T20 World Cup : ಗೆಲುವಿನ ಹುಡುಕಾಟದಲ್ಲಿ ದ.ಆಫ್ರಿಕಾ, ವೆಸ್ಟ್‌ಇಂಡೀಸ್‌!

By Suvarna NewsFirst Published Oct 26, 2021, 8:13 AM IST
Highlights

*ಮೊದಲ ಪಂದ್ಯದಲ್ಲಿ ಸೋತಿದ್ದ ಎರಡೂ ತಂಡಗಳು
*ಸೆಮಿಫೈನಲ್‌ ಆಸೆ ಜೀವಂತವಾಗಿರಿಸಲು ಜಯ ಅಗತ್ಯ
*ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ವಿರುದ್ಧ ಸೋತಿದ್ದ ವಿಂಡೀಸ್‌

ದುಬೈ (ಅ. 26) : ಟಿ20 ವಿಶ್ವಕಪ್‌ನ (T20 World Cup) ಸೂಪರ್‌-12 ಹಂತದಲ್ಲಿ ‘ಗ್ರೂಪ್‌ ಆಫ್‌ ಡೆತ್‌’ (Group of death) ಎಂದೇ ಕರೆಸಿಕೊಳ್ಳುತ್ತಿರುವ ಗುಂಪು-1ರಲ್ಲಿ ಸ್ಥಾನ ಪಡೆದಿರುವ ಹಾಲಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ (West Indies) ಹಾಗೂ ದಕ್ಷಿಣ ಆಫ್ರಿಕಾ(South Africa), ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಎದುರು ನೋಡುತ್ತಿವೆ. ಎರಡೂ ತಂಡಗಳು ಮೊದಲ ಪಂದ್ಯದಲ್ಲಿ ಸೋತಿದ್ದು, ಈ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಉಭಯ ತಂಡಗಳಿಗೆ ಇದು ನಿರ್ಣಾಯಕ ಪಂದ್ಯವೆನಿಸಿದೆ. ಈ ಪಂದ್ಯದಲ್ಲಿ ಸೋಲುವ ತಂಡ ಸೆಮೀಸ್‌ ರೇಸ್‌ನಿಂದ ಹೆಚ್ಚೂ ಕಡಿಮೆ ಹೊರಬಿದ್ದಂತೆಯೇ ಲೆಕ್ಕ.

T20 World Cup : ಕಿವೀಸ್‌ ವಿರುದ್ಧ ಸೇಡಿಗೆ ಕಾಯುತ್ತಿದೆ ಪಾಕಿಸ್ತಾನ!

ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ(Pakistan), ಅಫ್ಘಾನಿಸ್ತಾನ (Afghanistan) ವಿರುದ್ಧ ಸೋತಿದ್ದ ವಿಂಡೀಸ್‌, ಪ್ರಧಾನ ಸುತ್ತಿನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಕೇವಲ 55 ರನ್‌ಗೆ ಆಲೌಟಾಗಿ ಮುಖಭಂಗಕ್ಕೊಳಗಾಗಿತ್ತು. ಸತತ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗುತ್ತಿರುವ ಕೀರನ್‌ ಪೊಲ್ಲಾರ್ಡ್‌ ಪಡೆ ಈ ಪಂದ್ಯದಲ್ಲಾದರೂ ತನ್ನ ಅಸಲಿ ಬ್ಯಾಟಿಂಗ್‌ ಶಕ್ತಿಯನ್ನು ಪ್ರದರ್ಶಿಸುವ ನಿರೀಕ್ಷೆಯಲ್ಲಿದೆ.

