Latest Videos

ಹಾರ್ದಿಕ್‌ ಪಾಂಡ್ಯಗೆ ಡಿವೋರ್ಸ್‌ ಬೆನ್ನಲ್ಲೇ ಜೀಸಸ್ ಪೋಟೋ ಶೇರ್ ಮಾಡಿದ ನತಾಶಾ!

By Vinutha PerlaFirst Published May 26, 2024, 1:24 PM IST
Highlights

ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ನಡುವಿನ ದಾಂಪತ್ಯ ಜೀವನ ಬಿರುಕುಬಿಟ್ಟಿದೆ ಎನ್ನುವಂತ ಸುದ್ದಿ ವರದಿಯಾಗುತ್ತಲೇ ಇದೆ. ಇದರ ಬೆನ್ನಲ್ಲೇ ಪಾಂಡ್ಯ ಪತ್ನಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ಯೇಸುಕ್ರಿಸ್ತನ ಫೋಟೋ ಶೇರ್ ಮಾಡಿ ಎಲ್ಲರ ಮನಸ್ಸಿನಲ್ಲಿ ಪ್ರಶ್ನೆ ಹುಟ್ಟು ಹಾಕಿದ್ದಾರೆ.

ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾಂಕೋವಿಚ್ ನಡುವಿನ ದಾಂಪತ್ಯ ಜೀವನ ಬಿರುಕುಬಿಟ್ಟಿದೆ ಎನ್ನುವಂತ ಸುದ್ದಿ ವರದಿಯಾಗುತ್ತಲೇ ಇದೆ. ಇದರ ಬೆನ್ನಲ್ಲೇ ಪಾಂಡ್ಯ ಪತ್ನಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಂನಲ್ಲಿ ನಾನಾ ರೀತಿಯಲ್ಲಿ ಪೋಸ್ಟ್ ಮಾಡುವ ಮೂಲಕ ಈ ಸುದ್ದಿಗೆ ಪುಷ್ಟಿ ನೀಡಿದ್ದಾರೆ.  ನತಾಶಾ ಸ್ಟಾಂಕೋವಿಕ್‌ ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ, ಶೀಘ್ರದಲ್ಲಿ ಯಾರೋ ಒಬ್ಬರು ಬೀದಿಗೆ ಬೀಳುತ್ತಾರೆ ಎಂದು ಪೋಸ್ಟ್‌ ಮಾಡಿದ ಬೆನ್ನಲ್ಲಿಯೇ ಡಿವೋರ್ಸ್‌ನ ರೂಮರ್‌ಗಳು ಹಬ್ಬಿವೆ. ಹಾಗೇನಾದರೂ ನತಾಶಾ ವಿಚ್ಛೇದನ ಪಡೆದುಕೊಂಡಲ್ಲಿ, ಹಾರ್ದಿಕ್ ಪಾಂಡ್ಯ ತಮ್ಮ ಆಸ್ತಿಯ ಶೇ. 70ರಷ್ಟನ್ನು ಆಕೆಗೆ ನೀಡಬೇಕಾಗುತ್ತದೆ ಎಂದೂ ವರದಿಯಾಗಿತ್ತು.

ಮತ್ತೊಮ್ಮೆ ಇನ್‌ಸ್ಟಾಗ್ರಾಂನಲ್ಲಿ ನತಾಶಾ ಪೋಸ್ಟ್ ಮಾಡಿದ್ದು, ಕುರಿಮರಿಯೊಂದಿಗೆ ಯೇಸುಕ್ರಿಸ್ತನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಫೋಟೋ ನತಾಶಾ ತನ್ನ ಜೀವನದಲ್ಲಿ ಸಕಾರಾತ್ಮಕತೆಯ ಅಗತ್ಯವನ್ನು ಸೂಚಿಸುವಂತಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಡಿವೋರ್ಸ್‌ ಸುದ್ದಿ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಹೆಂಡ್ತಿ ನತಾಶಾ ಬಿಕಿನಿ ಪಿಕ್ಸ್ ವೈರಲ್..!

