Actor Kiran Raj: ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ ಕಿರುತೆರೆಯ ಕರ್ಣ ಕಿರಣ್ ರಾಜ್
ಕಿರುತೆರೆ ನಟ ಕಿರಣ್ ರಾಜ್ ತಮ್ಮ ಮುಂಬರುವ ಸಿನಿಮಾದ ಬಗ್ಗೆ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಆಲ್ ದಿ ಬೆಸ್ಟ್ ಹೀರೋ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ. ನೀವು ಕಂಡ ಕನಸುಗಳೆಲ್ಲವೂ ನನಸಾಗಲಿ ಎಂದು ಶುಭ ಹಾರೈಸಿದ್ದಾರೆ.

ನಟ ಕಿರಣ್ ರಾಜ್
ಕನ್ನಡ ಕಿರುತೆರೆಯ ಬಹುಬೇಡಿಕೆಯ ನಟ ಕಿರಣ್ ರಾಜ್ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದೆ. ಸದ್ಯ ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿರುವ ಕಿರಣ್ ರಾಜ್, ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ಐದು ಫೋಟೋಗಳನ್ನು ಶೇರ್ ಮಾಡಿಕೊಂಡು ಮಾಹಿತಿಯನ್ನು ನೀಡಿದ್ದಾರೆ.
ಸಕ್ಸಸ್‌ಗಾಗಿ ಕಾಯುತ್ತಿರುವ ಕಿರಣ್ ರಾಜ್
ಧಾರಾವಾಹಿಗಳ ಜೊತೆ ಸಿನಿಮಾಗಳಲ್ಲಿಯೂ ನಾಯಕ ನಟನಾಗಿ ಕಿರಣ್ ರಾಜ್ ನಟಿಸುತ್ತಾರೆ. ಈಗಾಗಲೇ ಮಾರ್ಚ್ 22, ಭರ್ಜರಿ ಗಂಡು ಮತ್ತು ರಾನಿ ದಿ ರೂಲರ್ ಸಿನಿಮಾಗಳಲ್ಲಿ ಕಿರಣ್ ರಾಜ್ ನಟಿಸಿದ್ದಾರೆ. ಬೆಳ್ಳಿ ಪರದೆ ಮೇಲೆ ದೊಡ್ಡ ಸಕ್ಸಸ್‌ಗಾಗಿ ಕಿರಣ್ ರಾಜ್ ಕಾಯುತ್ತಿದ್ದಾರೆ.
ಜಾಕಿ-42
ತಮ್ಮ ಮುಂದಿನ ದಿನ 'ಜಾಕಿ-42' ಸಿನಿಮಾದ ಕುರಿತು ಕಿರಣ್ ರಾಜ್ ಬಿಗ್ ಅಪ್‌ಡೇಟ್ ನೀಡಿದ್ದಾರೆ. ಗುರುತೇಜ್ ಶೆಟ್ಟಿ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಕಿರಣ್ ರಾಜ್‌ಗೆ ಜೋಡಿಯಾಗಿ ಹೃತಿಕಾ ಶ್ರೀನಿವಾಸ್ ನಟಿಸಿದ್ದಾರೆ. ಶೀಘ್ರದಲ್ಲಿಯೇ ಜಾಕಿ-42 ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ ಎಂದು ಕಿರಣ್ ರಾಜ್ ತಿಳಿಸಿದ್ದಾರೆ.
ಆಲ್ ದಿ ಬೆಸ್ಟ್ ಹೀರೋ
ಚಿತ್ರದಲ್ಲಿನ ತಮ್ಮ ಪಾತ್ರ ಮತ್ತು ಮೇಕಿಂಗ್ ದೃಶ್ಯಗಳ ಫೋಟೋಗಳ ಮೂಲಕ ಟೀಸರ್ ಬಿಡುಗಡೆಯಾಗವ ವಿಷಯವನ್ನು ಹಂಚಿಕೊಂಡಿರುವ ಕಿರಣ್ ರಾಜ್ ಅವರಿಗೆ ಅಭಿಮಾನಿಗಳಿಂದ ಶುಭಾಶಯ ಸಂದೇಶ ಹರಿದು ಬರುತ್ತಿವೆ. ಆಲ್ ದಿ ಬೆಸ್ಟ್ ಹೀರೋ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ. ನೀವು ಕಂಡ ಕನಸುಗಳೆಲ್ಲವೂ ನನಸಾಗಲಿ ಎಂದು ಶುಭ ಹಾರೈಸಿದ್ದಾರೆ.
ಜಾಕಿ-42 ಸಿನಿಮಾ ತಂಡ
ಶೀರ್ಷಿಕೆಯೇ ಹೇಳುವಂತೆ ಜಾಕಿ-42 ಹಾರ್ಸ್ ರೇಸ್ ಕಥೆಯನ್ನು ಒಳಗೊಂಡಿದೆ. ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಭಾರತಿ ಸತ್ಯನಾರಾಯಣ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ವಿನೋದ್ ಯಜಮಾನಿ ಅವರ ಸಂಗೀತವಿರಲಿದ್ದು, ಕನ್ನಡವೂ ಸೇರಿದಂತೆ ತೆಲಗು ಮತ್ತು ತಮಿಳು ಭಾಷೆಯ ಕಲಾವಿದರು ಜಾಕಿ-42ರ ಭಾಗವಾಗಿದ್ದಾರೆ.