MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಕಿತ್ತೂರು ಉತ್ಸವದಲ್ಲಿ ನಿಜಕ್ಕೂ ನಡೆದಿದ್ದು ಏನು? ಹನುಮಂತ್ ಅರ್ಧಕ್ಕೆ ಹಾಡು ನಿಲ್ಲಿಸಿದ್ದೇಕೆ? ಎಸ್‌ಪಿ ಹೇಳಿದ್ದೇನು?

ಕಿತ್ತೂರು ಉತ್ಸವದಲ್ಲಿ ನಿಜಕ್ಕೂ ನಡೆದಿದ್ದು ಏನು? ಹನುಮಂತ್ ಅರ್ಧಕ್ಕೆ ಹಾಡು ನಿಲ್ಲಿಸಿದ್ದೇಕೆ? ಎಸ್‌ಪಿ ಹೇಳಿದ್ದೇನು?

ಬೆಳಗಾವಿಯ ಕಿತ್ತೂರು ಉತ್ಸವದಲ್ಲಿ ಗಾಯಕ ಹನುಮಂತ್‌ಗೆ ಅವಮಾನವಾಗಿದೆ ಎಂಬ ವಿಡಿಯೋ ವೈರಲ್ ಆಗಿತ್ತು. ಈ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಎಸ್‌ಪಿ ಭೀಮಾಶಂಕರ್ ಗುಳೇದ್, ಇದು ಭಾಷಾ ವಿವಾದವಲ್ಲ, ಬದಲಿಗೆ ಸಮಯ ಮತ್ತು ಜನಜಂಗುಳಿಯ ಸುರಕ್ಷತೆಯ ಕಾರಣಕ್ಕೆ ನಡೆದ ವಾಗ್ವಾದ ಎಂದು ತಿಳಿಸಿದ್ದಾರೆ.

2 Min read
Author : Mahmad Rafik
Published : Oct 28 2025, 10:43 AM IST
Share this Photo Gallery
  • FB
  • TW
  • Linkdin
  • Whatsapp
15
ಬೆಳಗಾವಿಯ ಕಿತ್ತೂರು ಉತ್ಸವ
Image Credit : Asianet News

ಬೆಳಗಾವಿಯ ಕಿತ್ತೂರು ಉತ್ಸವ

ಬೆಳಗಾವಿಯ ಕಿತ್ತೂರು ಉತ್ಸವದಲ್ಲಿ ಬಿಗ್‌ಬಾಸ್ ಶೋ ವಿಜೇತ, ಜನಪ್ರಿಯ ಗಾಯಕ ಹನುಮಂತ್ ಅವರಿಗೆ ಅನುಮಾನ ಆಗಿದೆ ಎಂಬ ಶೀರ್ಷಿಕೆಯಡಿ ಕೆಲ ವಿಡಿಯೋಗಳು ವೈರಲ್ ಆಗುತ್ತಿವೆ. ಎಸ್‌ಪಿ ಭೀಮಾಶಂಕರ್ ಗುಳೇದ್ ಮತ್ತು ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ನಡುವಿನ ಮಾತಿನ ಚಕಮಕಿ ವಿಡಿಯೋ ವೈರಲ್ ಆಗಿತ್ತು.

25
ಆರೋಪಗಳಿಗೆ ಸ್ಪಷ್ಟನೆ
Image Credit : Asianet News

ಆರೋಪಗಳಿಗೆ ಸ್ಪಷ್ಟನೆ

ಹಿಂದಿ ಹಾಡುಗಳಿಗಾಗಿ ಹನುಮಂತ್ ಅವರು ಹಾಡನ್ನು ನಿಲ್ಲಿಸಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಸ್ವತಃ ಎಸ್‌ಪಿ ಭೀಮಾಶಂಕರ್ ಗುಳೇದ್ ಅವರು ಕಿತ್ತೂರು ಉತ್ಸವದಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಸ್ಪಷ್ಟನೆ ನೀಡುವ ಮೂಲಕ ಎಲ್ಲಾ ಗೊಂದಲಗಳಿಗೂ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.