2020ರಲ್ಲಿ ಸೆರ್ಬಿಯಾ ಮೂಲದ ಮಾಡೆಲ್‌ ಹಾಗೂ ನಟಿ ನತಾಶಾ ಸ್ಟಾಂಕೋವಿಕ್‌ರನ್ನು ಹಾರ್ದಿಕ್‌ ಪಾಂಡ್ಯ ವಿವಾಹವಾಗಿದ್ದರು. ಮದುವೆಗೂ ಮುನ್ನ ಸ್ಟಾಂಕೋವಿಕ್‌ ಗರ್ಭಿಣಿಯೂ ಆಗಿದ್ದರು. ಈ ಜೋಡಿಗೆ ಅಗಸ್ತ್ರ್ಯ ಹೆಸರಿನ ಪುತ್ರನೂ ಇದ್ದಾನೆ. ಚ್ಛೇದನದ ಬಗ್ಗೆ ಹಾರ್ದಿಕ್‌ ಪಾಂಡ್ಯ ಆಗಲಿ ನತಾಶಾ ಸ್ಟಾಂಕೋವಿಕ್‌ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಾರ್ದಿಕ್ ಮತ್ತು ಅವರ ಪತ್ನಿ ಬೇರ್ಪಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇನ್ಸ್‌ಟಾಗ್ರಾಮ್‌ನಲ್ಲಿ ತಮ್ಮ ಹೆಸರಿನ ಹಿಂದಿದ್ದ ಹಾರ್ದಿಕ್‌ ಪಾಂಡ್ಯ ಹೆಸರನ್ನು ನತಾಶಾ ತೆಗೆದು ಹಾಕಿದ ಬಳಿಕ ಈ ವದಂತಿ ಹುಟ್ಟಿಕೊಂಡಿದೆ.

ದಂಪತಿಗಳು ಪರಸ್ಪರರ ಇತ್ತೀಚಿನ ಫೋಟೋಗಳನ್ನು ಪೋಸ್ಟ್ ಮಾಡಿಲ್ಲ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಿಸಿದ್ದಾರೆ. ಮಾರ್ಚ್ 4 ರಂದು ಪಾಂಡ್ಯ ತಮ್ಮ ಪತ್ನಿಯ ಹುಟ್ಟುಹಬ್ಬದ ಪೋಸ್ಟ್ ಅನ್ನು ಹಂಚಿಕೊಂಡಿಲ್ಲ. ಅಲ್ಲದೆ, ಐಪಿಎಲ್ 2024 ರ ಋತುವಿನಲ್ಲಿ ಸ್ಟಾಂಕೋವಿಕ್ ಗೈರುಹಾಜರಾಗಿದ್ದಾರೆ ಮತ್ತು ಪಾಂಡ್ಯ ಮತ್ತು ಅವರ ತಂಡವನ್ನು ಬೆಂಬಲಿಸುತ್ತಿಲ್ಲ ಎಂಬ ವದಂತಿಗಳು ಹರಡಿವೆ.

ಹಾರ್ದಿಕ್‌ ಪಾಂಡ್ಯಗೆ ಡಿವೋರ್ಸ್‌ ಬೆನ್ನಲ್ಲೇ, ದಿಶಾ ಪಟಾನಿ ಮಾಜಿ ಬಾಯ್‌ಫ್ರೆಂಡ್‌ ಜೊತೆ ಕಾಣಿಸ್ಕೊಂಡ Natasa!

ಹಾರ್ದಿಕ್ ಪಾಂಡ್ಯ ಆಸ್ತಿ ಮೌಲ್ಯವೆಷ್ಟು?
ಪಾಂಡ್ಯ ಐಪಿಎಲ್ ತಂಡದ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ. ಅವರು ತಂಡದಿಂದ 15 ಕೋಟಿ ರೂಪಾಯಿಗಳನ್ನು ಶುಲ್ಕವಾಗಿ ಪಡೆಯುತ್ತಾರೆ. ಅವರು ಮೊದಲು ಗುಜರಾತ್ ಟೈಟಾನ್ಸ್‌ನ ಭಾಗವಾಗಿದ್ದರು. ಗುಜರಾತ್ ತಂಡ ಕೂಡ ಅಷ್ಟೇ ಮೊತ್ತವನ್ನು ಪಾಂಡ್ಯಗೆ ನೀಡುತ್ತಿತ್ತು. ಇದರೊಂದಿಗೆ ಭಾರತ ಕ್ರಿಕೆಟ್ ತಂಡದಿಂದ ಪಂದ್ಯ ಶುಲ್ಕವನ್ನೂ ಪಡೆಯುತ್ತಾರೆ. ಇದರೊಂದಿಗೆ, ಅವರು ಬ್ರಾಂಡ್ ಎಂಡಾರ್ಸ್‌ಮೆಂಟ್‌ಗಳಿಂದಲೂ ಗಳಿಸುತ್ತಾರೆ.

click me!