ಕಿಯಾ ಸೂಪರ್ ಲೀಗ್ ಫೈನಲ್ ಪಂದ್ಯ ಆಡಲ್ಲ ಸ್ಮೃತಿ ಮಂದಾನ

By Web DeskFirst Published Aug 17, 2018, 5:18 PM IST
Highlights

ಕಿಯಾ ಸೂಪರ್ ಲೀಗ್ ಟೂರ್ನಿಯಲ್ಲಿ ವೆಸ್ಟರ್ನ್ ಸ್ಟ್ರೋಮ್ ತಂಡದ ಸ್ಟಾರ್ ಪ್ಲೇಯರ್ ಸ್ಮೃತಿ ಮಂದಾನ ಇದೀಗ ಫೈನಲ್ ಪಂದ್ಯವನ್ನೇ ಆಡುತ್ತಿಲ್ಲ. ಲೀಗ್ ಪಂದ್ಯ, ಸೆಮಿಫೈನಲ್ ಪಂದ್ಯಗಳಲ್ಲಿ ತಂಡವನ್ನ ಗೆಲ್ಲಿಸಿದ ಸ್ಮೃತಿ ಮಂಧಾನ ಫೈನಲ್ ಪಂದ್ಯ ಆಡುತ್ತಿಲ್ಲ ಯಾಕೆ? ಇಲ್ಲಿದೆ.

ಹೋವ್(ಆ.17): ಇಂಗ್ಲೆಂಡ್‌ನ ಕಿಯಾ ಸೂಪರ್ ಲೀಗ್ ಟೂರ್ನಿಯಲ್ಲಿ ವೆಸ್ಟರ್ನ್ ಸ್ಟ್ರೋಮ್ ತಂಡ ಫೈನಲ್ ತಲುಪಲು ಮುಖ್ಯ ಕಾರಣ ಭಾರತದ ಸ್ಮೃತಿ ಮಂದಾನ. ಮಂಧಾನ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಪ್ರತಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಅತ್ಯುತ್ತಮ ಫಾರ್ಮ್‌ನಲ್ಲಿರುವ ಸ್ಮೃತಿ ಮಂಧಾನ 69.33 ಸರಾಸರಿಯಲ್ಲಿ 416 ರನ್ ಸಿಡಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಹಾಗೂ 1 ಶತಕ ಕೂಡ ಸೇರಿದೆ. ತಂಡವನ್ನ ಫೈನಲ್‌ವರೆಗೆ ಕೊಂಡೊಯ್ದ ಸ್ಮೃತಿ ಇದೀಗ ಪ್ರಶಸ್ತಿ ಸುತ್ತಿನ ಹೋರಾಟಕ್ಕೆ ಅಲಭ್ಯರಾಗಿದ್ದಾರೆ.

ಟೀಂ ಇಂಡಿಯಾ ತರಬೇತಿ ಶಿಬಿರಕ್ಕಾಗಿ ಸ್ಮೃತಿ ಮಂದಾನ ಭಾರತಕ್ಕೆ ಮರಳಿದ್ದಾರೆ. ಹೀಗಾಗಿ ಕಿಯಾ ಸೂಪರ್ ಲೀಗ್ ಟೂರ್ನಿಯ ಫೈನಲ್ ಪಂದ್ಯಕ್ಕೆ ಮಂದಾನ ಅಲಭ್ಯರಾಗಿದ್ದಾರೆ. ಮಂದಾನ ಫೈನಲ್ ಪಂದ್ಯ ಆಡದಿದ್ದರೂ ತಂಡ ಪ್ರಶಸ್ತಿ ಗೆಲ್ಲಲಿದೆ ಎಂದು ವೆಸ್ಟರ್ನ್ ಸ್ಟ್ರೋಮ್ ತಂಡ ವಿಶ್ವಾಸ ವ್ಯಕ್ತಪಡಿಸಿದೆ.
 

click me!