Ambati Rayudu
(Search results - 32)CricketNov 21, 2020, 3:44 PM IST
2019ರ ಏಕದಿನ ವಿಶ್ವಕಪ್ಗೆ ರಾಯುಡು ಆಯ್ಕೆ ಮಾಡದೇ ತಪ್ಪು ಮಾಡಿದ್ವಿ..! ತಪ್ಪೊಪ್ಪಿಕೊಂಡ ಮಾಜಿ ಆಯ್ಕೆಗಾರ..!
ನವದೆಹಲಿ: 2019ರ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿ ಒಂದು ವರ್ಷವೇ ಕಳೆದರೂ ಟೀಂ ಇಂಡಿಯಾ ಆಯ್ಕೆ ಸಮಿತಿ ಮಾಡಿದ ಒಂದು ಎಡವಟ್ಟು ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಲೇ ಇರುತ್ತದೆ. ಇಂಗ್ಲೆಂಡ್ನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಂಬಟಿ ರಾಯುಡು ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಮಾಜಿ ಆಯ್ಕೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಐಪಿಎಲ್ನಲ್ಲಿ ಉತ್ತಮ ಪ್ರದರ್ಶನದ ಹೊರತಾಗಿಯೂ ಆಯ್ಕೆ ಸಮಿತಿ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ವಿಶ್ವಕಪ್ ಟೂರ್ನಿಗೂ ಮುನ್ನ ಆದ ಮಹಾ ಪ್ರಮಾದವೊಂದನ್ನು ಆಯ್ಕೆ ಸಮಿತಿಯ ಸದಸ್ಯರೊಬ್ಬರು ಒಪ್ಪಿಕೊಂಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪರಿಸ್ಥಿತಿ ಕೈ ತಪ್ಪಿಹೋಗಿದೆ.
IPLSep 29, 2020, 6:16 PM IST
CSK ತಂಡ ಸೋಲಿನಿಂದ ಹೊರಬರುವುದು ಖಚಿತ, ಅಖಾಡಕ್ಕೆ ಇಬ್ಬರು ಸ್ಟಾರ್ ಪ್ಲೇಯರ್ಸ್!
ಉದ್ಘಟನಾ ಪಂದ್ಯದಲ್ಲಿ ಗೆಲುವು ಸಾಧಿಸಿದ ಎಂ.ಎಸ್.ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್, ಮತ್ತೆರೆಡು ಪಂದ್ಯದಲ್ಲಿ ಸತತ ಸೋಲು ಕಂಡಿದೆ. ಮಧ್ಯಮ ಕ್ರಮಾಂಕದ ವೈಫಲ್ಯ, ದುಬಾರಿ ಬೌಲಿಂಗ್ನಿಂದ ಪಂದ್ಯ ಸೋತಿದೆ. ಸುರೇಶ್ ರೈನಾ ತಂಡಕ್ಕೆ ಕಮ್ಬ್ಯಾಕ್ ಮಾಡುತ್ತಿಲ್ಲ. ಆದರೆ ಮತ್ತಿಬ್ಬರು ಆಟಗಾರರು ಇಂಜುರಿಯಿಂದ ಗುಣಮುಖರಾಗಿದ್ದು, ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.
IPLSep 26, 2020, 1:18 PM IST
IPL 2020: ಸೋಲಿನ ಬೆನ್ನಲ್ಲೇ CSK ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಧೋನಿ..!
ದುಬೈ: ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದೆ. ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಬೀಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಆ ಬಳಿಕ ರಾಜಸ್ಥಾನ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಲಟ್ಸ್ ವಿರುದ್ಧ ಆಘಾತಕಾರಿ ಸೋಲು ಕಂಡಿತ್ತು. ಇದರ ನಡುವೆಯೇ ಧೋನಿ ಸಿಎಸ್ಕೆ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಹ ಸುದ್ದಿಯೊಂದು ನೀಡಿದ್ದಾರೆ.
CricketMay 2, 2020, 8:51 PM IST
ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಮಾಡಿದ ಅತೀ ದೊಡ್ಡ 3 ತಪ್ಪು ಬಹಿರಂಗ ಪಡಿಸಿದ MSK ಪ್ರಸಾದ್!
