Latest Videos

IPL 2024 ಈ ಆಟಗಾರನನ್ನು ಕೈಬಿಟ್ಟು ಮಹಾ ಯಡವಟ್ಟು ಮಾಡಿದ ಆರ್‌ಸಿಬಿ..!

By Suvarna NewsFirst Published May 26, 2024, 12:14 PM IST
Highlights

ಈ ಬಾರಿಯ IPLನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ  ಅದ್ಭುತ ಪ್ರದರ್ಶನ ನೀಡ್ತಿದೆ. 2ನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ವಿರುದ್ಧ ಗೆದ್ದು ಫೈನಲ್‌ಗೆ ಎಂಟ್ರಿ ನೀಡಿದೆ. ಅದ್ರೆ, ಈ ಡು ಆರ್ ಡೈ ಫೈಟಲ್ಲಿ ಸನ್‌ರೈಸರ್ಸ್ ಗೆಲುವಿಗೆ ಕಾರಣರಾದವರಲ್ಲಿ ಸ್ಪಿನ್ ಆಲ್ರೌಂಡರ್ ಶಹಬಾಜ್ ಅಹ್ಮದ್ ಕೂಡ ಒಬ್ರು. 

ಬೆಂಗಳೂರು: ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಬಿಟ್ಟು ಹೋದ ಆಟಗಾರರು ಬೇರೆ ತಂಡದ ಪರ ಮಿಂಚೋದನ್ನ ನೀವು ನೋಡೇ ಇರ್ತಿರಾ...! ಶಿವಂ ದುಬೆ, ಮೊಯಿನ್ ಅಲಿ ಸೇರಿದಂತೆ ಹಲವು ಆಟಗಾರರು RCBಯಿಂದ ಹೊರ ನಡೆದ ಮೇಲೆ ತಮ್ಮ ತಾಕತ್ತು ಪ್ರೂವ್ ಮಾಡಿದ್ದಾರೆ. ಈಗ  ಆ ಲಿಸ್ಟ್‌ಗೆ ಇದೀಗ ಮತ್ತೊಬ್ಬ ಆಟಗಾರ ಸೇರಿದ್ದಾರೆ. ಯಾರದು ಅಂತ ಹೇಳ್ತೀವಿ, ಈ ಸ್ಟೋರಿ ನೋಡಿ. 

RCB ಮಾಡಿದ ತಪ್ಪಿನಿಂದ SRHಗೆ ಲಾಭ..! 

ಈ ಬಾರಿಯ IPLನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ  ಅದ್ಭುತ ಪ್ರದರ್ಶನ ನೀಡ್ತಿದೆ. 2ನೇ ಕ್ವಾಲಿಫೈಯರ್‌ನಲ್ಲಿ ರಾಜಸ್ಥಾನ ವಿರುದ್ಧ ಗೆದ್ದು ಫೈನಲ್‌ಗೆ ಎಂಟ್ರಿ ನೀಡಿದೆ. ಅದ್ರೆ, ಈ ಡು ಆರ್ ಡೈ ಫೈಟಲ್ಲಿ ಸನ್‌ರೈಸರ್ಸ್ ಗೆಲುವಿಗೆ ಕಾರಣರಾದವರಲ್ಲಿ ಸ್ಪಿನ್ ಆಲ್ರೌಂಡರ್ ಶಹಬಾಜ್ ಅಹ್ಮದ್ ಕೂಡ ಒಬ್ರು. 

IPL 2024 Final ನೈಟ್‌ ರೈಡರ್ಸ್‌ vs ಸನ್‌ರೈಸರ್ಸ್‌: ಯಾರಿಗೆ ಐಪಿಎಲ್‌ ಕಿರೀಟ?

ಯೆಸ್, ಈ ಪಂದ್ಯದಲ್ಲಿ ಶಹಬಾಜ್ ಆಲ್ರೌಂಡರ್ ಪರ್ಫಾಮೆನ್ಸ್ ಮೂಲಕ ಮಿಂಚಿದ್ರು. ಶಹಬಾಜ್ 4 ಓವರ್ ಬೌಲಿಂಗ್ ಮಾಡಿ  ಕೇವಲ 23 ರನ್ ನೀಡಿದ್ರು. ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಹಾಗೂ ಅಶ್ವಿನ್ ವಿಕೆಟ್ ಬೇಟೆಯಾಡಿ ಸನ್‌ರೈಸರ್ಸ್‌ಗೆ ಸಕ್ಸಸ್ ತಂದುಕೊಟ್ರು. ಇದಕ್ಕೂ ಮುನ್ನ ಬ್ಯಾಟಿಂಗ್ನಲ್ಲೂ 18 ರನ್‌ಗಳ ಕಾಣಿಕೆ ನೀಡಿದ್ರು. 

