MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • Best AI Finance Tools: ಎಐ ಹೇಳಿದಂತೆ ಕೇಳಿ, ಹಣ ಉಳಿತಾಯ ಖಚಿತ: ಇಲ್ಲಿದೆ ಸ್ಮಾರ್ಟ್ ಫೈನಾನ್ಸ್‌ ಟೂಲ್‌ಗಳ ಲಿಸ್ಟ್‌!

Best AI Finance Tools: ಎಐ ಹೇಳಿದಂತೆ ಕೇಳಿ, ಹಣ ಉಳಿತಾಯ ಖಚಿತ: ಇಲ್ಲಿದೆ ಸ್ಮಾರ್ಟ್ ಫೈನಾನ್ಸ್‌ ಟೂಲ್‌ಗಳ ಲಿಸ್ಟ್‌!

‘ಗ್ರೊಕ್‌ ಇದು ಕರೆಕ್ಟಾ?’ ನಮ್ಮ ಪರ್ಸ್‌ ತುಂಬಿಸೋದು, ಹಣಕಾಸಿನ ಪ್ಲಾನ್‌ಗಳ ಬಗ್ಗೆ ಎಐ ಹತ್ರ ಕೇಳದೇ ಮುಂದುವರಿಯೋದಕ್ಕಾಗುತ್ತಾ.. ನಿಮ್ಮ ಹಣ ನಿರ್ವಹಣೆಗೆ ಬೆಸ್ಟ್‌ ಸಲಹೆಗಾರರಂತಿರುವ ಎಐ ಟೂಲ್‌ಗಳು ಇಲ್ಲಿವೆ.

2 Min read
Author : Govindaraj S, Kannadaprabha News
Published : Oct 28 2025, 08:39 AM IST
Share this Photo Gallery
  • FB
  • TW
  • Linkdin
  • Whatsapp
18
ಎಐ ಟೂಲ್‌ಗಳು
Image Credit : Social Media

ಎಐ ಟೂಲ್‌ಗಳು

ಎಕ್ಸ್‌ (ಟ್ವೀಟರ್)ನಲ್ಲಿ ಯಾವುದೇ ಸುದ್ದಿ ಕಾಣಿಸಿದರೆ ಸಾಕು, ಕಾಮೆಂಟ್‌ ಸೆಕ್ಷನ್‌ ಅಲ್ಲಿ ‘ಗ್ರೊಕ್‌ ಇದು ಕರೆಕ್ಟಾ?’ ಅಂತ ಕೇಳಿ ಕನ್‌ಫರ್ಮ್‌ ಮಾಡಿಕೊಂಡು ನಂಬೋ ಕಾಲ ಇದು. ಹೀಗಿರುವಾಗ ನಮ್ಮ ಪರ್ಸ್‌ ತುಂಬಿಸೋದು, ಹಣಕಾಸಿನ ಪ್ಲಾನ್‌ಗಳ ಬಗ್ಗೆ ಎಐ ಹತ್ರ ಕೇಳದೇ ಮುಂದುವರಿಯೋದಕ್ಕಾಗುತ್ತಾ.. ನಿಮ್ಮ ಹಣ ನಿರ್ವಹಣೆಗೆ ಬೆಸ್ಟ್‌ ಸಲಹೆಗಾರರಂತಿರುವ ಎಐ ಟೂಲ್‌ಗಳು ಇಲ್ಲಿವೆ.

28
1. ಕಾಮಿಡಿಯಾಗಿ ಹಣ ಜೋಪಾನ ಮಾಡೋ ಕ್ಲಿಯೋ
Image Credit : Social Media

1. ಕಾಮಿಡಿಯಾಗಿ ಹಣ ಜೋಪಾನ ಮಾಡೋ ಕ್ಲಿಯೋ

ಕ್ಲಿಯೋ (Cleo) ಎಂಬ ಚಾಟ್‌ಬಾಟ್‌ ನಿಮಗೆ ಹಾಸ್ಯ ಮತ್ತು ತಮಾಷೆಯ ಮೂಲಕ ಹಣಕಾಸು ನಿಯಂತ್ರಣ ಕಲಿಸುತ್ತದೆ. ಇದು ನಿಮ್ಮ ದೈನಂದಿನ ಖರ್ಚುಗಳನ್ನು ಟ್ರ್ಯಾಕ್ ಮಾಡಿ ಸಣ್ಣ ಉಳಿತಾಯ ಸವಾಲುಗಳನ್ನು ನೀಡುತ್ತದೆ. ಹಣದ ನಿರ್ವಹಣೆ ಅಂದರೆ ಟೆನ್ಶನ್‌, ಒತ್ತಡ ಅನ್ನೋದನ್ನೆಲ್ಲ ಸೈಡಿಗಿಟ್ಟು ಈ ಬಾಟ್‌ ಹೇಳಿದಂತೆ ಕೇಳಿ ಹಣ ಉಳಿಸಬಹುದು.

Related Articles

Related image1
ಹಾಸನದಲ್ಲಿ ಕುಳಿತು ದಾವಣಗೆರೆ ಶಿಕ್ಷಕಿಯ ಡಿಜಿಟಲ್ ಅರೆಸ್ಟ್; 22 ಲಕ್ಷ ಪಂಗನಾಮ ಹಾಕಿ ಸಿಕ್ಕಿಬಿದ್ದ ಸೈಬರ್ ಕಳ್ಳ!
Related image2
ಕೆಲಸಕ್ಕಾಗಿ ಆನ್‌ಲೈನ್‌ಗೆ ಮೊರೆ ಹೋಗುವ ಕಾರ್ಮಿಕರು, ಡಿಜಿಟಲ್ ಲೇಬರ್ ಚೌಕ್ ಎಂಬ ತಂತ್ರಜ್ಞಾನ
38
2. ಕುಟುಂಬ ನಿರ್ವಹಣೆಗೆ ಮೊನಾರ್ಕ್ ಮನಿ
Image Credit : Social Media

2. ಕುಟುಂಬ ನಿರ್ವಹಣೆಗೆ ಮೊನಾರ್ಕ್ ಮನಿ

ಮನಿ ಮ್ಯಾಟರ್‌ ಜೊತೆಗೆ ಮನೆ ಮ್ಯಾಟರ್‌ನಲ್ಲೂ ಮೂಗು ತೂರಿಸುವ ಎಐ ಟೂಲ್‌ ಇದು. ಕುಟುಂಬ ಸದಸ್ಯರು ಒಟ್ಟಾಗಿ ಮಾಡಿದ ಖರ್ಚು, ಹೂಡಿಕೆ, ಗುರಿ ಇತ್ಯಾದಿಗಳನ್ನು ಇದು ಟ್ರ್ಯಾಕ್‌ ಮಾಡುತ್ತದೆ. ಯಾರು ಎಷ್ಟು ಖರ್ಚು ಮಾಡಿದ್ದಾರೆ ಅನ್ನೋದನ್ನು ತೋರಿಸೋ ಜೊತೆಗೆ ಹಣ ಉಳಿತಾಯದ ಟ್ರಿಕ್‌ಗಳನ್ನೂ ಕಲಿಸುತ್ತೆ.

48
3. ಜಾಸ್ತಿ ಖರ್ಚು ಮಾಡದಂತೆ ತಡೆಯುವ ವೈಎನ್‌ಎಬಿ
Image Credit : Social Media

3. ಜಾಸ್ತಿ ಖರ್ಚು ಮಾಡದಂತೆ ತಡೆಯುವ ವೈಎನ್‌ಎಬಿ

ಹಣದ ಹರಿವನ್ನು ಸೂಕ್ಷ್ಮವಾಗಿ ಗಮನಿಸುತ್ತದೆ. ಹಣದ ಪೋಲನ್ನು ತಡೆಯುತ್ತದೆ. ಸಾಲದಿಂದ ದೂರ ಇರಲು ಮತ್ತು ನಿಯಮಿತವಾಗಿ ಉಳಿಸಲು ಸಹಾಯ ಮಾಡುತ್ತದೆ. ಹಣ ಜಾಸ್ತಿ ಖರ್ಚು ಮಾಡೋದು ಗೊತ್ತಾದರೆ ವಾರ್ನ್‌ ಮಾಡೋ ಎಐ ಟೂಲ್‌ ಇದು.

58
4. ಪಾಕೆಟ್‌ಗಾರ್ಡ್
Image Credit : Social Media

4. ಪಾಕೆಟ್‌ಗಾರ್ಡ್

ಕಿಸೆಯ ತೂತಿಗೆ ಹೊಲಿಗೆ ಹಾಕೋ ಎಐ ಪಾಕೆಟ್‌ ಗಾರ್ಡ್‌. ನಿಮ್ಮ ಬಿಲ್‌ಗಳು ಮತ್ತು ಉಳಿತಾಯ ಗುರಿಗಳನ್ನು ತೆಗೆದ ನಂತರ ಎಷ್ಟು ಹಣ ಖರ್ಚು ಮಾಡಬಹುದು ಎಂದು ತೋರಿಸುತ್ತದೆ. ಅನಗತ್ಯ ಸಬ್‌ಸ್ಕ್ರಿಪ್ಶನ್‌ಗಳನ್ನು ಗುರುತಿಸಿ, ಅತಿಯಾಗಿ ಖರ್ಚಾಗುವ ಮುನ್ನ ಎಚ್ಚರಿಸುತ್ತದೆ.

