ಟೆಕ್ ಕಂಪನಿ ಆಫರ್, ಡೇಟಿಂಗ್ ಮಾಡಿದರೆ 11,650 ರೂ, ಫೋಟೋಗೆ 760 ರೂ ಕ್ಯಾಶ್ ರಿವಾರ್ಡ್!

By Chethan Kumar  |  First Published Nov 20, 2024, 10:03 AM IST

ಕಂಪನಿಯ ಉದ್ಯೋಗಳು ಡೇಟಿಂಗ್ ಮಾಡಿ ಫೋಟೋ ಪೋಸ್ಟ್ ಮಾಡಿದರೆ 760 ರೂಪಾಯಿ, ಇನ್ನು ಸಂಬಂಧ ಕನಿಷ್ಠ 3 ತಿಂಗಳು ಉಳಿಸಿಕೊಂಡರೆ 11,650 ರೂಪಾಯಿ ನಗದು ರಿವಾರ್ಡ್‌ನ್ನು ಈ ಕಂಪನಿ ನೀಡುತ್ತಿದೆ. ಇನ್ಯಾಕೆ ತಡ ಇಲ್ಲಿ ಉದ್ಯೋಗವೂ ಇದೆ, ಡೇಟಿಂಗ್ ಮಾಡಲು ಆರ್ಥಿಕ ನೆರವೂ ಕೂಡ ಇದೆ. 


ಶೆಹೆನ್ಜೆನ್(ನ.20) ಉದ್ಯೋಗಿಗಳಿಗೆ ದೀಪಾವಳಿ ಸೇರಿದಂತೆ ಕೆಲ ವಿಶೇಷ ಸಂದರ್ಭಗಳಲ್ಲಿ ಕಾರು, ಬೈಕ್,ಬೋನಸ್ ಸೇರಿದಂತೆ ಹಲವು ರೀತಿಯ ಉಡುಗೊರೆ ನೀಡುವುದು ಭಾರತದಲ್ಲಿ ಸಾಮಾನ್ಯ. ಕನಿಷ್ಠ ಒಂದು ಸ್ವೀಟ್ ಬಾಕ್ಸ್ ಆದರೂ ಸಿಗುತ್ತೆ. ಇಲ್ಲೊಂದು ಟೆಕ್ ಕಂಪನಿ ಭರ್ಜರಿ ಆಫರ್ ನೀಡಿದೆ. ಕಂಪನಿಯ ಉದ್ಯೋಗಿಗಳು ಹೊರಗಿನ ಯಾರನ್ನೇ ಡೇಟಿಂಗ್ ಮಾಡಿದರೆ ನಗದು ಬಹುಮಾನ ನೀಡುತ್ತಿದೆ. ಈ ಕಂಪನಿಯ ಉದ್ಯೋಗಿಯಾಗಿದ್ದು ಕಚೇರಿ ಹೊರಗಿನವರನ್ನು ಡೇಟಿಂಗ್ ಮಾಡಿ ಕಂಪನಿಯ ಪ್ಲಾಟ್‌ಫಾರ್ಮ್‌ನಲ್ಲಿ ಡೇಟಿಂಗ್ ಫೋಟೋ ಹಾಕಿದರೆ 760 ರೂಪಾಯಿಯನ್ನು ಕಂಪನಿ ನೀಡಲಿದೆ. ಇಷ್ಟೇ ಅಲ್ಲ ನಿಮ್ಮ ಡೇಟಿಂಗ್ ಸಂಬಂಧ ಕನಿಷ್ಠ 3 ತಿಂಗಳು ಉಳಿಸಿಕೊಂಡರೆ ಅಬ್ಬಬ್ಬಾ ಲಾಟರಿ. ಕಾರಣ 3 ತಿಂಗಳು ಡೇಟ್ ಸಂಬಂಧ ಉಳಿದರೆ 11,650 ರೂಪಾಯಿ ಇಬ್ಬರಿಗೂ ಸಿಗಲಿದೆ. ಇನ್ಯಾಕೆ ತಡ ಇದೇ ಕಂಪನಿಗೆ ಜಾಯಿನ್ ಆಗೋಣ ಅಂತಾ ಆಲೋಚಿಸುತ್ತಿದ್ದೀರಾ? ಆದರೆ ಈ ಟೆಕ್ ಕಂಪನಿ ಇರೋದು ದಕ್ಷಿಣ ಚೀನಾದ ಶೆನ್ಜೆನ್‌ನಲ್ಲಿ. 

