Jisma Vimal marriage details: ಸೋಶಿಯಲ್ ಮೀಡಿಯಾ ತಾರೆಯರಾದ ಜಿಸ್ಮಾ ಮತ್ತು ವಿಮಲ್ ತಮ್ಮ ಪ್ರೀತಿ ಹಾಗೂ ಎರಡು ವರ್ಷಗಳ ಹಿಂದೆ ನಡೆದ ಮದುವೆಯ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರಿಗೆ ಜಿಸ್ಮಾ ಮತ್ತು ವಿಮಲ್ ಚಿರಪರಿಚಿತ ಜೋಡಿ. ನಿರೂಪಕಿಯಾಗಿ ಬಂದ ಜಿಸ್ಮಾ, ಕಿರುಚಿತ್ರಗಳ ಮೂಲಕ ಗಮನ ಸೆಳೆದರು. ನಂತರ ವಿಮಲ್ ಜೊತೆಗಿನ ವಿಡಿಯೋಗಳು ಕೂಡ ಹೆಚ್ಚು ಜನಪ್ರಿಯವಾದವು. ಇಬ್ಬರೂ ಬರೆದು, ನಿರ್ದೇಶಿಸಿ, ನಟಿಸುವ ವೆಬ್ ಸೀರೀಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆಯುತ್ತವೆ. ಜಿಸ್ಮಾ ಈಗಾಗಲೇ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. ಜಿಸ್ಮಾ ಆ್ಯಂಡ್ ವಿಮಲ್ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಕೂಡ ಹೊಂದಿದ್ದಾರೆ. ಬಹಳ ದಿನಗಳ ಪ್ರೀತಿಗೆ ಎರಡು ವರ್ಷಗಳ ಹಿಂದೆ ಮದುವೆಯ ಮುದ್ರೆ ಒತ್ತಿದ್ದರು. ಇಬ್ಬರ ಆಪ್ತ ಸಂಬಂಧಿಕರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದ ಸರಳ ಸಮಾರಂಭವಾಗಿತ್ತು ಆ ಮದುವೆ. ಇದೀಗ ತಮ್ಮ ಪ್ರೀತಿ ಮತ್ತು ಮದುವೆಯ ಬಗ್ಗೆ ಮನಬಿಚ್ಚಿ ಮಾತನಾಡಿದ ಈ ಜೋಡಿಯ ಸಂದರ್ಶನ ಗಮನ ಸೆಳೆಯುತ್ತಿದೆ.

‘’ಮದುವೆ ಅನ್ನೋದು ತುಂಬಾನೇ ಪರ್ಸನಲ್ ಆದ ಒಂದು ಕ್ಷಣ ಅಲ್ವಾ... ಅಷ್ಟೇ ಅಲ್ಲ, ನಮ್ಮದು ಅಂತರ್ಜಾತಿ ವಿವಾಹ. ಬೇರೆ ಬೇರೆ ಕಡೆ ಇರುವ ಎರಡು ಕುಟುಂಬಗಳು ಒಂದಾಗುವ ಸಮಾರಂಭವಾಗಿತ್ತು. ತುಂಬಾ ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರನ್ನು ಮಾತ್ರ ಸೇರಿಸಿ ಮಾಡಿದ ಕಾರ್ಯಕ್ರಮ. ಹಾಗಾಗಿ ಮೀಡಿಯಾದವರನ್ನು ಸೇರಿಸಿಕೊಂಡರೆ ಮನೆಯವರಿಗೆ ಮುಜುಗರ ಆಗಬಹುದು. ಅವರು ನಮ್ಮ ಹಾಗೆ ಅಲ್ಲವಲ್ಲ. ಕುಟುಂಬದವರು ಮತ್ತು ಸ್ನೇಹಿತರು ಎಂಜಾಯ್ ಮಾಡಬೇಕಾದ ಕ್ಷಣಗಳು, ಅವರು ಪರಸ್ಪರ ಬೆರೆಯಲು ಬೇಕಾದ ಸಮಯ ಮೀಡಿಯಾ ಬಂದರೆ ಹಾಳಾಗಬಹುದು ಅಂತನೂ ಅನಿಸಿತು.

ಇದನ್ನೂ ಓದಿ: ಆಫೀಸ್ ಹ್ಯಾಂಗ್ ಓವರ್‌ನಲ್ಲೇ ಮುದುವೆ, ವಿವಾಹ ವೇದಿಕೆಯಲ್ಲಿ ಪಿಪಿಟಿ ಪ್ರೆಸೆಂಟ್ ಮಾಡಿದ ವರ

ಜನ ಸೇರಿದಷ್ಟು ದುಡ್ಡು ಕೂಡ ಬೇಕಲ್ಲವೇ.. ಯಾಕೆ ಇಷ್ಟೊಂದು ಹಣ ಖರ್ಚು ಮಾಡಿ ಮದುವೆ ಆಗಬೇಕು ಅಂತನೂ ಅನಿಸಿತು. ಅದರಿಂದ ಏನೂ ಪ್ರಯೋಜನ ಇಲ್ಲವಲ್ಲ. ನಾವಿಬ್ಬರೂ ಮದುವೆಯಾದಾಗ ನಮ್ಮನ್ನು ಮನಸ್ಸಿನಿಂದ ಹಾರೈಸುವವರು ಮಾತ್ರ ಇದ್ದರೆ ಸಾಕು ಅಂತ ಅಂದುಕೊಂಡಿದ್ದೆವು. ಮದುವೆಯಾದ ವರ್ಷ ಯೂಟ್ಯೂಬ್‌ನಿಂದ ಬಂದ ಆದಾಯದಿಂದ ನಮಗೆ ಸ್ವಲ್ಪ ಉಳಿತಾಯ ಆಗಿತ್ತು. ನಮ್ಮ ಕುಟುಂಬದ ಬಳಿ ಮದುವೆಗೆ ಬೇಕಾದಷ್ಟು ಉಳಿತಾಯ ಇರಲಿಲ್ಲ. ಇದು ನಮ್ಮಿಷ್ಟದ ಕಾರ್ಯಕ್ರಮ ಆಗಿದ್ದರಿಂದ ಅಂದಿನ ಖರ್ಚನ್ನು ನಾವೇ ವಹಿಸಿಕೊಂಡೆವು'', ಎಂದು ಮೈಲ್‌ಸ್ಟೋನ್ ಮೇಕರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಜಿಸ್ಮಾ ಮತ್ತು ವಿಮಲ್ ಹೇಳಿದರು.