IPL 2024 ಈಡನ್‌ ಗಾರ್ಡನ್ಸ್‌ನಲ್ಲಿಂದು ಕೋಲ್ಕತಾಗೆ ಪಂಜಾಬ್ ಕಿಂಗ್ಸ್ ಚಾಲೆಂಜ್

By Kannadaprabha News  |  First Published Apr 26, 2024, 9:15 AM IST

ಪಂಜಾಬ್ ಕಿಂಗ್ಸ್ ತಂಡವು ಆಡಿರುವ 8 ಪಂದ್ಯದಲ್ಲಿ ಕೇವಲ 2ರಲ್ಲಿ ಗೆದ್ದಿದೆ. ಅತ್ತ ಕೆಕೆಆರ್ 7 ಪಂದ್ಯಗಳಲ್ಲಿ 5ರಲ್ಲಿ ಜಯಭೇರಿ ಬಾರಿಸಿದ್ದು, ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ಹತ್ತಿರವಾಗಿಸಲಿದೆ. ಕೆಕೆಆರ್ ಈ ಬಾರಿ ಬ್ಯಾಟಿಂಗ್ ವಿಭಾಗದಲ್ಲಿ ಅಬ್ಬರಿಸುತ್ತಿದ್ದು, 7ರಲ್ಲಿ 4 ಪಂದ್ಯದಲ್ಲಿ 200+ ರನ್ ಕಲೆಹಾಕಿದೆ.


ಕೋಲ್ಕತಾ(ಏ.26)  ಈ ಬಾರಿ ಐಪಿಎಲ್‌ನಲ್ಲಿ ತೀರಾ ಕಳಪೆ ಪ್ರದರ್ಶನ ತೋರುತ್ತಿರುವ ಪಂಜಾಬ್ ಕಿಂಗ್‌ಗೆ ಶುಕ್ರವಾರ ನಿರ್ಣಾಯಕ ಪಂದ್ಯದಲ್ಲಿ ಕೋಲ್ಕತಾ ಸವಾಲು ಎದುರಾಗಲಿದೆ. ತಂಡಕ್ಕಿದು ಮಾಡು ಇಲ್ಲವೇ ಮಡಿ ಪಂದ್ಯ. ಗೆದ್ದರಷ್ಟೇ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲಿದೆ.

ಪಂಜಾಬ್ ಕಿಂಗ್ಸ್ ತಂಡವು ಆಡಿರುವ 8 ಪಂದ್ಯದಲ್ಲಿ ಕೇವಲ 2ರಲ್ಲಿ ಗೆದ್ದಿದೆ. ಅತ್ತ ಕೆಕೆಆರ್ 7 ಪಂದ್ಯಗಳಲ್ಲಿ 5ರಲ್ಲಿ ಜಯಭೇರಿ ಬಾರಿಸಿದ್ದು, ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ಹತ್ತಿರವಾಗಿಸಲಿದೆ. ಕೆಕೆಆರ್ ಈ ಬಾರಿ ಬ್ಯಾಟಿಂಗ್ ವಿಭಾಗದಲ್ಲಿ ಅಬ್ಬರಿಸುತ್ತಿದ್ದು, 7ರಲ್ಲಿ 4 ಪಂದ್ಯದಲ್ಲಿ 200+ ರನ್ ಕಲೆಹಾಕಿದೆ. ಆದರೆ ಬೌಲಿಂಗ್ ವಿಭಾಗ ಮೊನಚು ಕಳೆದುಕೊಂಡಿದೆ. 24.75 ಕೋಟಿಗೆ ಹರಾಜಾಗಿರುವ ಸ್ಟಾರ್ಕ್ 11.48ರ ಎಕಾನಮಿಯಲ್ಲಿ ಕೇವಲ 6 ವಿಕೆಟ್ ಪಡೆದಿದ್ದಾರೆ.

Tap to resize

Latest Videos

ಆರೆಂಜ್ ಆರ್ಮಿಯನ್ನು ಅವರದ್ದೇ ಮೈದಾನದಲ್ಲಿ ಬಗ್ಗುಬಡಿದ RCB..! ಸೋಲಿನ ಲೆಕ್ಕಚುಕ್ತಾ

ಅತ್ತ ಪಂಜಾಬ್‌ನ ಯುವ ಬ್ಯಾಟರ್‌ಗಳಾದ ಅಶುತೋಶ್‌, ಶಶಾಂಕ್ ಅಬ್ಬರಿಸುತ್ತಿದ್ದರೂ ಸ್ಟಾರ್ ಆಟಗಾರರು ಕೈಕೊಡುತ್ತಿದ್ದಾರೆ. ಗಾಯಾಳು ಧವನ್ ಈ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ ನೋಡಿ

ಪಂಜಾಬ್ ಕಿಂಗ್ಸ್‌:

ಶಿಖರ್ ಧವನ್(ನಾಯಕ), ಜಾನಿ ಬೇರ್‌ಸ್ಟೋವ್, ಪ್ರಭ್‌ಸಿಮ್ರನ್ ಸಿಂಗ್, ಸ್ಯಾಮ್ ಕರ್ರನ್, ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಶಶಾಂಕ್ ಸಿಂಗ್, ಅಶುತೋಶ್ ಶರ್ಮಾ, ಹಪ್ರೀತ್ ಬ್ರಾರ್, ಕಗಿಸೋ ರಬಾಡ, ಹರ್ಷಲ್ ಪಟೇಲ್.

ಕೋಲ್ಕತಾ ನೈಟ್ ರೈಡರ್ಸ್:

ಫಿಲ್ ಸಾಲ್ಟ್(ವಿಕೆಟ್ ಕೀಪರ್), ಸುನಿಲ್ ನರೈನ್, ಅಂಗ್‌ಕೃಷ್ ರಘುವಂಶಿ, ಶ್ರೇಯಸ್ ಅಯ್ಯರ್(ನಾಯಕ), ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಸುಯಾಶ್ ಶರ್ಮಾ

ಪಂದ್ಯ: ಸಂಜೆ. 7:30ಕ್ಕೆ 
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಸಿನಿಮಾ

click me!