ವಿಜಯ್ ಮಲ್ಯ ಬ್ಯಾಂಕ್‌ಗಳಿಗೆ ಮೋಸ ಮಾಡಿರಬಹುದು, ಆದರೆ ಯಾವತ್ತೂ ಆರ್‌ಸಿಬಿ ಅಭಿಮಾನಿಗಳಿಗೆ ಮೋಸ ಮಾಡಿಲ್ಲ. ಇದು ಐಪಿಎಲ್ ಹರಾಜಿನ ಬಳಿಕ ಆರ್‌ಸಿಬಿಯ ಕೆಲ ಅಭಿಮಾನಿಗಳ ಅಭಿಪ್ರಾಯ. ಇದೀಗ ಇದೇ ಅಭಿಪ್ರಾಯ ಭಾರಿ ಸದ್ದು ಮಾಡುತ್ತಿದೆ.
ಬೆಂಗಳೂರು(ನ.27) ಐಪಿಎಲ್ 2025ರ ಹರಾಜು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಬೇಸರ ತರಿಸಿದೆ. ಟ್ರೋಫಿ ಗೆಲ್ಲದಿದ್ದರೂ ಆರ್‌ಸಿಬಿ ಅಭಿಮಾನಿಗಳು ಯಾವತ್ತೂ ತಂಡವನ್ನು ಬಿಟ್ಟುಕೊಟ್ಟಿಲ್ಲ. ಆದರೆ ಈ ಬಾರಿ ಆರ್‌ಸಿಬಿ ಟೀಂ ಮ್ಯಾನೇಜ್ಮೆಂಟ್ ಖರೀದಿ ಹಲವರಿಗೆ ಬೇಸರ ತರಿಸಿದೆ. ಕೆಲ ಪ್ರಮುಖ ಆಟಗಾರರನ್ನು ಖರೀದಿಸಬೇಕಿತ್ತು ಅನ್ನೋದು ಅಭಿಮಾನಿಗಳ ವಾದ. ಹರಾಜಿನ ಬಳಿಕ ಅತೀ ಹೆಚ್ಚು ಟ್ರೋಲ್ ಆಗಿರುವುದು ಆರ್‌ಸಿಬಿ ತಂಡ. ಇದೀಗ ಅಭಿಮಾನಿಗಳು ರಾಯಲ್ ಜಾಲೆಂಜರ್ಸ್ ಬೆಂಗಳೂರು ಮಾಜಿ ಮಾಲೀಕ ವಿಜಯ್ ಮಲ್ಯ ನೆನೆಪಿಸಿಕೊಂಡಿದ್ದಾರೆ. ವಿಜಯ್ ಮಲ್ಯ ಬ್ಯಾಂಕ್‌ಗಳಿಗೆ ಮೋಸ ಮಾಡಿರಬಹುದು. ಆದರೆ ಆಟಗಾರರ ಖರೀದಿ ವಿಚಾರದಲ್ಲಿ ಯಾವತ್ತೂ ಆರ್‌ಸಿಬಿ ಅಭಿಮಾನಿಗಳಿಗೆ ಮೋಸ ಮಾಡಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಆರ್‌ಸಿಬಿಯ ಕೆಟ್ಟ ಮ್ಯಾನೇಜ್ಮೆಂಟ್ ನೀರಿನಲ್ಲಿ ಬಿದ್ದವರಂತೆ ಆಟಗಾರರ ಖರೀದಿ ಮಾಡಿದೆ. ಕೆಎಲ್ ರಾಹುಲ್, ಯಜುವೇಂದ್ರ ಚಹಾಲ್, ಮೊಹಮ್ಮದ್ ಸಿರಾಜ್ ಸೇರಿದಂತೆ ಹರಾಜಿನಲ್ಲಿದ್ದ ಕೆಲ ಪ್ರಮುಖ ಆಟಗಾರರ ಆರ್‌ಸಿಬಿ ಖರೀದಿಸಿಬೇಕಿತ್ತು. ಪರ್ಸ್‌ನಲ್ಲಿ ದುಡ್ಡಿದ್ದರೂ ಆರ್‌ಸಿಬಿ ಖರೀದಿಗೆ ಮುಂದಾಗಿಲ್ಲ ಅನ್ನೋದು ಅಭಿಮಾನಿಗಳ ಆಕ್ರೋಶ. ಇದೇ ಕಾರಣಕ್ಕೆ ಅಭಿಮಾನಿಗಳು ಹಣ ಉಳಿಸಿಕೊಂಡು ನೇರವಾಗಿ ಟ್ರೋಫಿಯನ್ನೇ ಖರೀದಿಸುತ್ತಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಇದರ ನಡುವೆ ಅಭಿಮಾನಿಗಳು ಆರ್‌ಸಿಬಿ ತಂಡಕ್ಕೆ ವಿಜಯ್ ಮಲ್ಯನೇ ಸರಿ ಎಂದು ಕಮೆಂಟ್ ಮಾಡುತ್ತಿದ್ದಾರೆ.
