ಕೆಕೆಆರ್‌ಗೆ ಪ್ಲೇ ಆಫ್ ಹಾದಿ ಸುಗಮಗೊಳಿಸುವ ತವಕ, ಮುಂಬೈ ಇಂಡಿಯನ್ಸ್‌ಗೆ ಕೊನೆಯ ಅವಕಾಶದಲ್ಲಿ ಅದೃಷ್ಠ ಖುಲಾಯಿಸುವ ವಿಶ್ವಾಸ. ಈ ರೋಚಕ ಹೋರಾಟದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಮುಂಬೈ(ಮೇ.03) ಐಪಿಎಲ್ 2024 ಟೂರ್ನಿಯಲ್ಲಿ ಕೆಕೆಆರ್ ಪ್ಲೇಆಫ್ ಸ್ಥಾನಕ್ಕೇರಲು ಕಸರತ್ತು ನಡೆಸುತ್ತಿದೆ. ಇತ್ತ ಮುಂಬೈ ಇಂಡಿಯನ್ಸ್ ಪ್ಲೇ ಆಫ್ ಹಾದಿ ಬಹುತೇಕ ಕಮರಿಹೋಗಿದೆ. ಆದರೆ ಇತರರ ಪ್ಲೇ ಆಫ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸುವ ಸಾಧ್ಯತೆ ಇದೆ. ಇದೀಗ ಮುಂಬೈ ಇಂಡಿಯನ್ಸ್ ಹಾಗೂ ಕೆಕೆಆರ್ ನಡುವಿನ ಹೋರಾಟ ಕುತೂಹಲದ ಕೇಂದ್ರಬಿಂದುವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮೊಹಮ್ಮದ್ ನಬಿ ಬದಲು ನಮನ್ ಧೀರ್ ತಂಡ ಸೇರಿಕೊಂಡಿದ್ದಾರೆ. ಈ ಪಂದ್ಯಕ್ಕೆ ರೋಹಿತ್ ಶರ್ಮಾ ಇಂಪಾಕ್ಟ್ ಪ್ಲೇಯರ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತ ಕೆಕೆಆರ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಮುಂಬೈ ಇಂಡಿಯನ್ಸ್ ಪ್ಲೇಯಿಂಗ್ 11
ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ನೆಹಾಲ್ ವಾಧೇರ, ಹಾರ್ದಿಕ್ ಪಾಂಡ್ಯ(ನಾಯಕ), ನಮನ್ ಧೀರ್, ಟಿಮ್ ಡೇವಿಡ್, ಗೆರಾಲ್ಡ್ ಕೊಯೆಟ್ಜ್, ಪಿಯೂಷ್ ಚಾವ್ಲಾ, ಜಸ್ಪ್ರೀತ್ ಬುಮ್ರಾ, ನುವಾನ್ ತುಷಾರ
ಕೆಕೆಆರ್ ಪ್ಲೇಯಿಂಗ್ 11
ಫಿಲಿಪ್ ಸಾಲ್ಟ್, ಸುನಿಲ್ ನರೈನ್, ಅಂಗ್ಕ್ರಿಶ್ ರಘುಂಶಿ, ಶ್ರೇಯಸ್ ಐಯರ್(ನಾಯಕ, ವೆಂಕಚೇಶ್ ಐಯರ್, ರಿಂಕು ಸಿಂಗ್, ಆ್ಯಂಡ್ರೆ ರಸೆಲ್, ರಮನ್‌ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಆರೋರ, ವರುಣ್ ಚಕ್ರವರ್ತಿ
ಕೆಕೆಆರ್ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. 12 ಅಂಕ ಸಂಪಾದಿಸಿದೆ. ಇತ್ತ ಮುಂಬೈ ಇಂಡಿಯನ್ಸ್ ಕೇವಲ 3 ಪಂದ್ಯ ಗೆದ್ದು 6 ಅಂಕ ಸಂಪಾದಿಸಿ 9ನೇ ಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್‌ಗೆ ಪ್ಲೇ ಆಫ್ ಅವಕಾಶದ ಬಾಗಿಲು ಬಹುತೇಕ ಮುಚ್ಚಿದೆ. ಆದರೆ ಕೆಕೆಆರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಸ್ತಾನಕ್ಕೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ.
ವಿಶ್ವಕಪ್‌ಗೆ ಆಯ್ಕೆಯಾದರೆ ಸಿಡಿಸಲು ಪಟಾಕಿ, ಹಂಚಲು ಸಿಹಿ ತಂದು ಕಾಯುತ್ತಿದ್ದ ರಿಂಕು ತಂದೆ!
ಅಂಕಪಟ್ಟಿ
ಅಂಕಪಟ್ಟಿಯಲ್ಲಿ ರಾಜಸ್ಥಾನ ಮೊದಲ ಸ್ಥಾನದಲ್ಲಿದೆ. 10ರಲ್ಲಿ 8 ಪಂದ್ಯಗಳನ್ನು ಗೆದ್ದು 16 ಅಂಕ ಸಂಪಾದಿಸಿದೆ. 2ನೇ ಸ್ಥಾನದಲ್ಲಿರುವ ಕೋಲ್ಕತಾ 9ರಲ್ಲಿ 6 ಪಂದ್ಯ ಗೆದ್ದುಕೊಂಡಿದೆ. ಲಖನೌ ಸೂಪರ್‌ಜೈಂಟ್ಸ್ ಮೂರನೇ ಸ್ಥಾನದಲ್ಲಿದ್ದರೆ, ಸನ್‌ರೈಸರ್ಸ್ ಹೈದರಾಬಾದ್ 4ನೇ ಸ್ಥಾನದಲ್ಲಿದೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ 5ನೇ ಸ್ಥಾನದಲ್ಲಿದೆ. ಕೊನೆಯ ಹಾಗೂ 10ನೇ ಸ್ಥಾನದಲ್ಲಿ ಆರ್‌ಸಿಬಿ ಸ್ಥಾನ ಪಡೆದುಕೊಂಡಿದೆ.