ಮದುವೆ ಆಮಂತ್ರಣ ಪತ್ರಿಕೆಯನ್ನು ಕ್ರಿಯೇಟೀವ್ ಆಗಿ ಪ್ರಿಂಟ್ ಮಾಡಿಸುವುದು ಹೊಸದೇನಲ್ಲ. ಆದರೆ ಇಲ್ಲೊಂದು ಜೋಡಿಯ ಲಗ್ನ ಪತ್ರಿಕೆ ಊಹೆಗೆ ನಿಲುಕದ ರೀತಿಯಲ್ಲಿ ಪ್ರಿಂಟ್ ಮಾಡಿಸಿದ್ದಾರೆ. ಈ ಪತ್ರಿಕೆಯಲ್ಲಿನ ಒಂದೊಂದು ವಾಕ್ಯ ನಿಮ್ಮ ಮುಖದಲ್ಲಿ ನಗುವಿನ ಜೊತೆ ನೆನಪುಗಳ ಬುತ್ತಿ ತೆರೆದಿಡಲಿದೆ.
ಮದುವೆ ಕ್ಷಣಗಳನ್ನು ಸ್ಮರಣೀಯವಾಗಿಸಲು ಪ್ರತಿಯೊಬ್ಬರು ಪ್ರಯತ್ನಿಸುತ್ತಾರೆ. ಜೀವನ ಅತ್ಯಮ್ಯೂಲ್ಯ ಕ್ಷಣಗಳಲ್ಲಿ ಒಂದಾಗಿರುವ ಮದುವೆ ಇದೀಗ ಹಲವು ದಿನಗಳ ಹಬ್ಬವಾಗಿ ಮಾರ್ಪಟ್ಟಿದೆ. ಮೆಹಂದಿ, ಸಂಗೀತ್ ಕಾರ್ಯಕ್ರಮ, ಆರತಕ್ಷತೆ, ಮದುವೆ, ಪೋಸ್ಟ್ ವೆಡ್ಡಿಂಗ್ ಸೆರಮನಿ ಹೀಗೆ ಒಂದೆರೆಡಲ್ಲ. ಇನ್ನು ಮದುವೆ ಫಿಕ್ಸ್ ಆದ ಬಳಿಕ ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡಿಸುವಾಗ ಕ್ರಿಯಾತ್ಮಕವಾಗಿ ಮಾಡಿಸುತ್ತಾರೆ. ವೆಡ್ಡಿಂಗ್ ಕಾರ್ಡ್ ಶೈಲಿ ವಿನ್ಯಾಸದಿಂದ ಹಿಡಿದ, ಆಹ್ವಾನಿಸುವ ಪದಗಳ ವರೆಗೆ ಎಲ್ಲವನ್ನೂ ಕ್ರಿಯೇಟೀವ್ ಆಗಿ ಮಾಡಲಾಗುತ್ತದೆ. ಇಲ್ಲೊಂದು ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಊಹೆಗೂ ನಿಲುಕದ ರೀತಿ, ಆದರೆ ವಾಸ್ತವಗಳನ್ನು ಮುಂದಿಟ್ಟುಕೊಂಡು ಕ್ರಿಯೇಟೀವ್ ಆಗಿ ಪ್ರಿಂಟ್ ಮಾಡಿಸಲಾಗಿದೆ.
ಇದು ಹಳೇಯ ವೆಡ್ಡಿಂಗ್ ಕಾರ್ಡ್, ಆಧರೆ ಈಗನ ಎಲ್ಲಾ ಕ್ರಿಯೇಟೀವ್ ಕಾರ್ಡ್‌ಗಳನ್ನು ಮೀರಿಸಿದೆ. ಕಾಮಿಡಿಯನ್ ಅಕ್ಷರ್ ಪಾಠಕ್ ಈ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಿಕೊಂಡಿದ್ದಾರೆ. ಈ ಮದುವೆ ಕಾರ್ಡ್‌ನಲ್ಲಿ ವಾಸ್ತವಕ್ಕೆ ಹತ್ತಿರವಾದ ಪದಗಳ ಬಳಕೆ ಮಾಡಲಾಗಿದೆ. ಇಲ್ಲಿ ವಧು ವರರ ಹೆಸರಿಲ್ಲ. ಸಾಮಾನ್ಯವಾಗಿ ಪತ್ರಿಕೆಯಲ್ಲಿ ವಧು ಹಾಗೂ ವರರ ಹೆಸರು ದೊಡ್ಡದಾಗಿ, ಪೋಷಕರ ಹೆಸರು, ವಿಳಾಸ ಸಣ್ಣದಾಗಿ ನೀಡಲಾಗುತ್ತದೆ. ಪತ್ರಿಕೆ ಆರಂಭದಲ್ಲಿ ಹಾಕುವ ಕುಲದೇವತ ಪ್ರಸನ್ನ ಸೇರಿದಂತೆ ದೇವರ ಸ್ಥುತಿ ಇಲ್ಲಿಲ್ಲ. ಆರಭಂದಲ್ಲೇ ಪಂಚಿಂಗ್ ಡೈಲಾಗ್ ಮೂಲಕ ಪತ್ರಿಕೆ ತೆರೆದುಕೊಳ್ಳುತ್ತದೆ.
