ಪಾಕ್ ವಿರುದ್ಧದ ಗೆಲುವಿನ ಬಳಿಕ ಅಂಬಾಟಿ ರಾಯುಡು ಹುಟ್ಟುಹಬ್ಬ ಆಚರಣೆ

By Web DeskFirst Published Sep 24, 2018, 5:10 PM IST
Highlights

ಪಾಕಿಸ್ತಾನ ವಿರುದ್ಧದ ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಅಂಬಾಟಿ ರಾಯುಡು ಹುಟ್ಟು ಹಬ್ಬವನ್ನ ಆಚರಿಸಿದ್ದಾರೆ. ರಾಯುಡು ಹುಟ್ಟು ಹಬ್ಬ ಆಚರಣೆ ಹೇಗಿತ್ತು?  ಇಲ್ಲಿದೆ.

ದುಬೈ(ಸೆ.24): ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ 9 ವಿಕೆಟ್ ಭರ್ಜರಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಏಷ್ಯಾಕಪ್ ಫೈನಲ್ ಪ್ರವೇಶಿಸಿದೆ. ಪಾಕಿಸ್ತಾನ ವಿರುದ್ಧ ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು  ಅಂಬಾಟಿ ರಾಯುಡು ಹುಟ್ಟು ಹಬ್ಬದ ಜೊತೆ ಗೆಲುವಿನ ಸಂಭ್ರಮ ಆಚರಿಸಿದ್ದಾರೆ.

ಪಾಕ್ ಭರ್ಜರಿ ಗೆಲುವಿನಿಂದ ಸಂತಸಗೊಂಡಿದ್ದ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂಗೆ ತೆರಳಿ ರಾಯುಡು ಹುಟ್ಟು ಹಬ್ಬ ಆಚರಿಸಿತು. ಬರ್ತ್ ಡೇ ಕೇಕ್‌ನ್ನ ಸಂಪೂರ್ಣವಾಗಿ  ರಾಯುಡುಗೆ ಹಚ್ಚಿ ಕ್ರಿಕೆಟಿಗರು ಸಂಭ್ರಮ ಆಚರಿಸಿದರು.

 

 
 
 
 
 
 
 
 
 
 
 
 
 

Happy Birthday @a.t.rayudu What followed was a typical cake smash #TeamIndia style 😎 🎂

A post shared by Team India (@indiancricketteam) on Sep 23, 2018 at 12:49pm PDT

 

ಪಾಕ್ ವಿರುದ್ಧದ ಪಂದ್ಯದಲ್ಲಿ ಅಂಬಾಟಿ ರಾಯುಡು ಅಜೇಯ 12 ರನ್ ಕಾಣಿಕೆ ನೀಡಿದ್ದರು. ಇಷ್ಟೇ ಅಲ್ಲ 33ನೇ ವಸಂತಕ್ಕೆ ಕಾಲಿಟ್ಟ ರಾಯುಡು, 2013ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದಾರೆ. ಭಾರತದ ಪರ 38 ಏಕದಿನ ಹಾಗೂ 6  ಟಿ20 ಪಂದ್ಯಗಳನ್ನಾಡಿದ್ದಾರೆ.

click me!