ಟೆನಿಸ್‌ನ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಹಿರಿಯ ಟೆನಿಸಿಗ, ಕನ್ನಡಿಗ ರೋಹನ್ ಬೋಪಣ್ಣ-ಋತುಜಾ ಭೋಸಲೆ ಜೋಡಿಗೆ ಚಿನ್ನ ಲಭಿಸಿತು. ಫೈನಲ್‌ನಲ್ಲಿ ಭಾರತದ ಜೋಡಿಯು ಚೈನೀಸ್ ತೈಪೆಯ ತ್ಸುಂಗ್ ಹಾವೊ-ಶೂವೊ ಲಿಯಾಂಗ್ ಜೋಡಿ ವಿರುದ್ಧ 2-6, 6-3, 10-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿತು.
ಹಾಂಗ್ಝೂ(ಅ.01): ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಬಂಗಾರ ಬೇಟೆ ಮುಂದುವರಿದಿದ್ದು, ಶನಿವಾರ ಮತ್ತೆರಡು ಚಿನ್ನದ ಪದಕಗಳು ಭಾರತದ ಖಾತೆಗೆ ಸೇರ್ಪಡೆಗೊಂಡಿವೆ. ಕ್ರೀಡಾಕೂಟದ 7ನೇ ದಿನವಾದ ಶನಿವಾರ ಭಾರತಕ್ಕೆ 2 ಚಿನ್ನದ ಜೊತೆ 2 ಬೆಳ್ಳಿ, 1 ಕಂಚು ಸಹ ದೊರೆಯಿತು. ಜೊತೆಗೆ ಇನ್ನೂ ಕೆಲ ಸ್ಪರ್ಧೆಗಳಲ್ಲಿ ಭಾರತಕ್ಕೆ ಪದಕ ಖಚಿತವಾಗಿವೆ. ಒಟ್ಟಾರೆ ಭಾರತದ ಪದಕ ಗಳಿಕೆ 38ಕ್ಕೆ ಏರಿಕೆಯಾಗಿದ್ದು, ಪಟ್ಟಿಯಲ್ಲಿ 4ನೇ ಸ್ಥಾನದಲ್ಲೇ ಮುಂದುವರಿದಿದೆ. ಪದಕ ಬೇಟೆಯ ನಾಗಾಲೋಟ ಮುಂದುವರಿಸಿರುವ ಚೀನಾ 114 ಚಿನ್ನ ಸೇರಿ ಒಟ್ಟು 216 ಪದಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದೆ.
ಸ್ಕ್ವಾಶ್‌ನಲ್ಲಿ ದಶಕದ ಬಳಿಕ ಚಿನ್ನ
undefined
ಭಾರತ ಪುರುಷರ ಸ್ಕ್ವ್ಯಾಶ್ ತಂಡ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ 2-1 ಅಂತರದಲ್ಲಿ ಗೆದ್ದು ಚಿನ್ನ ತನ್ನದಾಗಿಸಿಕೊಂಡಿತು. ಮೊದಲ ಪಂದ್ಯದಲ್ಲಿ ಮಹೇಶ್ ಮಂಗಾಂವ್ಕರ್ ಸೋತ ಹೊರತಾಗಿಯೂ, ಭಾರತ ಪುಟಿದೆದ್ದಿತು. ಸೌರವ್ ಘೋಷಲ್ ಗೆಲುವು ಸಾಧಿಸಿ ಸಮಬಲಗೊಳಿಸಿದರು. ನಿರ್ಣಾಯಕ ಪಂದ್ಯದಲ್ಲಿ ಅಭಯ್ ಸಿಂಗ್ ರೋಚಕ ಗೆಲುವು ಸಾಧಿಸಿ ದೇಶಕ್ಕೆ ಚಿನ್ನ ತಂದುಕೊಟ್ಟರು. ಭಾರತದ ಪುರುಷರ ತಂಡ ಈ ಮೊದಲು 2014ರ ಏಷ್ಯಾಡ್‌ನಲ್ಲಿ ಕೊನೆ ಬಾರಿ ಚಿನ್ನದ ಪದಕ ಗೆದ್ದಿತ್ತು. ಮಹಿಳಾ ತಂಡ ಈವರೆಗೂ ಚಿನ್ನ ಗೆದ್ದಿಲ್ಲ.
ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನಲ್ಲಿ ಮಾರಾಮಾರಿ, 6 ಮಂದಿಗೆ ಗಾಯ, ಟೂರ್ನಿ ರದ್ದು!
