Breaking: ಶಿವಮೊಗ್ಗದಲ್ಲಿ ಜೋಡಿ ಕೊಲೆ: ಅನ್ಯಕೋಮಿನ ಇಬ್ಬರು ಯುವಕರ ಬರ್ಬರ ಹತ್ಯೆ

By Sathish Kumar KH  |  First Published May 8, 2024, 7:13 PM IST

ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾದ ನಡು ರಸ್ತೆಯಲ್ಲಿಯೇ ಅನ್ಯಕೋಮಿಗೆ ಸೇರಿದ ಇಬ್ಬರು ಯುವಕರ ಮೇಲೆ ಕಲ್ಲು ಬಂಡೆಗಳನ್ನು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. 


ಶಿವಮೊಗ್ಗ (ಮೇ 08): ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲಾದ ನಡು ರಸ್ತೆಯಲ್ಲಿಯೇ ಅನ್ಯಕೋಮಿಗೆ ಸೇರಿದ ಇಬ್ಬರು ಯುವಕರ ಮೇಲೆ ಕಲ್ಲು ಬಂಡೆಗಳನ್ನು ಎತ್ತಿಹಾಕಿ ಬರ್ಬರವಾಗಿ ಕೊಲೆ ಮಾಡಲಾಗಿದೆ. 

ಹೌದು, ಶಿವಮೊಗ್ಗ ನಗರದ ಲಷ್ಕರ್ ಮೊಹಲ್ಲ ಬಳಿ ಜೋಡಿ ಕೊಲೆಯಾಗಿದೆ. ಈ ಕೊಲೆ ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಲಷ್ಕರ್ ಮೊಹಲ್ಲಾದ ಜನತಾ ಮಟನ್ ಸ್ಟಾಲ್ ಎದರು ಘಟನೆ ನಡೆದಿದ್ದು, ಕೊಲೆಯಾದ ಯುವಕರನ್ನು ಜೆಪಿ ನಗರದ  ಶೇಬು ಮತ್ತು ಗೌಸ್ ಎಂದು ಗುರುತಿಸಲಾಗಿದೆ. ಇನ್ನು ಕೊಲೆಯಾದ ಇಬ್ಬರೂ ಯುವಕರನ್ನು ರೌಡಿಶೀಟರ್ ಯಾಸಿನ್ ಕಡೆಯವರು ಎಂದು ಹೇಳಲಾಗುತ್ತಿದೆ. ರೌಡಿಗಳ ನಡುವೆ ನಡೆದ ಗಲಾಟೆಯಿಂದಾಗ ಮರ್ಡರ್ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ವೇಳೆ ರೌಡಿ ಶೀಟರ್ ಯಾಸೀನ್ ಮೇಲೆಯೂ ಮಾರಣಾಂತಿಕ ದಾಳಿ ಮಾಡಲಾಗಿದೆ. ಈ ವೇಳೆ ದುಷ್ಕರ್ಮಿಗಳ ತಂಡದಿಂದ ತಪ್ಪಿಸಿಕೊಂಡ ಯಾಸೀನ್ ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Tap to resize

Latest Videos

undefined

ಮಗಳ ಪ್ರೀತಿಗೆ ಅಡ್ಡ ನಿಂತು ಭಗ್ನಪ್ರೇಮಿಗೆ ಚಾಕು ಇರಿದ ಅಪ್ಪ, ಬಿಡಿಸಲು ಬಂದ ಸಹೋದರನೂ ಬಲಿ!

ಗೌಸ್ ಮತ್ತು ಶೇಬು ಇಬ್ಬರೂ ರಸ್ತೆಯಲ್ಲಿ ಹೋಗುತ್ತಿರುವಾಗ ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳ ತಂಡವು ಮಚ್ಚು, ಲಾಂಗು ಹಾಗೂ ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ. ಜೊತೆಗೆ, ಇಬ್ಬರ ಮುಖಗಳೂ ಗೊತ್ತು ಸಿಗಬಾರದೆಂದು ರಸ್ತೆಯ ಬದಿ ಚರಂಡಿಗಳಿಗೆ ಹಾಕಲಾಗಿದ್ದ ದೊಡ್ಡ ದೊಡ್ಡ ಕಲ್ಲು ಬಂಡೆಗಳನ್ನು ತಂದು ಅವರ ತಲೆ ಮೇಲೆ ಎತ್ತಿ ಹಾಕಿದ್ದಾರೆ. ಇನ್ನು ಹಲ್ಲೆಗೆ ನಿಖರ ಕಾರಣ ಹಾಗೂ ಹಲ್ಲೆ ಮಾಡಿದವರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್!

ಕಳೆದೊಂದು ವಾರದ ಹಿಂದೆ ರೌಡಿಶೀಟರ್ ಯಾಸಿನ್ ಮತ್ತೊಬ್ಬ ರೌಡಿಶೀಟರ್ ಜೊತೆ ಜಗಳ ನಡೆದಿತ್ತು. ಈ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎನ್ನಲಾಗಿದೆ. ಈ ಘಟನೆಯು ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳೀಯ ಪೊಲೀಸರು ಬಂದು ಸ್ಥಳ ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಮಾಜಿ ಗೃಹ ಸಚಿವರೂ ಆಗಿರುವ ಶಾಸಕ ಅರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ಮಾಡಿದ್ದಾರೆ.

click me!