ಬೆಂಗಳೂರು: ಅಧಿಕಾರ ಹಸ್ತಾಂತರದ ಗೊಂದಲಗಳ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಸದಾಶಿವನಗರದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸೋಮವಾರ ಬೆಳಗ್ಗೆ ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿದರು. ಇಬ್ಬರೂ ನಾಯಕರ ನಡುವೆ ನಡೆದ ಗೌಪ್ಯ ಚರ್ಚೆ ಏನು ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೂ ಅಧಿಕಾರ ಹಸ್ತಾಂತರ ಸೇರಿದಂತೆ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ಮಾಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

12:49 PM (IST) Jan 13
12:46 PM (IST) Jan 13
ಗದಗದ ಲಕ್ಕುಂಡಿಯಲ್ಲಿ ಮನೆ ಪಾಯ ಅಗೆಯುವಾಗ ನಿಧಿ ಸಿಕ್ಕಿದರೂ ಅದನ್ನ 8ನೇ ತರಗತಿ ಬಾಲಕ ಪ್ರಜ್ವಲ್ ರಿತ್ತಿ, ಪ್ರಾಮಾಣಿಕವಾಗಿ ಸರ್ಕಾರಕ್ಕೆ ಒಪ್ಪಿಸಿದ್ದಾನೆ. ಆದರೆ, ಈ ನಿಧಿಯನ್ನು ಕಾಯುವ ಸರ್ಪ ನಮ್ಮ ಕುಟುಂಬಕ್ಕೆ ಕಚ್ಚುತ್ತದೆ ಎಂದು ಭಯಪಟ್ಟಿದ್ದ ಕುಟುಂಬಕ್ಕೆ ಇದೀಗ ಶುಕ್ರದೆಸೆ ಆರಂಭವಾಗಿದೆ.
12:44 PM (IST) Jan 13
ಬಿಗ್‌ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಧನರಾಜ್ ಆಚಾರ್, ಶಬರಿಮಲೆ ಯಾತ್ರೆಯ ವೇಳೆ ಮಾಡಿದ ವಿಡಿಯೋವೊಂದು ವಿವಾದಕ್ಕೆ ಕಾರಣವಾಗಿದೆ. ಮಾಲೆ ಧರಿಸಿದ್ದ ಇನ್ನೊಬ್ಬ ಸ್ವಾಮಿಯ ದೊಡ್ಡ ಘಂಟೆಯ ಬಗ್ಗೆ ತಮಾಷೆಯಾಗಿ ಮಾತನಾಡಿದ್ದು ನೆಟ್ಟಿಗರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
12:37 PM (IST) Jan 13
ಹಳ್ಳಿಗೆ ಹೋಲಿಸಿದರೆ ಸಿಟಿಯಲ್ಲಿ ಸಿಗುವ ಸಂಬಳ ದೊಡ್ಡ ಮೊತ್ತದ್ದು ಅನಿಸಬಹುದು. ಆದರೆ ನಗರದಲ್ಲಿ ಕರಿಬೇವಿನ ಸೊಪ್ಪನ್ನೂ ದುಡ್ಡುಕೊಟ್ಟೇ ಖರೀದಿಸಬೇಕಾಗುತ್ತದೆ.. ಹಳ್ಳಿಗಳಿಂದ 20 ಅಥವಾ 30ರ ಹರೆಯದಲ್ಲಿ ಕೆಲಸಕ್ಕಾಗಿ ಮಹಾನಗರಕ್ಕೆ ಬಂದಿರುವವರಿಗೆ ಕೆಲವು ಪ್ರಮುಖ ಆರ್ಥಿಕ ಪಾಠಗಳು ಇಲ್ಲಿವೆ.
