IPL 2024 Final: ಮಾಜಿ ಚಾಂಪಿಯನ್ನರಲ್ಲಿ ಹಾಲಿ ಚಾಂಪಿಯನ್ಸ್ ಆಗೋರ್ಯಾರು..?

By Suvarna News  |  First Published May 26, 2024, 1:27 PM IST

17ನೇ ಸೀಸನ್ IPL ಕೊನೆ ಹಂತಕ್ಕೆ ಬಂದಿದೆ. ಇಂದು ಚೆನ್ನೈನಲ್ಲಿ ನಡೆಯುವ ಫೈನಲ್ ಫೈಟ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಐಪಿಎಲ್ ಟ್ರೋಫಿಗಾಗಿ ಕಾದಾಡಲಿವೆ. ಎರಡು ಟೀಮ್ಸ್ ಈಗಾಗಲೇ ತಲಾ ಎರಡು IPL ಕಪ್ ಗೆದ್ದಿವೆ.


ಚೆನ್ನೈ: ಇಂದು ಐಪಿಎಲ್‌ಗೆ ಅದ್ದೂರಿಯಾಗಿ ತೆರೆ ಬೀಳುತ್ತಿದೆ. ಚೆನ್ನೈನಲ್ಲಿ ಇಂದು ಫೈನಲ್ ಫೈಟ್. ಸನ್‌ರೈಸರ್ಸ್ ಹೈದ್ರಾಬಾದ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳು 17ನೇ ಸೀಸನ್ ಟ್ರೋಫಿಗಾಗಿ ಕಾದಾಡುತ್ತಿವೆ. ಯಾರೇ ಗೆದ್ರೂ ಅವರಿಗೆ 3ನೇ ಟ್ರೋಫಿ ಆಗಲಿದೆ. ಇಂದು ಸೌತ್ ಇಂಡಿಯನ್ಸ್ ಹೈದ್ರಾಬಾದ್‌ಗೆ ಸಪೋರ್ಟ್ ಮಾಡಲಿದ್ದಾರೆ. ಇಂದು ಅವರೇ ಫೇವರಿಟ್. 

3ನೇ ಸಲ ಟ್ರೋಫಿ ಗೆಲ್ಲಲು ಎರಡು ತಂಡಗಳು ಪಣ

Latest Videos

undefined

17ನೇ ಸೀಸನ್ IPL ಕೊನೆ ಹಂತಕ್ಕೆ ಬಂದಿದೆ. ಇಂದು ಚೆನ್ನೈನಲ್ಲಿ ನಡೆಯುವ ಫೈನಲ್ ಫೈಟ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ತಂಡಗಳು ಐಪಿಎಲ್ ಟ್ರೋಫಿಗಾಗಿ ಕಾದಾಡಲಿವೆ. ಎರಡು ಟೀಮ್ಸ್ ಈಗಾಗಲೇ ತಲಾ ಎರಡು IPL ಕಪ್ ಗೆದ್ದಿವೆ. ಸನ್ ರೈಸರ್ಸ್ ಹೈದ್ರಾಬಾದ್ ತಂಡ ಈ ಮುಂಚೆ ಡೆಕ್ಕನ್ ಚಾರ್ಜರ್ಸ್ ಹೆಸರಿಟ್ಟುಕೊಂಡಿದ್ದಾಗ ಟ್ರೋಫಿ ಗೆದ್ದಿತ್ತು. ಹಾಗಾಗಿ ಇಂದು ಯಾರೇ ಗೆದ್ರೂ ಆ ತಂಡಕ್ಕೆ 3ನೇ IPL ಟ್ರೋಫಿ ಹೋಗಲಿದೆ. ತಟಸ್ಥ ಸ್ಥಳ ಚೆನ್ನೈನಲ್ಲಿ ಫೈನಲ್ ವಾರ್ ನಡೆಯುತ್ತಿದ್ದರೂ ಸನ್ ರೈಸರ್ಸ್‌ಗೆ ಭಾರಿ ಬೆಂಬಲ ಸಿಗಲಿದೆ. ಯಾಕಂದ್ರೆ ಸನ್ ರೈಸರ್ಸ್ ಮಾಲೀಕರು ಮೂಲತಃ ಚೆನ್ನೈನವರು.

