Published : Oct 28, 2025, 06:36 AM ISTUpdated : Oct 28, 2025, 10:58 PM IST

Karnataka Latest News Live: ಕದನ ವಿರಾಮ ಒಪ್ಪಂದ ಉಲ್ಲಂಘಿಸಿದ ಹಮಾಸ್‌, ಗಾಜಾ ಮೇಲೆ ತಕ್ಷಣದಿಂದಲೇ ಶಕ್ತಿಶಾಲಿ ದಾಳಿಗೆ ನಿರ್ಧರಿಸಿದ ಇಸ್ರೇಲ್‌!

ಸಾರಾಂಶ

ವಿಜಯಪುರ: ತಮ್ಮನ್ನು ಟೀಕಿಸಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧ ಹರಿಹಾಯ್ದಿರುವ ಸಚಿವ ಎಂ.ಬಿ.ಪಾಟೀಲ ಅವರು, ಯತ್ನಾಳ್ ಈ ಹಿಂದೆ ನನ್ನ ಜೊತೆನೇ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದು ಅಲ್ಲಾಹು ಅಕ್ಟರ್ ಎಂದಿದ್ದರು. ಈಗ ಹಿಂದೂಗಳ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಯತ್ನಾಳ್ ಬಗ್ಗೆ ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ ಏನೇನು ಹೇಳಿದ್ದಾರೆ ಕೇಳಿ. ಈ ಹಿಂದೆ ನನ್ನ ಜೊತೆನೇ ಇವರು ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದಿದ್ದರು. ಅಂದು ಅಲ್ಲಾಹು ಅಕ್ಟರ್ ಎಂದು ಇಂದು ಹಿಂದೂ ಬಗ್ಗೆ ಮಾತನಾಡುತ್ತಾರೆ. ಇವರು ನಾಲಿಗೆ ಹರಿಬಿಟ್ಟ ಕಾರಣವೇ ಇವರನ್ನು ಬಿಜೆಪಿಯಿಂದ ಹೊರ ಹಾಕಿದ್ದಾರೆ. ಉಚ್ಚಾಟಿತ ಹಿಂದೂ ಹುಲಿ ಇದು. ಬಸನಗೌಡರ ನಿಮ್ಮ ನಾಲಿಗೆಗೆ ಲಗಾಮು ಇರಲಿ ಎಂದು ಹೇಳಿದರು.

ಯತ್ನಾಳ ಮಾತು ಯಾರು ಸೀರಿಯಸ್ ಆಗಿ ತಗೋತಾರೆ? ನಾನು ಸೀರಿಯಸ್ ಆಗಿ ತಗೊಂಡ್ರೆ ಅದು ಸರಿ ಇರಲ್ಲ. ಯತ್ನಾಳ್ ಎಲ್ಲರಿಗೂ ಬಾಯಿ ಬಿಟ್ಟಿದ್ದಾರೆ, ಈಗ ನನಗೂ ಬಾಯಿ ಬಿಟ್ಟಿದ್ದಾರೆ. ಯತ್ನಾಳ್ ನೀವು ಯಾರಿಗಾದರೂ ಧಮ್ಮಿ ಹಾಕಿ, ನನ್ನೊಟ್ಟಿಗೆ ಇದು ನಡೆಯಲ್ಲ. ಯತ್ನಾಳ್ ಅವರಿಗೆ ಪ್ರತಿಕ್ರಿಯೆ ಕೊಡಲು ನಾನು ದಿನಕ್ಕೆ ನಾಲ್ಕು ಪ್ರೆಸ್‌ಮೀಟ್ ಮಾಡಬೇಕಾಗುತ್ತದೆ. ಇವರ ಹಾಗೆ ನಾನು ನಿರುದ್ಯೋಗಿ ಅಲ್ಲ ಎಂದು ಹೇಳಿದರು.

10:58 PM (IST) Oct 28

ಕದನ ವಿರಾಮ ಒಪ್ಪಂದ ಉಲ್ಲಂಘಿಸಿದ ಹಮಾಸ್‌, ಗಾಜಾ ಮೇಲೆ ತಕ್ಷಣದಿಂದಲೇ ಶಕ್ತಿಶಾಲಿ ದಾಳಿಗೆ ನಿರ್ಧರಿಸಿದ ಇಸ್ರೇಲ್‌!

Netanyahu Orders Powerful Attack on Gaza Hamas Violates Ceasefire by Firing ನೆತನ್ಯಾಹು ದಾಳಿಗೆ ಆದೇಶಿಸಿದ ಕೆಲವೇ ನಿಮಿಷಗಳಲ್ಲಿ, ಮಂಗಳವಾರ ಸಂಜೆ ನಿಗದಿಯಾಗಿದ್ದ ಮತ್ತೊಂದು ಒತ್ತೆಯಾಳು ಮೃತದೇಹದ ಹಸ್ತಾಂತರವನ್ನು ಮುಂದೂಡುತ್ತಿರುವುದಾಗಿ ಹಮಾಸ್ ಹೇಳಿದೆ.

 

Read Full Story

10:09 PM (IST) Oct 28

ಸುರಂಗ ರಸ್ತೆ ಪ್ರಾಜೆಕ್ಟ್‌ ರದ್ದು ಮಾಡಿ ಎಂದ ತೇಜಸ್ವಿ ಸೂರ್ಯ,ಕೇಂದ್ರದಿಂದ ಹಣ ತನ್ನಿ ಎಂದ ಡಿಕೆ ಶಿವಕುಮಾರ್‌!