ಹೈದರಾಬಾದ್(ಮೇ.03): ಟೀಂ ಇಂಡಿಯಾ ಮಾಜಿ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್ ಅವಧಿಯಲ್ಲಿ ಟೀಂ ಇಂಡಿಯಾ ಹಲವು ಐತಿಹಾಸಿಕ ಪ್ರಶಸ್ತಿ ಗೆದ್ದಿಕೊಂಡಿದೆ. ಇಷ್ಟೇ ಅಲ್ಲ ಹಲವು ಮಹತ್ವದ ಪ್ರಶಸ್ತಿಯಿಂದ ವಂಚಿತವಾಗಿದೆ. ಇದರ ಜೊತೆಗೆ ಅತೀ ಹೆಚ್ಚು ಟೀಕೆಗಳಿಗೂ ಆಯ್ಕೆ ಸಮಿತಿ ಗುರಿಯಾಗಿತ್ತು. ಆಯ್ಕೆ ಸಮಿತಿಯಲ್ಲಿ ಮಾಡಿದ ಎಡವಟ್ಟುಗಳಿಗೆ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟಿಗರೂ ಗರಂ ಆಗಿದ್ದರು. ಇದೀಗ MSK ಆಯ್ಕೆ ಸಮಿತಿ ಮುಖ್ಯಸ್ಥನಾಗಿ ಮಾಡಿದ ಮೂರು ಪ್ರಮುಖ ತಪ್ಪುಗಳನ್ನು ಬಹಿರಂಗ ಪಡಿಸಿದ್ದಾರೆ.
SPORTSSep 15, 2019, 4:52 PM IST
ನಿವೃತ್ತಿ ಹಿಂಪಡೆದ ರಾಯುಡುಗೆ ಜಾಕ್ಪಾಟ್..!
ಮುಂಬರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಂಬಟಿ ರಾಯುಡುಗೆ ಹೈದರಾಬಾದ್ ತಂಡದ ನಾಯಕತ್ವ ಪಟ್ಟ ನೀಡಲಾಗಿದೆ. ಅಕ್ಷತ್ ರೆಡ್ಡಿ ಬದಲಿಗೆ ರಾಯುಡು ನಾಯಕನಾಗಿ ನೇಮಕಗೊಂಡಿದ್ದಾರೆ.
SPORTSAug 30, 2019, 5:38 PM IST
ವಿದಾಯದಿಂದ ಹೊರಬಂದ ರಾಯುಡು; ಭಾರತದ ಶಾಹಿದಿ ಆಫ್ರಿದಿ ಎಂದ ಫ್ಯಾನ್ಸ್!
ಮಧ್ಯಮ ಕ್ರಮಾಂಕ ಬ್ಯಾಟ್ಸ್ಮನ್ ಅಂಬಾಟಿ ರಾಯುಡು ವಿದಾಯದಿಂದ ಹೊರಬಂದಿದ್ದಾರೆ. ತಾನು ಎಲ್ಲಾ ಮಾದರಿ ಕ್ರಿಕೆಟ್ ಆಡುತ್ತೇನೆ ಎಂದು ರಾಯುಡು ಪತ್ರ ಬರೆದಿದ್ದಾರೆ. ಇದರೊಂದಿಗೆ ರಾಯುಡು ವಿದಾಯ 2 ತಿಂಗಳಿಗೆ ಅಂತ್ಯವಾಗಿದೆ. ಆದರೆ ರಾಯುಡು ನಿರ್ಧಾರ ಮತ್ತೆ ಟ್ರೋಲ್ ಆಗಿದೆ. ಭಾರತದ ಶಾಹಿದ್ ಅಫ್ರಿದಿ ಎಂದು ಟ್ರೋಲ್ ಮಾಡಲಾಗುತ್ತಿದೆ.
SPORTSAug 30, 2019, 3:11 PM IST
ವಿದಾಯ ನಿರ್ಧಾರ ಬದಲು; 2 ತಿಂಗಳ ಬಳಿಕ U ಟರ್ನ್ ಹೊಡೆದ ರಾಯುಡು!
ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದ ಅಂಬಾಟಿ ರಾಯುಡು ಟ್ವೀಟ್ ಮೂಲಕ ವಿಶ್ವದ ಗಮನಸೆಳೆದಿದ್ದರು. ಇದೇ ಟ್ವೀಟ್ ಟ್ರೋಲ್ ಆಗಿ ರಾಯುಡು ಮಾನಸಿಕವಾಗಿ ಕುಗ್ಗಿ ಹೋಗಿದ್ದರು. ಆಯ್ಕೆ ಸಮಿತಿಯಿಂದ ಕಡೆಗಣಿಸಲ್ಪಟ್ಟ ರಾಯುಡು ದಿಢೀರ್ ವಿದಾಯ ಹೇಳಿ ಶಾಕ್ ನೀಡಿದ್ದರು. ಇದೀಗ ರಾಯುಡು ಯು ಟರ್ನ್ ಹೊಡೆದಿದ್ದಾರೆ.
