ಇಂದಿನ ದಿನಗಳ ಪಾಲಕರು ಮಕ್ಕಳಿಗೆ ಸಹಾಯ ಮಾಡಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆದರೆ, ಇದೇ ಸಮಯಕ್ಕೆ ಅವರಲ್ಲಿ ತಾವು ಅತ್ಯುತ್ತಮ ಪಾಲಕರು ಎಂದು ತೋರಿಸಿಕೊಳ್ಳುವ ಭಾವನೆ ಮನೆಮಾಡಿರುತ್ತದೆ. ಅದಕ್ಕಾಗಿ ಅವರು ತಮ್ಮ ಮಗುವನ್ನು ಪರಿಪೂರ್ಣ ಎನ್ನುವಂತೆ ಬಿಂಬಿಸುತ್ತಾರೆ. ಮಗುವಿಂದ ಶ್ರೇಷ್ಠವಾದುದನ್ನೇ ಬಯಸುತ್ತ ಗೋಲ್ಡನ್ ಚೈಲ್ಡ್ ಸಿಂಡ್ರೋಮ್ ಸಮಸ್ಯೆಯನ್ನು ಸೃಷ್ಟಿಸುತ್ತಾರೆ.
ಮಕ್ಕಳ ಪ್ರಪಂಚ ಎಷ್ಟು ಸುಂದರ ಎನಿಸುತ್ತದೆ. ಆದರೆ, ಅವರಿಗೂ ಅವರದ್ದೇ ಆದ ಒತ್ತಡಗಳಿರುತ್ತವೆ. ಅದರಲ್ಲೂ ಅವರ ಪಾಲಕರು ಅತಿಯಾಗಿ ನಿರೀಕ್ಷೆ ಮಾಡುವವರಾಗಿದ್ದರೆ ಮಕ್ಕಳ ಒತ್ತಡ ಹೆಚ್ಚಾಗುತ್ತದೆ. ಸಣ್ಣ ಪ್ರಮಾಣದ ಆರೋಗ್ಯಕರ ಒತ್ತಡ ಎಲ್ಲರಿಗೂ ಅಗತ್ಯ. ಅದರಿಂದ ಮಕ್ಕಳು ಸ್ಪರ್ಧಾತ್ಮಕ ಮನಸ್ಥಿತಿ ಬೆಳೆಸಿಕೊಳ್ಳಲು ಕಾರಣವಾಗುತ್ತದೆ. ಆದರೆ, ಇದು ಅತಿಯಾದಾಗ ಗೋಲ್ಡನ್ ಚೈಲ್ಡ್ ಸಿಂಡ್ರೋಮ್ ಎನಿಸಿಕೊಳ್ಳುತ್ತದೆ. ಪಾಲಕರು ತಮ್ಮ ಮಗುವನ್ನು ಎಲ್ಲರಿಗಿಂತ ಅತ್ಯುತ್ತಮ ಎನ್ನುವ ಭಾವನೆಯಲ್ಲಿರುವಾಗ, ಅದಕ್ಕೆ ತಕ್ಕಂತೆ ಮಕ್ಕಳ ಮೇಲೆ ಒತ್ತಡ ಹಾಕುವಾಗ ಉಂಟಾಗುವ ಸಿಂಡ್ರೋಮ್ ಇದು. ಮಕ್ಕಳು ತಮ್ಮ ಸಾಮರ್ಥ್ಯವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳುವುದು ಬೇರೆ, ಆದರೆ, ಅವರು ಎಲ್ಲದರಲ್ಲೂ ಅತ್ಯುತ್ತಮವಾಗಿರಬೇಕು ಎಂದು ಪಾಲಕರು ನಿರೀಕ್ಷೆ ಮಾಡುವುದು ಬೇರೆ. ಗೋಲ್ಡನ್ ಚೈಲ್ಡ್ ಸಿಂಡ್ರೋಮ್ ಹೊಂದಿರುವ ಮಕ್ಕಳು ಪಾಲಕರನ್ನು ಅತಿಯಾಗಿ ಓಲೈಸಲು ನೋಡುತ್ತಾರೆ. ಇದೇ ಈ ಸಿಂಡ್ರೋಮಿನ ಪ್ರಮುಖ ಲಕ್ಷಣ.
ಮಗುವನ್ನು (Child) ಅಸಾಧಾರಣವನ್ನಾಗಿ (Exceptional) ರೂಪಿಸಲು ಪಾಲಕರು (Parents) ಅತಿಯಾದ ಒತ್ತಡ (Stress) ಹೇರುವ ಮಾರ್ಗ ಅನುಸರಿಸುತ್ತಾರೆ. ಹೀಗೆ ಮಾಡಿದಾಗ, ಆ ಮಗು ಕೆಲವು ಕೌಶಲ (Skill) ಗಳಿಸಿಕೊಳ್ಳುವುದೇನೋ ನಿಜ. ಆದರೆ, ಇದಕ್ಕಾಗಿ ಆ ಮಗು ಅನುಭವಿಸಿದ ಭಾವನಾತ್ಮಕ (Emotional) ಏರಿಳಿತ (Turmoil) ಅನೂಹ್ಯವಾಗಿರುತ್ತದೆ. ಅದು ಜೀವನದ ದೃಷ್ಟಿಕೋನವನ್ನು ಬದಲಿಸಿಬಿಡುತ್ತದೆ. ನಿರಂತರವಾದ ಈ ಹಿಂಸೆಯಿಂದಾಗಿ ಮಕ್ಕಳ ಮನೋಧರ್ಮವೇ ವ್ಯತ್ಯಾಸವಾಗುತ್ತದೆ. ಅಷ್ಟಕ್ಕೂ ಪಾಲಕರ ಕೆಲಸವೆಂದರೆ, ತಮ್ಮ ಮಗುವನ್ನು ಖುಷಿಯಾಗಿ ಬೆಳೆಸುವುದು ಅಷ್ಟೆ. ಬರೀ ಯಶಸ್ವಿಯಾಗುವುದನ್ನೇ ಕಲಿಸುವುದು ಸರಿಯಲ್ಲ. ಗೋಲ್ಡನ್ ಚೈಲ್ಡ್ ಸಿಂಡ್ರೋಮ್ ಗೆ ಏನೆಲ್ಲ ಕಾರಣಗಳಿವೆ ನೋಡಿ.
ಮಕ್ಕಳಲ್ಲಿ ಹೆಚ್ಚಾಗ್ತಿರೋ ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣಗಳೇನು?
undefined
• ಮಗುವನ್ನು ಅಸಾಧಾರಣ (Extra Ordinary) ಎಂದು ಬಿಂಬಿಸುವುದು
ಎಲ್ಲ ಬಾರಿಯೂ ಪಾಲಕರು ತಮ್ಮ ಮಗುವನ್ನು ಅಸಾಧಾರಣ ಎಂದು ಬಿಂಬಿಸದೆ ಇರಬಹುದು. ಇದರಲ್ಲಿ ಕೆಲವೊಮ್ಮೆ ಶಿಕ್ಷಕರು (Teachers), ಸಂಬಂಧಿಗಳ ಪಾತ್ರವೂ ಇರುತ್ತದೆ. ಇವರ ಉದ್ದೇಶ ಸಕಾರಾತ್ಮಕವಾಗೇ ಇರುತ್ತದೆ. ಆದರೆ, ಅವರ ಹೇಳಿಕೆ ಹಾಗೂ ಕ್ರಿಯೆಗಳು ಸರಿಯಾಗಿರುವುದಿಲ್ಲ. ಜತೆಗೆ, ಪಾಲಕರು ಕೂಡ ತಮ್ಮ ಮಗುವಲ್ಲಿ ಏನಾದರೂ ಹೊಸ ಸಾಮರ್ಥ್ಯ ಕಂಡುಬಂದಾಗ ಥ್ರಿಲ್ ಆಗಿ ಕೊಂಡಾಡುತ್ತಾರೆ. ಕಿರಿಯ ವಯಸ್ಸಿನಲ್ಲಿ ಕೆಲವು ಮಕ್ಕಳು ಅಸಾಧಾರಣ ಬುದ್ಧಿಮತ್ತೆಯುಳ್ಳವರಾಗಿ ಕಂಡುಬರುತ್ತಾರೆ. ಯಾರೊಬ್ಬರ ಸಾಮರ್ಥ್ಯವನ್ನೂ (Capacity) ಕಡಿಮೆ ಅಂದಾಜಿಸಬಾರದು ನಿಜ. ಆದರೆ, ಎಲ್ಲ ಮಕ್ಕಳಲ್ಲೂ ಏನಾದರೊಂದು ಸಾಮರ್ಥ್ಯ ಇದ್ದೇ ಇರುತ್ತದೆ. ಅದೊಂದು ಗುಣವನ್ನು ಇಟ್ಟುಕೊಂಡು ಎಲ್ಲದರಲ್ಲೂ ಅಸಾಧಾರಣ ಎನ್ನುವಂತೆ ಬಿಂಬಿಸಬಾರದು.
