ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿ ಬೆಲೆ ಏರಿಕೆ ನಡುವೆಯೇ ರಾಜ್ಯದಲ್ಲಿ ಇದೀಗ ವಿವಿಧ ತಳಿಯ ಅಕ್ಕಿ ಬೆಲೆಯೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಅಕ್ಕಿಗೆ 6 ರಿಂದ 10 ರು.ನಷ್ಟು ಹಾಗೂ 25-26 ಕೆ.ಜಿ. ಚೀಲಕ್ಕೆ 150 ರು.ನಷ್ಟು ದರ ಏರಿಕೆಯಾಗುವ ಮೂಲಕ ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ.
ಮಾರುಕಟ್ಟೆಯಲ್ಲಿ ಅಕ್ಕಿ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ. ಕೇಂದ್ರ ಸರ್ಕಾರ ವಿವಿಧ ದೇಶಗಳಿಗೆ ಅಕ್ಕಿ ರಫ್ತು ಮಾಡಲು ಅವಕಾಶ ನೀಡಿರುವುದರಿಂದ ಸ್ಥಳೀಯ ಮಾರುಕಟ್ಟೆಯಲ್ಲಿ ಅಕ್ಕಿ ಲಭ್ಯತೆ ಕಡಿಮೆಯಾಗಿದೆ. ಇದೇ ಕಾರಣದಿಂದ ಬೆಲೆ ಏರಿಕೆಯಾಗುತ್ತಿದೆ. ಮುಂದಿನ ನವೆಂಬರ್ ವರೆಗೂ ಅಕ್ಕಿ ಕೊರತೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಸ್ಥಳೀಯ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
ಸೋನಾ ಮಸೂರಿ, ಸ್ಟೀಮ್ ಅಕ್ಕಿ, ಕೋಲಂ ಮತ್ತು ರಾ ರೈಸ್ ಸೇರಿ ಎಲ್ಲ ಮಾದರಿಯ ಅಕ್ಕಿ ಬೆಲೆ ಕೆಜಿಗೆ 6ರಿಂದ 10 ರು.ಹೆಚ್ಚಳವಾಗಿದೆ. ಹತ್ತು ದಿನಗಳ ಹಿಂದೆಯೇ ಅಕ್ಕಿ ದರ ಏರಿಕೆಯಾಗಿದೆ. ಪ್ರತಿ 26 ಕೆಜಿ ಅಕ್ಕಿ ಮೂಟೆ ಬೆಲೆ ಕನಿಷ್ಠ 150 ರು.ಹೆಚ್ಚಳವಾಗಿದೆ. ಸೋನಾ ಸ್ಟೀಮ್ ರೈಸ್ 43 ರು.ನಿಂದ 49 ರು.ಗೆ ಹಾಗೂ ಸೋನಾ ರಾ ರೈಸ್ 52 ರೂ.ನಿಂದ 59 ರು.ಗೆ ಏರಿಕೆಯಾಗಿದೆ. ಅಕ್ಟೋಬರ್, ನವೆಂಬರ್‌ನಲ್ಲಿ ಹೊಸ ಅಕ್ಕಿ ಮಾರುಕಟ್ಟೆಗೆ ಬರುವವರೆಗೂ ಕಾಯಬೇಕಾಗಿರುವುದು ಅನಿವಾರ್ಯ ಎನ್ನುತ್ತಾರೆ ವ್ಯಾಪಾರಸ್ಥರು.
10:48 PM (IST) Jun 12
Kodagu ಜಿಲ್ಲೆಯ ಮೂರ್ನಾಡಿನಲ್ಲಿ 5 ವರ್ಷದ ಮಗುವನ್ನು ತಂದೆಯೇ ಅಪಹರಿಸಿರುವ ಆರೋಪ ಕೇಳಿಬಂದಿದೆ. ಗಂಡನ ವಿರುದ್ಧ ದೂರು ನೀಡಿರುವ ತಾಯಿ, ಮಗುವನ್ನು ಹುಡುಕಿಕೊಡುವಂತೆ ಪೊಲೀಸ್ ಇಲಾಖೆ ಹಾಗೂ ಎಸ್ಪಿ ಅವರನ್ನು ಮನವಿ ಮಾಡಿದ್ದಾರೆ.
