Published : Oct 10, 2025, 07:33 AM ISTUpdated : Oct 10, 2025, 10:48 PM IST

State News Live: ಬೆಂಗಳೂರಿನಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತ, ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಟ್ಟು ನಿಂತ ವಾಹನ

ಸಾರಾಂಶ

ಬೆಂಗಳೂರು (ಅ.10): ರಾಜ್ಯ ರಾಜಕಾರಣದಲ್ಲಿ ನವೆಂಬರ್‌ ಕ್ರಾಂತಿ ಸಂಚಲನ ಶುರುವಾಗಿದೆ. ಸಂಪುಟ ಪುನಾರಚನೆ ಸಂಭವನೀಯತೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮಂತ್ರಿ ಸ್ಥಾನಕ್ಕಾಗಿ ಭರ್ಜರಿ ಲಾಬಿ ನಡೆಯುತ್ತಿದೆ. ಸಚಿವ ಸ್ಥಾನ ಉಳಿಸಿಕೊಳ್ಳಲು ಸಭೆ ನಡೆಸಿ ಹಲವು ಮಂತ್ರಿಗಳು ಕಸರತ್ತು ನಡೆಸಿದ್ದಾರೆ. ಅದರೊಂದಿಗೆ ಇಂದಿನ ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

10:48 PM (IST) Oct 10

ಬೆಂಗಳೂರಿನಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತ, ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಟ್ಟು ನಿಂತ ವಾಹನ

ಬೆಂಗಳೂರಿನಲ್ಲಿ ಭಾರಿ ಮಳೆಗೆ ರಸ್ತೆಗಳು ಜಲಾವೃತ, ಗುಂಡಿ ಬಿದ್ದ ರಸ್ತೆಗಳಲ್ಲಿ ಕೆಟ್ಟು ನಿಂತ ವಾಹನ, ಸವಾರರ ಪರದಾಟ ಒಂದೆಡೆಯಾದರೆ, ಅಪಾಯದ ಪ್ರಮಾಣ ಹೆಚ್ಚಾಗಿದೆ. ಬೆಂಗಳೂರಿನ ಹಲೆವೆಡೆ ಭಾರಿ ಮಳೆಯಾಗುತ್ತಿದೆ.

Read Full Story

10:03 PM (IST) Oct 10

ಜಿಬಿಎ ಮೊದಲ ಸಭೆ, ಬಿಜೆಪಿ ನಾಯಕರು ಗೈರು, ವಿವಾದದ ನಡುವೆ ಬೆಂಗಳೂರಿನ ಭವಿಷ್ಯದತ್ತ ಹೆಜ್ಜೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮೊದಲ ಸಭೆ ನಡೆಯಿತು. ಬಿಜೆಪಿ ಸದಸ್ಯರ ಗೈರುಹಾಜರಿಯ ನಡುವೆಯೂ, ನಗರ ಯೋಜನೆ, 5 ಹೊಸ ಪಾಲಿಕೆಗಳ ರಚನೆ ಹಾಗೂ ಆಡಳಿತಾತ್ಮಕ ಅಧಿಕಾರಗಳ ವರ್ಗಾವಣೆಯಂತಹ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. 

Read Full Story

09:53 PM (IST) Oct 10

ಪಡಿತರ ಅಕ್ಕಿ ಕಳ್ಳಸಾಗಣೆಗೆ ಕಮೀಷನ್ ಕೇಳಿದ ಬಸವರಾಜ; ಲಾರಿ ಗುದ್ದಿ ಮಟಾಷ್ ಮಾಡಿದ ಅಷ್ಪಾಕ್ ಮುಲ್ಲಾ!

ಜಮಖಂಡಿ ಬಳಿ ನಡೆದ ಅಪಘಾತ ಪ್ರಕರಣವು ವ್ಯವಸ್ಥಿತ ಕೊಲೆ ಎಂದು ತನಿಖೆಯಿಂದ ದೃಢಪಟ್ಟಿದೆ. ಪಡಿತರ ಅಕ್ಕಿ ಕಳ್ಳಸಾಗಣೆ ಡೀಲ್‌ನ ಹಣಕಾಸಿನ ವಿವಾದವೇ ಈ ಕೃತ್ಯಕ್ಕೆ ಕಾರಣವಾಗಿದ್ದು, ಪೊಲೀಸರು ಮುಖ್ಯ ಆರೋಪಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಈ ಘಟನೆಯು ಅಕ್ರಮ ಅಕ್ಕಿ ದಂದೆಯ ಜಾಲವನ್ನು ಬಯಲು ಮಾಡಿದೆ.
Read Full Story

09:45 PM (IST) Oct 10

ನಕ್ಷೆಗಳ ಭಾಗ ಆಗಿರದ ಪರಿವರ್ತಿತ ಜಮೀನಿನ ಸೈಟ್‌ ಖರೀದಿ ನಿಯಂತ್ರಿಸಿ - ಹೈಕೋರ್ಟ್‌

ಜಮೀನಿನಲ್ಲಿರುವ ನಿವೇಶನಗಳನ್ನು ಗ್ರಾಹಕರು ಖರೀದಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂತಹ ವಹಿವಾಟುಗಳನ್ನುನಿಯಂತ್ರಿಸಲು ಸಮಗ್ರ ಯೋಜನೆ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಸೂಚಿಸಿದೆ.

Read Full Story

09:35 PM (IST) Oct 10

ನೊಬೆಲ್ ಗೆಲ್ಲದ ಟ್ರಂಪ್‌ಗೆ ತಾನು ಗೆದ್ದ ಪ್ರಶಸ್ತಿ ಅರ್ಪಿಸಿದ ಮಾರಿಯಾ ಕೊರಿನಾ ಮಚಾದೊ!

2025ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ, ವೆನೆಜುವೆಲಾದ ವಿರೋಧ ಪಕ್ಷದ ನಾಯಕಿ ಮಾರಿಯಾ ಕೊರಿನಾ ಮಚಾದೊ, ತಮ್ಮ ಪ್ರಶಸ್ತಿಯನ್ನು ವೆನೆಜುವೆಲಾದ ಜನತೆ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅರ್ಪಿಸಿದ್ದಾರೆ. 

Read Full Story

09:21 PM (IST) Oct 10

ಸಂಪುಟ ಪುನಾರಚನೆ ವಿಚಾರ ಗೊತ್ತಿಲ್ಲ ಸಲಹೆ ಕೇಳಿದರೆ ಕೊಡುತ್ತೇನೆ - ಡಿ.ಕೆ.ಶಿವಕುಮಾರ್‌

ಸಚಿವ ಸಂಪುಟದಲ್ಲಿ ಬದಲಾವಣೆ ವಿಚಾರವಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಇದು ಪಕ್ಷ ಹಾಗೂ ಸಿಎಂಗೆ ಬಿಟ್ಟ ವಿಚಾರ. ನನ್ನ ಜೊತೆ ಚರ್ಚಿಸಿದರೆ ನನ್ನ ಸಲಹೆ ಕೊಡುತ್ತೇನೆ ಅಷ್ಟೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದರು.

Read Full Story

09:19 PM (IST) Oct 10

8 ಅಡಿ ಆಳದ ಗುಂಡಿಗೆ ಬಿದ್ದ ಕಾರು; ಇದು ಎಲ್ಲಿಯದ್ದೋ ಅಲ್ಲ, ನಮ್ಮ ಬೆಂಗಳೂರಿನ ಹೆಮ್ಮೆಯ ರಸ್ತೆಗುಂಡಿ!

ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ ಚಂದಾಪುರ ಬಳಿ, ಅವೈಜ್ಞಾನಿಕ ಕಾಮಗಾರಿಗೆ ತೆಗೆದಿದ್ದ ಗುಂಡಿಗೆ ಕಾರೊಂದು ಬಿದ್ದು ಚಾಲಕ ಮತ್ತು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದಿಂದಾಗಿ ಈ ಮಾರ್ಗದಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ.

Read Full Story

09:07 PM (IST) Oct 10

ಹಾಸನಾಂಬೆ ದರ್ಶನ ಇದೇ ವರ್ಷ ಕೊನೆ, ಬ್ರಹ್ಮಾಂಡ ಗುರೂಜಿ ನುಡಿದ ಸ್ಫೋಟಕ ಭವಿಷ್ಯ!

ಬ್ರಹ್ಮಾಂಡ ಗುರೂಜಿಯವರು, ಈ ವರ್ಷದ ಹಾಸನಾಂಬೆ ದರ್ಶನವೇ ಕೊನೆಯಾಗಲಿದ್ದು, ಭವಿಷ್ಯದಲ್ಲಿ ದೇವಿಯ ದರ್ಶನ ಸಿಗುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ. ಇದರೊಂದಿಗೆ, ಸಿಎಂ ಸಿದ್ದರಾಮಯ್ಯನವರ ಆರೋಗ್ಯ, ಮುಂದಿನ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಸರ್ಕಾರದ ಭವಿಷ್ಯದ ಬಗ್ಗೆಯೂ ಸ್ಫೋಟಕ ಹೇಳಿಕೆ ನೀಡಿದ್ದಾರೆ.

Read Full Story

08:57 PM (IST) Oct 10

ಅನುಭವ ಮಂಟಪ ಕಾಮಗಾರಿಗೆ 50 ಕೋಟಿ ಬಿಡುಗಡೆ - ಸಚಿವ ಈಶ್ವರ್ ಖಂಡ್ರೆ

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಅನುಭವ ಮಂಟಪ ಕಾಮಗಾರಿಗೆ ಸಂಬಂಧಿಸಿದಂತೆ 50 ಕೋಟಿ ರು. ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

Read Full Story

08:41 PM (IST) Oct 10

ಹಾಸನಾಂಬೆ ಜಾತ್ರೆಗೆ ಬರೋರಿಗೆ KSRTC 10 ಟೂರ್ ಪ್ಯಾಕೇಜ್; 400 ರೂ.ನಿಂದ ಪ್ರವಾಸ ಭಾಗ್ಯ ಆರಂಭ!