IPL 2024 ಈ ಆಟಗಾರನನ್ನು ಕೈಬಿಟ್ಟು ಮಹಾ ಯಡವಟ್ಟು ಮಾಡಿದ ಆರ್‌ಸಿಬಿ..!

ಹೈದ್ರಾಬಾದ್‌ಗೆ ಆಸ್ಟ್ರೇಲಿಯನ್ಸ್ ಲಕ್ಕಿ ಕ್ಯಾಪ್ಟನ್ಸ್

ಹೌದು, ಹೈದ್ರಾಬಾದ್ ತಂಡಕ್ಕೆ ಆಸ್ಟ್ರೇಲಿಯನ್ನರು ಲಕ್ಕಿ ಕ್ಯಾಪ್ಟನ್ಗಳು. 2009ರಲ್ಲಿ ಹೈದ್ರಾಬಾದ್ ಡೆಕ್ಕನ್ ಚಾರ್ಜರ್ಸ್ ಚಾಂಪಿಯನ್ ಆಗಿದ್ದು, ಆಡಂ ಗಿಲ್ ಕ್ರಿಸ್ಟ್ ನಾಯಕತ್ವದಲ್ಲಿ. 2016ರಲ್ಲಿ ಸನ್ ರೈಸರ್ಸ್ ಹೈದ್ರಾಬಾದ್‌ಗೆ IPL ಟ್ರೋಫಿ ಗೆದ್ದುಕೊಟ್ಟಿದ್ದು ಡೇವಿಡ್ ವಾರ್ನರ್. ಈಗ ಸನ್‌ರೈಸರ್ಸ್ ಕ್ಯಾಪ್ಟನ್ ಅದೇ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್. ಹಾಗಾಗಿ ಇಂದು ಹೈದ್ರಾಬಾದ್ ಗೆಲ್ಲಲಿದೆ ಅಂತ ಹೇಳಲಾಗ್ತಿದೆ. ಇಂದು ಸನ್ ರೈಸರ್ಸ್ ಕಪ್ ಗೆದ್ರೆ, ಹೈದ್ರಾಬಾದ್ ಪಾಲಿಗೆ ಆಸ್ಟ್ರೇಲಿಯನ್ನರು ಲಕ್ಕಿ ಕ್ಯಾಪ್ಟನ್ಸ್ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಲಿದೆ.

ಚೆನ್ನೈನ ಚೆಪಾಕ್ನಲ್ಲಿ ಪ್ರಜ್ವಲಿಸುತ್ತಾ ಸನ್..!

ಸನ್ ರೈಸರ್ಸ್ ಹೈದ್ರಾಬಾದ್ ತಂಡ ಲೀಗ್‌ನ 14 ಪಂದ್ಯಗಳಲ್ಲಿ 8 ಗೆದ್ದು 8 ಸೋತು, ಪ್ಲೇ ಆಫ್ಗೆ ಬಂದಿತ್ತು. ಫಸ್ಟ್ ಕ್ವಾಲಿಫೈಯರ್ನಲ್ಲಿ ಕೆಕೆಆರ್ ವಿರುದ್ಧ ಸೋತರೂ ಸೆಕೆಂಡ್ ಕ್ವಾಲಿಫೈಯರ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನ ಬಗ್ಗು ಬಡಿದು ಫೈನಲ್ ಪ್ರವೇಶಿಸಿದೆ. ಮೊನ್ನೆಯಷ್ಟೇ ಚೆನ್ನೈನಲ್ಲಿ ಆಡಿರುವುದು ಸನ್ ರೈಸರ್ಸ್ ನೆರವಿಗೆ ಬರಲಿದೆ. ಹೊಡಿಬಡಿ ಆಟಕ್ಕೂ ಸೈ, ಕ್ಲಾಸ್ ಆಟಕ್ಕೂ ಜೈ ಅನ್ನುವಂತಿದೆ ಹೈದ್ರಾಬಾದ್ ಬ್ಯಾಟಿಂಗ್ ಲೈನ್ ಅಪ್. 

ಮುಂಬರುವ ಐಪಿಎಲ್ ಮೆಗಾ ಹರಾಜಿಗೂ ಮುನ್ನ RCB ಈ ಐವರನ್ನು ಕೈಬಿಡೋದು ಗ್ಯಾರಂಟಿ..!

