'ಹರಾಜಿನಲ್ಲಿ ನಿರೀಕ್ಷೆಗಿಂತ ಕಡಿಮೆ ಹಣ ಸಿಕ್ತು': ನಿರಾಸೆ ಹೊರಹಾಕಿದ ಕೆಕೆಆರ್ ಸ್ಟಾರ್ ಕ್ರಿಕೆಟಿಗ!

By Naveen Kodase  |  First Published Nov 27, 2024, 4:31 PM IST

ಐಪಿಎಲ್ ಮೆಗಾ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಕೂಡಿಕೊಂಡ ಆಟಗಾರ ತಮಗೆ ಕಡಿಮೆ ಮೊತ್ತ ಸಿಕ್ಕಿದೆ ಎಂದು ನಿರಾಸೆ ಹೊರ ಹಾಕಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ


ಬೆಂಗಳೂರು: 2025ರ ಐಪಿಎಲ್ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಯಶಸ್ವಿಯಾಗಿ ಮುಕ್ತಾಯವಾಗಿದೆ. ಈ ಹರಾಜಿನಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟರ್ಸ್‌ ಸಾಕಷ್ಟು ಅಳೆದುತೂಗಿ ತಮಗೆ ಬೇಕಾದ ಆಟಗಾರರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಕೆಕೆಆರ್ ತಂಡ ಕೂಡಿಕೊಂಡ ಆಫ್ಘಾನಿಸ್ತಾನ ಮೂಲದ ವಿಕೆಟ್ ಕೀಪರ್ ಬ್ಯಾಟರ್, ತಮಗೆ ಹರಾಜಿನಲ್ಲಿ ಸಿಕ್ಕ ಹಣದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದಾರೆ.

ಹೌದು, ಎರಡು ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ್ದ ಆಫ್ಘಾನ್ ತಂಡದ ಸ್ಪೋಟಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ ಅವರನ್ನು ಕೋಲ್ಕತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮೂಲ ಬೆಲೆಗೆ ಖರೀದಿಸುವಲ್ಲಿ ಯಶಸ್ವಿಯಾಗಿದೆ. ಆದರೆ ತಮಗೆ ಸಿಕ್ಕಿದ ಎರಡು ಕೋಟಿ ರುಪಾಯಿ ಕಡಿಮೆಯಾಯಿತು ಎಂದು ಆಫ್ಘಾನ್ ಮೂಲದ ಗುರ್ಬಾಜ್ ನಿರಾಸೆ ವ್ಯಕ್ತಪಡಿಸಿದ್ದಾರೆ.

Latest Videos

undefined

ಒಂದೇ ಟೀಮ್‌ನಲ್ಲಿ ಶ್ರೇಯಸ್ ಅಯ್ಯರ್-ಯುಜುವೇಂದ್ರ ಚಹಲ್! ಧನಶ್ರೀ ವರ್ಮಾ ಫುಲ್ ಟ್ರೋಲ್

Abu Dhabi T10 League में Rahmanullah Gurbaz ने फोड़ डाला!

◆ देखिये अपूर्व मिश्रा के साथ गुरबाज की खास बातचीत | pic.twitter.com/Q7at3fmYti

— News24 (@news24tvchannel)

ನನಗೆ ಒಂದು ವೇಳೆ ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕತ್ವದ ಅವಕಾಶ ಕೊಟ್ಟರೆ ಖಂಡಿತವಾಗಿಯೂ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ. ರೆಹಮನುಲ್ಲಾ ಗುರ್ಬಾಜ್, ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ನಡೆಯುವ ಹಲವು ಟಿ20 ಲೀಗ್‌ನಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡಿರುವ ರೆಹಮನುಲ್ಲಾ ಗುರ್ಬಾಜ್, 2023ರ ಐಸಿಸಿ ಏಕದಿನ ವಿಶ್ವಕಪ್, 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ಒಂದೇ ಟೀಮ್‌ನಲ್ಲಿ ಶ್ರೇಯಸ್ ಅಯ್ಯರ್-ಯುಜುವೇಂದ್ರ ಚಹಲ್! ಧನಶ್ರೀ ವರ್ಮಾ ಫುಲ್ ಟ್ರೋಲ್

ರೆಹಮನುಲ್ಲಾ ಗುರ್ಬಾಜ್, ಅಗ್ರಕ್ರಮಾಂಕದಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ರೆಹಮನುಲ್ಲಾ ಗುರ್ಬಾಜ್ ಆಫ್ಘಾನಿಸ್ತಾನ ತಂಡದ ಪರ 46 ಏಕದಿನ, 63 ಟಿ20 ಪಂದ್ಯಗಳನ್ನಾಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 39ರ ಬ್ಯಾಟಿಂಗ್ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಗುರ್ಬಾಜ್ 8 ಶತಕ ಸಿಡಿಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗುರ್ಬಾಜ್ 135ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲೂ ರೆಹಮನುಲ್ಲಾ ಗುರ್ಬಾಜ್ ಒಂದು ಶತಕ ಹಾಗೂ 11 ಅರ್ಧಶತಕ ಸಿಡಿಸಿದ್ದಾರೆ.

click me!