ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನ ಹಾಗೂ ದಲಿತ ಸಿಎಂ ಕೂಗು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ.
ಬೆಂಗಳೂರು (ಅ.28): ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದಿದ್ದಾರೆ. ಪರಮೇಶ್ವರ್‌ರವರನ್ನ ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಮಾಡಬಹುದಿತ್ತು ಎಂಬ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ವಿಚಾರವಾಗಿ ಸದಾಶಿವನಗರ ನಿವಾಸದಲ್ಲಿ ಪ್ರತಿಕ್ರಿಯಿಸಿದ ಅವರು, ನಾನು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರವರ ಅಭಿಪ್ರಾಯವನ್ನು ತಿಳಿಸುತ್ತಾ ಇರುತ್ತಾರೆ. ನಾವು ಪ್ರತಿಕ್ರಿಯೆ ಮಾಡುವುದರಲ್ಲಿ ಅರ್ಥವಿಲ್ಲ. ನಾನು ಪದೇ ಪದೇ ಈಗಾಗಲೇ ಹೇಳಿದ್ದೇನೆ. ಯಾವುದೇ ತೀರ್ಮಾನ ಹೈಕಮಾಂಡ್ ಅವರೇ ಮಾಡುತ್ತಾರೆ.
ಅಷ್ಟು ಹೇಳಿದ ಮೇಲೆಯೂ ನಾವು ಒಂದೊಂದು ಹೇಳಿಕೆಯನ್ನು ನೀಡುವುದು ಸೂಕ್ತವಲ್ಲ. ಎಲ್ಲಿಗೆ ಹೋಗಿ ತಲುಪುತ್ತೆ ಗೊತ್ತಿಲ್ಲ. ಪಕ್ಷದ ವಿಚಾರವಾಗಿ ನಾನು ಹಾಗೂ ಸಿಎಂ ಇಬ್ಬರೂ ಕೂಡ ನಿನ್ನೆ ಕ್ಲಾರಿಫೈ ಮಾಡಿದ್ದೇವೆ. ಹೈಕಮಾಂಡ್‌ನಲ್ಲಿ ಏನು ತೀರ್ಮಾನ ಆಗುತ್ತೆ ಅದೇ ಅಂತಿಮ. ಅದನ್ನ ನಾವೆಲ್ಲರೂ ಒಪ್ಪುತ್ತೇವೆ. ನಾವು ಹೇಳಿಕೆಗಳನ್ನು ಕೊಟ್ಟುಕೊಂಡು ಹೋಗುತ್ತಿದ್ದರೆ ಆಡಳಿತದ ಮೇಲೆ ಪರಿಣಾಮ ಬೀರುತ್ತೆ ಎಂದರು. ಸಿಎಂ ಮೆತ್ತಗಾಗಿದ್ದಾರಾ ಎಂಬ ವಿಚಾರವಾಗಿ, ಸಿಎಂ ಹೇಳಿಕೆಯಲ್ಲಿ ನಿಮಗೆ ವ್ಯತ್ಯಾಸ ಕಾಣಿಸಬಹುದು ನನಗೇನು ಕಾಣಿಸುತ್ತಿಲ್ಲ. ಸಿಎಂ ಮೆದುವಾಗಿದ್ದಾರೆ ಅಂತ ಯಾರು ನಿಮಗೆ ಹೇಳಿದ್ದು. ಯಾರು ತಾಳೆ ಹಾಕಿ ನೋಡಿದ್ದಾರೆ. ಅವರು ಸಾಫ್ಟಾಗಿದ್ದಾರಾ ಹಾರ್ಡ್ ಆಗಿದ್ದಾರಾ ಅಂತ? ಅದು ಬಿಟ್ಟು ಬೇರೆ ಏನಾದರೂ ಇದ್ದರೆ ಹೇಳಿ ಎಂದರು.
ಮುಂದಿನ ಬಾರಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಸಿಎಂ ಹೇಳಿಕೆ ವಿಚಾರವಾಗಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಅದರ ಬಗ್ಗೆ ನಾವು ನಿಂತುಕೊಳ್ಳಿ ನಿಂತುಕೊಳ್ಳಬೇಡಿ ಅಂತ ಹೇಳಲು ಆಗುವುದಿಲ್ಲ. ಅದು ಅವರ ವೈಯಕ್ತಿಕವಾದ ತೀರ್ಮಾನ/ ನಿನ್ನೆ ಕೂಡ ಅದನ್ನೇ ಹೇಳಿದ್ದಾರೆ ಎಂದು ತಿಳಿಸಿದರು. ದಲಿತ ಸಿಎಂ ಕೂಗು ವಿಚಾರ, ಪರಮೇಶ್ವರ್ ಹೆಸರು ಕೇಳಿಬರ್ತಿರುವ ಹಿನ್ನೆಲೆಯಲ್ಲಿ ನಾನು ಅದರ ಬಗ್ಗೆ ಮಾತಾಡಲ್ಲ. ದಲಿತ ಸಿಎಂ ಬಗ್ಗೆ ಅವರವರು ಅವರವರ ಅಭಿಪ್ರಾಯ ಹೇಳ್ತಾರೆ, ನಾನು ಪ್ರತಿಕ್ರಿಯೆ ಕೊಡಲ್ಲ.
ಹೈಕಮಾಂಡ್ ತೀರ್ಮಾನವೇ ಅಂತಿಮ
ಏನೇ ತೀರ್ಮಾನ ಇದ್ರೂ ಹೈಕಮಾಂಡ್‌ನವ್ರು ನಿರ್ಣಯ ಮಾಡ್ತಾರೆ. ಪದೇ ಪದೇ ಹೇಳಿಕೆ ಕೊಡೋದು ಸರಿಯಲ್ಲ. ಇದು ಎಲ್ಲಿಗೆ ಹೋಗಿ ನಿಲ್ಲುತ್ತೋ ಗೊತ್ತಿಲ್ಲ. ನಿನ್ನೆ ಸಿಎಂ ಕೂಡಾ ಸ್ಪಷ್ಟನೆ ನೀಡಿದ್ದಾರೆ, ಹೈಕಮಾಂಡ್ ಏನು ತೀರ್ಮಾನ ಮಾಡುತ್ತೋ ಅದೇ ಅಂತಿಮ. ಅದನ್ನ ನಾವೆಲ್ರೂ ಒಪ್ಕೋತೇವೆ. ಸಿಎಂ ಸ್ಥಾನದ ಪ್ರಶ್ನೆ ಎಲ್ಲೂ ಉದ್ಭವ ಆಗಿಲ್ಲ. ಹೈಕಮಾಂಡ್ ಸಹ ನಮಗೆ ಏನೂ ಹೇಳಿಲ್ಲ. ಈ ಥರದ ಹೇಳಿಕೆಗಳು ಆಡಳಿತದ ಮೇಲೆ ಪರಿಣಾಮ ಬೀರುತ್ವೆ. ಸದ್ಯದ ಪರಿಸ್ಥಿತಿಯಲ್ಲಿ ಅಂಥ ಪ್ರಶ್ನೆ ಇಲ್ಲ ಎಂದು ಪರಮೇಶ್ವರ್ ಹೇಳಿದರು.
