ಬೆಂಗಳೂರು: ‘ಅಧಿಕಾರದ ಆಸೆಯಿಂದ ಪಕ್ಷ ಬದಲಿಸುವ, ರಾಜಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯಕ್ತಿ ನಾನಲ್ಲ. ನನಗೆ ತತ್ವ, ಸಿದ್ಧಾಂತಗಳೇ ಪರಮಮುಖ್ಯ’ ಎಂದು ಹೇಳುವ ಮೂಲಕ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಅವರು ತಾವು ಜೆಡಿಎಸ್ ಸೇರುವ ಬಗ್ಗೆ ಕೇಳಿಬರುತ್ತಿದ್ದ ಮಾತುಗಳಿಗೆ ಫುಲ್‌ಸ್ಟಾಪ್ ಇಟ್ಟಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದ ಹಿನ್ನೆಲೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಬಿನ್ನಾಭಿಪ್ರಾಯದಿಂದಾಗಿ ಜೆಡಿಎಸ್ ಸೇರಲು ಮುಂದಾಗಿದ್ದೀರಿ ಎಂಬ ಮಾತುಗಳು ಕೇಳಿಬರುತ್ತಿವೆಯಲ್ಲಾ ಎಂಬ ಪ್ರಶ್ನೆಗೆ ಸೂಕ್ಷ್ಮವಾಗಿಯೇ ಉತ್ತರ ನೀಡಿದ ಅವರು, ನಾನು ಅಧಿಕಾರದಲ್ಲಿದ್ದಾಗಲೇ ಜೆಡಿಎಸ್ ಬಿಟ್ಟು ಸಿದ್ಧಾಂತಕ್ಕಾಗಿ ಕಾಂಗ್ರೆಸ್‌ಗೆ ಬಂದವನು. ಮತ್ತೆ ಅಧಿಕಾರದ ಆಸೆಯಿಂದ ಪಕ್ಷ ಬದಲಿಸುವ, ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ನಾನು ದುರ್ಬಲ ಮನಸ್ಸಿನ ವ್ಯಕ್ತಿಯಲ್ಲ ಎಂದರು.
05:24 AM (IST) Nov 12