ರೋಡ್ ರೋಮಿಯೋನಿಂದ ಅಪ್ರಾಪ್ತ ಬಾಲಕಿ ಸಾವು, ಬೈಕ್‌ನಲ್ಲಿ ಕರೆದೊಯ್ಯುವಾಗ ಅಪಘಾತ, ಬಲವಂತವಾಗಿ ಅಪ್ರಾಪ್ತೆಯನ್ನು ಲೈ0ಗಿಕವಾಗಿ ಬಳಸಿಕೊಳ್ಳಲು ಬೈಕ್‌ನಲ್ಲಿ ಕರೆದೊಯ್ಯುತ್ತಿರುವಾಗ ಅಪಘಾತ ಸಂಭವಿಸಿದೆ. 

ಆನೇಕಲ್ (ಅ.28): ಅಪ್ರಾಪ್ತ ಬಾಲಕಿಯರನ್ನು ಟಾರ್ಗೆಟ್ ಮಾಡುವ ಪುಂಡ ಪೋಕರಿಗಳು ಹಾಗೂ ಇಂತಹ ಪ್ರಕರಣಗಳು ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಇದೀಗ ಅನೇಕಲ್‌ನಲ್ಲಿ ರೋಡ್ ರೋಮಿಯೋನಿಂದ ಅಪ್ರಾಪ್ತ ಬಾಲಕಿ ಮೃತಪಟ್ಟ ಘಟನೆ ನಡೆದಿದೆ. ಪ್ರೀತಿಸುವಂತೆ ಬಾಲಕಿ ಹಿಂದೆ ಬಿದ್ದಿದ್ದ ಈ ಪುಂಡ, ಬಲವಂತವಾಗಿ ಆಕೆಯನ್ನು ಬೈಕ್‌ನಲ್ಲಿ ಕೂರಿಸಿ ಮತ್ತಿಬ್ಬರು ಬೈಕ್‌ನಲ್ಲಿ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬಾಲಕಿ ಮೃತಪಟ್ಟಿದ್ದಾರೆ.

ಇವರೇ ಆರೋಪಿಗಳು

ಅಜಯ್ ಆ್ಯಂಡ್ ಗ್ಯಾಂಗ್ ಎಂದೇ ಪುಂಡತನ ಮಾಡುತ್ತಿದ್ದ ಈ ಗ್ಯಾಂಗ್‌ನ ಮೂವರು ಅರೆಸ್ಟ್ ಆಗಿದ್ದಾರೆ. ಅಜಯ್ ಅಲಿಯಾಸ್ ಮನೋಜ್, ಇರ್ಪಾನ್, ಮುಬಾರಕ್ ಬಂಧಿತ ಆರೋಪಿಗಳು. ಮತ್ತೊಂದು ಬೈಕ್‌ನಲ್ಲಿ ತೆರಳಿದ ಇನ್ನಿಬ್ಬರ ಪೈಕಿ ಓರ್ವನ ಬಂಧನವಾಗಿದೆ. ಈ ಆರೋಪಿಗಳ ಓರ್ವ ಬಾಲಾ ಆರೋಪಿ ಸೇರಿ ನಾಲ್ವರನ್ನ ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?

ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಬಾಲಕಿ ಹಿಂದೆ ಈ ಪುಂಡರ ಗ್ಯಾಂಗ್ ಬಿದ್ದಿತ್ತು. ಪ್ರೀತಿಸುವಂತೆ ಬಲವಂತ ಮಾಡುತ್ತಿತ್ತು ಅನ್ನೋ ಆರೋಪವ್ನು ಬಾಲಕಿ ಪೋಷಕರೇ ಮಾಡಿದ್ದಾರೆ. ಹೀಗೆ ಶಾಲೆಗೆ ಹೋದ ಬಾಲಕಿಯನ್ನು ಪುಂಡರ ಗ್ಯಾಂಗ್ ಬಲವಂತವಾಗಿ ಲೈ0ಗಿಕವಾಗಿ ಬಳಸಿಕೊಳ್ಳಲು ಹೊಸಕೋಟೆ ಮಾರ್ಗವಾಗಿ ಬಾಲಕಿಯನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಅಜಯ್ ಗೌಡ್ ಬೈಕ್‌ನಲ್ಲಿ ಬಾಲಕಿಯನ್ನು ಕೂರಿಸಿ ಬಾಲಕಿ ಹಿಂದೆ ಮತ್ತೊಬ್ಬನ ಕೂರಿಸಲಾಗಿದೆ. ಈ ಮೂಲಕ ಬಾಲಕಿ ಬೈಕ್‌ನಿಂದ ಜಿಗಿಯುವ ಹಾಗೂ ನಗರದಲ್ಲಿ ತಮ್ಮ ಪ್ಲಾನ್‌ಗೆ ವಿರುದ್ದವಾಗಿ ಹೋಗದಂತೆ ನೋಡಿಕೊಂಡಿತ್ತು. ವೇಗವಾಗಿ ನಗರ ಪ್ರದೇಶ ದಾಟಿ ನಿರ್ಜನ ಪ್ರದೇಶಕ್ಕೆ ತೆರಳುವ ಧಾವಂತದಲ್ಲಿ ಈ ಪುಂಡರು ಅತೀ ವೇಗದಿಂದ ಬೈಕ್ ರೈಡ್ ಮಾಡಿದ್ದಾರೆ. ನಿಯಂತ್ರಣ ಕಳೆದುಕೊಂಡ ಆರೋಪಿಗಳು ಬೈಕ್ ಡಿವೈಡರ್‌ಗೆ ಡಿಕ್ಕಿಯಾಗಿದೆ. ಭೀಕರ ಅಪಘಾತದಲ್ಲಿ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇತ್ತಿಬ್ಬರು ಆರೋಪಿಗಳಿಗೆ ಗಾಯವಾಗಿದೆ.

ಬಾಲಕಿ ಮನೆಗೆ ವಾಪಸ್ ಬರದ ಕಾರಣ ದೂರು ನೀಡಿದ ಪೋಷಕರು

ಕಳೆದ ಕೆಲ ದಿನಗಳಿಂದ ಪುಂಡರಿಂದ ಕಿರಿಕಿರಿ ಅನುಭವಿಸುತ್ತಿದ್ದ ಬಾಲಕಿ ಅಕ್ಟೋಬರ್ 24ರಂದು ಎಂದಿನಂತೆ ಸರ್ಕಾರಿ ಶಾಲೆಗೆ ತೆರಳಿದ್ದಾಳೆ. ಆದರೆ ಮಾರ್ಗ ಮಧ್ಯೆ ಅದೇಯ ಅಜಯ್ ಗ್ಯಾಂಗ್ ಅಡ್ಡ ಬಂದಿದೆ. ಬಳಿಕ ಆಕೆಯನ್ನು ಬಲಂವತವಾಗಿ ಕರೆದೊಯ್ದಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತ ಬಾಲಕಿ ಸಂಜೆಯಾದರೂ ಮನೆಗೆ ಬಾರದ ಕಾರಣ ಶಾಲೆ ಸೇರಿದಂತೆ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆದರೆ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಪೋಷಕರು ದೂರು ದಾಖಲಿಸಿದ್ದಾರೆ.

ಇತ್ತ ಪೊಲೀಸರು ಸುತ್ತ ಮುತ್ತಲಿನ ಪೊಲೀಸ್ ಠಾಣೆಗಳಿಗೆ ಅಲರ್ಟ್ ಸಂದೇಶ ನೀಡಿದ್ದಾರೆ. ಅಕ್ಟೋಬರ 24ರ ಸಂಜೆ ಪೋಷಕರಿಗೆ ಹೊಸಕೋಟೆ ಪೊಲೀಸರು ಕರೆ ಮಾಡಿ ಮಗಳು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಹೊಸಕೋಟೆಗೆ ಓಡೋಡಿ ಬಂದ ಪೋಷಕರು ಮಗಳ ಗುರುತು ಪತ್ತೆ ಹಚ್ಚಿದ್ದಾರೆ. ಇದೇ ವೇಳೆ ಪೋಷಕರು, ಕೆಲ ಘಟನೆಗಳನ್ನು ಪೊಲೀಸರಿಗೆ ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಬಾಲಕಿಯನ್ನು ಬಲವಂತವಾಗಿ ಕರೆದೊಯ್ದು , ಲೈ0ಗಿಕವಾಗಿ ಬಳಸಿಕೊಳ್ಳುವ ಪ್ರಯತ್ನ ನಡೆದಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ಕಿಡ್ನಾಪ್ & ಪೋಕ್ಸೋ ಕೇಸ್ ದಾಖಲು

ಪೊಲೀಸರು ಅಪಹರಣ ಹಾಗೂ ಪೋಕ್ಸ್ ಕೇಸ್ ದಾಖಲಿಸಿದ್ದಾರೆ. ಬಾಲಕಿ ಅಪ್ರಾಪ್ತೆಯಾಗಿರುವ ಕಾರಣ ಪೋಕ್ಸ್ ಕೇಸ್ ದಾಖಲಾಗಿದೆ. ನಾಲ್ವರು ಆರೋಪಿಗಳನ್ನು ಬಂಧಿಸಿದ ಬನ್ನೇರುಘಟ್ಟ ಪೊಲೀಸರು ಜೈಲಿಗಟ್ಟಿದ್ದಾರೆ.