ಇಂದಿನಿಂದ ಫ್ರೆಂಚ್‌ ಓಪನ್‌: ನಡಾಲ್‌, ಜೋಕೋ, ಇಗಾ, ಆಲ್ಕರಜ್‌ ಕಣಕ್ಕೆ

By Kannadaprabha News  |  First Published May 26, 2024, 9:20 AM IST

ಗಾಯದಿಂದ ಚೇತರಿಸಿ ಟೆನಿಸ್‌ ಅಂಗಳಕ್ಕೆ ಮರಳಿರುವ ನಡಾಲ್‌, ಪುರುಷರ ಸಿಂಗಲ್ಸ್‌ ಮೊದಲ ಸುತ್ತಲ್ಲೇ ವಿಶ್ವ ನಂ.1 ಅಲೆಕ್ಸಾಂಡರ್‌ ಜ್ವೆರೆವ್‌ ಸವಾಲು ಎದುರಿಸಲಿದ್ದಾರೆ. 24 ಗ್ರ್ಯಾನ್‌ಸ್ಲಾಂಗಳ ಒಡೆಯ ಜೋಕೋವಿಚ್ ಫ್ರಾನ್ಸ್‌ನ ಹೆರ್ಬೆಟ್‌ ವಿರುದ್ಧ ಸೆಣಸಲಿದ್ದು, ಮಾಜಿ ಚಾಂಪಿಯನ್‌ಗಳಾದ ಆ್ಯಂಡಿ ಮರ್ರೆ ಹಾಗೂ ವಾಂವ್ರಿಕಾ ಮೊದಲ ಸುತ್ತಲ್ಲೇ ಪರಸ್ಪರ ಎದುರಾಗಲಿದ್ದಾರೆ.

ಪ್ಯಾರಿಸ್‌(ಮೇ.26): ವರ್ಷದ 2ನೇ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯಾಗಿರುವ ಫ್ರೆಂಚ್‌ ಓಪನ್‌ ಭಾನುವಾರ ಆರಂಭಗೊಳ್ಳಲಿದೆ.14 ಬಾರಿ ಚಾಂಪಿಯನ್‌ ರಾಫೆಲ್‌ ನಡಾಲ್‌, ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳ ಹಾಲಿ ಚಾಂಪಿಯನ್‌ ಜೋಕೋವಿಚ್‌ ಹಾಗೂ ಇಗಾ ಸ್ವಿಯಾಟೆಕ್‌ ಸೇರಿದಂತೆ ಪ್ರಮುಖರು ಕಣಕ್ಕಿಳಿಯಲಿದ್ದಾರೆ.

ಗಾಯದಿಂದ ಚೇತರಿಸಿ ಟೆನಿಸ್‌ ಅಂಗಳಕ್ಕೆ ಮರಳಿರುವ ನಡಾಲ್‌, ಪುರುಷರ ಸಿಂಗಲ್ಸ್‌ ಮೊದಲ ಸುತ್ತಲ್ಲೇ ವಿಶ್ವ ನಂ.1 ಅಲೆಕ್ಸಾಂಡರ್‌ ಜ್ವೆರೆವ್‌ ಸವಾಲು ಎದುರಿಸಲಿದ್ದಾರೆ. 24 ಗ್ರ್ಯಾನ್‌ಸ್ಲಾಂಗಳ ಒಡೆಯ ಜೋಕೋವಿಚ್ ಫ್ರಾನ್ಸ್‌ನ ಹೆರ್ಬೆಟ್‌ ವಿರುದ್ಧ ಸೆಣಸಲಿದ್ದು, ಮಾಜಿ ಚಾಂಪಿಯನ್‌ಗಳಾದ ಆ್ಯಂಡಿ ಮರ್ರೆ ಹಾಗೂ ವಾಂವ್ರಿಕಾ ಮೊದಲ ಸುತ್ತಲ್ಲೇ ಪರಸ್ಪರ ಎದುರಾಗಲಿದ್ದಾರೆ.

Sunday's order of play is here ✔️

Check it out ▶️ https://t.co/yWGBP9TWTO pic.twitter.com/WuVqkz9dZk

— Roland-Garros (@rolandgarros)

Latest Videos

undefined

ಮಹಿಳಾ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಸ್ವಿಯಾಟೆಕ್‌ಗೆ ಫ್ರಾನ್ಸ್‌ನ ಜೀಂಜಿನ್‌ ಸವಾಲು ಎದುರಾಗಲಿದ್ದು, 2022ರ ರನ್ನರ್‌-ಅಪ್‌ ಕೊಕೊ ಗಾಫ್‌ ಅವರು ರಷ್ಯಾದ ಜೂಲಿಯಾ ಅವ್ಡೀವಾ ವಿರುದ್ಧ ಸೆಣಸಲಿದ್ದಾರೆ.

ಸಿಂಗಲ್ಸ್‌ನಲ್ಲಿ ಭಾರತದ ಏಕೈಕ ಸ್ಪರ್ಧಿಯಾಗಿರುವ ಸುಮಿತ್ ನಗಾಲ್‌ಗೆ ಸೋಮವಾರ ಮೊದಲ ಸುತ್ತಿನಲ್ಲಿ ರಷ್ಯಾದ ಕರೆನ್‌ ಕಚನೊವ್‌ ಸವಾಲು ಎದುರಾಗಲಿದೆ.

ಹಾಕಿ: ಭಾರತಕ್ಕೆ ಸೋಲು

ಆ್ಯಂಟ್ವಪ್‌(ಬೆಲ್ಜಿಯಂ): ಪ್ರೊ ಲೀಗ್‌ ಹಾಕಿ ಟೂರ್ನಿಯಲ್ಲಿ ಭಾರತದ ಪುರುಷ, ಮಹಿಳಾ ತಂಡಗಳು ಮತ್ತೆ ಬೆಲ್ಜಿಯಂ ವಿರುದ್ಧ ಸೋಲನುಭವಿಸಿವೆ. ಗುರುವಾರವೂ ಇತ್ತಂಡಗಳು ಬೆಲ್ಜಿಯಂ ವಿರುದ್ಧ ಸೋತಿದ್ದವು. ಶನಿವಾರ ನಡೆದ 2ನೇ ಮುಖಾಮುಖಿಯಲ್ಲಿ ಪುರುಷರ ತಂಡ ಶೂಟೌಟ್‌ನಲ್ಲಿ 1-3 ಅಂತರದಲ್ಲಿ ಪರಾಭವಗೊಂಡರೆ, ಮಹಿಳಾ ತಂಡಕ್ಕೆ 1-2 ಅಂತರದಲ್ಲಿ ಸೋಲು ಎದುರಾಯಿತು.

click me!