ವಿವಾದ ಸೃಷ್ಟಿಸಿದ ಸಿಧುಗೆ ನೂತನ ಪಾಕ್ ಪ್ರಧಾನಿ ಸಂದೇಶ

By Chethan KumarFirst Published Aug 21, 2018, 6:31 PM IST
Highlights

ಪಾಕಿಸ್ತಾನ ನೂತನ ಪ್ರಧಾನಿ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಭಾರತಕ್ಕೆ ಆಗಮಿಸುತ್ತಿದ್ದಂತೆ ಟೀಕೆಗಳ ಸುರಿಮಳೆ ಎದುರಿಸಬೇಕಾಯಿತು. ಆದರೆ ಸಿದ್ದು ಬೆಂಬಲಕ್ಕೆ ಇದೀಗ ಪಾಕ್ ಪ್ರಧಾನಿ ಅಖಾಡಕ್ಕೆ ಇಳಿದಿದ್ದಾರೆ.

ಇಸ್ಲಾಮಾಬಾದ್(ಆ.21): ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತೆರಳಿ ವಿವಾದ ಸೃಷ್ಟಿಸಿದ ಭಾರತದ ಮಾಜಿ ಕ್ರಿಕೆಟಿ, ಪಂಜಾಬ್ ಸಂಸದ ನವಜೋತ್ ಸಿಂಗ್ ಸಿಧುಗೆ ಇದೀಗ ಇಮ್ರಾನ್ ಖಾನ್ ಸಂದೇಶ ರವಾನಿಸಿದ್ದಾರೆ.

ಪಾಕಿಸ್ತಾನಕ್ಕೆ ಆಗಮಿಸಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡ ನವಜೋತ್ ಸಿಂಗ್ ಸಿದ್ದುಗೆ ಪಾಕ್ ಇಮ್ರಾನ್ ಖಾನ್ ಧನ್ಯವಾದ ಹೇಳಿದ್ದಾರೆ. ಇಷ್ಟೇ ಅಲ್ಲ, ಸಿದ್ದು ಶಾಂತಿ ಹಾಗೂ ಪ್ರೀತಿಯ ಧೂತನಾಗಿ ಭಾರತದಿಂದ ಪಾಕಿಸ್ತಾನಕ್ಕೆ ಬಂದಿದ್ದರು. ಶಾಂತಿಯಿಂದ ಮಾತ್ರ ಭಾರತ-ಪಾಕಿಸ್ತಾನ ಸಮಸ್ಯೆಯನ್ನ ಬಗೆಹರಿಸಲು ಸಾಧ್ಯ. ಹೀಗಾಗಿ ಸಿದ್ದು ವಿರುದ್ದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಇದನ್ನೂ ಓದಿ:ಪಾಕ್ ಪ್ರಧಾನಿ ಪ್ರಮಾಣ ವಚನಕ್ಕೆ ಸಿದ್ದು ಹಾಜರ್-ನೆಟ್ಟಿಗರ ತರಾಟೆ!

ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಪ್ರಮಾಣ ವಚನಕ್ಕೆ ತೆರಳಿದ ಸಿದ್ದು ವಿರುದ್ಧ ಭಾರತದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪ್ರಮಾಣ ವಚನ ಸಮಾರಂಭದಲ್ಲಿ ಸಿದ್ದು ಪಾಕಿಸ್ತಾನ ಆರ್ಮಿ ಮುಖ್ಯಸ್ಥರನ್ನ ಆಲಂಗಿಸಿಕೊಂಡಿರುವುದುಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:ಸಿಧುಗೆ ಪಾಕ್ ಪೌರತ್ವ ನೀಡಿದ್ರಾ ಇಮ್ರಾನ್ ಖಾನ್?

ಗಡಿಯಲ್ಲಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನ ಸೇನಾ ಮುಖ್ಯಸ್ಥರನ್ನ ಆಲಂಗಿಸಿಕೊಂಡಿರುವುದು ತಪ್ಪು ಎಂದು ಭಾರತದ ನಿವೃತ್ತ ಸೈನಿಕರು ಹಾಗೂ ಅವರ ಕುಟಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಬಿಜೆಪಿ ಕೂಡ ಸಿದ್ದು ಪಾಕ್ ಪ್ರವಾಸಕ್ಕೆ ವಿರೋಧ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಒಹೋ!: ಸಿಧು, ಬಜ್ವಾ ಮಾತಾಡಿದ್ದು ಈ ಕುರಿತಾ?

click me!