ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ನಡೆಯುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಹಾಗೇನಾದರೂ ಹಾರ್ದಿಕ್ ಪಾಂಡ್ಯ ಡಿವೋರ್ಸ್ ಪಡೆದುಕೊಂಡಲ್ಲಿ ಪತ್ನಿಗೆ ಎಷ್ಟು ಹಣ ನೀಡಬೇಕಾಗುತ್ತದೆ ಅನ್ನೋದೇ ಎಲ್ಲರಲ್ಲಿರುವ ಕುತೂಹಲವಾಗಿದೆ.
ಮುಂಬೈ (ಮೇ.26): ಟೀಮ್ ಇಂಡಿಯಾ ಆಲ್ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್ ತಂಡ ನಾಯಕ ಹಾರ್ದಿಕ್ ಪಾಂಡ್ಯ ವಿಚಾರವಾಗಿ ಕೇಳು ಬರುತ್ತಿರುವ ಸುದ್ದಿ ಹಿತಕರವಾಗಿಲ್ಲ. ಆಟಗಾರ ಹಾಗೂ ಕ್ಯಾಪ್ಟನ್ ಆಗಿ ಈ ಬಾರಿಯ ಐಪಿಎಲ್‌ನಲ್ಲಿ ದಯನೀಯ ವೈಫಲ್ಯ ಕಂಡಿರುವ ಹಾರ್ದಿಕ್ ಪಾಂಡ್ಯ ಈಗ ವೈಯಕ್ತಿಕ ಜೀವನದಲ್ಲೂ ದೊಡ್ಡ ಮಟ್ಟದ ಹಿನ್ನಡೆ ಕಾಣುವ ಹಾದಿಯಲ್ಲಿದ್ದಾರೆ. ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಈ ಬಾರಿಯ ಯಾವ ಐಪಿಎಲ್ ಪಂದ್ಯಕ್ಕೂ ಹಾರ್ದಿಕ್ ಪಾಂಡ್ಯಗೆ ಬೆಂಬಲ ನೀಡಲು ಬಂದಿರಲಿಲ್ಲ. ಇದರ ಬೆನ್ನಲ್ಲಿಯೇ ಅವರು ಹಾಕಿರುವ ಇನ್ಸ್‌ಟಾಗ್ರಾಮ್ ಸ್ಟೋರಿಯಿಂದಾಗಿ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ಅವರ ವಿಚ್ಛೇದನ ವಿಚಾರ ಜೀವ ಪಡೆದುಕೊಂಡಿದೆ. 'ಶೀಘ್ರದಲ್ಲಿಯೇ ಯಾರೋ ಒಬ್ಬ ವ್ಯಕ್ತಿ ಬೀದಿಗೆ ಬೀಳ್ತಾರೆ..' ಎಂದು ನತಾಶಾ ಸ್ಟಾಂಕೋವಿಕ್ ಇನ್ಸ್‌ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಇದು ಹಾರ್ದಿಕ್ ಪಾಂಡ್ಯ ಕುರಿತಾಗಿ ಅವರು ಮಾಡಿರುವ ಪೋಸ್ಟ್ ಎನ್ನಲಾಗುತ್ತದೆ. ಹಾಗೇನಾದರೂ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಡಿವೋರ್ಸ್ ಪಡೆದುಕೊಂಡಲ್ಲಿ, ಪಾಂಡ್ಯ ಆಸ್ತಿಯ ಶೇ. 70ರಷ್ಟು ಪಾಲು ನತಾಶಾಗೆ ಸೇರಲಿದೆ ಎಂದೂ ವರದಿಯಾಗಿದೆ. ಇನ್ನೊಂದೆಡೆ ಹಾರ್ದಿಕ್ ಪಾಂಡ್ಯ ಅವರ ಯಾವ ಆಸ್ತಿ ಕೂಡ ಅವರ ಹೆಸರಿನಲ್ಲಿಲ್ಲ. ಇದೆಲ್ಲವೂ ಅವರ ತಾಯಿಯ ಹೆಸರಿನಲ್ಲಿವೆ ಎನ್ನುವ ಮಾತುಗಳಿವೆ. ನತಾಶಾ ಸ್ಟಾಂಕೋವಿಕ್ ಹೇಳಿದ ಹಾಗೆ, 90 ಕೋಟಿಯ ಆಸ್ತಿ ಹೊಂದಿರುವ ಹಾರ್ದಿಕ್ ಪಾಂಡ್ಯ ಬೀದಿಗೆ ಬೀಳ್ತಾರಾ ಎನ್ನುವುದೇ ಈಗ ಎಲ್ಲರ ಕುತೂಹಲವಾಗಿದೆ.
ಮುಂಬೈನ ಮಾಧ್ಯಮಗಳ ವರದಿಯ ಪ್ರಕಾರ ಹಾರ್ದಿಕ್ ಪಾಂಡ್ಯ ಅವರೆ ಈವರೆಗಿನ ಒಟ್ಟೂ ಆಸ್ತಿ 91 ಕೋಟಿ ರೂಪಾಯಿ. ಪ್ರತಿ ತಿಂಗಳ ಅವರ ಆದಾಯವೇ 1.2 ಕೋಟಿ ರೂಪಾಯಿ ಆಗಿದೆ. ಹಾರ್ದಿಕ್ ಪಾಂಡ್ಯ ಅವರ ಆದಾಯದ ದೊಡ್ಡ ಮೂಲ ಐಪಿಎಲ್. ಅದರೊಂದಿಗೆ ಬಿಸಿಸಿಐನ ಒಪ್ಪಂದ ಹೊಂದಿರುವ ಆಟಗಾರನಾಗಿರುವ ಕಾರಣ, ಈ ಒಪ್ಪಂದದ ಅನ್ವಯ ಅವರು ಪ್ರತಿ ವರ್ಷ 5 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. 2022ರಲ್ಲಿ ಗುಜರಾತ್ ಟೈಟಾನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗಿದ್ದರು. ಆ ವರ್ಷ ಅವರನ್ನು ಫ್ರಾಂಚೈಸಿ 15 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಆ ಬಳಿಕ ಮುಂಬೈ ಇಂಡಿಯನ್ಸ್‌ಗೆ ಬಂದಾಗ ಅವರನ್ನು ಇಷ್ಟೇ ಮೊತ್ತಕ್ಕೆ ಫ್ರಾಂಚೈಸಿ ಖರೀದಿ ಮಾಡಿತ್ತು. ಅದಲ್ಲದೆ, ಬ್ರ್ಯಾಂಡ್‌ಗಳ ರಾಯಭಾರಿಯಾಗಿಯೂ ಹಾರ್ದಿಕ್ ಪಾಂಡ್ಯ ಪ್ರತಿ ತಿಂಗಳು 55-60 ಲಕ್ಷ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದಾರೆ.
ಇನ್ನು ಮುಂಬೈನಲ್ಲಿ ಹಾರ್ದಿಕ್ ಪಾಂಡ್ಯ ಐಷಾರಾಮಿ ಮನೆ ಹೊಂದಿದ್ದಾರೆ. ಇದಕ್ಕಾಗಿ ಅವರು 30 ಕೋಟಿ ರೂಪಾಯಿ ವೆಚ್ಚ ಮಾಡಿದ್ದಾರೆ. ಇದಲ್ಲದೆ, ತವರು ರಾಜ್ಯ ಗುಜರಾತ್‌ನ ವಡೋದರಲ್ಲಿ ಅತ್ಯಾಕರ್ಷಕವಾದ ಪೆಂಟ್‌ಹೌಸ್‌ಅನ್ನು ಕೂಡ ಅವರು ಹೊಂದಿದ್ದಾರೆ. ಹಾಗೇನಾದರೂ ವಿಚ್ಛೇದನವಾಗಿ ಅವರು ಈ ಆಸ್ತಿಯನ್ನು ಕೊಡಬೇಕಾದ ಹಂತ ಬಂದಲ್ಲಿ ಅದು ಅವರ ಹಾಲಿಗೆ ಹಿನ್ನಡೆಯಾಗಲಿದೆ. ಮೂಲಗಳ ಪ್ರಕಾರ ಸ್ಥಿರಾಸ್ತಿಗಳು ಯಾವುದೂ ಕೂಡ ಹಾರ್ದಿಕ್ ಪಾಂಡ್ಯ ಅವರ ಹೆಸರಲ್ಲಿಲ್ಲ. ಫೆಬ್ರವರಿ 14 ರಂದು ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್ ಕೊನೆಯ ಬಾರಿಗೆ ಒಂದಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದರು.ಅದಾದ ಬಳಿಕ ಅವರ ಯಾವ ಚಿತ್ರ ಕೂಡ ಪೋಸ್ಟ್ ಆಗಿಲ್ಲ.
ಹಾರ್ದಿಕ್ ಪಾಂಡ್ಯಗೆ ಡಿವೋರ್ಸ್ ಬೆನ್ನಲ್ಲೇ, ದಿಶಾ ಪಟಾನಿ ಮಾಜಿ ಬಾಯ್‌ಫ್ರೆಂಡ್ ಜೊತೆ ಕಾಣಿಸ್ಕೊಂಡ Natasa!