ಹಾಸನಾಂಬ ಜಾತ್ರಾ ಮಹೋತ್ಸವ 2025ರ ಪ್ರಯುಕ್ತ, KSRTCಯು ಅಕ್ಟೋಬರ್ 10 ರಿಂದ 22ರವರೆಗೆ ವಿಶೇಷ ಪ್ರವಾಸಿ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಹಾಸನ, ಬೆಂಗಳೂರು, ಮತ್ತು ಮೈಸೂರಿನಿಂದ ಹೊರಡುವ ಈ ಪ್ರವಾಸಗಳಲ್ಲಿ 1000 ರೂ. ವಿಶೇಷ ದರ್ಶನ ಟಿಕೆಟ್ ಸೌಲಭ್ಯವೂ ಸೇರಿದೆ.
Read Full Story

08:37 PM (IST) Oct 10

ಹಸಿರು ಕ್ರಾಂತಿಗೆ ಕೃಷಿ ತಜ್ಞರ ಕೊಡುಗೆ ಅಪಾರ - ಗೃಹ ಸಚಿವ ಪರಮೇಶ್ವರ್‌

ದೇಶದಲ್ಲಿ ಹಸಿರು ಕ್ರಾಂತಿ ಮೂಲಕ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಹೆಚ್ಚಳದೊಂದಿಗೆ ಲಕ್ಷಾಂತರ ಜನರ ಹಸಿವು ತಪ್ಪಿಸಿ ಬಡತನದ ವ್ಯಾಪಕ ನಿರ್ಮೂಲನೆಯಲ್ಲಿ ಕೃಷಿ ವಿಜ್ಞಾನಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್‌ ಹೇಳಿದರು.

Read Full Story

08:20 PM (IST) Oct 10

ವಿಷ್ಣುವರ್ಧನ್, ಚಿರು, ಬಾಲಯ್ಯ ಜೊತೆ ನಟಿಸಿದ್ದ ಭಾನುಪ್ರಿಯಾ, ನಾಗಾರ್ಜುನ ಜೊತೆ ಯಾಕೆ ನಟಿಸಲಿಲ್ಲ?

ಸೌತ್ ಫಿಲ್ಮ್ ಇಂಡಸ್ಟ್ರಿಯಲ್ಲಿ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ್ದ ಸೀನಿಯರ್ ನಟಿ ಭಾನುಪ್ರಿಯಾ, ಟಾಲಿವುಡ್‌ನಲ್ಲಿ ನಾಗಾರ್ಜುನ ಜೊತೆ ಮಾತ್ರ ನಟಿಸಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣವೇನು? ಈ ಬಗ್ಗೆ ಭಾನುಪ್ರಿಯಾ ಹೇಳಿದ್ದೇನು?

Read Full Story

08:14 PM (IST) Oct 10

ದಿವ್ಯಾ ಉರುಡುಗ-ಅರವಿಂದ್ ಕೆಪಿಗೆ ಬಿಗ್‌ಬಾಸ್ ನೀಡಿದ ಕ್ಯೂಟ್ ಶಿಕ್ಷೆ ನೆನಪಿದೆಯಾ? ಚೆಂದದ ವಿಡಿಯೋ ವೈರಲ್

Bigg Boss Season 8 Contestant: ಬಿಗ್‌ಬಾಸ್ ಸೀಸನ್ 8 ರಲ್ಲಿ ಅರವಿಂದ್ ಕೆಪಿ ಆಕಸ್ಮಿಕವಾಗಿ ಗಾಜಿನ ಗ್ಲಾಸ್ ಒಡೆದಿದ್ದರು. ಈ ತಪ್ಪಿಗೆ ಬಿಗ್‌ಬಾಸ್ ತುಂಬಾನೇ ಕ್ಯೂಟ್ ಆಗಿರುವ ಶಿಕ್ಷೆಯನ್ನು ನೀಡುದ್ದರು. ಈ ಪ್ರೀತಿಯ ತುಂಟಾಟದ ಶಿಕ್ಷೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.

Read Full Story

07:55 PM (IST) Oct 10

ನಟ ದರ್ಶನ್ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದ ಸೆಷನ್ಸ್ ಕೋರ್ಟ್, ಮುಂದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ದೈಹಿಕ ಹಿಂಸೆಯ ಆರೋಪ ಮಾಡಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿರುವ ಸೆಷನ್ಸ್ ಕೋರ್ಟ್, ಜೈಲಿನ ಸ್ಥಿತಿಗತಿ ಪರಿಶೀಲಿಸಿ ವರದಿ ನೀಡಲು ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶಿಸಿದೆ. 

Read Full Story

07:44 PM (IST) Oct 10

ರಾಜ್ಯದಲ್ಲಿ ಕೆರೆ ಜಾಗ ಒತ್ತುವರಿ ಮುಲಾಜಿಲ್ಲದೆ ತೆರವು - ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಕೆರೆಗಳ ಜಾಗ ಒತ್ತುವರಿ ಮಾಡಿಕೊಂಡಿರುವವರು ತಾವಾಗಿಯೇ ಆ ಜಾಗ ಬಿಟ್ಟುಕೊಟ್ಟರೆ ಒಳಿತು. ತಪ್ಪಿದರೆ ಅಧಿಕಾರಿಗಳು ಮುಲಾಜಿಲ್ಲದೆ ಅಂಥ ಒತ್ತುವರಿ ತೆರವು ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Read Full Story

07:32 PM (IST) Oct 10

ಕಿದ್ವಾಯಿ ಆಸ್ಪತ್ರೆಯಲ್ಲಿ 450 ಹಾಸಿಗೆಯ ಹೊಸ ಬ್ಲಾಕ್ - ಸಚಿವ ಶರಣ ಪ್ರಕಾಶ್‌ ಪಾಟೀಲ್

ರಾಜಧಾನಿಯ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ 450 ಹಾಸಿಗೆ ಸಾಮರ್ಥ್ಯದ ಹೊಸ ಬ್ಲಾಕ್ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ್ ತಿಳಿಸಿದ್ದಾರೆ.

