ಪಾಸ್ವರ್ಡ್‌ಗಾಗಿ ಪೊಲೀಸರು ಬಲವಂತ ಮಾಡುವಂತಿಲ್ಲ

Kannadaprabha News   | Asianet News
Published : Mar 15, 2021, 07:55 AM IST
ಪಾಸ್ವರ್ಡ್‌ಗಾಗಿ ಪೊಲೀಸರು ಬಲವಂತ ಮಾಡುವಂತಿಲ್ಲ

ಸಾರಾಂಶ

ಯಾವುದೇ ಪ್ರಕರಣದಲ್ಲಿ ಪೊಲೀಸರು ಗ್ಯಾಡ್ಜೆಟ್‌ಗಳನ್ನು ವಶಕ್ಕೆ ಪಡೆದಾಗ  ಅವುಗಳ ಪಾಸ್ವರ್ಡ್ ಪಡೆದುಕೊಳ್ಳಲು ಬಲವಂತ ಮಾಡುವಂತಿಲ್ಲ. ಈ ಬಗ್ಗೆ ಹೈ ಕೋರ್ಟ್ ಸೂಚನೆಯನ್ನು ನೀಡಿದೆ. 

ಬೆಂಗಳೂರು (ಮಾ.15):  ಸರ್ಚ್ ವಾರಂಟ್‌ ಪಡೆಯದೇ ಗ್ಯಾಜೆಟ್‌ಗಳ ಪಾಸ್‌ವರ್ಡ್‌ ನೀಡುವಂತೆ ಆರೋಪಿಗೆ ಬಲವಂತ ಮಾಡಬಾರದು ಎಂಬುದು ಸೇರಿದಂತೆ ತನಿಖೆ ಸಂದರ್ಭದಲ್ಲಿ ಕಂಪ್ಯೂಟರ್‌, ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ಮುಂತಾದ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳನ್ನು ವಶಕ್ಕೆ ಪಡೆಯುವಾಗ ಪೊಲೀಸ್‌ ಇಲಾಖೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೈಕೋರ್ಟ್‌ ರಚಿಸಿ ಆದೇಶಿಸಿದೆ.

ಸ್ಯಾಂಡಲ್‌ವುಡ್‌ ಡ್ರಗ್ಸ್‌ ಜಾಲ ಪ್ರಕರಣದಲ್ಲಿ ಲ್ಯಾಪ್‌ಟಾಪ್‌, ಮೊಬೈಲ್‌ ಪಾಸ್‌ವರ್ಡ್‌ ನೀಡುವಂತೆ ಹಾಗೂ ಪಾಲಿಗ್ರಾಫ್‌ (ಸುಳ್ಳು ಪತ್ತೆ) ಪರೀಕ್ಷೆಗೆ ಒಳಗಾಗುವಂತೆ ತಮಗೆ ಸೂಚಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿ ವೀರೇನ್‌ ಖನ್ನಾ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದ. ಅದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ಅವರು ಈ ಆದೇಶ ಮಾಡಿದ್ದಾರೆ.

ತನಿಖೆ ಸಂದರ್ಭದಲ್ಲಿ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಸಾಕ್ಷ್ಯಗಳ ಸಂಗ್ರಹ ಮತ್ತು ರಕ್ಷಣೆ ವಿಚಾರದಲ್ಲಿ ಅನುಸರಿಸಬೇಕಾದ ಮಾನದಂಡಗಳ ಕುರಿತು ರಾಜ್ಯ ಸರ್ಕಾರ ಮತ್ತು ಪೊಲೀಸ್‌ ಇಲಾಖೆ ಈವರೆಗೂ ಯಾವುದೇ ಮೂರ್ಗಸೂಚಿ ರೂಪಿಸಿಲ್ಲ. ಪ್ರಸ್ತುತ ಕಾಲಮಾನದಲ್ಲಿ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳ ಸಾಕ್ಷ್ಯಗಳ ಸಂಗ್ರಹ ಮತ್ತು ರಕ್ಷಣೆ ತನಿಖೆ ದೃಷ್ಟಿಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ, ಸರ್ಕಾರ ಸೂಕ್ತ ಮಾರ್ಗಸೂಚಿ ರೂಪಿಸಿ ಜಾರಿಗೊಳಿಸುವವರೆಗೆ ನ್ಯಾಯಾಲಯದ ರಚಿಸಿರುವ ಈ ಮಾರ್ಗಸೂಚಿಗಳನ್ನು ಪಾಲಿಸುವಂತೆ ಪೊಲೀಸ್‌ ಇಲಾಖೆಗೆ ಸೂಚಿಸಿದೆ. ಅಲ್ಲದೇ, ಮಾರ್ಗಸೂಚಿಗಳ ರಚನೆಗೆ ಸರ್ಕಾರ ಅಗತ್ಯ ಕ್ರಮ ಜರುಗಿಸಬೇಕೆಂದು ನಿರ್ದೇಶನವನ್ನು ನೀಡಿದೆ.

