ಹಾಸನಾಂಬ ಜಾತ್ರಾ ಮಹೋತ್ಸವ 2025ರ ಪ್ರಯುಕ್ತ, KSRTCಯು ಅಕ್ಟೋಬರ್ 10 ರಿಂದ 22ರವರೆಗೆ ವಿಶೇಷ ಪ್ರವಾಸಿ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಹಾಸನ, ಬೆಂಗಳೂರು, ಮತ್ತು ಮೈಸೂರಿನಿಂದ ಹೊರಡುವ ಈ ಪ್ರವಾಸಗಳಲ್ಲಿ 1000 ರೂ. ವಿಶೇಷ ದರ್ಶನ ಟಿಕೆಟ್ ಸೌಲಭ್ಯವೂ ಸೇರಿದೆ.
ಹಾಸನ (ಅ.10): ಹಾಸನಾಂಬ ಜಾತ್ರಾ ಮಹೋತ್ಸವ-2025 ರ ಪ್ರಯುಕ್ತ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ಹಾಸನಾಂಬ ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಮತ್ತು ಪ್ರವಾಸಿಗರಿಗಾಗಿ ವಿಶೇಷ 10 ಪ್ರವಾಸ ಮಾರ್ಗಗಳ ಟೂರ್ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಅಕ್ಟೋಬರ್ 10, 2025 ರಿಂದ ಅಕ್ಟೋಬರ್ 22, 2025 ರವರೆಗೆ ಈ ಟೂರ್ ಪ್ಯಾಕೇಜ್‌ಗಳು ಲಭ್ಯವಿರಲಿವೆ.
ಹಾಸನ ಜಿಲ್ಲೆಯ ಪ್ರವಾಸಿ ಸ್ಥಳಗಳ ವೀಕ್ಷಣೆಗಾಗಿ ಕೆಎಸ್‌ಆರ್‌ಟಿಸಿಯು (8 ಕರ್ನಾಟಕ ಸಾರಿಗೆ, 2 ಅಶ್ವಮೇಧ ಮತ್ತು 2 ವೋಲ್ವೋ) ಒಟ್ಟು 12 ವಾಹನಗಳನ್ನು ಈ ಪ್ರವಾಸಕ್ಕೆ ಕಾರ್ಯಾಚರಣೆ ಮಾಡಲಿದೆ. ಪ್ಯಾಕೇಜ್ ಟೂರ್‌ಗಳು ಹಾಸನ ನಗರ ಬಸ್ ನಿಲ್ದಾಣ, ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಿಂದ ಪ್ರಾರಂಭವಾಗುತ್ತವೆ. ಎಲ್ಲಾ ಟೂರ್ ಪ್ಯಾಕೇಜ್‌ಗಳಲ್ಲಿ 1000 ರೂಪಾಯಿಯ ಹಾಸನಾಂಬ ದೇವಿ ವಿಶೇಷ ಟಿಕೆಟ್ ದರ್ಶನ ಸೌಲಭ್ಯವನ್ನು ಒಳಗೊಂಡಿರುತ್ತದೆ.
ಹಾಸನ-ಆಲೂರು ಮಾರ್ಗ (ಕರ್ನಾಟಕ ಸಾರಿಗೆ):
ಪ್ರೇಕ್ಷಣೀಯ ಸ್ಥಳಗಳು: ಶ್ರೀ ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮ್ಮನ ಹೊಸಕೋಟೆ ದೇವಾಲಯ.
ನಿರ್ಗಮನ: ಬೆಳಗ್ಗೆ 8.00 ಗಂಟೆಗೆ, ಹಾಸನ ನಗರ ಬಸ್ ನಿಲ್ದಾಣದಿಂದ.
ಪ್ರಯಾಣ ದರ (ಒಟ್ಟು): ವಯಸ್ಕರಿಗೆ 1400 ರೂಪಾಯಿ (ದರ್ಶನ ಸೇರಿ) ಮತ್ತು ಮಕ್ಕಳಿಗೆ 1300 ರೂಪಾಯಿ (ದರ್ಶನ ಸೇರಿ).
ಬೆಂಗಳೂರು ಮಾರ್ಗ (ವೋಲ್ವೋ / ಅಶ್ವಮೇಧ):
ಪ್ರೇಕ್ಷಣೀಯ ಸ್ಥಳಗಳು: ಶ್ರೀ ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಕೆಂಚಮ್ಮನ ಹೊಸಕೋಟೆ.
ನಿರ್ಗಮನ: ಬೆಳಗ್ಗೆ 6.00 ಗಂಟೆಗೆ, ಕೆಂಪೇಗೌಡ ಬಸ್ ನಿಲ್ದಾಣ, ಬೆಂಗಳೂರು.
ದರಗಳು (ದರ್ಶನ ಸೇರಿ):
ವೋಲ್ವೋ (2-ಎ): ವಯಸ್ಕರಿಗೆ 2500 ರೂಪಾಯಿ, ಮಕ್ಕಳಿಗೆ 2200 ರೂಪಾಯಿ.
ಅಶ್ವಮೇಧ (2-ಬಿ): ವಯಸ್ಕರಿಗೆ 2000 ರೂಪಾಯಿ, ಮಕ್ಕಳಿಗೆ 1900 ರೂಪಾಯಿ.
ಮೈಸೂರು ಮಾರ್ಗ (ವೋಲ್ವೋ / ಅಶ್ವಮೇಧ):
ಪ್ರೇಕ್ಷಣೀಯ ಸ್ಥಳಗಳು: ಶ್ರೀ ಹಾಸನಾಂಬ ಹಾಗೂ ಸಿದ್ದೇಶ್ವರ ದೇವಾಲಯ, ದೇವಿಗೆರೆ ಕಲ್ಯಾಣಿ, ಶ್ರೀ ನಾಗೇಶ್ವರ ಮತ್ತು ಚನ್ನಕೇಶವ ದೇವಾಲಯ (ಮೊಸಳೆ).
ನಿರ್ಗಮನ: ಬೆಳಗ್ಗೆ 6.00 ಗಂಟೆಗೆ, ಮೈಸೂರು ಕೇಂದ್ರೀಯ ಬಸ್ ನಿಲ್ದಾಣದಿಂದ.
ದರಗಳು (ದರ್ಶನ ಸೇರಿ):
ವೋಲ್ವೋ (3-ಎ): ವಯಸ್ಕರಿಗೆ 2000 ರೂಪಾಯಿ, ಮಕ್ಕಳಿಗೆ 1800 ರೂಪಾಯಿ.
ಅಶ್ವಮೇಧ (3-ಬಿ): ವಯಸ್ಕರಿಗೆ 1600 ರೂಪಾಯಿ, ಮಕ್ಕಳಿಗೆ 1500 ರೂಪಾಯಿ.
ಇತರೆ ಪ್ರಮುಖ ಮಾರ್ಗಗಳು (ಕರ್ನಾಟಕ ಸಾರಿಗೆ)
ಹಾಸನ ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 7.30ಕ್ಕೆ ಹೊರಡುವ ಇತರೆ ಪ್ರವಾಸ ಮಾರ್ಗಗಳು: (ಟಿಕೆಟ್ ದರಗಳ ವಿವರ)
ಸಕಲೇಶಪುರ ಹಾನುಬಾಳು (500 ರೂ.): ವಾಟೆಹೊಳೆ ಆಣೆಕಟ್ಟು, ಪಾಳ್ಯ ಜನಾರ್ಧನ ದೇವಾಲಯ, ಮರಗಡಿ ಜಲಪಾತ, ಬೆಟ್ಟದ ಭೈರವೇಶ್ವರ ದೇವಸ್ಥಾನ.
ಸಕಲೇಶಪುರ ಕೋಟೆ (525 ರೂ.): ಮಂಜರಾಬಾದ್ ಕೋಟೆ, ಮೂಕನಮನೆ, ಬಿಸಿಲೆಘಾಟ್ ಜಲಪಾತ.
ಬೇಲೂರು-ಹಳೇಬೀಡು (375 ರೂ.): ಚನ್ನಕೇಶವ ದೇವಾಲಯ, ಯಗಚಿ ಜಲಾಶಯ, ಹಳೇಬೀಡು ಹೋಯ್ಸಳೇಶ್ವರ ದೇವಾಲಯ.
ಶ್ರವಣಬೆಳಗೊಳ (400 ರೂ.): ನುಗ್ಗೇಹಳ್ಳಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ, ಶ್ರವಣಬೆಳಗೊಳ (ವಿಂಧ್ಯಗಿರಿ ಮತ್ತು ಚಂದ್ರಗಿರಿ ಬೆಟ್ಟ).
ಅರಸೀಕೆರೆ (400 ರೂ.): ಭೂಚೇಶ್ವರ ದೇವಾಲಯ, ಕೇಶವ ದೇವಾಲಯ (ಕೋರವಂಗಲ), ಜೇನುಕಲ್ಲು ಸಿದ್ದೇಶ್ವರ ಬೆಟ್ಟ, ಹಾರನಹಳ್ಳಿ ದೇವಾಲಯ.
ಅರಕಲಗೂಡು (400 ರೂ.): ಶೆಟ್ಟಿಹಳ್ಳಿ ಚರ್ಚ್, ಹೇಮಾವತಿ ಜಲಾಶಯ (ಗೊರೂರು), ರಾಮನಾಥಪುರ ರಾಮೇಶ್ವರ ದೇವಾಲಯ.
ಜಾವಗಲ್-ಬಾಣವಾರ (500 ರೂ.): ನರಸಿಂಹಸ್ವಾಮಿ ದೇವಾಲಯ (ಜಾವಗಲ್), ಚನ್ನಕೇಶವ ದೇವಸ್ಥಾನ (ಅರಕೆರೆ), ರಂಗನಾಥಸ್ವಾಮಿ ದೇವಸ್ಥಾನ (ಬೆಟ್ಟದಪುರ).
ಈ ಪ್ಯಾಕೇಜ್ ಪ್ರವಾಸಗಳ ಕುರಿತು ಹೆಚ್ಚಿನ ಮಾಹಿತಿಗಾಗಿ, ಸಾರ್ವಜನಿಕರು ಕರಾರಸಾನಿಗಮದ ದೂರವಾಣಿ ಸಂಖ್ಯೆಗಳಾದ 7760990518, 7760990519, 7760990520, 7760990523 ಗಳನ್ನು ಸಂಪರ್ಕಿಸಬಹುದು. ಅಥವಾ ನಿಗಮದ ಅಧಿಕೃತ ವೆಬ್‌ಸೈಟ್ www.ksrtc.in ಗೆ ಭೇಟಿ ನೀಡಬಹುದು. ವಿಭಾಗೀಯ ನಿಯಂತ್ರಣಾಧಿಕಾರಿ, ಕೆ.ರಾ.ರ.ಸಾ. ನಿಗಮ, ಹಾಸನ ವಿಭಾಗವು ಈ ಕುರಿತು ಪ್ರಕಟಣೆ ಹೊರಡಿಸಿದೆ.