Read Full Story

07:31 PM (IST) Oct 10

ಹಡಗಲಿ ತಾ. ಹೊಳಲು ಉದ್ಯಮಿ ಕಿಡ್ನಾಪ್ - ₹5 ಕೋಟಿ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು! ಆಡಿಯೋ ವೈರಲ್

ವಿಜಯನಗರ ಜಿಲ್ಲೆಯ ಹೊಳಲು ಗ್ರಾಮದಲ್ಲಿ ವಾಯು ವಿಹಾರಕ್ಕೆ ತೆರಳಿದ್ದ ಉದ್ಯಮಿ ಮಂಜುನಾಥ ಶೇಜವಾಡ್ಕರ್ ಅವರನ್ನು ಅಪಹರಿಸಲಾಗಿದೆ. ಅಪಹರಣಕಾರರು 5 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದು, ಹಣ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ನಡೆಸುತ್ತಿದ್ದಾರೆ.

Read Full Story

06:54 PM (IST) Oct 10

ಉದ್ದಿಮೆಗಳ ಮೇಲ್ದರ್ಜೆಗೇರಿಸಿ ಹೆಚ್ಚು ನೌಕರಿ ಸೃಷ್ಟಿಸಿ - ಸಚಿವ ಚಲುವರಾಯಸ್ವಾಮಿ

ರೈತ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ಉತ್ಪನ್ನಗಳನ್ನು ಸಂಸ್ಕರಣೆ, ಮೌಲ್ಯವರ್ಧನೆಗೆ ಒಳಪಡಿಸುವ ಮೂಲಕ ಉದ್ದಿಮೆಗಳನ್ನು ಮೇಲ್ದರ್ಜೆಗೇರಿಸಿ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಯತ್ನಿಸಬೇಕು ಎಂದು ಕೃಷಿ ಸಚಿವ ಎನ್‌. ಚಲುವರಾಯಸ್ವಾಮಿ ಹೇಳಿದರು.

Read Full Story

06:47 PM (IST) Oct 10

ಡಿಕೆಶಿ ಸಿಎಂ ಆಗಬೇಕು ಅನ್ನೋದು ನನ್ನ ಅಭಿಲಾಷೆ - ಶಾಸಕ ಇಕ್ಬಾಲ್‌ ಹುಸೇನ್ ಪುನರುಚ್ಚಾರ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗಬೇಕು ಎನ್ನುವುದು ನನ್ನ ಅಭಿಲಾಷೆಯಾಗಿದ್ದು, ಆಗುತ್ತಾರೆ ಎಂದು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ವಿಶ್ವಾಸ ವ್ಯಕ್ತಪಡಿಸಿದರು.

Read Full Story

06:22 PM (IST) Oct 10

ಬೆಂಗಳೂರಿನ ಟ್ರಾಫಿಕ್ ನಮ್ಮ ಯಶಸ್ಸಿನ ಪ್ರತಿಬಿಂಬ, ಸವಾಲಿನ ಸಂಕೇತ; ಸಚಿವ ಪ್ರಿಯಾಂಕ್ ಖರ್ಗೆ

ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರಕಾರ, ಬೆಂಗಳೂರಿನ ಟ್ರಾಫಿಕ್ ನಗರದ ಯಶಸ್ಸಿನ ಸಂಕೇತವಾದರೂ, ಅದು ಗಂಭೀರ ಸವಾಲುಗಳನ್ನು ಒಡ್ಡುತ್ತಿದೆ. 1.2 ಕೋಟಿಗೂ ಅಧಿಕ ವಾಹನಗಳಿಂದ ಮೂಲಸೌಕರ್ಯದ ಮೇಲೆ ಉಂಟಾಗಿರುವ ಒತ್ತಡವನ್ನು ನಿವಾರಿಸಲು ಸರ್ಕಾರವು ತಂತ್ರಜ್ಞಾನ ಆಧಾರಿತ ಪರಿಹಾರಗಳತ್ತ ಗಮನ ಹರಿಸಿದೆ ಎಂದರು.

Read Full Story

06:14 PM (IST) Oct 10

ಸಾಕು ನಾಯಿಗಳಿಗೂ ಊಟ ಹಾಕಲಾಗದ ಸ್ಥಿತಿ; 100 ಕೋಟಿ ನಷ್ಟ ಅನುಭವಿಸಿದ ಸ್ಟಾರ್ ಡೈರೆಕ್ಟರ್ ಇವರೇನಾ?

