ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವೀಡಿಯೋ ಹಂಚಿದ ಆರೋಪದಲ್ಲಿ ಪ್ರಜ್ವಲ್ ಅವರ ಕಾರು ಚಾಲಕ ಕಾರ್ತಿಕ್, ನವೀನ್‌ಗೌಡ ಸೇರಿ ನಾಲ್ವರ ನಿರೀಕ್ಷಣ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಹಾಸನ (ಮೇ 08): ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವೀಡಿಯೋ ಹಂಚಿದ ಆರೋಪದಲ್ಲಿ ಪ್ರಜ್ವಲ್ ಅವರ ಕಾರು ಚಾಲಕ ಕಾರ್ತಿಕ್, ನವೀನ್‌ಗೌಡ ಸೇರಿ ನಾಲ್ವರ ನಿರೀಕ್ಷಣ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ವಜಾಗೊಳಿಸಿದೆ.
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಹಂಚಿಕೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪದಡಿ ವಕೀಲ ಪೂರ್ಣಚಂದ್ರ ಅವರು ಹಾಸನದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಆರೋಪಿಗಳಾದ ಕಾರ್ತಿಕ್, ನವೀನ್, ಚೇತನ್, ಪುಟ್ಟಿ@ಪುಟ್ಟರಾಜ್ ಜಾಮೀನಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಬುಧವಾರ ಈ ಜಾಮೀನು ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡ ಹಾಸನ ಜಿಲ್ಲಾ ಜಿಲ್ಲಾ 3 ನೇ ಅಧಿಕ ಸತ್ರ ನ್ಯಾಯಾಲಯವು ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಹೆಚ್.ಡಿ. ರೇವಣ್ಣಗೆ ಒಂದು ವಾರ ನ್ಯಾಯಾಂಗ ಬಂಧನ; ಪರಪ್ಪನ ಅಗ್ರಹಾರಕ್ಕೆ ಶಿಫ್ಟ್
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್.ಡಿ. ರೇವಣ್ಣ ಪರ ವಕೀಲ ಗೋಪಾಲ ಗೌಡ ಅವರು, ಶ್ಲೀಲ ವೀಡಿಯೋ ಹಂಚಿದ ಆರೋಪದಲ್ಲಿ ಸಂಸದ ಪ್ರಜ್ವಲ್ ಕಾರು ಚಾಲಕ ಕಾರ್ತಿಕ್ ಸೇರಿ ನಾಲ್ವರ ನಿರೀಕ್ಷಣ ಜಾಮೀನು ಅರ್ಜಿ ವಜಾ ಮಾಡಲಾಗಿದೆ. ಏಪ್ರಿಲ್ 23 ರಂದು ಹಾಸನದ ಸೈಬರ್ ಕ್ರೈಮ್ ಠಾಣೆಯಲ್ಲಿ ಪೆನ್‌ಡ್ರೈವ್ ಹಂಚಿಕೆ ಕೇಸ್ ದಾಖಲಿಸಲಾಗಿತ್ತು. ಪೆನ್ ಡ್ರೈವ್ ವೈರಲ್ ಸಂಬಂಧ ಜೆಡಿಎಸ್ ಜಿಲ್ಲಾ ಚುನಾವಣಾ ಏಜೆಂಟ್ ಪೂರ್ಣ ಚಂದ್ರ ದೂರು ನವೀನ್ ಗೌಡ ಮತ್ತು ಇತರರು ಎಂದು 6 ಜನರ ವಿರುದ್ದ ದೂರು ನೀಡಿದ್ದರು. ಈ ಕೇಸಿನಡಿ ಕಾರ್ತಿಕ್, ಪುಟ್ಟರಾಜ್, ಚೇತನ್, ನವೀನ್ ಗೌಡ, ಕ್ವಾಲಿಟಿ ಬಾರ್ ಶರತ್ ಸೇರಿ ಐವರ ವಿರುದ್ದ ಕೇಸ್ ದಾಖಲಾಗಿತ್ತು ಎಂದು ಮಾಹಿತಿ ನೀಡಿದರು.
ಈ ಪ್ರಕರಣದಲ್ಲಿ ಆರೋಪಿಗಳಾದ ಕಾರು ಚಾಲಕ ಕಾರ್ತಿಕ್, ಪುಟ್ಟರಾಜ್, ಚೇತನ್ ಹಾಗು ನವೀನ್ ನಿರೀಕ್ಷಣ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ದೂರು ದಾಖಲಾಗಿ 15 ದಿನ ಕಳೆದರೂ ಬಂಧನವಾಗಿಲ್ಲ. 10 ವರ್ಷ ಮೇಲ್ಪಟ್ಟು ಶಿಕ್ಷೆ ಪ್ರಮಾಣ ಹೊಂದಿರೊ ಕೇಸ್ ಆಗಿದ್ದರೂ ಆರೋಪಿಗಳ ಬಂಧನವಾಗಿಲ್ಲ. ಈಗ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿಲ್ಲ. ರೇವಣ್ಣ ಅವರ ವಿರುದ್ದ ಕೇಸ್ ದಾಖಲಾದ ದಿನವೇ ಬಂಧನ ಮಾಡಲಾಗಿದೆ. ಆದರೆ, ನೂರಾರು ಹೆಣ್ಣು ಮಕ್ಕಳ ಮಾನಹಾನಿ ಮಾಡುವ ವೀಡಿಯೋ ವೈರಲ್ ಮಾಡಿದವರ ವಿರುದ್ಧ ಕೇಸ್ ಆಗಿ 15 ದಿನ ಆದರೂ ಬಂಧನ ಮಾಡುತ್ತಿಲ್ಲ. ಇದನ್ನುಎಸ್‌ಐಟಿ ಯಾಕೆ ಗಮನಿಸುತ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದರು.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್, ಸಿಬಿಐ ತನಿಖೆಗೆ ಕೊಡುವ ಅಗತ್ಯವಿಲ್ಲ: ಗೃಹ ಸಚಿವ ಪರಮೇಶ್ವರ್
ಹಾಸನದ ಪೊಲೀಸ್ ಇಲಾಖೆ ಏನು ಮಾಡ್ತಾ ಇದೆ. ಕೂಡಲೆ ಪೊಲೀಸ್ ಇಲಾಖೆ ಈ ಆರೋಪಿಗಳನ್ನ ಬಂದಿಸಬೇಕು. ಇವರಿಗೆ ಸರ್ಕಾರದ ರಕ್ಷಣೆ ಇರೋ ಕಾರಣಕ್ಕೆ ಬಂದಿಸಿಲ್ಲವೆಂದು ಕಂಡುಬರುತ್ತಿದೆ. ಇವರ ಬಂಧನ ಆಗದಿದ್ದರೆ ಸಾಕ್ಷಿ ನಾಶವಾಗುವ ಸಾಧ್ಯತೆಯಿದೆ. ಇವರೆಲ್ಲರೂ ತುಂಬಾ ಪ್ರಭಾವ ಇರುವವರು ಹಾಗಾಗಿ ಕೂಡಲೆ ಬಂಧಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ವಕೀಲ ಗೋಪಾಲ ಗೌಡ ಆಗ್ರಹ ಮಾಡಿದರು.