12:37 PM (IST) Jan 13
ಬಿಗ್‌ಬಾಸ್ ಫಿನಾಲೆ ವೀಕ್ ಟಾಸ್ಕ್‌ನಲ್ಲಿ, ಸ್ಪರ್ಧಿ ಅಶ್ವಿನಿ ಗೌಡ ತಮಗಾಗಿ 'ಛಲಗಾರ್ತಿ' ಎಂಬ ಹ್ಯಾಶ್‌ಟ್ಯಾಗ್ ಬರೆಯಲು ಹೋಗಿ ತಪ್ಪು ಮಾಡಿದ್ದಾರೆ. ಕನ್ನಡ ಹೋರಾಟಗಾರ್ತಿ ಎಂದು ಹೇಳಿಕೊಳ್ಳುವ ಅಶ್ವಿನಿ, 'ಛಲಗಾರ್ತಿ' ಮತ್ತು 'ಹಠವಾದಿ' ಪದಗಳನ್ನು ತಪ್ಪಾಗಿ ಬರೆದಿದ್ದಕ್ಕೆ ಟ್ರೋಲ್‌ಗೆ ಒಳಗಾಗಿದ್ದಾರೆ.
12:13 PM (IST) Jan 13
Bigg Boss Kannada : ಕೊನೆಗೂ ರಕ್ಷಿತಾ ಶೆಟ್ಟಿ ಆಸೆ ಈಡೇರಿದೆ. ಸದಾ ಕಾವು ಕಾವು ಎನ್ನುತ್ತಿದ್ದ ಗಿಲ್ಲಿ, ಇದೇ ಮೊದಲ ಬಾರಿ ರಕ್ಷಿತಾ ಹೆಸರನ್ನು ಹೇಳಿದ್ದಾರೆ. ರಕ್ಷಿತಾ ಕೆಲಸವನ್ನು ಶ್ಲಾಘಿಸಿದ್ದಾರೆ.
12:09 PM (IST) Jan 13
ಶಿವಮೊಗ್ಗ: ಪತ್ನಿಯ ಸಾವಿಗೆ ಕಾರಣವಾಗಿ ಕೆಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸಿದ್ದಾರೆ. ಯಾವುದೇ ಮೊಬೈಲ್, ಡಿಜಿಟಲ್ ಉಪಕರಣ ಬಳಸದ ಎಂಜಿನಿಯರ್ ಅನ್ನು ಪೊಲೀಸರು ಪಾಂಡಿಚೆರಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
12:07 PM (IST) Jan 13
ರಾಮಮೂರ್ತಿ ನಗರದ ಟೆಕ್ಕಿ ಶರ್ಮಿಳಾ ಸಾವು ಬೆಂಕಿ ಅವಘಡವೆಂದು ಭಾವಿಸಲಾಗಿತ್ತು, ಆದರೆ ಇದು ವ್ಯವಸ್ಥಿತ ಕೊಲೆ ಎಂದು ತನಿಖೆಯಿಂದ ಬಯಲಾಗಿದೆ. ಆರೋಪಿ ಕರ್ನಲ್ ಕುರೈ, ಶರ್ಮಿಳಾಳನ್ನು ಎರಡು ತಿಂಗಳು ಗಮನಿಸಿ, ಕಿಟಕಿ ಮೂಲಕ ಒಳನುಗ್ಗಿ, ಗ್ಯಾಸ್ ಸೋರಿಕೆಯಂತೆ ಕಾಣುವಂತೆ ಮಾಡಿ ಕೊಲೆ ಮಾಡಿದ್ದನು.
11:56 AM (IST) Jan 13
ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಗೆ ಮರಳಿದ ಮಾತಿನ ಮಲ್ಲಮ್ಮ, ತಾಯಿ ಚಾಮುಂಡೇಶ್ವರಿಗೆ ಕಟ್ಟಿದ್ದ ಹರಕೆಯನ್ನು ತೀರಿಸಿದ್ದಾರೆ. ತಣ್ಣೀರಿನ ಸ್ನಾನ ಮಾಡಿ, ದೇವಿಗೆ ಸೀರೆ ಅರ್ಪಿಸಿದ ಮಲ್ಲಮ್ಮನ ಮೊಮ್ಮಗನಿಗೆ ಬಿಗ್‌ಬಾಸ್ 'ಗಣೇಶ್' ಎಂದು ಹೆಸರಿಟ್ಟು ಅವರ ಆಸೆಯನ್ನು ಪೂರೈಸಿದ್ದಾರೆ.
11:54 AM (IST) Jan 13
ಹಲವು ತಿಂಗಳ ವಿಳಂಬದ ಬಳಿಕ ದೇಶದ ಮೊದಲ ವಂದೇ ಭಾರತ ಸ್ಲೀಪರ್ ರೈಲಿಗೆ ನ.17ರಂದು ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಲಿದ್ದಾರೆ. ಗುವಾಹಟಿ ಮತ್ತು ಕೋಲ್ಕತಾ ನಡುವೆ ಇದು ಸಂಚರಿಸಲಿದ್ದು, ಸಾಮಾನ್ಯ ಪ್ರಯಾಣಿಕರಿಗಷ್ಟೇ ಮೀಸಲಿರಲಿದೆ
11:22 AM (IST) Jan 13
ಕಸ ಸ್ವಚ್ಛಗೊಳಿಸುವಾಗ ರಸ್ತೆ ಬದಿಯಲ್ಲಿ ಬಿದ್ದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೌರಕಾರ್ಮಿಕ ಮಹಿಳೆಯೊಬ್ಬರು ಪೊಲೀಸರಿಗೆ ಒಪ್ಪಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸರು ಬಂಗಾರದ ಗಂಟನ್ನು ಮಾಲೀಕರಿಗೆ ಒಪ್ಪಿಸಿದ್ದಾರೆ.
11:17 AM (IST) Jan 13
10:51 AM (IST) Jan 13
ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಆವರಣದಲ್ಲಿರುವ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರು ಇಡಲು ಮುಂದಾಗಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಗಾಂಧೀಜಿ ಹೆಸರು ತೆಗೆಯಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
10:26 AM (IST) Jan 13
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ಶರ್ಬಾನು ಖತನ್ ಎಂಬ ಮಹಿಳೆ ಪೊಲೀಸ್ ತಪಾಸಣೆ ವೇಳೆ 'ಜೈ ಬಾಂಗ್ಲಾ' ಎಂದು ಘೋಷಣೆ ಕೂಗಿ ಆತಂಕ ಸೃಷ್ಟಿಸಿದ್ದಳು. ಈಕೆ, ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ವಾಸಿಸುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ.
09:46 AM (IST) Jan 13
ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೈಸೂರಿಗೆ ಆಗಮಿಸುತ್ತಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಒಟ್ಟಾಗಿ ಭೇಟಿ ಮಾಡಲಿದ್ದಾರೆ.
09:35 AM (IST) Jan 13
ಬೆಂಗಳೂರಿನಲ್ಲಿ ಬಾಡಿಗೆದಾರ ಗೃಹಿಣಿಗೆ ಲೈಂ*ಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮನೆ ಮಾಲೀಕ ಮಧು ಎಂಬಾತನನ್ನು ಬಂಡೇಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಮೆಸೇಜ್ ಮೂಲಕವೂ ಕಿರುಕುಳ ನೀಡುತ್ತಿದ್ದ ಎಂದು ಗೃಹಿಣಿ ದೂರಿನಲ್ಲಿ ತಿಳಿಸಿದ್ದಾರೆ.
09:02 AM (IST) Jan 13
08:54 AM (IST) Jan 13
ರಾಜ್ಯ ಕಾಂಗ್ರೆಸ್ ಸರ್ಕಾರದ ತೆರಿಗೆ ಹೊರೆ ಮತ್ತು ರಸ್ತೆ ಗುಂಡಿಗಳಿಂದಾಗಿ ಸಂಕ್ರಾಂತಿಯ ಹಿಗ್ಗಿನ ಸುಗ್ಗಿಯ ಕಾಲದಲ್ಲೂ ರಾಜ್ಯದ ಜನತೆ ಕುಗ್ಗಿ ನಡೆಯುವಂತಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ವ್ಯಂಗ್ಯವಾಡಿದ್ದಾರೆ.