SPORTSJul 21, 2019, 5:18 PM IST
ರಾಯುಡು 3D ಟ್ವೀಟ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಆಯ್ಕೆ ಸಮಿತಿ!
ಅಂಬಾಟಿ ರಾಯುಡು 3 ಟ್ವೀಟ್ ಸೃಷ್ಟಿಸಿದ ವಿವಾದ ಅಷ್ಟಿಷ್ಟಲ್ಲ. ವಿವಾದ ಬಳಿಕ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದರೂ, ಆಯ್ಕೆ ಸಮಿತಿ ಯಾವುದೇ ಪ್ರತಿಕ್ರಿಯೆ ನೀಡರಿಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ರಾಯುಡು ವಿವಾದದ ಕುರಿತು ಆಯ್ಕೆ ಸಮಿತಿ ಪ್ರತಿಕ್ರಿಯೆ ನೀಡಿದೆ.
World CupJul 14, 2019, 9:40 PM IST
ರಾಯುಡುಗೆ ಅನ್ಯಾಯ; ಬಿಸಿಸಿಐ ವಿರುದ್ಧ ಗುಡುಗಿದ ಯುವರಾಜ್!
ಅಂಬಾಟಿ ರಾಯುಡುಗೆ ಅನ್ಯಾಯ ಆಗಿದೆ. ನಾಲ್ಕನೇ ಕ್ರಮಾಂಕಕ್ಕೆ ರಾಯುಡು ಬದಲು ಇತರ ಆಟಗಾರರನ್ನು ಆಯ್ಕೆ ಮಾಡಿದ್ದೇ ಟೀಂ ಇಂಡಿಯಾ ಬ್ಯಾಟಿಂಗ್ ಸಮಸ್ಯೆಗೆ ಕಾರಣವಾಗಿದೆ ಎಂದು ಯುವರಾಜ್ ಹೇಳಿದ್ದಾರೆ.
World CupJul 4, 2019, 4:50 PM IST
ರಾಯುಡು ವಿದಾಯ: ಶುಭ ಕೋರಿದ ಕೊಹ್ಲಿಗೆ ಅಭಿಮಾನಿಗಳಿಂದ ಕ್ಲಾಸ್..!
ಕಳೆದ ಅಕ್ಟೋಬರ್’ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ವಿಶ್ವಕಪ್ ಟೂರ್ನಿಯಲ್ಲಿ ರಾಯುಡು ನಂ.4 ಸ್ಥಾನದಲ್ಲಿ ಆಡಲಿದ್ದಾರೆ ಎಂದು ಆತ್ಮವಿಶ್ವಾಸದಿಂದಲೇ ಹೇಳಿದ್ದರು. ಆದರೆ ಏಪ್ರಿಲ್ ವೇಳೆಗಾಗಲೇ ಪರಿಸ್ಥಿತಿ ಬದಲಾಗಿತ್ತು.
SPORTSJul 3, 2019, 2:57 PM IST
ವಿಶ್ವಕಪ್ನಿಂದ ಕಡೆಗಣನೆ; ಕ್ರಿಕೆಟ್ಗೆ ಅಂಬಟಿ ರಾಯುಡು ವಿದಾಯ..!
ವಿಶ್ವಕಪ್ ಟೂರ್ನಿಗೆ ತಂಡದ ಆಯ್ಕೆ ಸಂದರ್ಭದಿಂದ ಬಿಸಿಸಿಐ ಕೆಂಗಣ್ಣಿಗೆ ಗುರಿಯಾಗಿದ್ದ ಅಂಬಾಟಿ ರಾಯುಡು ಇದೀಗ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ರಾಯುಡು ವಿದಾಯಕ್ಕೆ ಕಾರಣವೇನು? ಇಲ್ಲಿದೆ ವಿವರ.
World CupJul 2, 2019, 7:46 PM IST
3ಡಿ ಗ್ಲಾಸ್ ಬದಿಗಿಟ್ಟು ಓದಿ- ಅಂಬಾಟಿಗೆ ಐಸ್ಲೆಂಡ್ ಕ್ರಿಕೆಟ್ ಮನವಿ !