ಕಳೆದ ಪಂದ್ಯದಲ್ಲಿ ಕ್ರಿಸ್‌ ಗೇಲ್‌ ಹೊರತುಪಡಿಸಿ ಬೇರಾರ‍ಯವ ಬ್ಯಾಟರ್‌ ಕೂಡಾ ಎರಡಂಕಿ ಮೊತ್ತ ಗಳಿಸಿರಲಿಲ್ಲ. ಪೊಲ್ಲಾರ್ಡ್‌, ಲೆಂಡ್ಲ್‌ ಸಿಮನ್ಸ್‌, ಎವಿನ್‌ ಲೆವಿಸ್‌, ನಿಕೋಲಸ್‌ ಪೂರನ್‌, ಹೆಟ್ಮೇಯರ್‌ರಂತಹ ಘಟಾನುಘಟಿ ಬ್ಯಾಟರ್‌ಗಳು ಮಿಂಚಿದರೆ ಮಾತ್ರ ತಂಡಕ್ಕೆ ಗೆಲುವು ದಕ್ಕಲಿದೆ. ಜೊತೆಗೆ, ಅನನುಭವಿ ಬೌಲಿಂಗ್‌ ಪಡೆಯೂ ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದೆ.

T20 World Cup: ಸ್ಕಾಟ್‌ಲೆಂಡ್ ವಿರುದ್ಧ ಆಫ್ಘಾನ್‌ಗೆ 130 ರನ್ ಭರ್ಜರಿ ಗೆಲುವು!

ಮತ್ತೊಂದೆಡೆ, 2 ಅಭ್ಯಾಸ ಪಂದ್ಯದಲ್ಲಿ ಗೆದ್ದಿದ್ದರೂ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆಸ್ಪ್ರೇಲಿಯಾಗೆ ಶರಣಾಗಿದ್ದ ದ.ಆಫ್ರಿಕಾ ಈ ಪಂದ್ಯದಲ್ಲಿ ವಿಂಡೀಸ್‌ಗೆ ಶಾಕ್‌ ನೀಡಲು ಕಾತರಿಸುತ್ತಿದೆ. ವಿಶ್ವ ದರ್ಜೆಯ ಬೌಲರ್‌ಗಳಾದ ಏನ್ರಿಚ್‌ ನೋಕಿಯ, ಕಗಿಸೋ ರಬಾಡ, ಟಿ20 ವಿಶ್ವ ನಂ.1 ಬೌಲರ್‌ ತಬ್ರೇಜ್‌ ಶಮ್ಸಿ ತಂಡದ ಬೌಲಿಂಗ್‌ ಶಕ್ತಿಗಳಾಗಿದ್ದಾರೆ. ಡು ಪ್ಲೆಸಿ ಅನುಪಸ್ಥಿತಿ ತಂಡವನ್ನು ಕಾಡುತ್ತಿದ್ದು, ಕ್ವಿಂಟನ್‌ ಡಿ ಕಾಕ್‌, ಡೇವಿಡ್‌ ಮಿಲ್ಲರ್‌, ವ್ಯಾನ್‌ ಡರ್‌ ಡುಸೆನ್‌ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕಿದೆ. 

ಇಂದು ಪಾಕಿಸ್ತಾನ Vs ನ್ಯೂಜಿಲೆಂಡ್‌ ಪಂದ್ಯ!

ಟಿ20 ವಿಶ್ವಕಪ್‌ನ  ಆರಂಭಿಕ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಭಾರತ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ್ದ ಪಾಕಿಸ್ತಾನ (Pakistan), ಕೇವಲ ಒಂದು ದಿನ ವಿಶ್ರಾಂತಿ ಬಳಿಕ ಇಂದು (ಅ. 26)  ನ್ಯೂಜಿಲೆಂಡ್‌ (New Zealand) ವಿರುದ್ಧ ಸೆಣಸಾಡಲಿದೆ. ಮಾಜಿ ಚಾಂಪಿಯನ್‌ ಪಾಕಿಸ್ತಾನ, ಯುಎಇಯಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದು, ಕಿವೀಸ್‌ ವಿರುದ್ಧವೂ ಗೆದ್ದು ಅಗ್ರಸ್ಥಾನ ಭದ್ರಪಡಿಸುವ ಯೋಚನೆಯಲ್ಲಿದೆ. ಈ ಪಂದ್ಯ ಗೆದ್ದರೆ ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸುವುದು ಬಹುತೇಕ ಖಚಿತ ಎನಿಸಲಿದೆ

click me!