08:41 AM (IST) Jan 13
ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಜ.14 ರಿಂದ 26ರವರೆಗೆ ನಡೆಯುವ 219ನೇ ಫಲಪುಷ್ಪ ಪ್ರದರ್ಶನ ಹೊಸತನ ಮತ್ತು ಹಲವು ವೈಶಿಷ್ಟ್ಯಗಳೊಂದಿಗೆ ಕೂಡಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
08:27 AM (IST) Jan 13
07:58 AM (IST) Jan 13
ಗದಗದ ಲಕ್ಕುಂಡಿಯಲ್ಲಿ ಮನೆಯ ಪಾಯ ತೆಗೆಯುವಾಗ ಎಷ್ಟು ತೂಕದ ಬಂಗಾರದ ಆಭರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಆದರೆ, ಪುರಾತತ್ವ ಇಲಾಖೆ ಅಧಿಕಾರಿಯ ಹೇಳಿಕೆ ಮತ್ತು ಸಿಎಂ ಸಿದ್ದರಾಮಯ್ಯ ಅವರ ವೈರಲ್ ವಿಡಿಯೋದಿಂದಾಗಿ ಆಭರಣಗಳ ತೂಕದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.
07:56 AM (IST) Jan 13
ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸೋಮವಾರ ಉಡಾವಣೆಯಾಗಿದ್ದ ಇಸ್ರೋದ ಈ ವರ್ಷದ ಮೊದಲ ಉಪಗ್ರಹವು ಪಿಎಸ್‌ಎಲ್‌ವಿ-ಸಿ62 ರಾಕೆಟ್‌ನಲ್ಲಿ ತಾಂತ್ರಿಕ ದೋಷ ಉಂಟಾದ ಕಾರಣ 3ನೇ ಹಂತದಲ್ಲಿ ವಿಫಲವಾಗಿದೆ.
07:49 AM (IST) Jan 13
ದರ ಪರಿಷ್ಕರಣಾ ಸಮಿತಿಯ ವರದಿ ಅನ್ವಯ ಪ್ರತಿ ವರ್ಷ ಶೇ.5ರಷ್ಟು ಮೆಟ್ರೋ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಮುಂದಾಗುವ ಸಾಧ್ಯತೆಯಿದೆ. ಹೆಚ್ಚುತ್ತಿರುವ ನಿರ್ವಹಣಾ ವೆಚ್ಚ ಮತ್ತು ಸಾಲವನ್ನು ಇದಕ್ಕೆ ಕಾರಣವಾಗಿ ನೀಡಲಾಗುತ್ತಿದೆ.
07:42 AM (IST) Jan 13
ಬಳ್ಳಾರಿ ಗಲಭೆ ಸೇರಿದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿಯು ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
07:38 AM (IST) Jan 13
07:33 AM (IST) Jan 13
ಕೇಂದ್ರ ಸರ್ಕಾರ ಮನರೇಗಾ ಯೋಜನೆ ಬದಲಿಸಿ ವಿಬಿ ಜಿ ರಾಮ್ ಜಿ ಕಾಯ್ದೆ ಜಾರಿಗೊಳಿಸಿರುವ ಸಂಬಂಧ ಚರ್ಚಿಸಲು ಹಾಗೂ ಜಂಟಿ ಅಧಿವೇಶನ ನಡೆಸಲು ದಿನಾಂಕ ನಿಗದಿಗೊಳಿಸಲು ಜ.14ರ ಬುಧವಾರ ವಿಶೇಷ ಸಚಿವ ಸಂಪುಟ ಕರೆಯಲಾಗಿದೆ.
07:26 AM (IST) Jan 13
ಮಹಾರಾಷ್ಟ್ರದ ಪೌರಾಡಳಿತ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರಕ್ಕಿಳಿದಿದ್ದ ತಮಿಳ್ನಾಡಿನ ಬಿಜೆಪಿ ಮುಖಂಡ ಕೆ.ಅಣ್ಣಾಮಲೈ ಹಾಗೂ ಎಂಎನ್‌ಎಸ್ ನೇತಾರ ರಾಜ್ ಠಾಕ್ರೆ ಮಧ್ಯೆ ವಾಕ್ಸಮರ ಏರ್ಪಟ್ಟಿದೆ.
07:17 AM (IST) Jan 13
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಚುನಾವಣೆಯನ್ನು ಜೂನ್ ಅಂತ್ಯದೊಳಗೆ ಮುಗಿಸುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.