ವಿಶ್ವಕಪ್ ಟೂರ್ನಿ ಅಂತಿಮ ಘಟ್ಟ ತಲುಪಿದರೂ ಟೀಂ ಇಂಡಿಯಾ ಮಧ್ಯಮ ಕ್ರಮಾಂಕ ಬ್ಯಾಟ್ಸ್ಮನ್ ಅಂಬಾಟಿ ರಾಯುಡು 3 ಡಿ ಗ್ಲಾಸ್ ವಿಚಾರ ಮಾತ್ರ ತಣ್ಣಗಾಗುತ್ತಿಲ್ಲ. ಇದೀಗ ಐಸ್ಲೆಂಡ್ ಕ್ರಿಕೆಟ್ ರಾಯುಡುಗೆ 3 ಡಿ ಗ್ಲಾಸ್ ಬದಿಗಿಟ್ಟು ಸಾಮಾನ್ಯ ಕನ್ನಡಕ ಮೂಲಕ ಓದಿ ಎಂದು ಮನವಿ ಮಾಡಿದೆ.
World CupJun 20, 2019, 2:18 PM IST
ಅಯ್ಯೋ ಪಾಪ: ಟ್ವೀಟ್ ಮಾಡಿ ಕೆಟ್ಟ ರಾಯುಡು!
ಕಳೆದೆರಡು ವರ್ಷಗಳಿಂದ ನಾಲ್ಕನೇ ಕ್ರಮಾಂಕದಲ್ಲಿ ಆಡುತ್ತಿದ್ದ ಅಂಬಟಿ ರಾಯುಡು ಮಾಡಿದ ಒಂದೇ ಒಂದು ಎಡವಟ್ಟಿನಿಂದ ಅವಕಾಶ ವಂಚಿತರಾಗಿದ್ದಾರೆ. ರಾಯುಡು ಆಯ್ಕೆ ಸಮಿತಿ ವಿರುದ್ಧ ಮಾತನಾಡದೆ ಇದ್ದಿದ್ದರೆ ಧವನ್ ಬದಲಿಗೆ ಅವರಿಗೇ ಸ್ಥಾನ ಸಿಗುವ ಸಾಧ್ಯತೆ ಇತ್ತು.
SPORTSMay 16, 2019, 9:57 AM IST
ವಿಶ್ವಕಪ್ 2019: ಕೇದಾರ್ ಜಾಧವ್ ಬದಲು ರಾಯುಡುಗೆ ಸ್ಥಾನ?
ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ಆಲ್ರೌಂಡರ್ ಕೇದಾರ್ ಜಾಧವ್ ಇಂಜುರಿಯಿಂದ ಬಳಲುತ್ತಿದ್ದಾರೆ. ಸಂಪೂರ್ಣ ಚೇತರಿಸಿಕೊಳ್ಳಲು ಕನಿಷ್ಠ 4 ವಾರಗಳ ವಿಶ್ರಾಂತಿ ಅಗತ್ಯವಿದೆ ಅನ್ನೋ ಸೂಚನೆಯನ್ನು ವೈದ್ಯರು ನೀಡಿದ್ದಾರೆ. ಹೀಗಾದಲ್ಲಿ ಕೇದಾರ್ ಬದಲು ಅಂಬಾಟಿ ರಾಯುಡುಗೆ ಸ್ಥಾನ ನೀಡೋ ಸಾಧ್ಯತೆಗಳಿದೆ.
SPORTSApr 18, 2019, 5:30 PM IST
’ಆಯ್ಕೆಗಾರರ ಕಾಲೆಳೆದ ರಾಯುಡುಗೆ ಶಿಕ್ಷೆಯಿಲ್ಲ’
ರಾಯುಡು ಮಾಡಿರುವ ಟ್ವೀಟ್ ನಮ್ಮ ಗಮನಕ್ಕೆ ಬಂದಿದೆ, ಆದರೆ ಬಿಸಿಸಿಐ ಆಯ್ಕೆ ನೀತಿಯನ್ನು ರಾಯುಡು ಅವರು ನೇರವಾಗಿ ಟೀಕಿಸಿಲ್ಲ. ಹೀಗಾಗಿ ರಾಯುಡು ವಿರುದ್ಧ ಯಾವುದೇ ಕ್ರಮವಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ.