ಕಾಳಿ ವೇಷ ಧರಿಸಿ ಮಕ್ಕಳ ಕಥಾನಕ ಪ್ರದರ್ಶನ, ರಾಕ್ಷಸರ ವಧೆಯಲ್ಲಿ 11 ವರ್ಷದ ಬಾಲಕ ದುರಂತ ಅಂತ್ಯ!

By Suvarna News  |  First Published May 3, 2024, 7:53 PM IST

ಪ್ರಸಂಗ, ಕಥನಾಕ, ನಾಟಕಗಳನ್ನು ನೋಡಿದ ಬಳಿಕ ಮಕ್ಕಳ ಮನೆಯಲ್ಲಿ ಅದೇ ರೀತಿ ವೇಷ ಧರಿಸುವುದು ನಕಲು ಮಾಡುವುದು ಸಹಜ. ಹೀಗೆ ಕಾಳಿ ಮಾತಾ ಕಥಾನಕ ಮಾಡುತ್ತಿದ್ದ ಮಕ್ಕಳ ಪ್ರದರ್ಶನ ದುರಂತದಲ್ಲಿ ಅಂತ್ಯವಾಗಿದೆ. ರಾಕ್ಷಸರ ವಧೆಯಲ್ಲಿ 11 ವರ್ಷದ ಬಾಲಕ ದುರಂತ ಅಂತ್ಯ ಕಂಡಿದ್ದಾನೆ.
 


ಕಾನ್ಪುರ(ಮೇ.03) ಮಕ್ಕಳು ಕಾಳಿ ಮಾತೆಯ ಕಥಾನಕ ಪ್ರದರ್ಶಿಸಲು ಮುಂದಾಗಿದ್ದಾರೆ. ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಕಥಾನಕ ಆರಂಭಿಸಿದ್ದಾರೆ. ಆದರೆ ರಾಕ್ಷಸರ ವಧೆ ಪ್ರಸಂಗದ ವೇಳೆ ಕಾಳಿ ವೇಷಧರಿಸಿದ 14 ವರ್ಷದ ಬಾಲಕನಿಗೆ ತ್ರಿಶೂಲ ಸಿಗಲಿಲ್ಲ. ಹೀಗಾಗಿ ಚಾಕು ಹಿಡಿದು ರಂಗ ಪ್ರವೇಶಿಸಿದ್ದಾನೆ. ಇತ್ತ 11 ವರ್ಷದ ಬಾಲಕ ರಾಕ್ಷಸನಾಗಿ ವೇಷ ತೊಟ್ಟಿದ್ದಾನೆ. ರಕ್ಷಸರ ವಧೆಯಲ್ಲಿ ಕಾಳಿ ಚಾಕು ಬೀಸಿದ ಎಟಿಗೆ ಬಾಲಕನ ಕುತ್ತಿಕೆ ಕೊಯ್ದಿದೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ 11 ವರ್ಷದ ಬಾಲಕ ಮಮೃತಪಟ್ಟ ಘಟನೆ ಕಾನ್ಪುರದಲ್ಲಿ ನಡೆದಿದೆ.

ಬಂಬಿಯಾನ್ಪುರ ಗ್ರಾಮದಲ್ಲಿ ಮಕ್ಕಳು ಭಗವತ್ ಕಥಾ ಪ್ರಸಂಗ ಆಯೋಜಿಸಿದ್ದಾರೆ. ಎಲ್ಲಾ 8 ರಿಂದ 14 ವರ್ಷದೊಳಗಿನ ಮಕ್ಕಳ ಈ ಕಥಾನಕಕ್ಕೆ ಅಕ್ಕ ಪಕ್ಕದಲ್ಲಿ ಸಿಕ್ಕ ವಸ್ತುಗಳು, ಉಡುಪುಗಳನ್ನು ತರಲಾಗಿದೆ. ಬಳಿಕ ಕಥಾನಕ ಆರಂಭಗೊಂಡಿದೆ. ಹಲವು ವೇಷಗಳು ಬಂದು ಹೋಗಿದೆ. ಇತ್ತ ಕಾಳಿ ಮಾತೆ ರಂಗಕ್ಕೆ ಎಂಟ್ರಿಯಾಗಲು ವೇದಿಕೆ ಸಜ್ಜಗೊಂಡಿತ್ತು. ಕಾಳಿ ಮಾತೆಯ ಪ್ರಮುಖ ಅಸ್ತ್ರ ತ್ರಿಶೂಲ ಸಿಗಲೇ ಇಲ್ಲ. ಹೀಗಾಗಿ ಕಾಳಿ ಮಾತೆ ವೇಷ ಧರಿಸಿದ 14 ವರ್ಷದ ಬಾಲಕ ತ್ರಿಶೂಲದ ಬದಲು ಚಾಕು ಹಿಡಿದು ಆಗಮಿಸಿದ್ದಾನೆ.

Tap to resize

Latest Videos

ಮೋದಿ ಮತ್ತೆ ಪ್ರಧಾನಿಯಾಗಲು ಪ್ರಾರ್ಥಿಸಿ ಕಾಳಿ ಮಾತೆಗೆ ಬೆರಳನ್ನೇ ಅರ್ಪಿಸಿದ ಭಕ್ತ!

ಕಥಾನಕ ಮುಂದುವರಿದಿದೆ. ಇತ್ತ ರಾಕ್ಷಸನ ಪ್ರವೇಶವಾಗಿದೆ. ಕಥಾನಕದಲ್ಲಿರುವಂತೆ  ಕಾಳಿ ಮಾತೆಯ ಕಾಲಿನ ಮೇಲೆ ಮಲಗಬೇಕು. ಈ ವೇಳೆ ಕಾಳಿ ರಾಕ್ಷಸ ವಧೆ ಮಾಡುತ್ತಾಳೆ. ಇದರಂತೆ 11 ವರ್ಷದ ಬಾಲಕ ಕಾಳಿ ಮಾತೆಯ ಕಾಲಿನತ್ತ ಬಾಗಿದ್ದಾನೆ. ಇತ್ತ ಕಾಳಿ ಮಾತೆ ವೇಷ ಧರಿಸಿದ ಬಾಲಕ ಕೈಯಲ್ಲಿದ್ದ ಚಾಕು ಬೀಸಿದ್ದಾನೆ. ಬೀಸಿದ ರಭಸಕ್ಕೆ ಬಾಲಕನ ಕುತ್ತಿಗೆ ಕೊಯ್ದಿದೆ.

ರಕ್ತ ಸ್ರಾವ ಆರಂಭಗೊಂಡಿದೆ. ಬಾಲಕ ಅಸ್ವಸ್ಥನಾಗಿ ಚೀರಾಡುತ್ತಾ ಕುಸಿದಿದ್ದಾನೆ. ಮಕ್ಕಳ ಚೀರಾಟ ಆರಂಭಗೊಂಡಿದೆ. ಭಯಗೊಂಡ ಮನೆಯ ಹಿರಿಯರು ಪೊಲೀಸರಿಗೆ ಮಾಹಿತಿ ನೀಡಿ್ದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕುಸಿದು ಬಿದ್ದಿದ್ದ ಬಾಲಕನ ಆಸ್ಪತ್ರೆ ಸಾಗಿಸಿ ದಾಖಲಿಸಿದ್ದಾರೆ. ಆದರೆ ಕಾಲ ಮಿಂಚಿ ಹೋದ ಕಾರಣ ಬಾಲಕನ ಮೃತಪಟ್ಟಿದ್ದಾನೆ. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು 14 ವರ್ಷದ ಬಾಲಕನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಸಂಭ್ರಮದಲ್ಲಿ ಆಡುತ್ತಿದ್ದ ಮಕ್ಕಳ ಕಥಾನಕ ಪ್ರದರ್ಶನ ದುರಂತದಲ್ಲಿ ಅಂತ್ಯಗೊಂಡಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. 

ಪತ್ನಿ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಹತ್ಯೆ, ಕಝಕ್ ಮಾಜಿ ಸಚಿವನ ಕ್ರೌರ್ಯ ಸಿಸಿಟಿವಿಯಲ್ಲಿ ಸೆರೆ!


 

click me!