undefined
ಮುದ್ದಿನ ನಾಯಿ ಕುರಿತು ಭಾವಿ ಅತ್ತೆ ಆಡಿದ ಒಂದೇ ಮಾತಿಗೆ ಮದುವೆ ರದ್ದುಗೊಳಿಸಿದ ವಧು!
ನಾವು ಎಷ್ಟು ಖರ್ಚು ಮಾಡಿದ್ದೇವೆ? ಈ ಮದುವೆ ಕಾರ್ಡ್ ಒಮ್ಮೆ ನೋಡಿ, ನಾವು ಅಂಬಾನಿಗಿಂತ ಕಡಿಮೆ ಇಲ್ಲ ಎಂದು ಪತ್ರಿಕೆ ಆರಂಭದಲ್ಲಿ ಬರೆಯಲಾಗಿದೆ. ಇನ್ನು ವರ ಹಾಗೂ ವಧುವಿನ ಹೆಸರಿನ ಬದಲು ಶರ್ಮಾ ಜಿಯ ಹುಡುಗ(ಇಲ್ಲೂ ಕೂಡ ನಿಮಗಿಂತ ಮುಂದೆ) ಹಾಗೂ ವರ್ಮಾ ಜಿಯ ಹುಡುಗಿ ಎಂದು ಬರೆಯಲಾಗಿದೆ. ಇವರಿಬ್ಬರ ಮದುವೆಯನ್ನು ಹ್ಯಾಶ್‌ಟ್ಯಾಗ್‌ನಲ್ಲಿ ಹೇಳುವುದಾದರೆ ಶವರ್ಮಾ (#Sha verma) ಎಂದು ಬರೆಯಲಾಗಿದೆ.
ಮದುವೆ ದಿನಾಂಕ ಹೇಳಿದ ಬಳಿಕ ಇದೇ ದಿನ 22,000 ಮದುವೆಗಳಿವೆ. ಹೀಗಾಗಿ ನೀವು ಗಂಟೆಗಳ ಕಾಲ ಟ್ರಾಫಿಕ್‌ನಲ್ಲಿ ಸಿಲುಕುವುದು ಖಚಿತ. ಇನ್ನು ಮದುವೆ ಮಂಟಪದ ಬಳಿಕ 4 ರಿಂದ 5 ಮದುವೆಗಳಿವೆ. ಹೀಗಾಗಿ ನೀವು ಗೊಂದಲಕ್ಕೀಡಾಗಿ ಬೇರೆ ಮದುವೆಗೆ ತೆರಳುವ ಸಾಧ್ಯತೆ ಇದೆ. ವಿಶೇಷ ಸೂಚನೆ, ನೀವು ಯಾವುದೇ ರೀತಿ ಗಿಫ್ಟ್ ನೀಡಬೇಡಿ, ಕೇವಲ ನಗದು ಮಾತ್ರ ನೀಡಿ. ನಿಮ್ಮ ಮಿಕ್ಸ್ ಗ್ರೈಂಡರ್ ತೆಗೆದುಕೊಂಡು ನಾವೇನು ಮಾಡಲಿ ಎಂದು ಆಮಂತ್ರಣ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಇದೇ ಆಮಂತ್ರಣ ಪತ್ರಿಕೆಯಲ್ಲಿ ರಿಸೆಪ್ಶನ್ ಕುರಿತ ಆಹ್ವಾನ ಮಾಡಲಾಗಿದೆ. ಇಲ್ಲೂ ಕೂಡ ಅಷ್ಟೇ ಫನ್ನಿಯಾಗಿ ವಾಕ್ಯಗಳ ಬಳಸಲಾಗಿದೆ. ದೀಪಿಕಾ ಹಾಗೂ ರಣವೀರ್ ಸಿಂಗ್ ತಮ್ಮ ಮದುವೆ ಸೇರಿ 5 ಕಾರ್ಯಕ್ರಮ ಇಟ್ಟಕೊಂಡಿದ್ದರು. ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ 8 ಕಾರ್ಯಕ್ರಮದ ಮೂಲಕ ಮದುವೆಯಾಗಿದ್ದಾರೆ. ನಾವು ಕೂಡ 3 ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ.
An honest wedding card.
Please RSVP pic.twitter.com/0lyXDyyQPe
ಆರತಕ್ಷಕೆ ಕಾರ್ಯಕ್ರಮಕ್ಕ ನಿಮ್ಮನ್ನು ಆಮಂತ್ರಿಸುತ್ತಿದ್ದೇವೆ. ಬಂದ ಆತಿಥಿಗಲು, ಕುಟುಂಬಸ್ಥರು ಮಗನೆ ನಿಂದು ಯಾವಾಗ ಎಂದು ಮಾತ್ರ ಕೇಳಬೇಕು. ರಿಸೆಪ್ಶನ್ 7 ಗಂಟೆಯಿಂದ ಆರಂಭಗೊಳ್ಳಲಿದೆ ಎಂದುದಾಖಲಿಸಿದ್ದಾರೆ. ಆದರೆ ಇದರ ಕೆಳಗಿ ನಾವು ಮಾತ್ರ 8.30ಕ್ಕೆ ಬರುತ್ತೇವೆ ಎಂದಿದ್ದಾರೆ. ಮುಂದಿನ ಪೇಜ್‌ನಲ್ಲಿ ಗೊಂದಲದ ಮ್ಯಾಪ್ ನೀಡಲಾಗಿದೆ ಎಂದು ಬರೆದಿದ್ದಾರೆ.
ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಬಂದಿದೆಯಾ? ಹೊಸ ವೆಡ್ಡಿಂಗ್ ಸೈಬರ್ ಸ್ಕ್ಯಾಮ್ ಪತ್ತೆ!
ಈ ಮ್ಯಾಪ್ ಮೇಲೆ ಭರವಸೆ ಇಡಬೇಡಿ, ದಾರಿಯಲ್ಲಿ ಯಾರಾದರೂ ಸಿಕ್ಕರೆ ವಿಳಾಸ ಕೇಳಿ ಖಚಿತಪಡಿಸಿಕೊಳ್ಳಿ. ಮುಖ್ಯ ರಸ್ತೆಯಲ್ಲಿರುವ ಬ್ಯಾಂಕ್ವೆಟ್ ಹಾಲ್ 1ರಲ್ಲಿ ಅಲ್ಲ, ಬ್ಯಾಂಕ್ವೆಟ್ ಹಾಲ್ 2ರಲ್ಲೂ ಅಲ್ಲ. ನೀವು ಬ್ಯಾಂಕ್ವೆಟ್ ಹಾಲ್ 3ಕ್ಕೆ ಆಗಮಿಸಬೇಕು ಮಿಂಟು ತಂದೆ ಆರ್ಮಿ ಕ್ಯಾಂಟೀನ್‌ನಿಂದ ಖರೀದಿಸಿದ ವಿಸ್ಕಿ ಇಲ್ಲಿ ಪತ್ತೆಯಾಗಿದೆ ಎಂದು ವಿಶೇಷ ರೀತಿಯಲ್ಲಿ, ಫನ್ನಿಯಾಗಿ ಆಮಂತ್ರಣ ಪತ್ರಿಕೆ ಪ್ರಿಂಟ್ ಮಾಡಿಸಲಾಗಿದೆ.2019ರ ಮದುವೆ ಆಮಂತ್ರಣ ಪತ್ರಿಕೆ ಇದು. ಆದರೆ ಈಗಲೂ ಅಷ್ಟೇ ವೈರಲ್ ಆಗುತ್ತಿದೆ.