ಏನೋ ಮಂತ್ರ ಹೇಳ್ಕೊಂಡು ಐಪಿಎಲ್ ಬಿಡ್ ಮಾಡಿದ ಮುಂಬೈ ಇಂಡಿಯನ್ಸ್ ಓನರ್ ನೀತಾ ಅಂಬಾನಿ!

By Roopa Hegde  |  First Published Nov 28, 2024, 2:51 PM IST

ಮುಂಬೈ ಇಂಡಿಯನ್ಸ್ ತಂಡದ ಓನರ್ ನೀತಾ ಅಂಬಾನಿ ವಿಡಿಯೋ ವೈರಲ್ ಆಗಿದೆ. ಸದಾ ಫ್ಯಾಷನ್ ವಿಷ್ಯಕ್ಕೆ ಸುದ್ದಿಯಾಗುವ ನೀತಾ ಈ ಬಾರಿ ಭಿನ್ನ ವಿಚಾರಕ್ಕೆ ಚರ್ಚೆಗೆ ಬಂದಿದ್ದಾರೆ. ಅವರ ಮಂತ್ರ – ತಂತ್ರ ವಿದ್ಯೆ ಎಲ್ಲರನ್ನು ಸೆಳೆದಿದೆ. 
 


ಐಪಿಎಲ್ ಹರಾಜು (IPL auction) ಪ್ರಕ್ರಿಯೆ ಮುಗಿದ್ರೂ ಅದ್ರ ಚರ್ಚೆ ಇನ್ನೂ ನಡಿತಾನೇ ಇದೆ. ಈ ಐಪಿಎಲ್ ಹರಾಜಿನಲ್ಲಿ ಅತಿ ಹೆಚ್ಚು ಗಮನ ಸೆಳೆದಿದ್ದು ಆಟಗಾರರಲ್ಲ, ಬದಲಿಗೆ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (India richest businessman Mukesh Ambani) ಪತ್ನಿ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಮಾಲೀಕೆ ನೀತಾ ಅಂಬಾನಿ (Mumbai Indians team owner Nita Ambani). ನೀತಾ ಅಂಬಾನಿ ಐಪಿಎಲ್ ಮೊದಲ ದಿನದ ಹರಾಜಿನಲ್ಲಿ ಧರಿಸಿದ್ದ ಡ್ರೆಸ್, ಅವರ ಸ್ಟೈಲ್, ಅವರ ಬ್ಯಾಗ್ ಎಲ್ಲವೂ ಸುದ್ದಿಯಾಗ್ತಾನೆ ಇದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಅವರ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ನೀತಾ ಅಂಬಾನಿ ಹಾಗೂ ಅಂಬಾನಿ ಕುಟುಂಬದ ಯಶಸ್ಸಿನ ಗುಟ್ಟು ರಟ್ಟಾಗಿದೆ. 

ಐಪಿಎಲ್ ಹರಾಜು ಆರಂಭವಾಗುವ ಮುನ್ನ ನೀತಾ ಅಂಬಾನಿ ತಮ್ಮ ಮಗ ಆಕಾಶ್ ಅಂಬಾನಿ ಜೊತೆ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕೈನಲ್ಲಿ ಕೆಲ ದಾಖಲೆಗಳನ್ನು ಹಿಡಿದಿರುವ ನೀತಾ ಅಂಬಾನಿ, ಮಂತ್ರ ಹೇಳ್ತಿದ್ದಾರೆ. ಮಂತ್ರ ಉಚ್ಚರಿಸುತ್ತಾ ಮೊದಲು ಕಣ್ಣು, ನಂತ್ರ ಹಣೆ ಹಾಗೂ ತಲೆಯನ್ನು ಮುಟ್ಟುತ್ತಾರೆ. ಹೀಗೆ ಎರಡು ಬಾರಿ ಅವರು ಮಾಡೋದನ್ನು ನೀವು ನೋಡಬಹುದು.

Tap to resize

Latest Videos

ಭಾರತೀಯನ ಗಳಿಕೆ ಕೇಳಿದ್ರೆ ತಲೆ ಸುತ್ತುತ್ತೆ! ಲಂಡನ್ ನಲ್ಲೂ ಸಿಗುತ್ತಾ ಇಷ್ಟೊಂದು ಸಂಬಳ?

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಐಪಿಎಲ್ ನಲ್ಲಿ ಮುಂಬೈ ತಂಡ ವಿಜೇತವಾಗ್ಲಿ ಎನ್ನುವ ಕಾರಣಕ್ಕೆ ನೀತಾ ಈ ತಂತ್ರ – ಮಂತ್ರವನ್ನು ಬಳಸುತ್ತಿದ್ದಾರೆ ಎಂದು ಬಳಕೆದಾರರು ಹೇಳ್ತಿದ್ದಾರೆ. ಹರಾಜಿನಲ್ಲಿ ಹಣಕ್ಕಿಂತ ತಂತ್ರ – ಮಂತ್ರ ಕೆಲಸ ಮಾಡುತ್ತೆ ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. 

ಎರಡು ದಿನಗಳ ಹಿಂದೆ ಪೋಸ್ಟ್ ಆಗಿರುವ ವಿಡಿಯೋಕ್ಕೆ ಈವರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ. ಬಹುತೇಕ ಬಳಕೆದಾರರು, ನೀತಾ ಅಂಬಾನಿ ಹೇಳುತ್ತಿರುವ ಮಂತ್ರ ನಮಗೂ ಬೇಕು ಎನ್ನುತ್ತಿದ್ದಾರೆ. ನೀತಾ ಅಂಬಾನಿ ಯಾವ ಮಂತ್ರವನ್ನು ಉಚ್ಚರಿಸುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ. ಆದ್ರೆ ಅವರು ದೇವರ ಮೊರೆ ಹೋಗಿರೋದು ವಿಡಿಯೋ ನೋಡಿದ್ರೆ ಸ್ಪಷ್ಟವಾಗುತ್ತದೆ. ಅವರು ಕೃತಜ್ಞತಾ ಪ್ರಾರ್ಥನೆ ಮಾಡುತ್ತಿದ್ದಾರೆ ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ನೀತಾ, ಮಂತ್ರ ಹೇಳ್ತಿಲ್ಲ, ನೆಗೆಟಿವ್ ಎನರ್ಜಿಯನ್ನು ದೂರ ಓಡಿಸುತ್ತಿದ್ದಾರೆಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ನೀತಾ ಸನಾತನ ಧರ್ಮವನ್ನು ಬಲವಾಗಿ ನಂಬುತ್ತಾರೆ. ಅವರು ಹರಾಜಿಗೆ ಮೊದಲು ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಅಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ದೇವರಿಗೆ ಧನ್ಯವಾದ ಹೇಳುವ ವಿಧಾನ ಇದು ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. 

ಜಿಯೋ, ಏರ್‌ಟೆಲ್‌ಗೆ ಶಾಕ್ ಕೊಟ್ಟ BSNL; ಕೇವಲ 97 ರೂ.ಗೆ ಪ್ರತಿ ದಿನ 2GB ಡೇಟಾ, ಅನ್‌ಲಿಮಿಟೆಡ್ ಕಾಲ್!

ನೀತಾ ಅಂಬಾನಿ ಈ ವಿಡಿಯೋವನ್ನು ನೋಡಿದ ಕೆಲ ಬಳಕೆದಾರರು ಇದು ಬರೀ ಶೋ ಎಂದಿದ್ದಾರೆ. ಇನ್ನು ಕೆಲವರು ನೀತಾ ಪರ ನಿಂತಿದ್ದಾರೆ. ನೀತಾ ಎಷ್ಟೇ ಶ್ರೀಮಂತರಾಗಿದ್ದರು ಅವರು ದೇವರ ಪೂಜೆ, ಆರಾಧನೆಯನ್ನು ಮರೆಯುವುದಿಲ್ಲ. ಪ್ರತಿ ಬಾರಿ ತಮ್ಮ ಕೆಲಸಕ್ಕಿಂತ ಮೊದಲು ಅವರು ದೇವರ ಮಂತ್ರವನ್ನು ಪಠಿಸುತ್ತಾರೆ. ಇದು ಅಂಬಾನಿ ಕುಟುಂಬವನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ನೀತಾ ಅಂಬಾನಿ ಮಂತ್ರ ಪಠಣಕ್ಕೆ ಸಂಬಂಧಿಸಿದಂತೆ ಬಳಕೆದಾರರ ಮಧ್ಯೆ ಸಾಕಷ್ಟು ವಾದ – ವಿವಾದ ಕೂಡ ನಡೆದಿದೆ. ನೀತಾ ಮಂತ್ರ ಹೇಳ್ತಿದ್ದು, ಈ ಬಾರಿ ಕಪ್ ಮುಂಬೈ ಇಂಡಿಯನ್ಸ್ ಗೆ ನಿಶ್ಚಿತ ಎಂದು ಫ್ಯಾನ್ಸ್ ನಂಬಿದ್ದಾರೆ. ಮೊದಲ ದಿನದ ಹರಾಜಿನಲ್ಲಿ ನೀತಾ ಅಂಬಾನಿ ಪ್ಯಾಂಟ್, ಸೂಟ್ ಧರಿಸಿ ಬಂದಿದ್ದರು. ಮಜಿ ಬ್ರ್ಯಾಂಡ್ ಗೆ ಸೇರಿದ್ದ ಈ ಪ್ಯಾಂಟ್ ಮತ್ತು ಸೂಟ್ ಬೆಲೆ ಬರೋಬ್ಬರಿ 78 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. 
 

click me!