Related Articles

Related image1
ಬಿಗ್ ಬಾಸ್ ಟ್ರೋಫಿಯನ್ನು ಚಿಲ್ಲೂರು ಬಡ್ನಿ ಆಂಜನೇಯ ದೇವರ ಪಾದಕ್ಕಿಟ್ಟು ಪೂಜಿಸಿದ ಹನುಮಂತ ಲಮಾಣಿ!
Related image2
ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿಗೆ ಕರೆ ಮಾಡಿದ ಮಾಜಿ ಸಚಿವ; ರಾಜಕೀಯಕ್ಕೆ ಬರ್ತಾನಾ ಹಳ್ಳಿ ಹೈದ!
35
ಭೀಮಾಶಂಕರ್ ಗುಳೇದ್ ಹೇಳಿದ್ದೇನು?
Image Credit : Asianet News

ಭೀಮಾಶಂಕರ್ ಗುಳೇದ್ ಹೇಳಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಶುದ್ಧ ಸುಳ್ಳು. ಸಮಯದ ವಿಚಾರವಾಗಿ ವಿದ್ಯಾವತಿ ಅವರಿಗೂ ಮತ್ತು ನನಗೂ ವಾಗ್ವಾದ ಆಗಿತ್ತು. ಕನ್ನಡ ವರ್ಸಸ್ ಹಿಂದಿ ಎಂಬ ಭಾಷೆಗಳ ವಿಚಾರವಾಗಿ ವಾಗ್ವಾದ ನಡೆದಿಲ್ಲ. ರಾತ್ರಿ 9.30ಕ್ಕೆ ಆ ಕಾರ್ಯಕ್ರಮ ಮುಗಿಯಬೇಕಿತ್ತು. ಆದ್ರೆ ವಿದ್ಯಾವತಿ ಅವರು 10.30ಕ್ಕೆ ಮುಗಿಸೋದಾಗಿ ಹೇಳಿದ್ದರು. ಇದರಲ್ಲಿ ಅವರದ್ದು ತಪ್ಪಿಲ್ಲ. ಇಬ್ಬರು ಅಧಿಕಾರಿಗಳ ವಿಷಯ ಬಂದಿರೋದರಿಂದ ಸ್ಪಷ್ಟನೆ ನೀಡಲಾಗುತ್ತಿದೆ ಎಂದು ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.

45
ಇದು ಭಾಷಾ ವಿಷಯವಲ್ಲ
Image Credit : Asianet News

ಇದು ಭಾಷಾ ವಿಷಯವಲ್ಲ

ಕೆಲವರು ಈ ವಿಷಯವನ್ನು ಕನ್ನಡಿಗ ವರ್ಸಸ್ ಬೇರೆ ಭಾಷೆ ಎಂಬ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಇದು ಭಾಷಾ ವಿಷಯವಲ್ಲ. ಸಮಯಕ್ಕಾಗಿ ನಡೆದ ಮಾತುಕತೆಯಾಗಿತ್ತು. ಮೂರು ದಿನಗಳಿಂದ ನಮ್ಮ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ನಿಗದಿಯಂತೆ ಕಾರ್ಯಕ್ರಮವನ್ನು ಮುಗಿಸೋದು ನಮ್ಮ ಉದ್ದೇಶವಾಗಿತ್ತು ಎಂದು ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

ಇದನ್ನೂ  ಓದಿ: Bigg Boss Kannada: ಅಣ್ಣನೊಂದಿಗೆ ಸೈಕಲ್ ಮೇಲೆ ಕುಳಿತ ಬಿಗ್‌ಬಾಸ್ ಕನ್ನಡದ ಸ್ಪರ್ಧಿಯ ಬಾಲ್ಯದ ಫೋಟೋ ವೈರಲ್ 

55
ಮುಂಜಾಗ್ರತ ಕ್ರಮ
Image Credit : Asianet News

ಮುಂಜಾಗ್ರತ ಕ್ರಮ

ವೇದಿಕೆ ಮೇಲೆ ಗಾಯಕರಾದ ಬಾಳು ಬೆಳಗುಂದಿ ಮತ್ತು ಹನುಮಂತ್ ಬರುತ್ತಿದ್ದಂತೆ ಜನಜಂಗುಳಿ ಹೆಚ್ಚಾಯ್ತು. ಕೆಲ ಪ್ರೇಕ್ಷಕರು ವಿದ್ಯುತ್ ಕಂಬ, ಅಡ್ಡಲಾಗಿ ಹಾಕಲಾಗಿದ್ದ ಕೋಲುಗಳು ಮೇಲೆ ಹತ್ತುತ್ತಿದ್ದರು. ಮೈಕ್‌ನಲ್ಲಿಯೂ ಈ ಬಗ್ಗೆ ಅನೌನ್ಸ್ ಮಾಡಲಾಗುತ್ತಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಹ್ವಾನ ಪತ್ರಿಕೆಯಲ್ಲಿರುವ ಸೂಚಿಸಿದ ಸಮಯಕ್ಕೆ ಕಾರ್ಯಕ್ರಮ ಮುಗಿಸೋದು ನಮ್ಮ ಕೆಲಸವಾಗಿತ್ತು ಎಂದು ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕಿತ್ತೂರು ಉತ್ಸವದಲ್ಲಿ ಬಿಗ್‌ಬಾಸ್ ವಿನ್ನರ್ ಹನುಮಂತ್‌ಗೆ ಅವಮಾನ? ವಿಡಿಯೋ ವೈರಲ್

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ

Latest Videos
Recommended Stories
Recommended image1
ಮನೆ ಅಂಗಳದಲ್ಲಿ 8-12 ಅಡಿಯ 6 ಹೆಬ್ಬಾವು ಪ್ರತ್ಯಕ್ಷ! ಒಂದೆಡೆ ಇಷ್ಟೊಂದು ಹಾವು ಬಂದಿದ್ಯಾಕೆ?
Recommended image2
Channagiri woman death: ಇಂಜೆಕ್ಷನ್ ಮಾಡಿಸಿಕೊಳ್ಳಲು ಹೋದ ಮಹಿಳೆ ಆಸ್ಪತ್ರೆಯಲ್ಲೇ ಸಾವು!
Recommended image3
ಮಂತ್ರಾಲಯದಲ್ಲಿ ಗುರು ವೈಭವೋತ್ಸವ ಸಂಭ್ರಮ: ಎಚ್‌ಡಿ ಕುಮಾರಸ್ವಾಮಿ ಸೇರಿ ಗಣ್ಯರಿಗೆ 'ರಾಯರ ಅನುಗ್ರಹ' ಪ್ರಶಸ್ತಿ ಪ್ರದಾನ!
Related Stories
Recommended image1
ಬಿಗ್ ಬಾಸ್ ಟ್ರೋಫಿಯನ್ನು ಚಿಲ್ಲೂರು ಬಡ್ನಿ ಆಂಜನೇಯ ದೇವರ ಪಾದಕ್ಕಿಟ್ಟು ಪೂಜಿಸಿದ ಹನುಮಂತ ಲಮಾಣಿ!
Recommended image2
ಬಿಗ್ ಬಾಸ್ ವಿನ್ನರ್ ಹನುಮಂತ ಲಮಾಣಿಗೆ ಕರೆ ಮಾಡಿದ ಮಾಜಿ ಸಚಿವ; ರಾಜಕೀಯಕ್ಕೆ ಬರ್ತಾನಾ ಹಳ್ಳಿ ಹೈದ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved