ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಸಿಡಿದೆದ್ದ ಫ್ಯಾನ್ಸ್: RCB ಟೀಮ್ ಖರೀದಿಸಲು ಅಭಿಮಾನಿಗಳ ಮಾಸ್ಟರ್ ಪ್ಲಾನ್!

Published : Nov 27, 2024, 05:46 PM ISTUpdated : Nov 27, 2024, 06:02 PM IST
ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಸಿಡಿದೆದ್ದ ಫ್ಯಾನ್ಸ್: RCB ಟೀಮ್ ಖರೀದಿಸಲು ಅಭಿಮಾನಿಗಳ ಮಾಸ್ಟರ್ ಪ್ಲಾನ್!

ಸಾರಾಂಶ

ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ದ ರೊಚ್ಚಿಗೆದ್ದಿರುವ ಫ್ಯಾನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಖರೀದಿಸಲು ಮುಂದಾಗಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಈ ಬಾರಿಯ ಐಪಿಎಲ್ ಆಟಗಾರರ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿಸದೇ ತಪ್ಪು ಮಾಡಿದೆ ಎನ್ನುವಂತಹ ಚರ್ಚೆ ಜೋರಾಗಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಫ್ಯಾನ್ಸ್ ಅಸಾಧ್ಯವಾದ ಕನಸನ್ನು ಕಂಡಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸುವ ಬಗ್ಗೆ ಬಿಸಿಬಿಸಿ ಚರ್ಚೆ ಹುಟ್ಟುಹಾಕಿದ್ದಾರೆ.

ಹೌದು, ALL INDIA RCB TEAM FANS ASSOCIATION ನಿಂದ ಆರ್‌ಸಿಬಿ ಟೀಂ ಖರೀದಿಸಲು ಪ್ಲಾನ್ ಮಾಡಿದೆ. ಈ ಕುರಿತಂತೆ ಮಂಡ್ಯದ 'ಮಳವಳ್ಳಿ ಆರ್‌ಸಿಬಿ' ಅಭಿಮಾನಿಗಳಿಂದ ಕ್ರಾಂತಿಕಾರಕ ನಿರ್ಧಾರವನ್ನು ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ಟೀಮೂ ನಮ್ಮದೇ, ಕಪ್ಪೂ ನಮ್ಮದೇ ಎಂಬ ಧ್ಯೇಯ ವಾಕ್ಯದೊಂದಿಗೆ ಆರ್‌ಸಿಬಿ ಮಾಲೀಕತ್ವ ಪಡೆಯಲು ಮುಂದಾಗಿದೆ. 

ಇದು ಅಸಾಧ್ಯವೆಂದು ಗೊತ್ತಿದ್ದರೂ ಈ ಪೋಸ್ಟರ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಪ್ರಸಕ್ತಿ ಸೀಸನ್ ಐಪಿಎಲ್ ಆಟಗಾರರ ಹರಾಜಿನಲ್ಲಿ ಆರ್‌ಸಿಬಿ ಫ್ರಾಂಚೈಸಿಯು ಎಡವಿರುವುದಕ್ಕೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಷ್ಟೇ ಅಲ್ಲದೇ ಆರ್‌ಸಿಬಿ ತಂಡವನ್ನು ಖರೀದಿಸಲು ಮಾಸ್ಟರ್ ಪ್ಲಾನ್ ಕೂಡಾ ಅಭಿಮಾನಿಗಳು ರೂಪಿಸಿದ್ದಾರೆ.  

10 ಲಕ್ಷ ಆರ್‌ಸಿಬಿ ಅಭಿಮಾನಿಗಳಿಂದ ತಲಾ 10 ಸಾವಿರದಂತೆ ಷೇರು ಹಣ ಸಂಗ್ರಹ ಮಾಡುವುದು. ಆ ಬಳಿಕ ಸಂಗ್ರಹವಾದ 1,000 ಕೋಟಿ ಹಣದಲ್ಲಿ ತಂಡದ ಆಟಗಾರರನ್ನು ಖರೀದಿಸುವುದು. ಅಭಿಮಾನಿಗಳ ವೋಟಿಂಗ್ ಮೂಲಕ ಯಾವ ಆಟಗಾರರನ್ನ ಖರೀದಿಸಬೇಕು ಎನ್ನುವುದನ್ನು ತೀರ್ಮಾನಿಸುವುದು. ಹಾಗೂ ಪ್ರತಿ ಸದಸ್ಯರಿಗೆ ಐಪಿಎಲ್‌ ಸೀಸನ್ ನಲ್ಲಿ ಆರ್‌ಸಿಬಿ ಆಡುವ ಒಂದು ಪಂದ್ಯವನ್ನ ಉಚಿತವಾಗಿ ವೀಕ್ಷಣೆ ಮಾಡಲು ಅನುವು ಮಾಡಿಕೊಡುವುದು. ಅಭಿಮಾನಿಗಳೇ ಬನ್ನಿ ಆರ್‌ಸಿಬಿ ಮಾಲೀಕರಾಗೋಣ. ತಂಡವನ್ನ ಆಯ್ಕೆ ಮಾಡಲು ಕೈ ಜೋಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಸೋಷಿಯಲ್ ಮೀಡಿಯಾ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!
2025ರಲ್ಲಿ ಪಾಕಿಸ್ತಾನಿಯರು ಗೂಗಲ್‌ ಸರ್ಚ್‌ನಲ್ಲಿ ಹುಡುಕಿದ್ದು ಟೀಂ ಇಂಡಿಯಾದ ಈ ಆಟಗಾರನನ್ನು! ಆದ್ರೆ ಅದು ಕೊಹ್ಲಿ, ರೋಹಿತ್ ಅಲ್ಲ!