ಶಹಬಾಜ್‌ನ ಬಿಟ್ಟುಕೊಟ್ಟು ದಾಗರ್‌ ಪಡೆದ RCB..!

ಯೆಸ್, ಈ ಬಾರಿಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಪರ ಮಿಂಚ್ತಿರೋ ಶಹಬಾಜ್, ಲಾಸ್ಟ್ ಸೀಸನ್‌ವರೆಗೂ RCB ತಂಡದಲ್ಲಿದ್ರು. ಬ್ಯಾಟಿಂಗ್, ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಿದ್ರು. ಆದ್ರೆ, ಇಂತಹ ಯೂಸ್‌ಫುಲ್ ಆಲ್ರೌಂಡರ್‌ರನ್ನೇ RCB ರಿಲೀಸ್ ಮಾಡಿತ್ತು.  ಮಿನಿ ಆಕ್ಷನ್ಗೂ ಮುನ್ನ ನಡೆದ ಟ್ರೇಡಿಂಗ್ ಪದ್ದತಿಯಡಿ ಶಹಬಾಜ್‌ನ ಸನ್‌ರೈಸರ್ಸ್‌ಗೆ ಬಿಟ್ಟುಕೊಟ್ಟಿತ್ತು. ಶಹಬಾಜ್ ಬದಲು ಮಯಾಂಕ್ ದಾಗರ್ ತಂಡಕ್ಕೆ ಸೇರಿಸಿಕೊಂಡಿತ್ತು. 

2022ರ ಟಿ20 ವಿಶ್ವಕಪ್‌ಗೆ ಸೆಲೆಕ್ಟ್ ಆಗಿದ್ದೇ ಆರ್‌ಸಿಬಿ ಫ್ಯಾನ್ಸ್‌ಗಳಿಂದ..! ಅವರ ಸಪೋರ್ಟ್ ನಾನೆಂದೂ ಮರೆಯೊಲ್ಲ: ಡಿಕೆ

ದಾಗರ್‌ನಿಂದ RCBಗೆ ಆಗಲಿಲ್ಲ ಯಾವುದೇ ಲಾಭ..!

ಬೌಲಿಂಗ್ ಆಲ್ರೌಂಡರ್ ಕೋಟಾದಡಿ ತಂಡ ಸೇರಿದ  ಮಯಾಂಕ್ ದಾಗರ್  ಆವ್ರಿಂದ RCBಗೆ ಯಾವುದೇ ಲಾಭವಾಗಲಿಲ್ಲ. ಆದ್ರೆ, ಹೈದ್ರಾಬಾದ್  ಪರ  ಶಹಬಾಜ್ ಬಹುತೇಕ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದು, 207 ರನ್ ಕಲೆಹಾಕಿದ್ದಾರೆ. ಅಲ್ಲದೇ 6 ವಿಕೆಟ್ ಉರುಳಿಸಿದ್ದಾರೆ. 

ಇನ್ನು RCB ಬಿಟ್ಟು ಹೋದ ಆಟಗಾರರು ಬೇರೆ ತಂಡದ ಪರ ಮಿಂಚೋದು ಇದೇ ಮೊದಲಲ್ಲ. ಶಿವಂ ದುಬೆ, ಮೊಯಿನ್ ಅಲಿ ಸೇರಿದಂತೆ ಹಲವು ಆಟಗಾರರು ಆರ್‌ಸಿಬಿಯಿಂದ ಹೊರ ನಡೆದ ಮೇಲೆ ತಮ್ಮ ತಾಕತ್ತು ಪ್ರೂವ್ ಮಾಡಿದ್ದಾರೆ. ಈಗ  ಆ ಲಿಸ್ಟ್‌ಗೆ ಶಹಬಾಜ್ ಕೂಡ ಸೇರಿದ್ದಾರೆ. 

ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್ 

click me!