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನ.
10:58 AM (IST) Feb 14
10:44 AM (IST) Feb 14
ಮನೆಗೆ ಅತಿಥಿಗಳು ಬಂದರೆ ಊಟ ಹಾಕಿ ಕಳುಹಿಸುವುದು ನಮ್ಮ ಸಂಪ್ರದಾಯ. ಆದರೆ, ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ತಮ್ಮ ಮನೆಗೆ ಬಂದವರಿಗೆ ಊಟ ಹಾಕುವುದಿಲ್ಲವಂತೆ. ಯಾಕೆ ಗೊತ್ತಾ?
10:41 AM (IST) Feb 14
10:31 AM (IST) Feb 14
ದರ್ಶನ್ ಜೈಲಿನಿಂದ ಶೀಘ್ರದಲ್ಲೇ ಹೊರಬರಲಿ ಎಂದು ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ವಿಶೇಷ ಹೋಮ, ಹವನ ಹಾಗೂ ಪೂಜೆಗಳನ್ನು ಆಯೋಜಿಸಿದ್ದಾರೆ. ಜುಲೈ ಅಥವಾ ಆಗಸ್ಟ್‌ನಲ್ಲಿ ದರ್ಶನ್‌ಗೆ ಜಾಮೀನು ಸಿಗುವ ಸಾಧ್ಯತೆ ಇದೆ ಎಂದು ವಕೀಲರು ಹೇಳಿದ್ದು, ಅಭಿಮಾನಿಗಳ ಪ್ರಾರ್ಥನೆ ಫಲಿಸುತ್ತದೆಯೇ ಕಾದುನೋಡಬೇಕಿದೆ.
10:08 AM (IST) Feb 14
09:48 AM (IST) Feb 14
ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಫೆ. 28ರಿಂದ ಮಾ. 17ರವರೆಗೆ ಕೆಎಸ್ಸಾರ್ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ. ರಾಜ್ಯದಲ್ಲಿ ಫೆ. 28ರಿಂದ ದ್ವಿತೀಯ ಪಿಯು ಪರೀಕ್ಷೆಗಳು ಆರಂಭವಾಗುತ್ತಿದೆ.
09:26 AM (IST) Feb 14
ಬೆಂಗಳೂರಿನ ಮಲ್ಲಸಂದ್ರದಲ್ಲಿ ಖಾಸಗಿ ಬಿಲ್ಡರ್‌ಗೆ ನಕಲಿ ಪಿಐಡಿ ಸಂಖ್ಯೆ ಸೃಷ್ಟಿಸಿ ಎ ಖಾತಾ ಮಾಡಿಕೊಟ್ಟ ಆರೋಪದ ಮೇಲೆ ಬಿಬಿಎಂಪಿ ಪಶ್ಚಿಮ ವಲಯದ ನಾಲ್ವರು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಎನ್.ಆರ್.ರಮೇಶ್ ನೀಡಿದ ದೂರಿನ ಅನ್ವಯ, 48 ಗಂಟೆಯೊಳಗೆ ಸಮಜಾಯಿಷಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ
09:11 AM (IST) Feb 14
ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಐಆರ್‌ಸಿಟಿಸಿ ಈಗ 25 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಇ-ಪ್ಯಾಂಟ್ರಿ ಸೇವೆಗಳನ್ನು ಆರಂಭಿಸಿದೆ. ಇದರಿಂದ ಪ್ರಯಾಣಿಕರು ಟಿಕೆಟ್ ಬುಕ್ ಮಾಡುವಾಗ ಅಥವಾ ನಂತರ ಆನ್‌ಲೈನ್‌ನಲ್ಲಿ ತಮಗೆ ಬೇಕಾದ ಊಟ ಮತ್ತು ನೀರನ್ನು ಮುಂಚಿತವಾಗಿ ಬುಕ್ ಮಾಡಬಹುದು.
09:10 AM (IST) Feb 14
ಪ್ರೇಮಿಗಳ ದಿನಾಚರಣೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಪ್ರೇಮಿಗಳ ದಿನದ ಪ್ರತೀಕವಾಗಿರುವ ಕೆಂಪು ಗುಲಾಬಿ ಹೂವುಗಳು ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿವೆ. ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದಲ್ಲಿ (ಐಫ್ಯಾಬ್) ಫೆ.1ರಿಂದ ಫೆ.13ರವರೆಗೆ ಒಂದು ಕೋಟಿ ಗುಲಾಬಿ ಹೂವುಗಳ ಮಾರಾಟವಾಗಿದೆ