ಧಾರವಾಡ: ಹುಬ್ಬಳ್ಳಿಯಲ್ಲಿರುವ ನೈಋತ್ಯ ರೈಲ್ವೆ ಗಾಲ್ಫ್ ಮೈದಾನದಲ್ಲಿದ್ದ ಬನ್ನಿ ಮಹಾಂಕಾಳಿದೇವಿ ದೇವಸ್ಥಾನ ಹಾಗೂ 5 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪುತ್ಥಳಿ ತೆರವು ಮಾಡಿರುವುದನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರು ರೈಲ್ವೆ ಕಚೇರಿಗೆ ಮುತ್ತಿಗೆ ಹಾಕಿ, ಡಿಆರ್‌ಎಂ ಕಚೇರಿಯಲ್ಲಿನ ನಾಮಫಲಕ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಆರ್‌ಪಿಎಫ್ ಅಧಿಕಾರಿಗಳ ನಡುವೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಯಿತು.
ಮಂಗಳವಾರ ವಾಯು ವಿಹಾರಕ್ಕೆ ಹೋದಾಗ ದೇಗುಲ ತೆರವು ಮಾಡುತ್ತಿರುವುದನ್ನು ನೋಡಿದ ಸಾರ್ವಜನಿಕರು ಪ್ರತಿಭಟಿಸಿದ್ದಾರೆ. ಮಧ್ಯಾಹ್ನ ಹಿಂದೂಗಳು ಒಗ್ಗೂಡಿ ತೆರವು ಜಾಗದಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳ ನಡೆ ಖಂಡಿಸಿದರು. ಆ ಬಳಿಕ ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ಕಚೇರಿಗೆ ತೆರಳಿದ ಪ್ರತಿಭಟನಾಕಾರರು, ವಿಭಾಗೀಯ ವ್ಯವಸ್ಥಾಪಕಿ ಬೇಲಾ ಮೀನಾ ಕಚೇರಿಗೆ ಮುತ್ತಿಗೆ ಹಾಕಿ, ನಾಮಫಲಕ ಕಿತ್ತೊಗೆದರು.
ಹಿಂದೂ ದೇವಸ್ಥಾನ ತೆಗೆದಿರುವುದು ಮೂರ್ಖತನದ ಪರಮಾವಧಿ. ಶನಿವಾರದೊಳಗೆ ದೇವಸ್ಥಾನ ಹಾಗೂ ಪುತ್ಥಳಿ ಪುನರ್ ಸ್ಥಾಪಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
09:12 PM (IST) Mar 11
09:01 PM (IST) Mar 11
ಈ ಬಾರಿ ಬಿಸಿಲು ಜೋರಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಈಗಿನಿಂದಲೇ ಅಗತ್ಯ ಮುಂಜಾಗ್ರತೆ ವಹಿಸುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ ನೀಡಿದ್ದಾರೆ.
08:57 PM (IST) Mar 11
ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಸ್ವಿಫ್ಟ್ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡ ಆಸ್ಪತ್ರೆಗೆ ದಾಖಲಿಸಲಾಗಿದೆ.
08:31 PM (IST) Mar 11
ಸಾಲದ ಮೂಲಕ ರಾಜ್ಯ ಬಜೆಟ್ ಮಂಡಿಸಲಾಗಿದ್ದು, ಇದು ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ತೋರಿಸುತ್ತದೆ. 2026-27ನೇ ಸಾಲಿನ ಬಜೆಟ್ ಖಾಲಿ ಚೊಂಬಿನಂತಿದೆ ಎಂದು ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
08:21 PM (IST) Mar 11
ಇ-ಖಾತಾ ನೀಡುವ ವಿಚಾರದಲ್ಲಿ ಯಾವುದೇ ಅಧಿಕಾರಿ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪಕ್ಕೆ ದಾಖಲೆ ನೀಡಿದರೆ ಅಂಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
08:01 PM (IST) Mar 11
31 ಗ್ರಾಮಗಳಿಗೆ 96 ಟ್ಯಾಂಕರ್‌ಗಳ ಮುಖಾಂತರ ಹಾಗೂ 152 ಗ್ರಾಮಗಳಿಗೆ 154 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಕುಡಿಯುವ ನೀರು ಒದಗಿಸಲು ಕ್ರಮವಹಿಸಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
07:48 PM (IST) Mar 11
ಕೃಷಿ ಬೆಳೆ ರಕ್ಷಣೆಗೆ ಸಂಬಂಧಿಸಿ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ರೈತರಿಗೆ ಕೋವಿ ಪರವಾನಗಿ ನೀಡಲು ಸಂಬಂಧಪಟ್ಟವರಿಗೆ ಸೂಚನೆ ನೀಡುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.
06:13 PM (IST) Mar 11
'ಅಣ್ಣಯ್ಯ' ಸೀರಿಯಲ್ ಖ್ಯಾತಿಯ ನಟಿ ಪ್ರತೀಕ್ಷಾ ಶ್ರೀನಾಥ್, ಇಂದಿನ ಹೆಣ್ಣುಮಕ್ಕಳು ತಮ್ಮ ಭಾವಿ ಗಂಡನಿಂದ ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದರ ಬಗ್ಗೆ ಮಾತನಾಡಿದ್ದಾರೆ. ಸಮಾನತೆಯ ವಿಷಯದಲ್ಲಿ ಗಂಡನ ಆರ್ಥಿಕ ಸ್ಥಿತಿಯ ಬಗ್ಗೆ ಮಾತ್ರ ಹೆಚ್ಚು ಬೇಡಿಕೆ ಇಡುವುದನ್ನು ವಿವರಿಸಿದ್ದಾರೆ.
05:42 PM (IST) Mar 11
04:48 PM (IST) Mar 11
ಬೆಂಗಳೂರಿನ ಯಲಹಂಕದಲ್ಲಿ ನಡೆದ 3 ಕೋಟಿ ರೂಪಾಯಿ ಮೌಲ್ಯದ ಮನೆಕಳ್ಳತನ ಪ್ರಕರಣದಲ್ಲಿ ರಾಜಸ್ಥಾನ ಮೂಲದ 19 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಪಕ್ಕದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದು, ಆರು ತಿಂಗಳ ಕಾಲ ಮನೆಯ ಮೇಲೆ ನಿಗಾ ಇಟ್ಟು, ಸ್ಲೈಡ್ ಡೋರ್ ಮೂಲಕ ಒಳನುಗ್ಗಿ ಕಳ್ಳತನ ಮಾಡಿದ್ದ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ರಾಜಸ್ಥಾನದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
04:35 PM (IST) Mar 11
ನಾನು ವಿಷ್ಣು ಸಾರ್ ದೊಡ್ಡ ಅಭಿಮಾನಿ. ಅವರಂತೆಯೇ ನನ್ನ ಕೈಗೂ ಕಡಗ ಹಾಕ್ಕೊಂಡಿದ್ದೇನೆ. ನೀನು ಯಾವಾಗಲೂ ಸಂತೋಷವಾಗಿರುವಂತೆ ಇರಬೇಡ, ಸಂತೋಷವಾಗಿರು ಎನ್ನುತ್ತಿದ್ದರು ಎಂದು ಗೋಲ್ಡನ್‌ಸ್ಟಾರ್ ಗಣೇಶ್ ಹೇಳಿದರು.
04:16 PM (IST) Mar 11
ನಾನು ಬರೆದ ಕತೆಗೆ ಪ್ರತಿಯೊಬ್ಬರು ಜೀವ ತುಂಬಿದ್ದಾರೆ. ತುಂಬಾ ಚೆನ್ನಾಗಿ ಬಂದಿದೆ. ಆ ಧೈರ್ಯದಿಂದಲೇ ಮಾರ್ಚ್ 19ಕ್ಕೆ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದರು ಡಾರ್ಲಿಂಗ್ ಕೃಷ್ಣ.
03:42 PM (IST) Mar 11
02:59 PM (IST) Mar 11
ಧಾರವಾಡದ ಇಂದಿರಾ ಕ್ಯಾಂಟೀನ್‌ನಲ್ಲಿ ಗ್ಯಾಸ್ ಸಿಲಿಂಡರ್ ಖಾಲಿಯಾದ ಕಾರಣ, ಮಧ್ಯಾಹ್ನದ ಬಿಸಿ ಊಟವನ್ನು ನಿಲ್ಲಿಸಲಾಗಿದೆ. ಇದರಿಂದಾಗಿ, ಊಟಕ್ಕೆ ಬಂದ ನೂರಾರು ಬಡವರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಕೇವಲ ಮೊಸರನ್ನ ತಿಂದು ತೃಪ್ತಿಪಡಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು.
02:20 PM (IST) Mar 11
ಶ್ರೀರಂಗಪಟ್ಟಣದ ಸಿಡಿಎಸ್ ನಾಲೆಯಲ್ಲಿ ಪತ್ತೆಯಾಗಿದ್ದ ಅರ್ಚಕ ಸಿದ್ದಲಿಂಗಪ್ಪನ ಶವದ ಪ್ರಕರಣವು ಕೊಲೆ ಎಂದು ಸಾಬೀತಾಗಿದೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು, ಪತ್ನಿ ಶಾಲಿನಿ ತನ್ನ ಪ್ರಿಯಕರ ಹರೀಶ್ ಜೊತೆ ಸೇರಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.
01:44 PM (IST) Mar 11
01:17 PM (IST) Mar 11
ದೋಸೆ ಹಿಟ್ಟು ಕೈತಪ್ಪಿ ತೆಳುವಾದರೆ, ಅದನ್ನು ಸರಿಪಡಿಸಲು ಹಲವು ಸುಲಭ ಉಪಾಯಗಳಿವೆ. ಅಡುಗೆಮನೆಯ ಕೆಲ ಪದಾರ್ಥಗಳನ್ನು ಬಳಸಿ ಹಿಟ್ಟನ್ನು ಗಟ್ಟಿಗೊಳಿಸಬಹುದು. ಈ ವಿಧಾನಗಳು ದೋಸೆಯನ್ನು ಗರಿಗರಿಯಾಗಿ ಅಥವಾ ಮೃದುವಾಗಿ ಮಾಡಲು ಸಹ ಸಹಕರಿಸುತ್ತವೆ.
12:56 PM (IST) Mar 11
12:43 PM (IST) Mar 11
12:12 PM (IST) Mar 11
ಸಾವಿರಾರು ಕೋಟಿ ರೂಪಾಯಿ ವ್ಯವಹಾರ ಮಾಡುವ ಸಿನಿಮಾ ರಂಗದಲ್ಲಿದ್ದರೂ, ಅವರ ಮನಸ್ಸು ಮಾತ್ರ ಯಾವಾಗಲೂ ಕರುನಾಡಿನ ಈ ಸಾಂಪ್ರದಾಯಿಕ ಅಡುಗೆಗಳನ್ನೇ ಬಯಸುತ್ತಿತ್ತು. ಅಣ್ಣಾವ್ರ ಈ ‘ಫುಡ್ ಸೀಕ್ರೆಟ್’ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಏನದು ಸೀಕ್ರೆಟ್?
11:56 AM (IST) Mar 11
11:31 AM (IST) Mar 11
ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದ ಭೀತಿಯಿಂದ ಸಂಡೂರಿನಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳಿಗಾಗಿ ಜನರು ಮುಗಿಬಿದ್ದಿದ್ದು, ಕೃತಕ ಅಭಾವದ ಆತಂಕ ಸೃಷ್ಟಿಯಾಗಿದೆ. ಗ್ಯಾಸ್ ಕಂಪನಿಗಳು ಕೊರತೆಯಿಲ್ಲವೆಂದು ಹೇಳುತ್ತಿದ್ದರೂ, ಬಳ್ಳಾರಿಯಲ್ಲಿ ಕಮರ್ಷಿಯಲ್ ಸಿಲಿಂಡರ್‌ಗಳ ಅಭಾವ ತಲೆದೋರಿದೆ.
11:26 AM (IST) Mar 11
ಬಳ್ಳಾರಿಯ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿ ಅರವಿಂದ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಕಾಲೇಜಿನಲ್ಲಿ ನಡೆದ ಜಗಳದ ನಂತರ ಪ್ರಿನ್ಸಿಪಾಲ್ ಮತ್ತು ಹೆಚ್‌ಓಡಿ ಪೋಷಕರಿಗೆ ಅವಮಾನಿಸಿದ್ದೇ ಸಾವಿಗೆ ಕಾರಣವೆಂದು ಆರೋಪಿಸಿ ಸಹಪಾಠಿಗಳು ಪ್ರತಿಭಟನೆ ನಡೆಸಿದ್ದಾರೆ.
11:20 AM (IST) Mar 11
10:53 AM (IST) Mar 11
10:52 AM (IST) Mar 11
ಕೊರಟಗೆರೆಯ ಅಕ್ಕಿರಾಂಪುರದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ 'ಕಸ್ತೂರಿಬಾ ಬಾಲಕಿಯರ ವಿದ್ಯಾರ್ಥಿನಿಲಯ'ವು ಕಳೆದ 8 ವರ್ಷಗಳಿಂದ ಪಾಳುಬಿದ್ದಿದೆ. ಋತುಮತಿ ಹೆಣ್ಣುಮಕ್ಕಳಿಂದ ದೇವಿಗೆ 'ಅಂಟುಮುಂಟು' ತಟ್ಟುತ್ತದೆ ಎಂಬ ಮೌಢ್ಯದಿಂದಾಗಿ ಪೋಷಕರು ಮಕ್ಕಳನ್ನು ಕಳುಹಿಸಲು ನಿರಾಕರಿಸುತ್ತಿದ್ದಾರೆ.
10:15 AM (IST) Mar 11
10:09 AM (IST) Mar 11
09:42 AM (IST) Mar 11
09:36 AM (IST) Mar 11
ಬೀದರ್‌ನ ಮೈಲೂರ್ ರಸ್ತೆಯಲ್ಲಿ ಕೂಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೈಜನಾಥ ಎಂಬ 60 ವರ್ಷದ ವ್ಯಕ್ತಿಗೆ ಕುದುರೆಯೊಂದು ಒದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ.
09:30 AM (IST) Mar 11
08:52 AM (IST) Mar 11
ಇರಾನ್-ಇಸ್ರೇಲ್ ಯುದ್ಧದಿಂದಾಗಿ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿದೆ ಮತ್ತು 25 ದಿನಗಳ ಬುಕಿಂಗ್ ನಿಯಮ ಜಾರಿಯಾಗಿದೆ. ಬೆಲೆ ಏರಿಕೆ ಮತ್ತು ಸಿಲಿಂಡರ್ ಕೊರತೆ ಎರಡೂ ಒಟ್ಟಿಗೆ ಬಂದಾಗ, ಹಳೆಯ ದಾರಿ ಬಿಟ್ಟು ಹೊಸ ಮತ್ತು ಅಗ್ಗದ ದಾರಿ ಹಿಡಿಯುವುದೇ ಜಾಣತನ.
08:29 AM (IST) Mar 11
ಬೆಳಗ್ಗೆ ಈ ಘಟನೆ ನಡೆದಿದ್ದರಿಂದ ಶೇಷಾದ್ರಿಪುರಂ ಅಂಡರ್‌ಪಾಸ್ ಮಾರ್ಗವಾಗಿ ತೆರಳುತ್ತಿದ್ದ ಜನರಿಗೆ ಟ್ರಾಫಿಕ್ ಬಿಸಿತಾಗಿತ್ತು. ಟ್ರಾಫಿಕ್ ಪೊಲೀಸರು ಮತ್ತು ರೈಲ್ವೇ ಸಿಬ್ಬಂದಿ ಜೊತೆಯಾಗಿ ಟ್ರಾಫಿಕ್ ನಿಯಂತ್ರಣ ಮಾಡಿದರು.
08:20 AM (IST) Mar 11
ಆ್ಯಸಿಡ್ ದಾಳಿ ಸಂತ್ರಸ್ತೆಯರಿಗೆ ನೀಡುವ ಮಾಸಿಕ ಪಿಂಚಣಿಯನ್ನು 10 ಸಾವಿರದಿಂದ 50 ಸಾವಿರಕ್ಕೆ ಹೆಚ್ಚಿಸಲು ಸರ್ಕಾರ ಮುಂದಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಇದರೊಂದಿಗೆ, ಸಂತ್ರಸ್ತೆಯರಿಗೆ ಉಚಿತ ಮನೆ, ಸಾಲವನ್ನು ಅನುದಾನವಾಗಿ ಪರಿವರ್ತಿಸುವುದ.. ಮಹತ್ವದ ಕ್ರಮ ಘೋಷಿಸಲಾಗಿದೆ.
08:01 AM (IST) Mar 11
ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಸಂದೇಶ ಕಳುಹಿಸಿ, ಅತ್ಯಾ೧ಚಾರ ಹಾಗೂ ಜೀವ ಬೆದರಿಕೆ ಹಾಕಿದ ನಟ ದರ್ಶನ್ ಅಭಿಮಾನಿಗಳ ವಿರುದ್ಧ ದಾಖಲಿಸಿದ್ದ ದೂರಿಗೆ ಸಂಬಂಧಿಸಿದಂತೆ ನಟಿ ರಮ್ಯಾ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷ್ಯ ದಾಖಲಿಸಿದ್ದಾರೆ. ಹೆಣ್ಣುಮಕ್ಕಳಿಗೆ ಬೆದರಿಕೆ ಹಾಕುವವರಿಗೆ ಭಯ ಬರಬೇಕು ಹೀಗಾಗಿ ಈ ಕೇಸ್ ಎಂದಿದ್ದಾರೆ.
07:53 AM (IST) Mar 11
ಗುಟ್ಕಾ, ಪಾನ್ ಮಸಾಲಾದಿಂದ ಉಂಟಾದ ಹಲ್ಲುಗಳ ಮೇಲಿನ ಹಳದಿ ಕಲೆಗಳನ್ನು ತೆಗೆದುಹಾಕಲು ಈ ಲೇಖನವು ಪರಿಣಾಮಕಾರಿ ಮನೆಮದ್ದನ್ನು ವಿವರಿಸುತ್ತದೆ. ಮೂರು ವಸ್ತು ಬಳಸಿ ತಯಾರಿಸಿದ ಮಿಶ್ರಣವನ್ನು ಏಳು ದಿನಗಳ ಕಾಲ ಬಳಸುವುದರಿಂದ ಹಲ್ಲುಗಳನ್ನು ಮತ್ತೆ ಫಳಫಳ ಹೊಳೆಯುವಂತೆ ಮಾಡಬಹುದು.
07:23 AM (IST) Mar 11
ನಗರದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್ ಕಸವನ್ನು ರಸ್ತೆ ಡಾಂಬರೀಕರಣಕ್ಕೆ ಬಳಸಲಾಗುತ್ತದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ತಿಳಿಸಿದ್ದಾರೆ. ಸ್ವಚ್ಛ ಸರ್ವೇಕ್ಷಣಾ 2025-26 ಅಂಗವಾಗಿ ಮಂಗಳವಾರ ಅಂಜನಾಪುರ ವಾರ್ಡ್ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪೌರ ಕಾರ್ಮಿಕರೊಂದಿಗೆ ‘ಚಹಾ ಸಂವಾದ ನಡೆಸಿ ಮಾತನಾಡಿದರು
07:16 AM (IST) Mar 11
ಬೆಂಗಳೂರಿನಲ್ಲಿ ಪೊಲೀಸರು ಮತ್ತು ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಐವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ನಗರದ ಇತರೆಡೆ ನಡೆದ ದಾಳಿಗಳಲ್ಲಿ ಒಟ್ಟು 5.73 ಕೋಟಿ ರೂಪಾಯಿ ಮೌಲ್ಯದ ಹೈಡ್ರೋ ಗಾಂಜಾ ಮತ್ತು ಗಾಂಜಾವನ್ನು ವಶಕ್ಕೆ
07:12 AM (IST) Mar 11