Tejasvi Surya Urges DK Shivakumar to Scrap Tunnel Road ಸಂಸದ ತೇಜಸ್ವಿ ಸೂರ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ, ಬೆಂಗಳೂರಿನಲ್ಲಿ ಉದ್ದೇಶಿತ ಸುರಂಗ ರಸ್ತೆ ಯೋಜನೆಯನ್ನು ಕೈಬಿಟ್ಟು, ಮೆಟ್ರೋ ಮತ್ತು ಉಪನಗರ ರೈಲುಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

Read Full Story

09:32 PM (IST) Oct 28

ಲಾಠಿ ಹಿಡಿದು RSS ಪಥಸಂಚಲನಕ್ಕೆ ಅವಕಾಶ ಕೊಡಲ್ಲ, ಚಿತ್ತಾಪುರ ಶಾಂತಿ ಸಭೆಯಲ್ಲಿ ಭೀಮ್ ಆರ್ಮಿ ಗದ್ದಲ

ಲಾಠಿ ಹಿಡಿದು RSS ಪಥಸಂಚಲನಕ್ಕೆ ಅವಕಾಶ ಕೊಡಲ್ಲ, ಚಿತ್ತಾಪುರ ಶಾಂತಿ ಸಭೆಯಲ್ಲಿ ಭೀಮ್ ಆರ್ಮಿ ಗದ್ದಲ ಎಬ್ಬಿಸಿದೆ. ಶಾಂತಿ ಸಭೆ ಅಶಾಂತಿಯಲ್ಲಿ ಅಂತ್ಯಗೊಂಡಿದೆ. ಕಿತ್ತಾಟದಿಂದ ಜಿಲ್ಲಾಧಿಕಾರಿ ಸಭೆಯಿಂದ ಹೊರನಡೆದ ಘಟನೆ ನಡೆದಿದೆ.

Read Full Story

08:14 PM (IST) Oct 28

ಕನ್ನಡ ಮಿತ್ರರು UAE ಆಯೋಜನೆಯ ಕನ್ನಡ ಪಾಠ ಶಾಲೆ ದುಬೈಗೆ ಗಡಿನಾಡು ಸಾಧಕ ಅಂತಾರಾಷ್ಟ್ರೀಯ ಪುರಸ್ಕಾರ

Kannada Patha Shale Dubai Wins Gadinaadu Sadhaka International Award ದುಬೈ ಗಡಿನಾಡ ಉತ್ಸವದಲ್ಲಿ, ಅನಿವಾಸಿ ಮಕ್ಕಳಿಗೆ ಉಚಿತ ಕನ್ನಡ ಶಿಕ್ಷಣ ನೀಡುತ್ತಿರುವ ಕನ್ನಡ ಪಾಠ ಶಾಲೆ ದುಬೈಯ ಸಂಸ್ಥಾಪಕ ಶಶಿಧರ್ ನಾಗರಾಜಪ್ಪ ಮತ್ತು ಅವರ ತಂಡವನ್ನು 'ಕನ್ನಡ ಸಾಧಕ ಪುರಸ್ಕಾರ' ನೀಡಿ ಗೌರವಿಸಲಾಯಿತು. 

Read Full Story

08:02 PM (IST) Oct 28

ಬಸನಗೌಡಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಕೇಸರಿ ಸಮಿತಿ ಸಭೆ, ರಾಜ್ಯಾದ್ಯಂತ ಆಯೋಜನೆ

ಬಸನಗೌಡಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಕೇಸರಿ ಸಮಿತಿ ಸಭೆ, ರಾಜ್ಯಾದ್ಯಂತ ಆಯೋಜನೆ ಮಾಡಲಾಗುತ್ತಿದೆ. ಮೊದಲ ಸಭೆ ಮುಧೋಳದಲ್ಲಿ ನಡೆದಿದ್ದರೆ, ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕೇಸರಿ ಸಮಿತಿ ಸಭೆ ನಡೆಯಲಿದೆ.

Read Full Story

07:48 PM (IST) Oct 28

ಪ್ರಿಯಾಂಕ್‌ ಖರ್ಗೆಗೆ ಫರ್ಸ್ಟ್‌ ಕ್ಲಾಸ್‌ ಈಡಿಯಟ್‌ ಎಂದ ಅಸ್ಸಾಂ ಸಿಎಂ, ಬೇಷರತ್‌ ಕ್ಷಮೆ ಕೇಳುವಂತೆ ಪ್ರದೀಪ್‌ ಈಶ್ವರ್‌ ಆಗ್ರಹ!

Priyank Kharge First-Class Idiot Pradeep Eshwar Demands Unconditional Apology ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕರ್ನಾಟಕದ ಜನರ ಬಗ್ಗೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Read Full Story

07:33 PM (IST) Oct 28

ಬಳ್ಳಾರಿ ಸ್ವಾಂಜ್ ಐರನ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ, ಇಬ್ಬರಿಗೆ ಗಾಯ

ಬಳ್ಳಾರಿ ಸ್ವಾಂಜ್ ಐರನ್ ಕಾರ್ಖಾನೆಯಲ್ಲಿ ಬೆಂಕಿ ಅವಘಡ, ಇಬ್ಬರಿಗೆ ಗಾಯ, ಕಾರ್ಖಾನೆಯಲ್ಲಿ ದಟ್ಟವಾದ ಹೊಗೆ ಆವರಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿ ಹೇಳಿದೆ.

 

Read Full Story

06:46 PM (IST) Oct 28

ಕನಸಿನ ಕಿರೀಟಕ್ಕೆ ಇನ್ನೊಂದೇ ಹೆಜ್ಜೆ - ಆಸೀಸ್ ಸವಾಲು ಮೆಟ್ಟಿ ನಿಲ್ಲುತ್ತಾ ಭಾರತ?

ಮಹಿಳಾ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವು ಅಜೇಯ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಸ್ಮೃತಿ ಮಂಧಾನ ಅವರ ಫಾರ್ಮ್ ತಂಡಕ್ಕೆ ಬಲವಾದರೂ, ಗಾಯದ ಸಮಸ್ಯೆ ಮತ್ತು ಆಡುವ ಬಳಗದ ಆಯ್ಕೆಯ ಸವಾಲುಗಳಿವೆ. ಬಲಿಷ್ಠ ಆಸ್ಟ್ರೇಲಿಯಾದ ವಿರುದ್ಧ ಹರ್ಮನ್‌ಪ್ರೀತ್ ಪಡೆಯ ಈ ಮಹತ್ವದ ಪಂದ್ಯವು ತೀವ್ರ ಕುತೂಹಲ ಕೆರಳಿಸಿದೆ.
Read Full Story

06:05 PM (IST) Oct 28

Bigg Bossನಲ್ಲಿ ರಕ್ಷಿತಾ ಶೆಟ್ಟಿ ಮಾತಾಡಿದ್ದೇ ಈಗ Rap Song! ಅಬ್ಬಬ್ಬಾ ಎನ್ನೋ ಪರ್ಫಾಮೆನ್ಸ್​ ನೋಡಿ

ಬಿಗ್​ಬಾಸ್​ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರ ವಿಶಿಷ್ಟ ಭಾಷಾ ಶೈಲಿಯ ಡೈಲಾಗ್ ಒಂದು ಸಖತ್ ಫೇಮಸ್ ಆಗಿದೆ. ಇದೀಗ ಇದೇ ಡೈಲಾಗ್‌ ಅನ್ನು ಬಳಸಿ ಗ್ರಾವಿಟಿ ಡಾನ್ಸ್ ಅಕಾಡೆಮಿ ಸದಸ್ಯರು ಒಂದು ರ‍್ಯಾಪ್ ಹಾಡನ್ನು ಸೃಷ್ಟಿಸಿದ್ದು, ಅದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
Read Full Story

05:39 PM (IST) Oct 28

ಸುಳ್ಳೆಂದು ಪ್ರೂವ್​ ಮಾಡಿ 5 ಲಕ್ಷ ಪಡೆಯಿರಿ - ಜನರಿಗೆ ಬಿಗ್​ ಆಫರ್​ ಕೊಟ್ಟ Bigg Boss ಡಾಗ್​ ಸತೀಶ್!

"ಡಾಗ್ ಸತೀಶ್" ಎಂದೇ ಖ್ಯಾತರಾದ, ನೂರಾರು ಕೋಟಿ ಮೌಲ್ಯದ ನಾಯಿಗಳ ಮಾಲೀಕ ಸತೀಶ್, ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಸುದ್ದಿಯಲ್ಲಿದ್ದಾರೆ. ತಾವು ಡಾ.ರಾಜ್‌ಕುಮಾರ್, ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯರಿಗೆ ನಾಯಿಗಳನ್ನು ನೀಡಿದ್ದು ಸುಳ್ಳು ಎಂದು ಸಾಬೀತಾದರೆ 5 ಲಕ್ಷ  ನೀಡುವುದಾಗಿ  ಹೇಳಿದ್ದಾರೆ.

Read Full Story

04:20 PM (IST) Oct 28

ಕಾಂಗ್ರೆಸ್ ಶಾಸಕ ವಿನಯ್ ಕಲುಕರ್ಣಿಗೆ ಶಾಕ್, ಸಾಕ್ಷಿ ನಾಶ ಪ್ರಕರಣ ಎತ್ತಿಹಿಡಿದ ಸುಪ್ರೀಂ ಕೋರ್ಟ್

ಕಾಂಗ್ರೆಸ್ ಶಾಸಕ ವಿನಯ್ ಕಲುಕರ್ಣಿಗೆ ಶಾಕ್, ಸಾಕ್ಷಿ ನಾಶ ಪ್ರಕರಣ ಎತ್ತಿಹಿಡಿದ ಸುಪ್ರೀಂ ಕೋರ್ಟ್, ಯೋಗೇಶ್ ಗೌಡ ಕೊಲೆ ಪ್ರರಕರಣ ಸಂಬಂಧ ವಿನಯ್ ಕುಲಕರ್ಣಿ ಸಾಕ್ಷಿ ನಾಶ ಪ್ರಕರಣವನ್ನು ಹೈಕೋರ್ಟ್ ವಜಾ ಮಾಡಿತ್ತು.

Read Full Story

03:40 PM (IST) Oct 28

Brahmagantu - ದೀಪಾ ರೂಮಿಗೆ ನುಗ್ಗಿದ ದಿಶಾ - ಚಿರು ಕೈಯಲ್ಲಿ ತಗ್ಲಾಕ್ಕೊಂಡ್ಲಲ್ಲಪ್ಪೋ- ಬೇಕಿತ್ತಾ ಇದೆಲ್ಲಾ?

'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಮಾಡೆಲ್ ದಿಶಾಳಾಗಿ ದೀಪಾ ಡಬಲ್ ರೋಲ್ ಮಾಡುತ್ತಿದ್ದಾಳೆ. ಡಿನ್ನರ್‌ಗೆಂದು ಚಿರು ಮನೆಗೆ ಕರೆದಾಗ ಪೇಚಿಗೆ ಸಿಲುಕುವ ದೀಪಾ, ಕೊನೆಗೆ ತನ್ನ ಗಂಡನ ಕೈಗೆ ಸಿಕ್ಕಿಬೀಳುವ ಸನ್ನಿವೇಶ ಎದುರಾಗಿದೆ.
Read Full Story

03:37 PM (IST) Oct 28

ರಸ್ತೆಯಲ್ಲಿ 10 ಜನ ನಿಂತ್ರೂ ನಿಯಮ ಉಲ್ಲಂಘನೆ, ಸರ್ಕಾರ ಆದೇಶಕ್ಕೆ ತಡೆ ಕುರಿತು ವಕೀಲರ ಪ್ರತಿಕ್ರಿಯೆ

ರಸ್ತೆಯಲ್ಲಿ 10 ಜನ ನಿಂತ್ರೂ ನಿಯಮ ಉಲ್ಲಂಘನೆ, ಸರ್ಕಾರ ಆದೇಶಕ್ಕೆ ತಡೆಯಾಜ್ಞೆ ಕುರಿತು ವಕೀಲರ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರಿ ಸ್ಥಳಗಳಲ್ಲಿ ಖಾಸಗಿ ಸಂಸ್ಥೆ, ಸಂಘಟನೆಗಳ ಕಾರ್ಯಾಚಟುವಟಿಕೆ ನಿರ್ಬಂಧ ಆದೇಶದಲ್ಲಿನ ಹುಳುಕುಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.

Read Full Story

02:49 PM (IST) Oct 28

ರೋಡ್ ರೋಮಿಯೋನಿಂದ ಅಪ್ರಾಪ್ತ ಬಾಲಕಿ ಸಾವು, ಬೈಕ್‌ನಲ್ಲಿ ಕರೆದೊಯ್ಯುವಾಗ ಅಪಘಾತ

ರೋಡ್ ರೋಮಿಯೋನಿಂದ ಅಪ್ರಾಪ್ತ ಬಾಲಕಿ ಸಾವು, ಬೈಕ್‌ನಲ್ಲಿ ಕರೆದೊಯ್ಯುವಾಗ ಅಪಘಾತ, ಬಲವಂತವಾಗಿ ಅಪ್ರಾಪ್ತೆಯನ್ನು ಲೈ0ಗಿಕವಾಗಿ ಬಳಸಿಕೊಳ್ಳಲು ಬೈಕ್‌ನಲ್ಲಿ ಕರೆದೊಯ್ಯುತ್ತಿರುವಾಗ ಅಪಘಾತ ಸಂಭವಿಸಿದೆ.

 

Read Full Story

02:40 PM (IST) Oct 28

Mandya - ಪ್ರಿಯಕರನೊಂದಿಗೆ ದಿಂಬಿನಿಂದ ಗಂಡನ ಉಸಿರು ನಿಲ್ಲಿಸಿದ್ದ ಕೇಸ್; ಶಿಕ್ಷೆ ಪ್ರಕಟ

Mandya husband murder case: ಮಂಡ್ಯದಲ್ಲಿ, ಫೇಸ್‌ಬುಕ್‌ನಲ್ಲಿ ಪರಿಚಯವಾದ ಪ್ರಿಯಕರನೊಂದಿಗೆ ಸೇರಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿದ್ದಳು. ಈ ಪ್ರಕರಣದಲ್ಲಿ, ನ್ಯಾಯಾಲಯವು ಇದೀಗ ಇಬ್ಬರೂ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.

Read Full Story

02:28 PM (IST) Oct 28

ಹೆರಿಗೆಯ ಬಳಿಕ ಲೈಂ*ಗಿಕ ಕ್ರಿಯೆಗೆ ಎಷ್ಟು ದಿನ ಗ್ಯಾಪ್​ ಕೊಡಬೇಕು? ವೈದ್ಯೆಯ ಮಾತು ಕೇಳಿ

ಹೆರಿಗೆಯ ನಂತರ ದೈಹಿಕ ಸಂಪರ್ಕ ಯಾವಾಗ ಸೂಕ್ತ ಎಂಬ ಪ್ರಶ್ನೆಗೆ ಸ್ತ್ರೀರೋಗ ತಜ್ಞರಾದ ಡಾ. ದೀಪ್ತಿ ಉತ್ತರಿಸಿದ್ದಾರೆ. ಹೆರಿಗೆಯ ನಂತರದ ರಕ್ತಸ್ರಾವ ಮತ್ತು ಹೊಲಿಗೆಗಳ ಕಾರಣ ಕನಿಷ್ಠ 40 ದಿನಗಳ ಕಾಲ ಕಾಯುವುದು ಮುಖ್ಯವಾಗಿದ್ದು, ಪತ್ನಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯ  ಪರಿಗಣಿಸುವುದು ಅತ್ಯಗತ್ಯ ಎಂದಿದ್ದಾರೆ

Read Full Story

02:07 PM (IST) Oct 28

RSS ಚಟುವಟಿಕೆ ನಿಷೇಧಕ್ಕೆ ಹೊರಟ ಸರ್ಕಾರಕ್ಕೆ ಹಿನ್ನಡೆ, ರಾಜ್ಯ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

RSS ಚಟುವಟಿಕೆ ನಿಷೇಧಕ್ಕೆ ಹೊರಟ ಸರ್ಕಾರಕ್ಕೆ ಹಿನ್ನಡೆ, ರಾಜ್ಯ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಸರ್ಕಾರಿ ಶಾಲೆ, ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಟಾರ್ಗೆಟ್ ಮಾಡಿ ನಿಷೇಧ ಆದೇಶ ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಲಾಗಿದೆ.

Read Full Story

02:04 PM (IST) Oct 28

ಆ ವಿಷಯದಲ್ಲಿ ಜೂ.ಎನ್‌ಟಿಆರ್‌ಗೆ ಪತ್ನಿ ಪ್ರಣತಿ ವಾರ್ನಿಂಗ್.. ಮನೆಯ ಗುಟ್ಟು ಬಿಚ್ಚಿಟ್ಟ ರಾಜಮೌಳಿ

ಜೂ.ಎನ್‌ಟಿಆರ್‌ ಅವರ ವೀಕ್‌ನೆಸ್‌ಗಳ ಬಗ್ಗೆ ರಾಜಮೌಳಿ ಹಲವು ಬಾರಿ ಬಹಿರಂಗಪಡಿಸಿದ್ದಾರೆ. ಓಪನ್ ಆಗಿಯೇ ಕಾಮೆಂಟ್ ಮಾಡಿದ್ದಾರೆ. ಅದರ ಭಾಗವಾಗಿ, ತಾರಕ್‌ಗೆ ಅವರ ಪತ್ನಿ ಲಕ್ಷ್ಮಿ ಪ್ರಣತಿ ನೀಡಿದ ವಾರ್ನಿಂಗ್ ಬಗ್ಗೆಯೂ ರಾಜಮೌಳಿ ಹೇಳಿದ್ದಾರೆ.

 

Read Full Story

01:41 PM (IST) Oct 28

ನೆಗೆಟಿವ್ ಟಾಕ್ ಬಂದರೂ ರಾಜಮೌಳಿ ಹಿಂಜರಿಯಲಿಲ್ಲ - ಬಾಹುಬಲಿ ಅನುಭವ ಹಂಚಿಕೊಂಡ ರಮ್ಯಾ ಕೃಷ್ಣನ್‌

ಬಾಹುಬಲಿ 1 ಚಿತ್ರಕ್ಕೆ ಮೊದಲ ದಿನ ಬಂದ ನೆಗೆಟಿವ್ ಟಾಕ್ ಬಗ್ಗೆ ರಮ್ಯಾ ಕೃಷ್ಣ ಮಾತನಾಡಿದ್ದಾರೆ. ಆ ದಿನ ಶೋಭು ಮತ್ತು ರಾಜಮೌಳಿ ಎಷ್ಟು ಸ್ಟ್ರಾಂಗ್ ಆಗಿ ನಿಂತಿದ್ದರು ಎಂಬುದನ್ನು ರಮ್ಯಾ ಕೃಷ್ಣನ್‌ ವಿವರಿಸಿದ್ದಾರೆ.

 

Read Full Story

01:40 PM (IST) Oct 28

ಚಂಡಮಾರುತದಿಂದ ಕರ್ನಾಟಕದಲ್ಲಿ ಮುಂದಿನ 2 ದಿನ ಭಾರಿ ಮಳೆ, ನಾಲ್ಕು ಜಿಲ್ಲೆಗೆ ಯೆಲ್ಲೋ ಅಲರ್ಟ್

ಚಂಡಮಾರುತದಿಂದ ಕರ್ನಾಟಕದಲ್ಲಿ ಮುಂದಿನ 2 ದಿನ ಭಾರಿ ಮಳೆ, ನಾಲ್ಕು ಜಿಲ್ಲೆಗೆ ಯೆಲ್ಲೋ ಅಲರ್ಟ್, ಕರ್ನಾಟಕದ ಕರಾವಳಿ ಜಿಲ್ಲೆ ಸೇರಿದಂತೆ ಉತ್ತರದ ದಿಲ್ಲೆಗಳಲ್ಲಿ ಭಾರಿ ಮಳೆ ಸೂಚನೆ ನೀಡಲಾಗಿದೆ.

Read Full Story

01:25 PM (IST) Oct 28

Lakshmi Nivasa - ಜಯಂತ್​ ತೋಡಿದ ಹಳ್ಳಕ್ಕೆ ಬಿದ್ದಾಯ್ತು ವಿಶ್ವ, ತಪ್ಪಿಸಿಕೊಳ್ಳೋ ಛಾನ್ಸೇ ಇಲ್ಲ! ಗೂಬೆ ಕಥೆ ಫಿನಿಷ್​

ಲಕ್ಷ್ಮೀನಿವಾಸ ಧಾರಾವಾಹಿಯಲ್ಲಿ, ಜಾಹ್ನವಿ ಬದುಕಿರುವ ಸತ್ಯವನ್ನು ಜಯಂತ್ ಪತ್ತೆಹಚ್ಚಿದ್ದಾನೆ. ಜಾಹ್ನವಿಗೆ ಸಹಾಯ ಮಾಡುತ್ತಿರುವ ವಿಶ್ವನನ್ನು ಬಲೆಗೆ ಬೀಳಿಸಲು ಶ್ರದ್ಧಾಂಜಲಿ ನಾಟಕವಾಡಿ, ತಾನೇ 'ಗೂಬೆ' ಎಂದು ಬಾಯಿಬಿಡಿಸಿದ್ದಾನೆ. ಸೈಕೋ ಜಯಂತ್ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ ವಿಶ್ವ. ಮುಂದೇನು? 

Read Full Story

01:09 PM (IST) Oct 28

Actor Kiran Raj - ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ ಕಿರುತೆರೆಯ ಕರ್ಣ ಕಿರಣ್ ರಾಜ್

ಕಿರುತೆರೆ ನಟ ಕಿರಣ್ ರಾಜ್ ತಮ್ಮ ಮುಂಬರುವ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಆಲ್ ದಿ ಬೆಸ್ಟ್ ಹೀರೋ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ. ನೀವು ಕಂಡ ಕನಸುಗಳೆಲ್ಲವೂ ನನಸಾಗಲಿ ಎಂದು ಶುಭ ಹಾರೈಸಿದ್ದಾರೆ.

Read Full Story

12:51 PM (IST) Oct 28

ಅಪ್ಪನ ಗುಟ್ಟು ಹೇಳುತ್ತಲೇ ರಕ್ತ ಪರೀಕ್ಷೆ ಮಾಡಿ ಎಂದ ರಾಖಿ ಸಾವಂತ್​ - ಅಮೆರಿಕದಲ್ಲಿ ಕೋಲಾಹಲ!

ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ರಾಖಿ ಸಾವಂತ್, ಪತಿ ಆದಿಲ್ ಖಾನ್ ಜೊತೆಗಿನ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಿದ್ದಾರೆ. ಇದೀಗ ದುಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ತನ್ನ ತಂದೆ ಎಂದು ಹೇಳಿಕೆ ನೀಡಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
Read Full Story

11:58 AM (IST) Oct 28

ಬಿಜೆಪಿಯವರು ನನ್ನನ್ನು ವಿಷ್ಣುವಿನ ಅವತಾರದಲ್ಲಿ ನೋಡುತ್ತಿದ್ದಾರೆ - ಶಾಸಕ ಪ್ರದೀಪ್ ಈಶ್ವರ್ ವ್ಯಂಗ್ಯ

ನವೆಂಬರ್ ಕ್ರಾಂತಿ ಅಂದ್ರೆ ಅಶೋಕಣ್ಣನ ಚೇರ್‌ಗೆ ಸುನಿಲ್ ಅಣ್ಣ ಬರುತ್ತಿದ್ದಾರೆ. ಖಂಡಿತವಾಗಿ ನವೆಂಬರ್ ಕ್ರಾಂತಿ ಆಗುತ್ತೆ. ಸುನಿಲ್ ಅವರು ಅಶೋಕಣ್ಣನ ಚೇರ್ ಕಿತ್ತುಕೊಂಡು ಹೊರಟು ಹೋಗುತ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

Read Full Story

11:57 AM (IST) Oct 28

Amruthadhaare - ಒಂದಾದ ಗೌತಮ್​- ಭೂಮಿಕಾ! ನಿರ್ದೇಶಕರಿಗೆ ಬಂತು ಬೆದರಿಕೆ ಸಂದೇಶ; ಏನಿದು?

'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾ ಪ್ರೀತಿ ಇದ್ದರೂ ಇಗೋದಿಂದಾಗಿ ದೂರವಾಗಿದ್ದಾರೆ. ಇದೀಗ ಬಿಡುಗಡೆಯಾದ ಪ್ರೋಮೋದಲ್ಲಿ ಇಬ್ಬರೂ ಒಂದಾಗುವುದನ್ನು ತೋರಿಸಲಾಗಿದ್ದು, ಇದು ಕನಸಾಗಿರಬಹುದೆಂಬ ಅನುಮಾನದಿಂದ ವೀಕ್ಷಕರು ನಿರ್ದೇಶಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.  

Read Full Story

11:45 AM (IST) Oct 28

ಡಿಮಾರ್ಟ್ ಶಾಪಿಂಗ್‌ಗೆ ಹೋದ ಗಂಡನಿಗೆ ಎಚ್ಚರಿಕೆ ಸಂದೇಶ ಕಳುಹಿಸಿದ ಹೆಂಡತಿ!

DMart Shopping: ಡಿ ಮಾರ್ಟ್‌ಗೆ ಶಾಪಿಂಗ್‌ಗೆ ಹೋದ ಗಂಡನಿಗೆ ಪತ್ನಿ ದಿನಸಿ ಪಟ್ಟಿಯ ಜೊತೆಗೆ ಒಂದು ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಪತ್ನಿಯ ಸಂದೇಶವಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

11:21 AM (IST) Oct 28

ರೆಟ್ರೋ ಸ್ಟೈಲ್‌ಗೆ ಹೊಸ ಹವಾ.. ಹೈ ಬೂಟ್‌ನಲ್ಲಿ ಸುಂದರಿಯರ ಕ್ಯಾಟ್‌ವಾಕ್‌

ಮೊನ್ನೆ ಮೊನ್ನೆ ಮೌನಿ ರಾಯ್‌ ತುಂಡು ಲಂಗದ ಮೇಲೊಂದು ಹೊಸ ಸ್ಟೈಲಿನ ಟಾಪ್‌ ಸಿಕ್ಕಿಸಿಕೊಂಡು ಗಮ್‌ಬೂಟ್‌ ಹಾಕಿ ಫಾರಿನ್‌ನಲ್ಲೆಲ್ಲ ಸವಾರಿ ಮಾಡಿ ಬಂದರು. ಕೆಲವೊಮ್ಮೆ ನಮ್ಮ ಡ್ರೆಸ್‌ ಅಂಥಾ ಚೆನ್ನಾಗಿಲ್ಲ ಅಂದ್ರೆ ಹೈ ಬೂಟ್‌ ಹಾಕ್ತೀನಿ.

Read Full Story

10:59 AM (IST) Oct 28

ಶಿವಣ್ಣ ಸಿನಿಮಾದಲ್ಲಿ ವಿಲನ್ ಆಗಿ ನಟಿಸಿ, ಅವರತ್ರ ಏಟು ತಿನ್ಬೇಕು - ನಟ ಪ್ರಮೋದ್

ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಅವರು ಶಿವಣ್ಣ ಅವರ ಸಿನಿಮಾ ಮಾಡಿದ್ರೆ ನಾನದರಲ್ಲಿ ವಿಲನ್‌ ಆಗಿ ನಟಿಸಬೇಕು. ಆ ಮೂಲಕ ಶಿವಣ್ಣ ಅವರ ಹತ್ರ ಜೋರ್ ಜೋರಾಗಿ ಏಟು ತಿನ್ಬೇಕು. ಇದು ನಟ ಪ್ರಮೋದ್‌ ಮಾತು.

Read Full Story

10:43 AM (IST) Oct 28

ಕಿತ್ತೂರು ಉತ್ಸವದಲ್ಲಿ ನಿಜಕ್ಕೂ ನಡೆದಿದ್ದು ಏನು? ಹನುಮಂತ್ ಅರ್ಧಕ್ಕೆ ಹಾಡು ನಿಲ್ಲಿಸಿದ್ದೇಕೆ? ಎಸ್‌ಪಿ ಹೇಳಿದ್ದೇನು?

ಬೆಳಗಾವಿಯ ಕಿತ್ತೂರು ಉತ್ಸವದಲ್ಲಿ ಗಾಯಕ ಹನುಮಂತ್‌ಗೆ ಅವಮಾನವಾಗಿದೆ ಎಂಬ ವಿಡಿಯೋ ವೈರಲ್ ಆಗಿತ್ತು. ಈ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಎಸ್‌ಪಿ ಭೀಮಾಶಂಕರ್ ಗುಳೇದ್, ಇದು ಭಾಷಾ ವಿವಾದವಲ್ಲ, ಬದಲಿಗೆ ಸಮಯ ಮತ್ತು ಜನಜಂಗುಳಿಯ ಸುರಕ್ಷತೆಯ ಕಾರಣಕ್ಕೆ ನಡೆದ ವಾಗ್ವಾದ ಎಂದು ತಿಳಿಸಿದ್ದಾರೆ.
Read Full Story

10:39 AM (IST) Oct 28

ಸಿಎಂ ಬದಲಾವಣೆ ಪ್ರಶ್ನೆ ಎಲ್ಲೂ ಉದ್ಭವವಾಗಿಲ್ಲ, ಹೈಕಮಾಂಡ್ ತೀರ್ಮಾನವೇ ಅಂತಿಮ - ಪರಮೇಶ್ವರ್

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನ ಹಾಗೂ ದಲಿತ ಸಿಎಂ ಕೂಗು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.

Read Full Story

10:05 AM (IST) Oct 28

ಡಿ.25-28ರವರೆಗೆ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ - ಡಾ.ಗಿರಿಧರ ಕಜೆ ಘೋಷಣೆ

ಕಜೆ ಆಯುರ್ವೇದಿಕ್‌ ಚಾರಿಟೇಬಲ್‌ ಫೌಂಡೇಶನ್‌, ಪ್ರಶಾಂತಿ ಆಯುರ್ವೇದಿಕ್ ಸೆಂಟರ್‌ನಿಂದ ಆಯುಷ್‌ ಇಲಾಖೆ ಸಹಯೋಗದಲ್ಲಿ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ ಡಿ.25ರಿಂದ 28ರವರೆಗೆ ಅರಮನೆ ಮೈದಾನದಲ್ಲಿ (ಗೇ.ನಂ.6) ನಡೆಯಲಿದೆ.

Read Full Story

09:58 AM (IST) Oct 28

ರಾಜ್ಯದಲ್ಲಿ ಅರೆ ವೈದ್ಯಕೀಯ ಮಂಡಳಿ ನಿಷ್ಕ್ರಿಯ - ವಿದ್ಯಾರ್ಥಿಗಳು, ಕಾಲೇಜುಗಳಿಂದ ತೀವ್ರ ಅಸಮಾಧಾನ

ಪ್ರವೇಶ ಪ್ರಕ್ರಿಯೆಯಿಂದ ಹಿಡಿದು ಪರೀಕ್ಷೆ, ಅಂಕಪಟ್ಟಿ ಮುದ್ರಣವರೆಗೂ ಯಾವೊಂದು ಚಟುವಟಿಕೆಯನ್ನೂ ಶೈಕ್ಷಣಿಕ ವೇಳಾಪಟ್ಟಿಯಂತೆ ನಿರ್ವಹಿಸದೆ ಕೆಲ ವರ್ಷಗಳಿಂದ ಆಮೆಗತಿ ಅನುಸರಿಸುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

Read Full Story

09:24 AM (IST) Oct 28

ರಾಜ್ಯದಲ್ಲಿ ಮತ್ತೆ ಜೋರಾದ ದಲಿತ ಸಿಎಂ ಕೂಗು - ಮುನಿಯಪ್ಪ, ಪರಮೇಶ್ವರ್, ಜಾರಕಿಹೊಳಿ ಸಜ್ಜು

ದಲಿತ ಸಂಘಟನೆಗಳು ದಲಿತರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಧ್ವನಿ ಎತ್ತಿದ್ದು, ಸಚಿವರಾದ ಡಾ.ಜಿ.ಪರಮೇಶ್ವರ್‌, ಸತೀಶ್ ಜಾರಕಿಹೊಳಿ, ಮಾಜಿ ಸಚಿವ ಕೆ.ಎನ್‌.ರಾಜಣ್ಣ ಸೇರಿ ಹಲವರು ಇದಕ್ಕೆ ಪೂರಕವಾಗಿ ಮಾತನಾಡಿದ್ದಾರೆ.

Read Full Story

09:16 AM (IST) Oct 28

Koppal - ಗಂಡ-ಮಕ್ಕಳನ್ನ ಬಿಟ್ಟು ಬಾ ಅಂದ, ಇಬ್ಬರು ಕಂದಮ್ಮಗಳನ್ನು ಕೊಂದು ಪ್ರಾಣ ಬಿಟ್ಟ ತಾಯಿ

ಕೊಪ್ಪಳ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಮೃತ ಲಕ್ಷ್ಮೀ ಅವರ ತಾಯಿಯೇ, ತಮ್ಮ ಮಗಳ ಸಾವಿಗೆ ಬೀರಪ್ಪ ಎಂಬಾತನೊಂದಿಗಿನ ಅಕ್ರಮ ಸಂಬಂಧ ಮತ್ತು ಆತನ ಒತ್ತಡವೇ ಕಾರಣ ಎಂದು ದೂರು ದಾಖಲಿಸಿದ್ದಾರೆ.

Read Full Story

09:10 AM (IST) Oct 28

ಕನ್ನೇರಿ ಶ್ರೀಗಳಿಗೆ ನಿರ್ಬಂಧ ಹಾಕಿದ ಎಂಬಿಪಾ ಕ್ಷಮೆ ಕೇಳಲಿ - ಕೆ.ಎಸ್.ಈಶ್ವರಪ್ಪ ಆಗ್ರಹ

ಕನ್ನೇರಿ ಶ್ರೀಗಳ ವಿಜಯಪುರ ಮತ್ತು ಬಾಗಲಕೋಟೆ ಪ್ರವೇಶಕ್ಕೆ ರಾಜ್ಯ ಸರ್ಕಾರ ನಿರ್ಬಂಧದ ಆದೇಶ ಹೊರಡಿಸಿದ್ದು, ಈ ವಿಷಯದಲ್ಲಿ ಸಚಿವ ಎಂ.ಬಿ.ಪಾಟೀಲ್ ಕ್ಷಮೆ ಕೇಳಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

Read Full Story

08:39 AM (IST) Oct 28

ಎಐ ಹೇಳಿದಂತೆ ಕೇಳಿ, ಹಣ ಉಳಿತಾಯ ಖಚಿತ - ಇಲ್ಲಿದೆ ಸ್ಮಾರ್ಟ್ ಫೈನಾನ್ಸ್‌ ಟೂಲ್‌ಗಳ ಲಿಸ್ಟ್‌!

‘ಗ್ರೊಕ್‌ ಇದು ಕರೆಕ್ಟಾ?’ ನಮ್ಮ ಪರ್ಸ್‌ ತುಂಬಿಸೋದು, ಹಣಕಾಸಿನ ಪ್ಲಾನ್‌ಗಳ ಬಗ್ಗೆ ಎಐ ಹತ್ರ ಕೇಳದೇ ಮುಂದುವರಿಯೋದಕ್ಕಾಗುತ್ತಾ.. ನಿಮ್ಮ ಹಣ ನಿರ್ವಹಣೆಗೆ ಬೆಸ್ಟ್‌ ಸಲಹೆಗಾರರಂತಿರುವ ಎಐ ಟೂಲ್‌ಗಳು ಇಲ್ಲಿವೆ.

Read Full Story

08:22 AM (IST) Oct 28

ಮುಂದಿನ ಪೀಳಿಗೆಗೆ ಶುದ್ಧ ಗಾಳಿ, ನೀರು ಕೊಡಿ - ಶಾಸಕ ಪಿ.ಎಂ.ನರೇಂದ್ರಸ್ವಾಮಿ

ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಮತ್ತು ಶುದ್ಧ ನೀರು ಸಿಗುವಂತೆ ಮಾಡುವುದೇ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಗುರಿ. ಅದಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.

Read Full Story

08:21 AM (IST) Oct 28

Good Bye My Dear Life RIP ಸ್ಟೇಟಸ್ ಹಾಕಿ ಪ್ರಾಣ ಕಳೆದುಕೊಂಡ ತುಮಕೂರು ವಿದ್ಯಾರ್ಥಿ ಕೇಸ್‌ಗೆ ಟ್ವಿಸ್ಟ್

Tumakuru News: ತುಮಕೂರಿನಲ್ಲಿ ನರ್ಸಿಂಗ್ ವಿದ್ಯಾರ್ಥಿ ಸುರೇಶ್ ಆತ್ಮ*ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಆತ್ಮ*ಹತ್ಯೆಗೂ ಮುನ್ನ ಆತ ತನ್ನ ವಾಟ್ಸಪ್ ಸ್ಟೇಟಸ್‌ನಲ್ಲಿ ಸಾವಿನ ಬಗ್ಗೆ ಬರೆದುಕೊಂಡಿದ್ದನು.

Read Full Story

07:03 AM (IST) Oct 28

ಆರೋಗ್ಯ ಭಾಗ್ಯಕ್ಕೆ ಈ 10 ಟಿಪ್ಸ್‌ ಪಾಲಿಸಿ - ಅಮಿತ್ ಶಾ

ಸಾಕಷ್ಟು ನಿದ್ರೆ, ಸಮರ್ಪಕವಾದ ನೀರಿನ ಸೇವನೆ, ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮ - ಇವು ನನ್ನ ಆರೋಗ್ಯದ ರಹಸ್ಯಗಳು. ಇಂದು, ನಾನು ಯಾವುದೇ ಆಲೋಪತಿ ಔಷಧಿಗಳು ಅಥವಾ ಇನ್ಸುಲಿನ್ ಇಲ್ಲದೆ ಸಂಪೂರ್ಣ ಆರೋಗ್ಯದಿಂದ ಇದ್ದೇನೆ.

Read Full Story

06:48 AM (IST) Oct 28

ಮೋದಿ ಸ್ನಾನಕ್ಕಾಗಿ ದಿಲ್ಲಿಯಲ್ಲಿ ಫಿಲ್ಟರ್ ವಾಟರ್‌ ಯಮುನಾ ನಿರ್ಮಾಣ - ಆಪ್‌

ಉತ್ತರ ಭಾರತದಲ್ಲಿ ಪ್ರಮುಖವಾಗಿ ಆಚರಿಸಲಾಗಿರುವ ಛಟ್‌ ಪೂಜೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ನವದೆಹಲಿಯ ಯಮುನಾ ನದಿ ತಟದಲ್ಲಿ ಸ್ನಾನ ಮಾಡಲಿದ್ದು, ಈ ವಿಷಯವೀಗ ಭಾರೀ ವಿವಾದಕ್ಕೆ ಕಾರಣವಾಗಿದೆ.

Read Full Story

More Trending News