ಟಾಲಿವುಡ್ ಚಿತ್ರರಂಗದಲ್ಲಿ ರವಿತೇಜ, ಮಹೇಶ್ ಬಾಬುರಂತಹ ಹೀರೋಗಳಿಗೆ ಬ್ಲಾಕ್‌ಬಸ್ಟರ್ ಹಿಟ್ ಕೊಟ್ಟ, 100 ಕೋಟಿಗೂ ಹೆಚ್ಚು ನಷ್ಟ ಅನುಭವಿಸಿದ ಆ ಸ್ಟಾರ್ ಡೈರೆಕ್ಟರ್ ಯಾರು? ಅವರ ಜೀವನದಲ್ಲಿ ಅತ್ತ ಮೊದಲ ಘಟನೆ ಯಾವುದು? ಮತ್ತೆ ಕಮ್‌ಬ್ಯಾಕ್ ಮಾಡಲು ಏನು ಮಾಡಿದರು?

Read Full Story

06:11 PM (IST) Oct 10

ಕಾಂತಾರ ವಿವಾದ - ದೈವ ನರ್ತಕರ ಹೇಳಿಕೆ ದೈವದ ನುಡಿಯಲ್ಲ - ಸಂಶೋಧಕಿ ಡಾ. ಲಕ್ಷ್ಮಿ ಜಿ. ಪ್ರಸಾದ್ ಸ್ಪಷ್ಟನೆ

'ಕಾಂತಾರ' ಚಿತ್ರದ ಕುರಿತು ದೈವ ನರ್ತಕ ದಯಾನಂದ ಕತ್ತಲ್ ಸರ್ ನೀಡಿದ ಹೇಳಿಕೆಯು ವಿವಾದ ಸೃಷ್ಟಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಂಶೋಧಕಿ ಡಾ. ಲಕ್ಷ್ಮಿ ಜಿ. ಪ್ರಸಾದ್, ದೈವ ನರ್ತಕರ  ಹೇಳಿಕೆಗಳು ದೈವದ ನುಡಿಯಲ್ಲ, ಇಂತಹ ಹೇಳಿಕೆಗಳು ದೈವಾರಾಧನೆಯ ವಿಶ್ವಾಸಾರ್ಹತೆಗೆ ಧಕ್ಕೆ ತರಬಹುದೆಂದು ಎಂದಿದ್ದಾರೆ.

Read Full Story

05:53 PM (IST) Oct 10

ಆಗ ಐಶ್ವರ್ಯಾ ರೈಗೆ ನಡುಕ ಹುಟ್ಟಿಸಿದ್ದಳು.. ಈಗ ಹಿಮಾಲಯದಲ್ಲಿ ಸನ್ಯಾಸಿನಿ.. ಅಷ್ಟಕ್ಕೂ ಈ ನಟಿ ಯಾರು?

ಒಂದು ಕಾಲದಲ್ಲಿ ಬಾಲಿವುಡ್‌ನ ಸ್ಟಾರ್ ನಟಿ.. ಐಶ್ವರ್ಯಾ ರೈ ಜೊತೆ ಸ್ಪರ್ಧಿಸಿದ್ದಳು. ಆದರೆ ಇದ್ದಕ್ಕಿದ್ದಂತೆ ಸಿನಿಮಾಗಳಿಂದ ದೂರವಾದಳು. ಸನ್ಯಾಸಿಯಾಗಿ, ಯಾರೂ ಗುರುತಿಸಲಾಗದಷ್ಟು ಬದಲಾಗಿದ್ದಾಳೆ. ಹಾಗಾದರೆ ಆ ನಟಿ ಯಾರು? ಯಾವ ಸಿನಿಮಾಗಳಲ್ಲಿ ನಟಿಸಿದ್ದಾಳೆಂದು ತಿಳಿಯೋಣ ಬನ್ನಿ..

Read Full Story

05:39 PM (IST) Oct 10

ಟಿಕೆಟ್ ಇಲ್ದೇ ಪಯಣ - ಪ್ರಶ್ನಿಸಿದ TTE ವಿರುದ್ಧವೇ ಕಿರುಕುಳ ಆರೋಪ - ಸರ್ಕಾರಿ ಶಿಕ್ಷಕಿ ವಿರುದ್ಧ FIR

ticketless teacher:ಆಕೆ ಸರ್ಕಾರಿ ಶಿಕ್ಷಕಿ, ತಿಂಗಳಾಂತ್ಯಕ್ಕೆ ಕೈ ತುಂಬಾ ಸಂಬಳ ಬರ್ತಿತ್ತು. ಆದರೆ ರೈಲಿನ ಎಸಿ ಕೋಚಲ್ಲಿ ಟಿಕೆಟ್ ಇಲ್ದೇ ಪಯಣ ಮಾಡ್ತಿದ್ಲು, ಪ್ರಶ್ನಿಸಿದ್ದಕ್ಕೆ ಆಕೆ ಟಿಟಿಇ ವಿರುದ್ಧವೇ ಲೈಂಗಿ*ಕ ಕಿರುಕುಳದ ಆರೋಪ ಮಾಡಿ ಹೈಡ್ರಾಮಾ ಮಾಡಿದ್ಲು, ಆಕೆಯ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ.

Read Full Story

05:28 PM (IST) Oct 10

ಬಾಲಿವುಡ್ ಸೆಲೆಬ್ರಿಟಿಗಳ ಕಲರ್ ಬ್ಯಾಗಿನ ಟ್ರೆಂಡ್... ಬಣ್ಣ ಮತ್ತು ಡಿಸೈನ್ ಮೀರಿದ ಫ್ಯಾಷನ್!

ಗಾಢ ಬಣ್ಣಗಳ ಬೋಲ್ಡ್‌ ಲುಕ್‌ನ ಬ್ಯಾಗ್‌ ಟ್ರೆಂಡಿ ಆಗಿದೆ. ಇತ್ತೀಚೆಗೆ ಬಾಲಿವುಡ್‌ನ ಕ್ರೇಜಿ ನಿರ್ದೇಶಕ ಕರಣ್‌ ಜೋಹರ್‌ ಕಡು ಕೇಸರಿ ಬಣ್ಣದ ಬಾಯಿ ತೆರೆದ ಶಾರ್ಕ್‌ ಮೀನಿನ ವಿನ್ಯಾಸದ ಬ್ಯಾಗ್‌ ಸಖತ್‌ ಟ್ರೆಂಡಿಂಗ್‌ ಆಯ್ತು.

Read Full Story

05:14 PM (IST) Oct 10

ಯಶ್ ರಾಮಾಯಣ ಹಾಡು ಮುಗಿದಾಗ ಕಣ್ಣೀರು ಬಂತು - ಚಿತ್ರ ಸಾಹಿತಿ ಡಾ ಕುಮಾರ್‌ ವಿಶ್ವಾಸ್‌

ರಾಮ ಅಯೋಧ್ಯೆ ಬಿಟ್ಟು ಕಾಡಿಗೆ ತೆರಳುವ ಸನ್ನಿವೇಶದಲ್ಲಿ ಬರುವ ಹಾಡು. ಈ ಹಾಡಿನ ರೆಕಾರ್ಡಿಂಗ್‌ಗೆ ಏಳು ದಿನಗಳ ಸುದೀರ್ಘ ಅವಧಿ ಹಿಡಿಯಿತು. ನಮ್ಮ ಮನಸ್ಸು ಅದೆಷ್ಟು ಭಾವುಕವಾಗಿತ್ತೆಂದರೆ ನಮಗೆ ಕಣ್ಣೀರನ್ನು ತಡೆ ಹಿಡಿಯಲಾಗುತ್ತಿರಲಿಲ್ಲ.

Read Full Story

05:13 PM (IST) Oct 10

BBK 12 - ಮಂಜು ಭಾಷಿಣಿ, ರಾಶಿಕಾ ಮೇಲೆ ಸಮಯ ಸಾಧಿಸಿ ಸೇಡು ತೀರಿಸಿಕೊಂಡ ರಾಜಮಾತೆ ಅಶ್ವಿನಿ ಗೌಡ!

ಬಿಗ್ ಬಾಸ್ ಮನೆಯಲ್ಲಿ ರಾಜಮಾತೆಯಾಗಿರುವ ಅಶ್ವಿನಿ ಗೌಡ, ತಮಗೆ ನೀಡಿದ ವಿಶೇಷ ಅಧಿಕಾರವನ್ನು ಬಳಸಿ ತಾವು ಹೇಳಿದಂತೆ ಕೇಳದ ಮಂಜು ಭಾಷಿಣಿ ಮತ್ತು ರಾಶಿಕಾ ಜೋಡಿಯನ್ನು ಕಳಪೆ ಪ್ರದರ್ಶನವೆಂದು ಜೈಲಿಗೆ ಕಳುಹಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಣ್ಣೀರು ಹಾಕಿಸಿದವರ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ.

Read Full Story

04:41 PM (IST) Oct 10

ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ - ಸಚಿವ ದಿನೇಶ್ ಗುಂಡೂರಾವ್

ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಾಧ್ಯಮದವರೇ ಹೇಳುತ್ತಿದ್ದಾರೆ ಬಿಟ್ರೆ ನಮಗೇನು ಅದರ ಬಗ್ಗೆ ಮಾಹಿತಿ ಇಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Read Full Story

03:52 PM (IST) Oct 10

ಮೂರು ಮಕ್ಕಳ ಆಂಟಿ ಹಿಂದೆ ಬಿದ್ದು, ಪೆಟ್ರೋಲ್‌ ಸುರಿದು ಸಾವು ಕಂಡ - ಯಲಹಂಕ ಲಾಡ್ಜ್‌ನಲ್ಲಿ ಬಯಲಾದ ಸತ್ಯ!

Bengaluru Man Dies by Fire Attempting Suicide ಬೆಂಗಳೂರಿನ ಯಲಹಂಕ ನ್ಯೂ ಟೌನ್‌ ಲಾಡ್ಜ್‌ನಲ್ಲಿ ನಡೆದ ಬೆಂಕಿ ಅವಘಡದಲ್ಲಿ ರಮೇಶ್ ಮತ್ತು ಕಾವೇರಿ ಎಂಬಿಬ್ಬರು ಮೃತಪಟ್ಟಿದ್ದಾರೆ. ಅನೈತಿಕ ಸಂಬಂಧದಲ್ಲಿದ್ದ ಇವರಿಬ್ಬರ ನಡುವೆ ಮದುವೆ ವಿಚಾರಕ್ಕೆ ಜಗಳ ನಡೆದಿದೆ.

Read Full Story

03:50 PM (IST) Oct 10

ಹಿಂದೂಗಳ ಮತ ಒಡೆಯೋದಿಲ್ಲ, ಈಗಲೂ ನನ್ನ ಮೊದಲ ಆಯ್ಕೆ ಬಿಜೆಪಿ; ಬಸನಗೌಡ ಪಾಟೀಲ್ ಯತ್ನಾಳ್!

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಮೊದಲ ಆಯ್ಕೆ ಬಿಜೆಪಿ ಎಂದು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಹೈಕಮಾಂಡ್ ತಮ್ಮನ್ನು ತಿರಸ್ಕರಿಸಿದರೆ ಮುಂದಿನ ಆಯ್ಕೆಗಳು ಮುಕ್ತವಾಗಿವೆ ಎಂದಿರುವ ಅವರು, ಹಿಂದುತ್ವದ ಮತಗಳನ್ನು ತಾವೆಂದೂ ಒಡೆಯುವುದಿಲ್ಲ ಎಂದು ದೃಢವಾಗಿ ಹೇಳಿದ್ದಾರೆ. 

Read Full Story

03:19 PM (IST) Oct 10

ಹಲವು ಕೊಲೆ ಪ್ರಕರಣ, ಮಂಗಳೂರು ಕೋರ್ಟ್‌ಗೆ ಶರಣಾದ ಹಿಂದೂ ಮುಖಂಡ ಭರತ್ ಕುಮ್ಡೇಲು!

ಅಶ್ರಫ್ ಕಲಾಯಿ ಮತ್ತು ಅಬ್ದುಲ್ ರಹಿಮಾನ್ ಕೊಲೆ ಪ್ರಕರಣಗಳ ಪ್ರಮುಖ ಆರೋಪಿ, ಹಿಂದೂ ಸಂಘಟನೆ ಮುಖಂಡ ಭರತ್ ಕುಮ್ಡೇಲು ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಕೋರ್ಟ್ ವಾರೆಂಟ್ ಮತ್ತು ಕೋಕಾ ಕಾಯ್ದೆಯಡಿ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹಲವು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ.

Read Full Story

03:01 PM (IST) Oct 10

ಅಪರಿಚಿತ ಯುವತಿಯ ಪ್ಲೈಯಿಂಗ್ ಕಿಸ್‌ಗೆ ಪುರುಷರ ರಿಯಾಕ್ಷನ್ ಹೇಗಿತ್ತು - ವೀಡಿಯೋ ಭಾರಿ ವೈರಲ್

Flying Kiss to Strangers: ಕೈಯಲ್ಲಿ ಮುತ್ತಿಟ್ಟು ಗಾಳಿಯಲ್ಲಿ ಹಾರಿ ಬಿಟ್ಟಂತೆ ದೂರದಲ್ಲಿರುವವರಿಗೆ ಕೊಡುವ ಕಿಸ್ ಈ ಪ್ಲೈಯಿಂಗ್ ಕಿಸ್. ಆದರೆ ಅಪರಿಚಿತರಿಗೆ ಈ ಪ್ಲೈಯಿಂಗ್ ಕಿಸ್ ನೀಡಿದ್ರೆ ಅವರ ರಿಯಾಕ್ಷನ್ ಹೇಗಿರುತ್ತದೆ. ಇಂತಹದೊಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story

01:59 PM (IST) Oct 10

'ಯಾಕೆ ಇಷ್ಟೊಂದು ಹಣ ಖರ್ಚು ಮಾಡಿ ಮದುವೆ ಆಗ್ಬೇಕು..' ಎಂದ ಈ ಜೋಡಿಹಕ್ಕಿ ಯಾರು?

Jisma Vimal marriage details: ಸೋಶಿಯಲ್ ಮೀಡಿಯಾ ತಾರೆಯರಾದ ಜಿಸ್ಮಾ ಮತ್ತು ವಿಮಲ್ ತಮ್ಮ ಪ್ರೀತಿ ಹಾಗೂ ಎರಡು ವರ್ಷಗಳ ಹಿಂದೆ ನಡೆದ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

Read Full Story

01:39 PM (IST) Oct 10

ಬಿಜೆಪಿ ನಾಯಕರು ಯಾವ ಆಧಾರದಲ್ಲಿ ಈ ಸಮೀಕ್ಷೆ ವಿರೋಧಿಸುತ್ತಾರೆ - ಮಧು ಬಂಗಾರಪ್ಪ

ರಾಜ್ಯದ ಸಾಮಾಜಿಕ, ಆರ್ಥಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರ ನಡೆಯನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಂವಿಧಾನ ವಿರೋಧಿ ಎಂದು ತೀವ್ರವಾಗಿ ಖಂಡಿಸಿದ್ದಾರೆ. ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದವರು ಯಾವ ಆಧಾರದಲ್ಲಿ ಸಮೀಕ್ಷೆ ವಿರೋಧಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು

Read Full Story

01:31 PM (IST) Oct 10

ಮೈಸೂರಿನಲ್ಲಿ ಕಾನೂನು ಸುವ್ಯವಸ್ಥೆ ಕುಸಿತ, ಸರ್ಕಾರದ ವಿರುದ್ಧ ಕಿಡಿಕಾರಿದ ಸಂಸದ ಯದುವೀರ್ ಒಡೆಯರ್

ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಕೊಲೆ, ಅತ್ಯಾ*ಚಾರದಂತಹ ಗಂಭೀರ ಅಪರಾಧಗಳ ಹಿನ್ನೆಲೆಯಲ್ಲಿ ಸಂಸದ ಯದುವೀರ್ ಒಡೆಯರ್ ಅವರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ಅವರು ಆರೋಪಿಸಿದ್ದಾರೆ.

Read Full Story

01:18 PM (IST) Oct 10

ಮುಡಾ ಅಕ್ರಮ - ಕಾಂಗ್ರೆಸ್ ಮುಖಂಡನ 31 ಸೈಟ್‌ ಮುಟ್ಟುಗೋಲು, ಮನೆ ಕೆಲಸದವನ ಹೆಸರಲ್ಲೂ ಕೋಟಿ ಕೋಟಿ ಆಸ್ತಿ!

MUDA Scam ED Seizes 31 Sites of Congress Leader Papanna ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ತೀವ್ರಗೊಂಡಿದ್ದು, ಕಾಂಗ್ರೆಸ್ ಮುಖಂಡ ಎ. ಪಾಪಣ್ಣ ಅವರಿಗೆ ಸೇರಿದ 31 ಸೈಟ್‌ಗಳೂ ಸೇರಿದಂತೆ 60 ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 

Read Full Story

12:54 PM (IST) Oct 10

ಹಿಂದೂ ಬಾಲಕಿಗೆ ಪುಸಲಾಯಿಸಿ ಲೈಂಗಿಕ ದೌರ್ಜನ್ಯ; ರಮೇಶ್ ಹೆಸರಿನ ಸೈಯದ್ ಪೊಲೀಸರ ವಶಕ್ಕೆ

Hubballi Love Jihad case: ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕನೊಬ್ಬ 'ರಮೇಶ್' ಎಂದು ಸುಳ್ಳು ಹೆಸರು ಹೇಳಿ ಹಿಂದೂ ಬಾಲಕಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನ. ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದು, ಇದೊಂದು ಲವ್ ಜಿಹಾದ್ ಪ್ರಕರಣ ಎಂದು ಹಿಂದೂಪರ ಸಂಘಟನೆ ಆರೋಪಿಸಿವೆ.

Read Full Story

12:53 PM (IST) Oct 10

Breaking - ಸ್ಯಾಂಡಲ್‌ವುಡ್‌ ಹಿರಿಯ ನಟ ಉಮೇಶ್ ಸ್ಥಿತಿ ಗಂಭೀರ!

Veteran Kannada Actor MS Umesh Critical 'ಅಪಾರ್ಥ ಮಾಡ್ಕೋಬೇಡಿ' ಎಂಬ ಸಂಭಾಷಣೆಯಿಂದ ಖ್ಯಾತರಾದ ಹಿರಿಯ ಹಾಸ್ಯ ನಟ ಎಂ.ಎಸ್. ಉಮೇಶ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲಿ ಕೆಳಗೆ ಬಿದ್ದು ಪ್ರಜ್ಞೆ ತಪ್ಪಿದ್ದಾರೆ.

Read Full Story

12:27 PM (IST) Oct 10

'ಡೈವೋರ್ಸ್‌ ಕೊಡ್ತೀನಿ..' ಗಂಡನ ಪದೇ ಪದೇ ಬೆದರಿಕೆಗೆ ಬೇಸತ್ತು ಇಬ್ಬರು ಪುಟ್ಟ ಮಕ್ಕಳೊಂದಿಗೆ ತಾಯಿ ಆತ್ಮಹ*!

Bengaluru Mother Kills 2 Kids ಬೆಂಗಳೂರಿನ ಬಾಗಲಗುಂಟೆಯಲ್ಲಿ ತಾಯಿಯೊಬ್ಬಳು ತನ್ನಿಬ್ಬರು ಪುಟ್ಟ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗಂಡನ ವಿಚ್ಛೇದನದ ಬೆದರಿಕೆ ಹಾಗೂ ಕೌಟುಂಬಿಕ ಕಲಹದಿಂದ ನೊಂದು ಈ ದುರಂತ ನಿರ್ಧಾರ ಕೈಗೊಂಡಿದ್ದಾಳೆ ಎಂದು ಶಂಕಿಸಲಾಗಿದೆ.

Read Full Story

12:23 PM (IST) Oct 10

ಶೂದ್ರ ಶ್ರೀನಿವಾಸ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2024ನೇ ಸಾಲಿನ ‘ಗೌರವ ಪ್ರಶಸ್ತಿ’ ಮತ್ತು ‘ಸಾಹಿತ್ಯಶ್ರೀ’ ಪ್ರಶಸ್ತಿ ಪ್ರಕಟಿಸಿದೆ. ಶೂದ್ರ ಶ್ರೀನಿವಾಸ್‌, ಪ್ರತಿಭಾ ನಂದಕುಮಾರ್‌ ಸೇರಿ ಐವರು ಗೌರವ ಪ್ರಶಸ್ತಿಗೆ ಹಾಗೂ ಡಾ.ಸಬಿತಾ ಬನ್ನಾಡಿ, ಡಾ.ಕೆ.ವೈ.ನಾರಾಯಣಸ್ವಾಮಿ ಸೇರಿ ಹತ್ತು ಮಂದಿ ಸಾಹಿತ್ಯಶ್ರೀ ಪ್ರಶಸ್ತಿಗೆ ಆಯ್ಕೆ.

Read Full Story

More Trending News