ಓಪನರ್‌ಗಳಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ 200ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡ್ತಿದ್ದಾರೆ. ಇದು ಸನ್ ರೈಸರ್ಸ್‌ಗೆ  ಪ್ಲಸ್ ಪಾಯಿಂಟ್. ಕ್ಲಾಸನ್, ತ್ರಿಪಾಠಿ, ಮಾರ್ಕ್‌ರಮ್, ನಿತೀಶ್ ರೆಡ್ಡಿ ಸಹ ಒಳ್ಳೆ ಫಾರ್ಮ್ನಲ್ಲಿದ್ದಾರೆ. ಲೋಕಲ್ ಬಾಯ್ ನಟರಾಜನ್, ಭುವನೇಶ್ವರ್, ಉನಾದ್ಕತ್, ಶಬಾಜ್ ಮತ್ತು ಕ್ಯಾಪ್ಟನ್ ಪ್ಯಾಟ್ ಕಮಿನ್ಸ್ ಬೌಲಿಂಗ್‌ನಲ್ಲಿ ಎದುರಾಳಿಗಳನ್ನ ಕಾಡುತ್ತಿದ್ದಾರೆ. ರಾಯಲ್ಸ್ ತಂಡವನ್ನ 139 ರನ್‌ಗೆ ನಿಯಂತ್ರಿಸಿದ್ದೇ ಈ ಬೌಲಿಂಗ್ ಪಡೆ.

ಕೆಕೆಆರ್‌ಗೆ ಮೆಂಟರ್ ಗಂಭೀರ್ ಬಲ

ಕೆಕೆಆರ್ ತಂಡ ಲೀಗ್‌ನಲ್ಲಿ ಸೋತಿದ್ದು ಜಸ್ಟ್ ಮೂರೇ ಮ್ಯಾಚ್. ಫಸ್ಟ್ ಕ್ವಾಲಿಫೈಯರ್‌ನಲ್ಲಿ ಇದೇ ಸನ್ ರೈಸರ್ಸ್ ತಂಡವನ್ನ ಸೋಲಿಸಿ, ಫೈನಲ್ಗೆ ಬಂದಿದೆ. ಲೀಗ್ನಲ್ಲೂ ಹೈದ್ರಾಬಾದ್ ಸೋಲಿಸಿದೆ. ಈಗ ಈ ಸೀಸನ್ನಲ್ಲಿ ಸನ್ ರೈಸರ್ಸ್ ವಿರುದ್ಧ ಹ್ಯಾಟ್ರಿಕ್ ಜಯ ಸಾಧಿಸಲು ಎದುರು ನೋಡುತ್ತಿದೆ. ಗೌತಮ್ ಗಂಭೀರ್ ನಾಯಕತ್ವದಲ್ಲಿ ಎರಡು ಟ್ರೋಫಿ ಗೆದ್ದಿದ್ದ ಕೆಕೆಆರ್, ಈಗ ಅವರ ಮೆಂಟರ್ ಅವಧಿಯಲ್ಲಿ ಮತ್ತೊಂದು ಟ್ರೋಫಿ ಗೆಲ್ಲೋ ವಿಶ್ವಾಸದಲ್ಲಿದೆ.

ಚೆಪಾಕ್ ಸ್ಟೇಡಿಯಂ ಪಿಚ್ ಸ್ಪಿನ್ನರ್‌ಗಳಿಗೆ ಹೆಲ್ಪ್ ಆಗಲಿದೆ. ಸುನಿಲ್ ನರೇನ್ ಮತ್ತು ಲೋಕಲ್ ಬಾಯ್ ವರುಣ್ ಚಕ್ರವರ್ತಿ ಮ್ಯಾಜಿಕ್ ಮಾಡಲು ಕಾಯ್ತಿದ್ದಾರೆ. ಎರಡು ಟೀಮ್‌ನಲ್ಲಿ ಹೊಡಿಬಡಿ ಬ್ಯಾಟರ್ಸ್ ಇರೋದ್ರಿಂದ ಇಂದು ಸ್ಪಿನ್ ಮ್ಯಾಜಿಕ್ ಜೊತೆ ರನ್ ಹೊಳೆ ಹರಿದ್ರು ಆಶ್ಚರ್ಯವಿಲ್ಲ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

click me!