ಬೋಪಣ್ಣ-ಭೂಸಲೆಗೆ ಬಂಗಾರ
ಟೆನಿಸ್‌ನ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಹಿರಿಯ ಟೆನಿಸಿಗ, ಕನ್ನಡಿಗ ರೋಹನ್ ಬೋಪಣ್ಣ-ಋತುಜಾ ಭೋಸಲೆ ಜೋಡಿಗೆ ಚಿನ್ನ ಲಭಿಸಿತು. ಫೈನಲ್‌ನಲ್ಲಿ ಭಾರತದ ಜೋಡಿಯು ಚೈನೀಸ್ ತೈಪೆಯ ತ್ಸುಂಗ್ ಹಾವೊ-ಶೂವೊ ಲಿಯಾಂಗ್ ಜೋಡಿ ವಿರುದ್ಧ 2-6, 6-3, 10-4 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿತು. 2018ರ ಜಕಾರ್ತ ಏಷ್ಯಾಡ್‌ನಲ್ಲಿ ಬೋಪಣ್ಣ, ದಿವಿಜ್ ಶರಣ್ ಜೊತೆಗೂಡಿ ಚಿನ್ನದ ಪದಕ ಗೆದ್ದಿದ್ದರು. ಇದೇ ವೇಳೆ 27ರ ಋತುಜಾ ಭೋಸಲೆಗೆ ಇದು ಚೊಚ್ಚಲ ಏಷ್ಯಾಡ್ ಪದಕ.
2 ದಶಕದಲ್ಲೇ ಕಳಪೆ ಪ್ರದರ್ಶನ : ಟೆನಿಸ್‌ನಲ್ಲಿ ಈ ಬಾರಿ ನಿರೀಕ್ಷಿತ ಪ್ರದರ್ಶನ ತೋರದ ಭಾರತ ಕೇವಲ 2 ಪದಕದೊಂದಿಗೆ ಅಭಿಯಾನ ಕೊನೆಗೊಳಿಸಿತು. ಇದು 2 ದಶಕಗಳಲ್ಲೇ ಭಾರತದ ಕಳಪೆ ಪ್ರದರ್ಶನ. ಈ ಮೊದಲು 2002ರಲ್ಲಿ 4 ಪದಕ ಪಡೆದಿದ್ದ ಭಾರತ, 2006ರಲ್ಲಿ 4, 2010ರಲ್ಲಿ 5, 2014ರಲ್ಲಿ 5 ಹಾಗೂ 2018ರಲ್ಲಿ 3 ಪದಕ ಜಯಿಸಿತ್ತು. ಈ ಬಾರಿ ಮತ್ತೊಂದು ಪದಕ ಗೆದ್ದಿದ್ದು ಪುರುಷರ ಡಬಲ್ಸ್‌ನಲ್ಲಿ. ಸಾಕೇತ್ ಮೈನೇನಿ-ರಾಮ್ ಕುಮಾರ್ ರಾಮನಾಥನ್ ಬೆಳ್ಳಿ ಪಡೆದಿದ್ದರು.
ಸೆಲೆಬ್ರೆಟಿ ಕ್ರಿಕೆಟ್ ಲೀಗ್‌ನಲ್ಲಿ ಮಾರಾಮಾರಿ, 6 ಮಂದಿಗೆ ಗಾಯ, ಟೂರ್ನಿ ರದ್ದು!
10000 ಮೀಟರ್ ಓಟ: ಕಾರ್ತಿಕ್‌ಗೆ ಬೆಳ್ಳಿ, ಗುಲ್ವೀರ್‌ಗೆ ಕಂಚು
ಅಥ್ಲೆಟಿಕ್ಸ್‌ನಲ್ಲಿ ಶನಿವಾರ ಭಾರತ 2 ಪದಕಗಳನ್ನು ತನ್ನದಾಗಿಸಿಕೊಂಡಿತು. ಪುರುಷರ 10000 ಮೀ. ಓಟದ ಸ್ಪರ್ಧೆಯಲ್ಲಿ ಕಾರ್ತಿಕ್ 28 ನಿಮಿಷ 15.38 ಸೆಕೆಂಡ್‌ಗಳಲ್ಲಿ ಕ್ರಮಿಸಿ 2ನೇ ಸ್ಥಾನಿಯಾದರೆ, ಗುಲ್ವೀರ್ ಸಿಂಗ್ 28 ನಿಮಿಷ 17.21 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಕಂಚು ಗೆದ್ದರು. 28 ನಿಮಿಷ 13.62 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ ಬಹರೇನ್‌ನ ಬಿರ್ಹಾನು ಬಲೇವ್ ಚಿನ್ನ ಜಯಿಸಿದರು. ಇದೇ ವೇಳೆ ಪುರುಷರ 400 ಮೀ. ಓಟದಲ್ಲಿ ಮುಹಮ್ಮದ್ ಅಜ್ಮಲ್ 45.97 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 5ನೇ ಸ್ಥಾನ, ಮಹಿಳೆಯರ ವಿಭಾಗದಲ್ಲಿ ಐಶ್ವರ್ಯಾ ಮಿಶ್ರಾ(53.50 ಸೆಕೆಂಡ್) 4ನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಶೂಟಿಂಗ್‌ನಲ್ಲಿ ರಾಜ್ಯದ ದಿವ್ಯಾಗೆ 2ನೇ ಬೆಳ್ಳಿ ಪದಕ
ಕರ್ನಾಟಕದ ತಾರಾ ಶೂಟರ್ ದಿವ್ಯಾ ಟಿ.ಎಸ್. ಈ ಬಾರಿ ಏಷ್ಯಾಡ್‌ನಲ್ಲಿ 2 ಪದಕ ಗೆದ್ದಿದ್ದಾರೆ. ಶನಿವಾರ ಅವರು 10 ಮೀ. ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಸರಬ್‌ಜೋತ್ ಸಿಂಗ್ ಜೊತೆಗೂಡಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಸ್ಪರ್ಧೆಯಲ್ಲಿ ಭಾರತದ ಜೋಡಿಗೆ ಚಿನ್ನ ಗೆಲ್ಲುವ ಎಲ್ಲಾ ಅವಕಾಶಗಳಿದ್ದರೂ, ಚೀನಾದ ಜೋಡಿ ವಿರುದ್ಧ 14-16ರಿಂದ ವೀರೋಚಿತ ಸೋಲು ಕಂಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿತು. ದಿವ್ಯಾ ಈಗಾಗಲೇ ಮಹಿಳೆಯರ 10 ಮೀ. ಏರ್ ಪಿಸ್ತೂಲ್ ತಂಡ ವಿಭಾಗದಲ್ಲಿ ಬೆಳ್ಳಿ ಪಡೆದಿದ್ದರು. ಕೂಟದ ಶೂಟಿಂಗ್‌ನಲ್ಲಿ ಭಾರತದ ಈವರೆಗೆ 6 ಚಿನ್ನ ಸೇರಿ ಒಟ್ಟು 19 ಪದಕ ಗೆದ್ದಿದೆ.
ಬಾಕ್ಸಿಂಗ್: ಪ್ರೀತಿ ಪವಾರ್ ಒಲಿಂಪಿಕ್ಸ್‌ಗೆ ಟಿಕೆಟ್ ಕನ್ಫರ್ಮ್
ಬಾಕ್ಸಿಂಗ್‌ನಲ್ಲಿ ಶನಿವಾರ ಭಾರತ ಮತ್ತೆ ಮೂರು ಪದಕ ಖಚಿತಪಡಿಸಿಕೊಂಡಿತು. ಮಹಿಳೆಯರ 54 ಕೆ.ಜಿ. ವಿಭಾಗದಲ್ಲಿ ಪ್ರೀತಿ ಪವಾರ್, 3 ಬಾರಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ, ಕಜಕಸ್ತಾನದ ಝೈನಾ ಶೆಕೆರ್‌ಬೆಕೋವಾ ವಿರುದ್ಧ 4-1ರಿಂದ ಗೆದ್ದು ಸೆಮೀಸ್‌ಗೇರಿದರು. ಇದರೊಂದಿಗೆ ಕನಿಷ್ಠ ಕಂಚಿನ ಪದಕ ಖಚಿತಪಡಿಸಿಕೊಂಡ ಅವರು, 2024ರ ಪ್ಯಾರಿಸ್ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದರು. ಮಹಿಳೆಯರ 75 ಕೆ.ಜಿ. ವಿಭಾಗದಲ್ಲಿ ಲವ್ಲೀನಾ ಬೊರ್ಗೊಹೈನ್, ಪುರುಷರ 92+ ಕೆ.ಜಿ. ವಿಭಾಗದಲ್ಲಿ ನರೇಂದರ್ ಸೆಮೀಸ್‌ಗೇರಿ ಪದಕ ಖಚಿಪಡಿಸಿಕೊಂಡರು