• ಮಕ್ಕಳಿಂದ ಬರೀ ಶ್ರೇಷ್ಠವಾದುದನ್ನು (Perfect) ನಿರೀಕ್ಷಿಸುವುದು
ಮಕ್ಕಳು ಮಕ್ಕಳೇ. ಅವರು ತಪ್ಪುಗಳನ್ನು (Mistakes) ಮಾಡುತ್ತಾರೆ, ಕೀಟಲೆ ಮಾಡುತ್ತಾರೆ, ತಮ್ಮದೇ ವಾರಗೆಯವರ ಜತೆ ಕೆಟ್ಟದಾಗಿಯೂ ನಡೆದುಕೊಂಡು ಬುದ್ಧಿ ಕಲಿಯುತ್ತಾರೆ. ಆದರೆ, ಎಲ್ಲ ಸಂದರ್ಭದಲ್ಲೂ ಅವರಿಂದ ಶ್ರೇಷ್ಠವಾದ ವರ್ತನೆ (Behavior), ಶ್ರೇಷ್ಠವಾದ ನಡೆ-ನುಡಿ ನಿರೀಕ್ಷಿಸುವುದು ಸರಿಯಲ್ಲ. ತಪ್ಪು ಮಾಡಿದಾಗ ಮಕ್ಕಳಿಗೆ ಬೆಂಬಲ ನೀಡುವುದಕ್ಕೂ, ಶ್ರೇಷ್ಠವಾಗಿರುವಂತೆ ಒತ್ತಡ ಹೇರುವುದಕ್ಕೂ ವ್ಯತ್ಯಾಸವಿದೆ. ಪಾಲಕರು ತಮ್ಮ ಮಕ್ಕಳ ಬಗ್ಗೆ ಹೆಮ್ಮೆ, ಖುಷಿ ಹೊಂದಿರಬೇಕು.
Parenting Tips: ಪೋಷಕರು ಇಂಥಾ ತಪ್ಪು ಮಾಡಿದ್ರೆ ಮಕ್ಕಳು ಯಾವತ್ತೂ ಕ್ಷಮಿಸೋಲ್ಲ
• ತಮ್ಮ ಬಯಕೆಯಂತೆ ಮಕ್ಕಳನ್ನು ರೂಪಿಸುವ ಯತ್ನ
ಪಾಲಕರು ತಾವೇನು ಬಯಸುತ್ತಾರೋ ಅದರಂತೆ ಮಕ್ಕಳ ಶಿಕ್ಷಣ, ಭವಿಷ್ಯ (Future) ರೂಪಿಸಲು ಯತ್ನಿಸುವುದರಿಂದ ಗೋಲ್ಡನ್ ಚೈಲ್ಡ್ ಸಿಂಡ್ರೋಮ್ ಉಂಟಾಗುತ್ತದೆ. ಇಲ್ಲಿ ಮಕ್ಕಳ ಮೇಲೆ ಅತಿಯಾದ ಒತ್ತಾಯ (Force)ವಿರುತ್ತದೆ. ತಮ್ಮ ಇಷ್ಟಾನಿಷ್ಟಗಳನ್ನು ಬಲಿಕೊಡುವ ಸನ್ನಿವೇಶಗಳಿರುತ್ತವೆ.
ಹೇಗೆ ದೂರ?
ಈ ಸಿಂಡ್ರೋಮ್ ಗೆ ಮಕ್ಕಳು ಬಲಿಯಾಗದಂತೆ ಮಾಡಲು ಪಾಲಕರು ತಮ್ಮ ಮಗುವನ್ನು ಅದು ಹೇಗಿದೆಯೋ ಹಾಗೆ ಒಪ್ಪಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ತಪ್ಪು ಮಾಡಿದಾಗ ಅತಿರೇಕದ ವರ್ತನೆ ಮಾಡಬಾರದು, ಅವರಿಗೆ ಏನು ಇಷ್ಟವೋ ಅದನ್ನು ಮಾಡಲು ಬಿಟ್ಟಾಗ ಅವರಲ್ಲಿ ಸ್ವತಂತ್ರ ಮನೋಭಾವ ಬೆಳೆಯುತ್ತದೆ.