ಇದೇ ವೇಳೆ ಆರೋಪಿ ವೀರೇನ್‌ ಖನ್ನಾ ಅವರನ್ನು ಪಾಲಿಗ್ರಾಫ್‌ ಪರೀಕ್ಷೆ ಒಳಪಡಿಸಲು ತನಿಖಾಧಿಕಾರಿಗಳಿಗೆ ನಿರ್ದೇಶಿಸಿದ ವಿಚಾರಣಾ ನ್ಯಾಯಾಲಯದ ಆದೇಶವನ್ನು ನ್ಯಾಯಪೀಠ ರದ್ದುಪಡಿಸಿದೆ. ಆರೋಪಿಯ ಒಪ್ಪಿಗೆ ಪಡೆಯದೆ ಪಾಲಿಗ್ರಾಫ್‌ ಪರೀಕ್ಷೆಗೆ ಒಳಪಡಿಸಲು ಆದೇಶಿಸುವುದು ಸಾಧ್ಯವಿಲ್ಲ. ಆತನ ಮೌನವನ್ನು ಒಪ್ಪಿಗೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಮಾರ್ಗಸೂಚಿಯಲ್ಲಿ ಏನೇನಿದೆ?:

ತನಿಖೆ ಸಂದರ್ಭದಲ್ಲಿ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಲ್ಲಿನ ಮಾಹಿತಿ ಅಗತ್ಯ ಇದ್ದಾಗ ಪೊಲೀಸರು ಅವುಗಳನ್ನು ನೇರವಾಗಿ ನಿರ್ವಹಣೆ ಮಾಡುವ ಬದಲಿಗೆ ವಿಧಿವಿಜ್ಞಾನ ಪರೀಕ್ಷಕರನ್ನು ಬಳಸಿಕೊಳ್ಳಬೇಕು. ಅವರು ತನಿಖಾ ತಂಡದ ಸದಸ್ಯರಾಗಿರಬೇಕು.

ಯೂಟ್ಯೂಬ್‌ ನೋಡಿ ಕಳವು ಮಾಡುತ್ತಿದ್ದ ಖದೀಮನ ಬಂಧನ ...

ವಿಧಿವಿಜ್ಞಾನ ಪರೀಕ್ಷಕರು ಲಭ್ಯವಿಲ್ಲದಿದ್ದ ವೇಳೆ ಕಂಪ್ಯೂಟರ ಅನ್ನು ಅನ್‌ಪ್ಲಗ್‌ ಮಾಡಿ, ಅದನ್ನು ವಿದ್ಯುತ್‌ ಸಂಪರ್ಕಕ್ಕೆ ಸಿಗದಂತೆ ಫ್ಯಾರಡೆ ಕವರ್‌ಗಳಲ್ಲಿ ಪ್ರತ್ಯೇಕವಾಗಿ ರಕ್ಷಿಸಿಡಬೇಕು.

ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಾಗ ಮೊಟ್ಟಮೊದಲಿಗೆ ಅವುಗಳ ನೆಟ್ವರ್ಕ್ ಕಡಿತಗೊಳಿಸಬೇಕು. ವೈಫೈ ಅಥವಾ ಮೊಬೈಲ್‌ ಡೇಟಾ ಸಿಗ್ನಲ್‌ಗಳನ್ನು ನಿರ್ಬಂಧಿಸಿ ಫ್ಯಾರಡೆ ಕವರ್‌ಗಳಲ್ಲಿ ಇರಿಸಬೇಕು.

ತನಿಖಾಧಿಕಾರಿಗಳು ವಶಕ್ಕೆ ತೆಗೆದುಕೊಳ್ಳುವ ವೇಳೆ ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಆನ್‌ ಅಥವಾ ಸ್ಕ್ರೀನ್‌ ಬ್ಲಾಂಕ್‌ ಇದ್ದರೆ ಮೌಸ್‌ ಸರಿಸಿ ಸ್ಕ್ರೀನ್‌ನಲ್ಲಿ ಮೂಡುವ ಚಿತ್ರಗಳನ್ನು ಫೋಟೋ ತೆಗೆದಿರಿಸಬೇಕು. ಸ್ವಿಚ್‌ ಆಫ್‌ ಇದ್ದಾಗ ಆನ್‌ ಮಾಡಬಾರದು.

ಗ್ಯಾಜೆಟ್‌ಗಳನ್ನು ಇರಿಸಿರುವ ಸ್ಥಳ ಮತ್ತು ಅವುಗಳನ್ನು ಹೇಗೆ ಇರಿಸಲಾಗಿದೆ ಎಂಬುದನ್ನು ತೋರಿಸುವ ಫೋಟೋ ತೆಗೆದು ಸಂರಕ್ಷಿಸಿಡಬೇಕು.ಗ್ಯಾಜೆಟ್‌ ತೆರೆದು ಪರಿಕ್ಷೆ ನಡೆಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಪ್ರಾಸಿಕ್ಯೂಷನ್‌ ಸ್ವತಂತ್ರವಾಗಿರುತ್ತದೆ. ವಿಚಾರಣಾ ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಿ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಿರಿಯಾನಿ ಹೋಟೆಲ್ ಕುಟುಂಬದ ಸಾಮೂಹಿಕ ಆತ್ಮ*ಹತ್ಯೆ ಕೇಸಿಗೆ ಟ್ವಿಸ್ಟ್; ವಿಷ ಸೇವಿಸದ ಅಜ್ಜಿ ಸತ್ತಿದ್ಹೇಗೆ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!