undefined
ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಸಿಡಿದೆದ್ದ ಫ್ಯಾನ್ಸ್: RCB ಟೀಮ್ ಖರೀದಿಸಲು ಅಭಿಮಾನಿಗಳ ಮಾಸ್ಟರ್ ಪ್ಲಾನ್!
ಸದ್ಯದ ಆರ್‌ಸಿಬಿ ಟೀಂ ಮ್ಯಾನೇಜ್ಮೆಂಟ್ ನೋಡಿದ ಬಳಿಕ ನಮ್ ವಿಜಯ್ ಮಲ್ಯ ಕಾಕಾನೇ ಚೆನ್ನಾಗಿದ್ರು. ಒಳ್ಳೇ ಆಟಗಾರರನ್ನು ಖರೀದಿಸುತ್ತಿದ್ದರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲ ಆರ್‌ಸಿಬಿ ಅಭಿಮಾನಿಗಳು ನಾವೇ ಆರ್‌ಸಿಬಿ ಫ್ರಾಂಚೈಸಿ ಖರೀದಿಸುತ್ತೇವೆ ಎಂದು ಅಭಿಯಾನ ಆರಂಭಿಸಿದ್ದಾರೆ. ಆರ್‌ಸಸಿಬಿ ಅಭಿಮಾನಿಗಳಿಂದ 1,000 ರೂಪಾಯಿ ಹಣ ಸಂಗ್ರಹಿಸಿ ಆರ್‌ಸಿಬಿ ಖರೀದಿಸಲು ಪ್ಲಾನ್ ಮಾಡುತ್ತಿದ್ದಾರೆ. ಇದರಿಂದ ಉತ್ತಮ ಆಟಗಾರರ ಖರೀದಿಸಬಹುದು ಅನ್ನೋ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆಟಗಾರರ ವಿಚಾರದಲ್ಲಿ ವಿಜಯ್ ಮಲ್ಯಗ್ಗೆ ಸ್ಪಷ್ಟತೆ ಇತ್ತು ಅನ್ನೋದರಲ್ಲಿ ಎರಡು ಮಾತಿಲ್ಲ. ಕಾರಣ ಬೆಂಗಳೂರು ತಂಡದಲ್ಲಿ ಬೆಂಗಳೂರು ಆಟಗಾರರು ಇರಬೇಕು ಅನ್ನೋದು ವಿಜಯ್ ಮಲ್ಯ ಒತ್ತಾಸೆಯಾಗಿತ್ತು. ಐಪಿಎಲ್ 2008ರ ಮೊದಲ ಹರಾಜಿನಲ್ಲಿ ವಿಜಯ್ ಮಲ್ಯ ಖುದ್ದು ಹಾಜರಿದ್ದರು. ಈ ವೇಳೆ ಅನಿಲ್ ಕುಂಬ್ಳೆ ಹೆಸರು ಬಿಡ್ಡಿಂಗ್‌ನಲ್ಲಿ ಬರುತ್ತಿದ್ದಂತೆ, ಹೀ ಈಸ್ ಮೈ ಬಾಯ್. ನೋ ಒನ್ ಕ್ಯಾನ್ ಟಚ್( ಆತನ ನಮ್ಮ ಹುಡುಗ, ಯಾರು ಮುಟ್ಟಲು ಸಾಧ್ಯವಿಲ್ಲ) ಎಂದು ಹೇಳಿ ಅನಿಲ್ ಕುಂಬ್ಳೆಯನ್ನು ಖರೀದಿಸಿದ್ದರು. ಈ ರೀತಿಯ ಹಲವು ಆಟಗಾರರನ್ನು ವಿಜಯ್ ಮಲ್ಯ ಅವಧಿಯಲ್ಲಿ ಖರೀದಿಸಿಲಾಗಿದೆ. ಈ ಪೈಕಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್ ಸೇರಿದಂತೆ ಪ್ರಮುಖ ಆಟಗಾರರು ವಿಜಯ್ ಮಲ್ಯ ಅವಧಿಯಲ್ಲೇ ತಂಡ ಸೇರಿಕೊಂಡಿದ್ದರು.