09:18 PM (IST) Jun 12
09:17 PM (IST) Jun 12
ಸಿಎಂ ವಿಜಯ್ ಮೂಕಾಂಬಿಕೆ ದರ್ಶನ ಇದೀಗ ತಮಿಳುನಾಡು ಹಾಗೂ ಕೊಲ್ಲೂರು ನಡುವಿನ ಸಂಬಂಧ, ದೇವಿ ಶಕ್ತಿ ಕುರಿತು ಹಲವು ಇಂಟ್ರೆಸ್ಟಿಂಗ್ ಮಾಹಿತಿ ಬಯಲಾಗಿದೆ. ದೇವಸ್ಥಾನದ ಅರ್ಚಕ ಪೂರೋಹಿತರು ಮಾಹಿತಿ ನೀಡಿದ್ದಾರೆ.
08:29 PM (IST) Jun 12
ಕನ್ನಡ ಬಿಗ್‌ಬಾಸ್ ಶೀಘ್ರದಲ್ಲೇ ಆರಂಭವಾಗಲಿದ್ದು, ಸ್ಪರ್ಧಿಗಳ ಬಗ್ಗೆ ಗಾಸಿಪ್ ಹರಿದಾಡುತ್ತಿದೆ. ಇದರ ನಡುವೆ, ಬಿಗ್‌ಬಾಸ್ ಕುರಿತು ಇನ್ನೊಂದು ಬಿಗ್ ಅಪ್ಡೇಟ್ ಹೊರಬಿದ್ದಿದ್ದು, ರಿಯಾಲಿಟಿ ಷೋ ವೀಕ್ಷಕರು ಫುಲ್ ಖುಷ್ ಆಗಿದ್ದಾರೆ. ಹಾಗಿದ್ದರೆ ಏನದು ಎನ್ನುವ ಮಾಹಿತಿ ಇಲ್ಲಿದೆ.
08:13 PM (IST) Jun 12
07:48 PM (IST) Jun 12
9 Month Pregnant Woman: ಬೆಂಗಳೂರಿನ ಯೋಗ ಶಿಕ್ಷಕಿ ಶಶಿಪ್ರಭಾ ದ್ವಿವೇದಿ 9 ತಿಂಗಳ ಗರ್ಭಿಣಿಯಾಗಿದ್ದರೂ ಶೀರ್ಷಾಸನ, ಚಕ್ರಾಸನ ಸೇರಿದಂತೆ ಕಠಿಣ ಯೋಗಾಸನಗಳನ್ನು ಮಾಡಿ ವೈರಲ್ ಆಗಿದ್ದಾರೆ.
07:18 PM (IST) Jun 12
Delhi ಭೇಟಿಯ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಡಿ.ಕೆ.ಶಿವಕುಮಾರ್ 9 ಪ್ರಮುಖ ಮನವಿಗಳನ್ನು ಸಲ್ಲಿಸಿದ್ದಾರೆ. ಪೊಲೀಸ್ ಆಧುನೀಕರಣ, ಹೆಚ್ಚುವರಿ IRB ಬೆಟಾಲಿಯನ್, ಜೈಲು ಸುಧಾರಣೆಗೆ ಕೇಂದ್ರದ ನೆರವು ಕೋರಿದ್ದಾರೆ.
06:35 PM (IST) Jun 12
Abdul Khader Death: 2008ರ ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಹಾಗೂ ಶಂಕಿತ ಉಗ್ರ ಅಬ್ದುಲ್ ಖಾದರ್ (60) ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.
06:30 PM (IST) Jun 12
06:03 PM (IST) Jun 12
05:52 PM (IST) Jun 12
ಕೊಲ್ಲೂರಿನಲ್ಲಿ ವಿಜಯ್ ಅವರ ಪಕ್ಕದಲ್ಲೇ ನಯೀಮ್ ಮೂಸಾ ಅವರನ್ನು ಕಂಡ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. "ನಮ್ಮ ಅಣ್ಣನಿಗೆ ಸರ್ಕಾರಿ ಸೆಕ್ಯೂರಿಟಿ ಏನೇ ಇರಲಿ, ಈ ನಯೀಮ್ ಒಬ್ಬರು ಜೊತೆಗಿದ್ದರೆ ಸಾಕು, ಅಣ್ಣನಿಗೆ ಸಾವಿರ ಆನೆಗಳ ಬಲ ಬಂದಂತೆ" ಎಂದು ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಯಾರು ಅವರು?
04:48 PM (IST) Jun 12
ದಳಪತಿ ವಿಜಯ್ ಅವರ ಕೊಲ್ಲೂರು ಭೇಟಿ ಕೇವಲ ಒಂದು ಧಾರ್ಮಿಕ ಪ್ರವಾಸವಾಗಿರದೆ, ಅವರ ಅಪ್ಪಟ ಭಕ್ತಿ ಮತ್ತು ತಮಿಳುನಾಡಿನ ರಾಜಕೀಯ ಪರಂಪರೆಯನ್ನು ಮುಂದುವರೆಸುವ ಸಂಕೇತವಾಗಿ ಮೂಡಿಬಂದಿದೆ. ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ ತಮಿಳುನಾಡು ಸಿಎಂ ವಿಜಯ್ ಅರ್ಚಕರಲ್ಲಿ ವಿಜಯ್ ಮಾಡಿದ ಆ ಒಂದು ಸ್ಪೆಷಲ್ ರಿಕ್ವೆಸ್ಟ್ ಏನು?"
04:34 PM (IST) Jun 12
ತಮಿಳುನಾಡು ಸಿಎಂ ವಿಜಯ್ ಜೊಸೆಫ್ ಕೊಲ್ಲೂರು ಮೂಕಾಂಬಿಕೆ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದೇ ವೇಳೆ ಮೂಕಾಂಬಿಕೆಗೆ ಬೆಳ್ಳಿ ಖಡ್ಗ ಅರ್ಪಿಸಿದ್ದಾರೆ. ವಿಶೇಷ ಅಂದರೆ ಈ ಸಂಪ್ರದಾಯ ಮೂಲಕ ವಿಜಯ್ ತಮಿಳುನಾಡಿನಲ್ಲಿ ಸುದೀರ್ಘ ಆಳ್ವಿಕೆಯ ಸೂಚೆ ನೀಡಿದ್ದಾರೆ.
04:23 PM (IST) Jun 12
04:20 PM (IST) Jun 12
ಮ್ಯಾಂಗೋ ಪಚ್ಚ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ, 26 ಗಂಟೆಗಳ ಶೂಟಿಂಗ್ ಅನುಭವ, ನಟನೆಯ ಮೂಲಕ ಭಾವನೆಗಳನ್ನು ಹೊರಹಾಕಿದ ಕ್ಷಣಗಳು ಹಾಗೂ ‘ಜಿಮ್ಮಿ’ ಚಿತ್ರದ ಬಗ್ಗೆ ಸಂಚಿತ್ ಸಂಜೀವ್ ಮನದಾಳದ ಮಾತು.
04:16 PM (IST) Jun 12
ಮಂಗಳೂರಿನಿಂದ ಕೊಲ್ಲೂರಿಗೆ ದಳಪತಿ ಸವಾರಿ ಮಾಡಿದ್ದು ಯಾವ ಸಾಮಾನ್ಯ ಕಾರಿನಲ್ಲಲ್ಲ, ಅದರ ಫೀಚರ್ಸ್ ಮತ್ತು ಬೆಲೆ ಕೇಳಿದರೆ ಯಾರಿಗಾದರೂ ಒಂದು ಕ್ಷಣ ತಲೆ ಸುತ್ತುವುದು ಗ್ಯಾರಂಟಿ. ಹಾಗಿದ್ರೆ ಅದು ಯಾವಕಾರು, ಅದರ ರಹಸ್ಯವೇನು, ಬೆಲೆ ಎಷ್ಟು? ಈ ಸ್ಟೋರಿ ನೋಡಿ…
04:00 PM (IST) Jun 12
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕೊಂಕಣ ರೈಲ್ವೆ ಮಾರ್ಗದ ಅಭಿವೃದ್ಧಿಗಾಗಿ ₹7,000 ಕೋಟಿ ಅನುದಾನ ಪಡೆಯುವ ಪ್ರಯತ್ನಗಳ ಬಗ್ಗೆ ತಿಳಿಸಿದ್ದಾರೆ. ಕಾರವಾರ-ಮಡಗಾಂವ್ ರೈಲು ಸೇವೆಯನ್ನು ಶಾಶ್ವತಗೊಳಿಸಲಾಗಿದ್ದು, ಕಾರವಾರ ನಿಲ್ದಾಣದಲ್ಲಿ ಮಹಿಳೆಯರಿಗಾಗಿ 'ಪಿಂಕ್ ಬಬಲ್' ಸೌಲಭ್ಯವನ್ನು ಉದ್ಘಾಟಿಸಲಾಗಿದೆ.
02:48 PM (IST) Jun 12
ನಿಮ್ಮಲ್ಲಿ ವಿಭಿನ್ನ ವ್ಯಕ್ತಿತ್ವವಿದೆಯೇ? ನಿಮ್ಮ ಮಾತಿನ ಚತುರತೆ ಮತ್ತು ಗುಣಗಳಿಂದ ಜಗತ್ತನ್ನು ಗೆಲ್ಲಬಲ್ಲಿರಾ? ಹಾಗಿದ್ದರೆ ತಡಮಾಡಬೇಡಿ. ತಕ್ಷಣವೇ ಅಧಿಕೃತ ಲಿಂಕ್‌ಗೆ ಭೇಟಿ ನೀಡಿ, ನಿಮ್ಮ ವಿಡಿಯೋ ಅಪ್‌ಲೋಡ್ ಮಾಡಿ. ಯಾರು ಬಲ್ಲರು? ನೀವೂ ಅವರಲ್ಲಿ ಒಬ್ಬರಾಗಬಹುದು!
02:38 PM (IST) Jun 12
01:58 PM (IST) Jun 12
ಬೆಳಗಾವಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಧರ್ಮಸ್ಥಳದ ವಿರುದ್ಧ 200 ಕೋಟಿ ರೂ. ವ್ಯವಹಾರದ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಸಂಚಿನಲ್ಲಿ ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದು, ಎಲ್ಲರನ್ನೂ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ.
01:11 PM (IST) Jun 12
ದೊಡ್ಡಣ್ಣ ಅವರು ಈ ವಿಡಿಯೋ ಬಿಡುಗಡೆ ಮಾಡುತ್ತಿದ್ದಂತೆಯೇ ಅವರ ಲಕ್ಷಾಂತರ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸದ್ಯ ದೊಡ್ಡಣ್ಣ ಅವರು ಅರೋಗ್ಯವಾಗಿದ್ದು, ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಅವರ ಕುಟುಂಬ ವರ್ಗ ಕೂಡ ಮನವಿ ಮಾಡಿದೆ.
01:01 PM (IST) Jun 12
12:41 PM (IST) Jun 12
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಹಣ ಪಡೆದು ಅನುತ್ತೀರ್ಣಗೊಂಡ ವಿದ್ಯಾರ್ಥಿಗಳನ್ನು ಪಾಸ್ ಮಾಡುವ ದಂಧೆ ಬಯಲಾಗಿದೆ. ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿ ನಡುವಿನ ಆಡಿಯೋ ಸಂಭಾಷಣೆ ವೈರಲ್ ಆಗಿದೆ.
11:15 AM (IST) Jun 12
10:37 AM (IST) Jun 12
10:03 AM (IST) Jun 12
ರಾಷ್ಟ್ರೀಯ ಕಟ್ಟಡ ಸಂಹಿತೆ ಉಲ್ಲಂಘಿಸಿ ನಿರ್ಮಿಸಲಾದ 1.5 ಮೀಟರ್‌ಗಿಂತ ಎತ್ತರದ ಕಾಂಪೌಂಡ್‌ಗಳನ್ನು ಬೆಂಗಳೂರಿನಲ್ಲಿ ನೆಲಸಮಗೊಳಿಸಲು ಜಿಬಿಎ ಮುಂದಾಗಿದೆ. ಸಚಿವರ ನಿವಾಸಗಳು ಮತ್ತು ಸರ್ಕಾರಿ ಅತಿಥಿಗೃಹಗಳೂ ಸೇರಿದಂತೆ ನಿಯಮ ಮೀರಿದ ಎಲ್ಲಾ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿ, ಕ್ರಮ ಕೈಗೊಳ್ಳಲಾಗುತ್ತಿದೆ.
09:45 AM (IST) Jun 12
09:03 AM (IST) Jun 12
08:54 AM (IST) Jun 12
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಪುಸ್ತಕ ಓದುತ್ತಾ ಕಾಲ ಕಳೆದರೆ, ಪವಿತ್ರಾ ಗೌಡ ತಮ್ಮ ಆತ್ಮಕಥೆ ಬರೆಯುತ್ತಿದ್ದಾರೆ ಎಂದು ವರದಿಯಾಗಿದೆ. ದರ್ಶನ್ ಮತ್ತು ಸಹಚರರು ಮೊದಲ ಬಾರಿಗೆ ಬಂಧನವಾಗಿ ಎರಡು ವರ್ಷ ಕಳೆದಿದೆ.
07:44 AM (IST) Jun 12
https://kannada.asianetnews.com/politics/home-minister-priyank-kharge-slams-pm-modi-over-nehru-record-milestone-rav/articleshow-a6xyhew
07:43 AM (IST) Jun 12
https://kannada.asianetnews.com/state/bengaluru-anjanadri-pg-girls-midnight-protest-over-food-quality-safety-concerns-eviction-threats/articleshow-df2dpez