68
5. ಬಿಲ್‌ಗಳನ್ನು ಕಡಿಮೆ ಮಾಡುವ ರಾಕೆಟ್‌ ಮನಿ
Image Credit : Social Media

5. ಬಿಲ್‌ಗಳನ್ನು ಕಡಿಮೆ ಮಾಡುವ ರಾಕೆಟ್‌ ಮನಿ

ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳನ್ನು ಪತ್ತೆಹಚ್ಚಿ ತಿಂಗಳ ಬಿಲ್‌ಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಾಯ ಮತ್ತು ಖರ್ಚಿನ ಆಧಾರದ ಮೇಲೆ ಸ್ವಯಂ ಉಳಿತಾಯವನ್ನೂ ಕಲಿಸಿಕೊಡುತ್ತದೆ.

78
6. ಸ್ಮಾರ್ಟ್‌ ಹೂಡಿಕೆಗೆ ವೆಲ್ತ್‌ಫ್ರಂಟ್
Image Credit : Social Media

6. ಸ್ಮಾರ್ಟ್‌ ಹೂಡಿಕೆಗೆ ವೆಲ್ತ್‌ಫ್ರಂಟ್

ಎಕ್ಸ್‌ಚೇಂಜ್‌ ಟ್ರೇಡ್‌ ಫಂಡ್‌ನಲ್ಲಿ ಆಸಕ್ತರಾಗಿದ್ದರೆ ಈ ಎಐ ಬಾಟ್‌ನ ಸಹಾಯ ಪಡೆಯಬಹುದು. ಇದು ಹೂಡಿಕೆಯ ಐಡಿಯಾ ಕೊಡುವ ಜೊತೆಗೆ ತೆರಿಗೆ ಉಳಿತಾಯಕ್ಕೂ ಪ್ಲಾನ್‌ ಮಾಡುತ್ತದೆ.

88
7. ಮ್ಯಾಗ್ನಿಫೈ
Image Credit : Social Media

7. ಮ್ಯಾಗ್ನಿಫೈ

ಇದು ಇಟಿಎಫ್‌ ಅಂದರೆ ಎಕ್ಸ್‌ಚೇಂಜ್‌ ಟ್ರೇಡ್‌ ಫಂಡ್‌ಗಳ ಬಗ್ಗೆ ತೌಲನಿಕ ಅಂದರೆ ಹೋಲಿಸಿ ನೋಡಿ ವಿವರ ನೀಡುತ್ತದೆ. ಈ ಹೂಡಿಕೆಯಲ್ಲಿ ಏನೆಲ್ಲ ರಿಸ್ಕ್‌ಗಳಿವೆ ಅನ್ನೋದನ್ನು ವಿವರಿಸುತ್ತದೆ. ಯಾವುದರಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌ ಅನ್ನೋದನ್ನೂ ಅರ್ಥವಾಗುವಂತೆ ತಿಳಿಸಿಕೊಡುತ್ತದೆ. ಇದು ಹೂಡಿಕೆಗೆ ಸರಳ ಮಾರ್ಗದರ್ಶಿ.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಕೃತಕ ಬುದ್ಧಿಮತ್ತೆ
ವ್ಯವಹಾರ
ತಂತ್ರಜ್ಞಾನ
ಸುದ್ದಿ

Latest Videos
Recommended Stories
Recommended image1
ಅಪರೂಪದ ಖನಿಜಕ್ಕಾಗಿ ಭಾರತ - ಬ್ರೆಜಿಲ್‌ ಡೀಲ್‌
Recommended image2
ಭಾರತದ ಮೇಲೆ ಶೇ.18 ಅಲ್ಲ, ಇನ್ನು ಶೇ.10 ತೆರಿಗೆ
Recommended image3
ಕೇವಲ ಇಷ್ಟು ಲಕ್ಷ ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷ ಪ್ರತಿ ತಿಂಗಳು ಸಿಗುತ್ತೇ ₹9,250!
Related Stories
Recommended image1
ಹಾಸನದಲ್ಲಿ ಕುಳಿತು ದಾವಣಗೆರೆ ಶಿಕ್ಷಕಿಯ ಡಿಜಿಟಲ್ ಅರೆಸ್ಟ್; 22 ಲಕ್ಷ ಪಂಗನಾಮ ಹಾಕಿ ಸಿಕ್ಕಿಬಿದ್ದ ಸೈಬರ್ ಕಳ್ಳ!
Recommended image2
ಕೆಲಸಕ್ಕಾಗಿ ಆನ್‌ಲೈನ್‌ಗೆ ಮೊರೆ ಹೋಗುವ ಕಾರ್ಮಿಕರು, ಡಿಜಿಟಲ್ ಲೇಬರ್ ಚೌಕ್ ಎಂಬ ತಂತ್ರಜ್ಞಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved