ticketless teacher:ಆಕೆ ಸರ್ಕಾರಿ ಶಿಕ್ಷಕಿ, ತಿಂಗಳಾಂತ್ಯಕ್ಕೆ ಕೈ ತುಂಬಾ ಸಂಬಳ ಬರ್ತಿತ್ತು. ಆದರೆ ರೈಲಿನ ಎಸಿ ಕೋಚಲ್ಲಿ ಟಿಕೆಟ್ ಇಲ್ದೇ ಪಯಣ ಮಾಡ್ತಿದ್ಲು, ಪ್ರಶ್ನಿಸಿದ್ದಕ್ಕೆ ಆಕೆ ಟಿಟಿಇ ವಿರುದ್ಧವೇ ಲೈಂಗಿ*ಕ ಕಿರುಕುಳದ ಆರೋಪ ಮಾಡಿ ಹೈಡ್ರಾಮಾ ಮಾಡಿದ್ಲು, ಆಕೆಯ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ.

ಕೈತುಂಬಾ ಸಂಬಳ ಪಡೆಯುವ ಸರ್ಕಾರಿ ಶಾಲೆ ಶಿಕ್ಷಕಿಯ ಹೈಡ್ರಾಮಾ: 

ಸರ್ಕಾರಿ ಉದ್ಯೋಗಿಯಾಗಿದ್ದು, ರೈಲಿನ ಎಸಿ ಕೋಚ್‌ನಲ್ಲಿ ಟಿಕೆಟ್ ಇಲ್ಲದೇ ಪಯಣ ಮಾಡ್ತಿದ್ದಿದ್ದಲ್ಲದೇ ಟಿಕೆಟ್ ಕೇಳಿದ ಟಿಕೆಟ್ ಪರೀಕ್ಷಕರ ವಿರುದ್ಧವೇ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಮಹಿಳಾ ಶಿಕ್ಷಕಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರಾಂಚಿ-ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲು ಸಂಖ್ಯೆ -18629ರಲ್ಲಿ ಈ ಘಟನೆ ನಡೆದಿತ್ತು. ಟಿಕೆಟ್ ಕೇಳಿದ ರೈಲ್ವೆ ಪ್ರಯಾಣ ಟಿಕೆಟ್ ಪರೀಕ್ಷಕರ ವಿರುದ್ಧ ಲೈಂ*ಗಿಕ ಕಿರುಕುಳದ ಆರೋಪ ಮಾಡಿ ರೈಲಿನಲ್ಲಿ ಜಗಳ ತೆಗೆದ ಈಕೆಯ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈಗ ಘಟನೆಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ ಕಾಯ್ದೆಯ ಸೆಕ್ಷನ್ 145, 146 ಹಾಗೂ 247ರ ಅಡಿ ಆಕೆಯ ವಿರುದದ್ಧ ಎಫ್‌ಐಆರ್ ದಾಖಲಿಸಲಾಗಿದೆ ಜೊತೆಗೆ ಸರಿಯಾದ ಟಿಕೆಟ್ ಇಲ್ಲದೇ ಎಸಿ ಕೋಚ್‌ನಲ್ಲಿ ಪಯಣಿಸಿದ್ದಕ್ಕಾಗಿ ಈಕೆಗೆ 990 ರೂಪಾಯಿ ದಂಡ ವಿಧಿಸಲಾಗಿದೆ.

ರೈಲಲ್ಲಿ ಟಿಕೆಟ್ ಇಲ್ಲದೇ ಪಯಣ: ಟಿಕೆಟ್ ಕೇಳಿದ ಟಿಟಿಇ ವಿರುದ್ಧ ಲೈಂಗಿಕ ಕಿರುಕುಳದ ಆರೋಪ

ಪ್ರಕರಣದಲ್ಲಿ ಲೈಂಗಿ*ಕ ಕಿರುಕುಳದ ಆರೋಪ ಮಾಡಿದ ಮಹಿಳೆ ಪಾಟ್ನಾದಲ್ಲಿ ಸರ್ಕಾರಿ ಶಿಕ್ಷಕಿಯಾಗಿದ್ದಾಳೆ. ಈಕೆ ಟಿಕೆಟ್ ಕೇಳಿದ ಟಿಟಿಇ ವಿರುದ್ಧವೇ ಲೈಂ*ಗಿಕ ಕಿರುಕುಳದ ಆರೋಪ ಹೊರಿಸಿ ವೀಡಿಯೋ ಮಾಡುವ ಮೂಲಕ ಅವರ ಕೆಲಸಕ್ಕೆ ಅಡ್ಡಿ ಮಾಡಿದ್ದಲ್ಲದೇ ಮಾನಹಾನಿಗೆ ಯತ್ನಿಸಿದ್ದಳು. ತಾನು ಮಹಿಳೆ ಎಂಬ ಕಾರಣಕ್ಕೆ ನನಗೆ ಲೈಂ*ಗಿಕ ಕಿರುಕುಳ ನೀಡಲಾಗಿದೆ ಎಂದು ಆಕೆ ರೈಲು ನಿಲ್ದಾಣದಲ್ಲಿ ಹೈಡ್ರಾಮಾ ಮಾಡಿದ್ದಳು. ಆದರೆ ಈಗ ಮಾಡಿದ ಕರ್ಮಕ್ಕೆ ತಕ್ಕ ಫಲ ಎಂಬಂತೆ ತಾನೇ ಹೆಣೆದ ಬಲೆಯಲ್ಲಿ ಸಿಲುಕಿ ಕೋರ್ಟ್‌ಗೆ ಅಲೆಯಬೇಕಾದ ಸ್ಥಿತಿ ಎದುರಾಗಿದೆ.