ಇನ್‌ಸ್ಟಾ 360 ಅನ್ನೋ ಟೆಕ್ ಕಂಪನಿ ತನ್ನ ಉದ್ಯೋಗಿಗಳಿಗೆ ಈ ಆಫರ್ ನೀಡಿದೆ. ಈ ಕಂಪನಿಯಲ್ಲಿ ಬಹುತೇಕರು ಯುವ ಉದ್ಯೋಗಿಗಳು. ಸಂದರ್ಶನದ ಮೂಲಕ ಆಯ್ಕೆ ಮಾಡಿರುವುದು ಯುವ ಸಮೂಹವನ್ನು. ಆಡಳಿತ ಮಂಡಳಿ, ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಮಾತ್ರ ಅನುಭವಿಗಳಿದ್ದಾರೆ. ಯುವ ಉತ್ಸಾಹ ಹೆಚ್ಚಿರುವ ಕಾರಣ ಈ ಕಂಪನಿ ಯುವ ಸಮೂಹವನ್ನೇ ನೇಮಿಸಿಕೊಂಡಿದೆ. ಆದರೆ ಈ ಯುವ ಸಮೂಹದಲ್ಲಿ  ಒಂದು ಸಮಸ್ಯೆ ಕಾಡುತ್ತಿದೆ. ಸಿಂಗಲ್ ಆಗಿರುವವರು ಸಂತೋಷವಾಗಿಲ್ಲ. ಇದು ಕಂಪನಿ ಕೆಲಸದ ಮೇಲೆ ಹೊಡೆತ ಬೀಳುತ್ತಿದೆ.  ಹೀಗಾಗಿ ಈ ಡೇಟಿಂಗ್ ಆಫರ್ ಘೋಷಿಸಿದೆ.

Tap to resize

Latest Videos

undefined

ಇನ್‌ಸ್ಟಾ 360 ಟೆಕ್ ಕಂಪನಿ ಸಿಂಗಲ್ ಆಗಿರುವ ತನ್ನ ಉದ್ಯೋಗಿಗಳಿಗೆ ಈ ಆಫರ್ ನೀಡಿದೆ. ಯಾವುದೇ ಮ್ಯಾಚ್‌ಮೇಕರ್ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ ಸಂಗಾತಿಯನ್ನು ಕಂಡುಕೊಂಡು ಡೇಟಿಂಗ್ ಮಾಡಿದರೆ ಸಾಕು ಕ್ಯಾಶ್ ರಿವಾರ್ಡ್ ಸುರಿಮಳೆಯಾಗಲಿದೆ. ಮೊದಲ ಭೇಟಿ, ಡೇಟಿಂಗ್ ಯಾವುದೇ ಆದರೂ ನಿಮ್ಮ ಡೇಟಿಂಗ್ ಸತ್ಯವಾಗಿದ್ದರೆ ಸಾಕು. ಫೋಟೋವನ್ನು ಕಂಪನಿ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಬೇಕು. ಹಾಗಂತ ಮುಖ ಕಾಣದಂತೆ, ಬ್ಲರ್ ಮಾಡಿ ಪೋಸ್ಟ್ ಮಾಡುವಂತಿಲ್ಲ. ಕಾರಣ ಸಮಾಜಕ್ಕೆ ಧೈರ್ಯವಾಗಿ ನೀವು ಡೇಟಿಂಗ್ ವಿಚಾರವನ್ನು ಹೇಳಬೇಕು. ಹೀಗೆ ಪೋಸ್ಟ್ ಮಾಡಿದರೆ ಇನ್‌ಸ್ಟಾ 360 ಕಂಪನಿ 760 ರೂಪಾಯಿ ನೀಡಲಿದೆ. ಇಲ್ಲಿ ಇಬ್ಬರಿಗೂ 760 ರೂಪಾಯಿ ಸಿಗಲಿದೆ.

50ರ ಅಂಕಲ್‌ನ ಪ್ರೀತಿ ಫಜೀತಿ, ಡೇಟ್‌ಗೆ ಕರೆದೊಯ್ದು ಕಿಡ್ನಾಪ್ ಮಾಡಿ 3 ಲಕ್ಷ ರೂಗೆ ಬೇಡಿಕೆ ಇಟ್ಟ ಗೆಳತಿ!

ಇನ್ನು ಸಂಬಂಧ ಕನಿಷ್ಠ 3 ತಿಂಗಳು ಉಳಿಸಿಕೊಂಡರೆ ಮಾತ್ರ ಮುಂದಿನ ನಗದು ರಿವಾರ್ಡ್‌ಗೆ ಅರ್ಹರಾಗುತ್ತೀರಿ. ಕನಿಷ್ಠ 30 ತಿಂಗಳು ಅಥವಾ ಅದಕ್ಕಿಂತ ಹೆಚ್ಚು ದಿನಗಳ ಕಾಲ ಸಂಬಂಧ ಉಳಿಸಿಕೊಂಡಿದ್ದರೆ, ತಲಾ 11,650 ರೂಪಾಯಿಯನ್ನು ಟೆಕ್ ಕಂಪನಿ ರಿವಾರ್ಡ್ ರೂಪದಲ್ಲಿ ನೀಡಲಿದೆ. ಇಲ್ಲಿ ಮತ್ತೊಂದು ವಿಶೇಷತೆ ಇದೆ. ಯಾವುದೇ ಮ್ಯಾಚ್‌ಮೇಕರ್ ಮೂಲಕ ಸಂಬಂಧ ಕುದರಿಸಿಕೊಂಡು ಡೇಟಿಂಗ್ ಮಾಡಿದ್ದರೆ ಆ ಮ್ಯಾಚ್‌ಮೇಕರ್ ಪ್ಲಾಟ್‌ಫಾರ್ಮ್‌ಗೂ 11,650 ರೂಪಾಯಿ ರಿವಾರ್ಡ್ ಸಿಗಲಿದೆ.

ಇನ್‌ಸ್ಟಾ 360 ಕಂಪನಿ  ಈ ಆಫರ್ ಘೋಷಿಸಿದ ಬಳಿಕ ಈಗಾಗಲೇ 500 ಫೋಟೋಗಳು ಕಂಪನಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಕಂಪನಿ ಈಗಾಗಲೇ ಪೋಸ್ಟ್ ಮಾಡಿದವರಿಗೆ ಒಟ್ಟು 10,000 ಯುವನ್(ಚೀನಾ ಕರೆನ್ಸಿ) ವಿತರಿಸಿದೆ ಎಂದು ಇನ್‌ಸ್ಟಾ 360 ಹೇಳಿದೆ. ಹೀಗೆ ಪೋಸ್ಟ್ ಮಾಡಿದವರ ಸಂಬಂಧ 3 ತಿಂಗಳು ಉಳಿದರೆ ಬಂಪರ್ ನಗದು ಬಹುಮಾನ ಸಿಗಲಿದೆ.ಇನ್‌ಸ್ಟಾ 360 ಕಂಪನಿ ಈ ಆಫರ್ ಕುರಿತು ಕಂಪನಿ ಉದ್ಯೋಗಿಗಳೇ ಟ್ರೋಲ್ ಮಾಡಿದ್ದಾರೆ. ಈ ಕಂಪನಿ ನನ್ನ ತಾಯಿಗಿಂತ ಹೆಚ್ಚು ನನ್ನ ಮದುವೆ ವಿಚಾರದಲ್ಲಿ ಆಸಕ್ತಿ ಹೊಂದಿದೆ ಎಂದು ಟ್ರೋಲ್ ಮಾಡಿದ್ದಾರೆ. ಮತ್ತೆ ಕೆಲವರ ಈ ಕಂಪನಿ ನೇಮಕಾತಿ ಏನಾದರು ಮಾಡುವ ಪ್ಲಾನ್ ಇದ್ದರೆ ತಿಳಿಸಿ ನಿಮ್ಮ ಡೋರ್ ಮುಂದೆ ನಾನಿದ್ದೇನೆ ಎಂದು ಕಮೆಂಟ್ ಮಾಡಿದ್ದಾರೆ.

ಚೀನಾದಲ್ಲಿ ಮದುವೆ ಹಾಗೂ ಜನನ ಪ್ರಮಾಣ ಭಾರಿ ಕುಸಿತ ಕಂಡಿದೆ. 2024ರ ಅಂಕಿ ಅಂಶ ಪ್ರಕಾರ ಚೀನಾದಲ್ಲಿ 4.74 ಮಿಲಿಯನ್ ಜೋಡಿಗಳು ಮದುವೆ ರಿಜಿಸ್ಟ್ರೇಶನ್ ಮಾಡಿಸಿಕೊಂಡಿದ್ದಾರೆ. 2023ರ ಇದೇ ಸಮಯಕ್ಕೆ ಹೋಲಿಸಿದರೆ ಶೇಕಡಾ 16.6ರಷ್ಟು ಕುಸಿತ ಕಂಡಿದೆ. ಇನ್ನು ಜನನ ಪ್ರಮಾಣದಲ್ಲೂ ಭಾರಿ ಕುಸಿತ ಕಂಡಿದೆ. 2022ರಲ್ಲಿ ಚೀನಾದ ಜನನ ಪ್ರಮಾಣ 1000 ಮಂದಿಗೆ 6.77ರಷ್ಟಿತ್ತು. 2023ರ ವೇಳೆಗೆ ಇದು 6.39ಕ್ಕೆ ಇಳಿಕೆಯಾಗಿದೆ.
 

click me!