ಬೆಂಗಳೂರು: ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋ ಮತ್ತೆ ಓಪನ್ ಆಗಿದೆ. ಸದ್ದಿಲ್ಲದೇ ಜಾಲಿವುಡ್ ಸ್ಟುಡಿಯೋ ಓಪನ್‌ಗೆ ಮಾಲಿನ್ಯ ನಿಯಂ ತ್ರಣ ಮಂಡಳಿ ಅನುಮತಿ ನೀಡಿದೆ. ಡಿ.5ರಂದೇ ಜಾಲಿವುಡ್ ಸ್ಟುಡಿಯೋ ಪುನಾರಂಭಕ್ಕೆ ಅನುಮತಿ ದೊರಕಿದ್ದು, ಬುಧವಾರದಿಂದ ಸ್ಟುಡಿಯೋ ಕಾರ್ಯಾಚರಣೆ ಆರಂಭಿಸಿದೆ. ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ಕಳೆದ ಅ.7ರಂದು ಜಾಲಿ ವುಡ್ ವಾಟರ್‌ಅನ್ವೆಂಚರ್ ಆ್ಯಂಡ್ ಸ್ಟುಡಿ ಯೋಗೆ ಜಿಲ್ಲಾಡಳಿತ ಬೀಗ ಹಾಕಿತ್ತು.

10:03 AM (IST) Dec 11
ರಾಜ್ಯ ಸರ್ಕಾರ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷಾಪರಾಧಗಳ(ಪ್ರತಿಬಂಧಕ) ಮಸೂದೆ-2025 ತಂದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
09:42 AM (IST) Dec 11
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವಿಲನ್ ಅಬ್ಬರ ಜೋರಾಗಿದೆ. ಕಾವ್ಯ ಶೈವ ಹಾಗೂ ಗಿಲ್ಲಿ ನಟನ ನಡುವೆ ಮನಸ್ತಾಪ ಶುರುವಾಗಿತ್ತು. ಈಗ ಕಾವ್ಯ ಶೈವ ಹಾಗೂ ರಕ್ಷಿತಾ ಮಧ್ಯೆ ಜಗಳ ಹತ್ತಿಕೊಂಡಿದೆ. ಇದಕ್ಕೆ ಕಾರಣ ಏನು?
09:33 AM (IST) Dec 11
ನಟಿ ನಿವೇತಾ ಪೆತುರಾಜ್ ಮತ್ತು ರಜಿತ್ ಮದುವೆ ನಿಂತುಹೋಗಿದೆ ಎಂದು ಹೇಳಲಾಗುತ್ತಿದೆ. ಇನ್‌ಸ್ಟಾಗ್ರಾಮ್ ಪೇಜ್‌ನಿಂದ ನಿಶ್ಚಿತಾರ್ಥದ ಫೋಟೋಗಳನ್ನು ಡಿಲೀಟ್ ಮಾಡಿರೋದ್ರಿಂದ ಮದುವೆ ಕ್ಯಾನ್ಸಲ್ ಆಗಿದೆ ಅಂತಾ ಹೇಳಲಾಗ್ತಿದೆ.
09:09 AM (IST) Dec 11
ದರ್ಶನ್ ನಟನೆಯ ‘ದಿ ಡೆವಿಲ್’ ಇಂದು 1000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಬೆಳಿಗ್ಗೆ 6.05 ನಿಮಿಷಕ್ಕೆ ಮೊದಲ ಪ್ರದರ್ಶನ ಆರಂಭವಾಗಲಿದೆ. ಒಂದು ದಿನದಲ್ಲಿ ಸುಮಾರು 200 ಪ್ರದರ್ಶನ ಕಾಣುವ ಸಾಧ್ಯತೆ ಇದೆ.
08:31 AM (IST) Dec 11
BBK 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಯಾವಾಗಲೂ ಎಲ್ಲರ ಬಳಿ ಮೊಟ್ಟೆ ಕೊಡು, ಹಣ್ಣು ಕೊಡು ಎಂದು ಕೇಳಿಕೊಂಡು ತಿನ್ನುತ್ತಾರೆ ಎಂಬ ಮಾತಿತ್ತು. ಆದರೆ ಈ ಬಾರಿ ಅವರಿಗೆ ಚಿಕನ್ ಬಿರಿಯಾನಿ ಸಿಕ್ಕರೂ ತಿನ್ನಲಿಲ್ಲ.
07:47 AM (IST) Dec 11
Car-KSRTC Bus Accident: ಡಿಕ್ಕಿಯ ರಭಸಕ್ಕೆ ಕಾರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮೃತದೇಹಗಳಿಂದ ಅಂಗಾಂಗಗಳು ಹೊರಬಂದು ಚೆಲ್ಲಾಪಿಲ್ಲಿಯಾಗಿವೆ. ಮೃತ ಮೂವರು ಕಾರ್ ಪ್ರಯಾಣಿಕರಾಗಿದ್ದಾರೆ.
07:38 AM (IST) Dec 11
ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕದಲ್ಲಿ 9.67 ಲಕ್ಷ ಮೆಟ್ರಿಕ್ ಟನ್ ತೊಗರಿಬೇಳೆ ಖರೀದಿಗೆ ಅನುಮತಿ ನೀಡಿದೆ. ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ನಫೆಡ್ ಮತ್ತು ಎನ್‌ಸಿಸಿಎಫ್ ಮೂಲಕ 90 ದಿನದೊಳಗೆ ತೊಗರಿ ಖರೀದಿಸಲು ಅನುಮತಿ ನೀಡಲಾಗಿದೆ.
07:32 AM (IST) Dec 11
Darshan Thoogudeepa The Devil Movie: ನಟ ದರ್ಶನ್ ತೂಗುದೀಪ, ರಚನಾ ರೈ, ಗಿಲ್ಲಿ ನಟ ಅಭಿನಯದ ‘ದಿ ಡೆವಿಲ್’ ಸಿನಿಮಾ ರಿಲೀಸ್ ಆಗಿದ್ದು, ಈ ಸಿನಿಮಾ ಹೇಗಿದೆ? ಥಿಯೇಟರ್ ಸುತ್ತ ಮುತ್ತ ಜನಸಾಗರವೇ ಸೇರಿದೆ. ಹಾಗಾದರೆ ಈ ಸಿನಿಮಾ ನೋಡಿದವರು ಏನು ಹೇಳಿದರು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.