ಬೆಂಗಳೂರು(ಆ.18): ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ, ಮಾಜಿ ಕ್ರಿಕೆಟಿಗ, ಪಂಜಾಬ್ ಸಂಸದ ನವಜೋತ್ ಸಿಂಗ್ ಸಿದ್ದು ಸಾಕ್ಷಿಯಾದರು. ಆದರೆ ಪಾಕ್‌ಗೆ ತೆರಳಿದ ಸಿದ್ದುಗೆ ಟ್ವಿಟರಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇಮ್ರಾನ್ ಖಾನ್ ಪ್ರಮಾಣವಚನ ಸಮಾರಂಭಕ್ಕೆ ಭಾರತದ ಮಾಜಿ ಕ್ರಿಕೆಟಿಗರಾದ ಸುನಿಲ್ ಗವಾಸ್ಕರ್, ಕಪಿಲ್ ದೇವ್ ಹಾಗೂ ನವಜೋತ್ ಸಿಂಗ್ ಸಿದ್ದುಗೆ ಆಹ್ವಾನ ನೀಡಿದ್ದರು. ಆದರೆ ಕಪಿಲ್ ದೇವ್ ಹಾಗೂ ಗವಾಸ್ಕರ್ ಪ್ರಮಾಣ ವಚನ ಆಹ್ವಾನವನ್ನ ತಿರಸ್ಕರಿಸಿದ್ದರು. ಆದರೆ ಸಿದ್ದು ಪಾಕ್ ಪ್ರಧಾನಿ ಪ್ರಮಾಣ ವಚನ ಸಮಾರರಂಭದಲ್ಲಿ ಪಾಲ್ಗೊಂಡಿದ್ದಾರೆ.

ಪಾಕಿಸ್ತಾನಕ್ಕೆ ತೆರಳಿದ ಸಿದ್ದು ನಿರ್ಧಾರಕ್ಕೆ ಟ್ವಿಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತೀಯರಿಗೆ ಯಾವ ಉತ್ತರ ನೀಡುತ್ತೀರಿ ಎಂದು ಟ್ವಿಟರಿಗರು ಪ್ರಶ್ನಿಸಿದ್ದಾರೆ. ಇಷ್ಟೇ ಅಲ್ಲ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಅಂತಿಮ ನಮನ ಸಲ್ಲಿಸಲು ತೆರಳದ ಸಿದ್ದು, ನೇರವಾಗಿ ಪಾಕಿಸ್ತಾನಕ್ಕೆ ತೆರಳಿ , ಇಮ್ರಾನ್ ಖಾನ್ ಪ್ರಮಾಣ ವಚನೆ ಸಮಾರಂಭದಲ್ಲಿ ಪಾಲ್ಗೊಂಡಿರುವುದು ತಪ್ಪು ಎಂದು ಹೇಳಿದ್ದಾರೆ. ಜೊತೆಗೆ ಪಾಕಿಸ್ತಾನ ಆರ್ಮಿ ಮುಖ್ಯಸ್ಥನ ಆಲಂಗಿಸಿರೋದು ಟ್ವಿಟರಿಗರನ್ನ ಕೆರಳಿಸಿದೆ. ಗಡಿ ಭಾಗದಲ್ಲಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ಮಾಡುತ್ತಿರುವ ಪಾಕಿಸ್ತಾನ ಮಿಲಿಟರಿ ಪಡೆ ಮುಖ್ಯಸ್ಥನನ್ನ ಆಲಂಗಿಸಿ ಸಿದ್ದು ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

 

 

 

 

ಪ್ರಮಾಣ ವಚನ ಸಮಾರಂಭದಲ್ಲಿ ಪಾಕ್ ನೂತನ ಪ್ರಧಾನಿ ಇಮ್ರಾನ್ ಖಾನ್ ಪಕ್ಕದಲ್ಲಿ ಸಿದ್ದುಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ಇದೀಗ ವಿವಾದಕ್ಕೂ ಕಾರಣವಾಗಿದೆ. ಸಿದ್ದುಗೆ ನೂತನ ಪ್ರಧಾನಿ ಪಕ್ಕದಲ್ಲೇ ಆಸನ ವ್ಯವಸ್ಥೆ ಮಾಡಿದ್ದೇಕೆ?  ಎಂದು ಪಾಕ್ ಮಾಧ್ಯಮಗಳು ಇಮ್ರಾನ್ ಖಾನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.