ರಾಂಚಿ-ಗೋರಖ್‌ಪುರ ಎಕ್ಸ್‌ಪ್ರೆಸ್ ರೈಲಲ್ಲಿ ಘಟನೆ: ವೀಡಿಯೋ ವೈರಲ್ ಆಗ್ತಿದ್ದಂಗೆ ಶಿಕ್ಷಕಿ ವಿರುದ್ಧ ಎಫ್‌ಐಆರ್

ಈ ವಾರದ ಆರಂಭದಲ್ಲಿ, ಶಿಕ್ಷಕಿಯೊಬ್ಬರು ರಾಂಚಿ-ಗೋರಖ್‌ಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 18629) ರೈಲಿನ ಎಸಿ ಕೋಚ್‌ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿರುವುದನ್ನು ತೋರಿಸುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿತು. ಈಕೆಗೆ ಟಿಟಿಇ ಪದೇ ಪದೇ ಟಿಕೆಟ್ ತೋರಿಸುವಂತೆ ಅಥವಾ ಮುಂದಿನ ನಿಲ್ದಾಣದಲ್ಲಿ ಇಳಿದು ಹೋಗುವಂತೆ ಕೇಳಿದಾಗ ಆಕೆ ಆ ಅಧಿಕಾರಿಯ ಮೇಲೆಯೇ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದರು. ನಂತರ ಇಬ್ಬರ ಮಧ್ಯೆ ತೀವ್ರ ವಾಗ್ವಾದ ನಡೆದಿತ್ತು.

ಟಿಕೆಟ್‌ ಕೇಳಿದ ಟಿಟಿಇಗೆ ಕಿರುಕುಳ ನೀಡಿದ ಕಿಲಾಡಿ ಶಿಕ್ಷಕಿ

ಇಬ್ಬರ ನಡುವಿನ ವಾಗ್ವಾದವನ್ನು ಟಿಟಿಇ ಕೂಡ ರೆಕಾರ್ಡ್ ಮಾಡಿಕೊಂಡಿದ್ದು, ರೈಲ್ವೆ ಕಂಟ್ರೋಲ್ ರೂಮ್‌ಗೆ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದರು. ನಂತರ ರೈಲು ದಿಯೋರಿಯಾವನ್ನು ತಲುಪಿದಾಗ ರೈಲ್ವೆ ರಕ್ಷಣಾ ಪಡೆ ಪೊಲೀಸರು ರೈಲನ್ನೇರಿದ್ದು, ಆಕೆಯನ್ನು ಟಿಕೆಟ್ ಬಗ್ಗೆ ಪ್ರಶ್ನಿಸಿದ್ದಾರೆ. ಈ ವಿಚಾರಣೆ ವೇಳೆ ಮಹಿಳೆ ತನ್ನ ತಂದೆ ಹಾಗೂ ಇತರ ಸಂಬಂಧಿಕರನ್ನು ಅಲ್ಲಿಗೆ ಕರೆಸಿದ್ದು, ಅವರು ಅಲ್ಲಿಗೆ ತಲುಪಿ ರೈಲು ನಿಲ್ದಾಣದಲ್ಲಿ ಹೈಡ್ರಾಮಾವನ್ನೇ ಸೃಷ್ಟಿಸಿದ್ದಾರೆ ಅಲ್ಲದೇ ಸ್ವತಃ ಟಿಟಿಇಗೆ ಬೆದರಿಕೆಯೊಡ್ಡಿದ್ದಾರೆ.

ನಂತರ ರೈಲ್ವೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು ಘಟನೆ ಅಲ್ಲಿಗೆ ಮುಗಿದಿರಲಿಲ್ಲ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮಹಿಳೆಯ ವಿರುದ್ಧ ಕಾನೂನು ಕ್ರಮಕ್ಕೆ ರೈಲ್ವೆ ಅಧಿಕಾರಿಗಳು ಮುಂದಾಗಿದ್ದು, ಈಗ ಎಫ್‌ಐಆರ್ ದಾಖಲಾಗಿದೆ. ಹಲವು ಮಕ್ಕಳಿಗೆ ದಾರಿದೀಪವಾಗಿ ಮಕ್ಕಳನ್ನು ಸರಿದಾರಿಗೆ ತರಬೇಕಾದ ಶಿಕ್ಷಕಿಯೇ ಈಗ ಮಾಡಬಾರದ ಕೆಲಸ ಮಾಡಿ ಶಿಕ್ಷೆಗೆ ಗುರಿಯಾಗಿರುವುದು ವಿಪರ್ಯಾಸವೇ ಸರಿ…

ಇದನ್ನೂ ಓದಿ: ಎಥಿಕ್ಸ್ ಬಗ್ಗೆ ಪುಸ್ತಕ ಬರೆದ ಕನ್ನಡಿಗ ಐಎಎಸ್ ಅಧಿಕಾರಿ ನಾಗಾರ್ಜುನ್ ಗೌಡ ವಿರುದ್ಧವೇ ಭ್ರಷ್ಟಾಚಾರದ ಆರೋಪ
ಇದನ್ನೂ ಓದಿ: ಅಪರಿಚಿತ ಯುವತಿಯ ಪ್ಲೈಯಿಂಗ್ ಕಿಸ್‌ಗೆ ಪುರುಷರ ರಿಯಾಕ್ಷನ್ ಹೇಗಿತ್ತು: ವೀಡಿಯೋ ಭಾರಿ ವೈರಲ್