Physical Relationship : ನಿದ್ರೆಯಲ್ಲಿದ್ದಾಗ ಪತಿ ಜೊತೆ ಸಂಬಂಧ ಬೆಳೆಸಿದ ಪತ್ನಿ.. ಬೆಳಿಗ್ಗೆ ಎದ್ದಾಗ ಆಗಿದ್ದೇನು ಗೊತ್ತಾ?

By Suvarna News  |  First Published Dec 29, 2021, 12:37 PM IST

ಅವರು ಎಷ್ಟೇ ಆಪ್ತರಾಗಿರಲಿ, ಅವರ ವಸ್ತುಗಳನ್ನು ಕೇಳಿ ಪಡೆಯಬೇಕು. ಪ್ರೀತಿಸಿದ ವ್ಯಕ್ತಿ ನನಗೆ ಸ್ವಂತ ಎನ್ನುತ್ತ ಅವರ ಒಪ್ಪಿಗೆಯಿಲ್ಲದೆ ಯಾವುದೇ ಕೆಲಸ ಮಾಡುವುದು ಸರಿಯಲ್ಲ. ದಂಪತಿ ಮಧ್ಯೆ ಸಂಭೋಗದ ವಿಷ್ಯದಲ್ಲೂ ಒಪ್ಪಿಗೆ ಎಂಬುದು ಮಹತ್ವದ ಸ್ಥಾನ ಪಡೆಯುತ್ತದೆ.


ಮದುವೆ (Marriage)ಯಲ್ಲಿ ಒಪ್ಪಿಗೆ ಅತ್ಯಂತ ಮುಖ್ಯವಾದ ಪಾತ್ರವಹಿಸುತ್ತದೆ. ಶಾರೀರಿಕ ಸಂಬಂಧ ಬೆಳೆಸಲು ಮಾತ್ರವಲ್ಲ ಮನೆಯ ಪ್ರತಿಯೊಂದು ನಿರ್ಧಾರ (Decision) ತೆಗೆದುಕೊಳ್ಳುವಾಗಲೂ ಪರಸ್ಪರರ ಒಪ್ಪಿಗೆ (Agree) ಅಗತ್ಯವಾಗುತ್ತದೆ. ಪತಿ-ಪತ್ನಿ ನಡುವಿನ ಸಂಬಂಧ  ಪರಸ್ಪರ ಗೌರವ ಮತ್ತು ಒಪ್ಪಿಗೆ ಮೇಲೆ ನಿಂತಿದೆ. ಇಬ್ಬರ ಮಧ್ಯೆ ಇವೆರಡೂ ಕಡಿಮೆಯಾದಾಗ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಮಹಿಳೆಯೊಬ್ಬಳು ದೈಹಿಕ ಸಂಬಂಧಕ್ಕೆ ಬೆಲೆ ನೀಡಿ ಪತಿಯ ಒಪ್ಪಿಗೆ ಪಡೆಯುವುದನ್ನು ಮರೆತಿದ್ದಾಳೆ. ಇದರಿಂದ ಆಕೆ ಒಳ್ಳೆಯ ಪಾಠ ಕಲಿತಿದ್ದಾಳೆ. ಆಕೆ ಮಾತ್ರವಲ್ಲ ಅನೇಕರಿಗೆ ತನ್ನ  ಕಥೆ ಹೇಳುವ ಮೂಲಕ  ಎಚ್ಚರಿಕೆ ನೀಡಿದ್ದಾಳೆ. 

ನಿದ್ರೆಯಲ್ಲಿದ್ದ ಪತಿಯೊಂದಿಗೆ ಸಂಬಂಧ : ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ವೈಯಕ್ತಿಕ ಸಂಬಂಧಗಳ ಬಗ್ಗೆ ಬಹಿರಂಗವಾಗಿ ಮಾತನಾಡ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೆ ವೆಬ್ಸೈಟ್ (Website) ಗಳಲ್ಲಿ ಈ ಬಗ್ಗೆ ಜನರು ತಮ್ಮ ಅನುಭವ ಹಂಚಿಕೊಳ್ತಿದ್ದಾರೆ. ದಿ ಸನ್  ವೆಬ್‌ಸೈಟ್ನ 'ಡಿಯರ್ ಡೀಡ್ರೆ' ಎಂಬ ಸರಣಿಯಲ್ಲಿ ಅನೇಕರು ತಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಇದ್ರಲ್ಲಿ ಮಹಿಳೆಯೊಬ್ಬಳು ತನ್ನ ಖಾಸಗಿ ಅನುಭವವನ್ನು ಹಂಚಿಕೊಂಡಿದ್ದಾಳೆ. ಪತಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದಾಗ ಆದ ಘಟನೆಯನ್ನು ಮಹಿಳೆ ಹಂಚಿಕೊಂಡಿದ್ದಾಳೆ. ಮಲಗಿದ್ದ ಪತಿ ಜೊತೆ ಮಹಿಳೆ ಸಂಬಂಧ ಬೆಳೆಸಿದ್ದಾಳೆ. ಎಚ್ಚರವಾದಾಗ ಪತಿ (Husband) ಕೋಪಗೊಂಡಿದ್ದ ಎಂದು ಪತ್ನಿ(Wife) ಹೇಳಿದ್ದಾಳೆ.

Latest Videos

Japan Couple: ಇಲ್ಲಿ ಪತಿಗೊಂದು ಹಾಸಿಗೆ, ಪತ್ನಿಗೊಂದು ಹಾಸಿಗೆ ಬೇಕು.. ಯಾಕೆ ಗೊತ್ತಾ?

ಆಕೆ ಹಾಗೂ ಆಕೆ ಗಂಡ ಇಬ್ಬರೂ 28 ವರ್ಷ ವಯಸ್ಸಿನವರಂತೆ. ಮದುವೆಯಾಗಿ ಒಂದು ವರ್ಷವಾಗಿದೆಯಂತೆ. ಕಚೇರಿಗೆ ಹೋಗಿ ಬರುವ ಪತಿ,ಕಚೇರಿಯಿಂದ ಬಂದ ನಂತರ ಸುಸ್ತಾಗ್ತಿದ್ದನಂತೆ. ಇದೇ ಕಾರಣಕ್ಕೆ ಆತನಿಗೆ ಶಾರೀರಿಕ ಸಂಬಂಧದ ಮೇಲೆ ಆಸಕ್ತಿಯಿರಲಿಲ್ಲವಂತೆ. ಒಂದು ದಿನ ಮಹಿಳೆ ವಿಚಿತ್ರ ಸಾಹಸಕ್ಕೆ ಕೈ ಹಾಕಿದ್ದಾಳೆ. ಪತಿ ನಿದ್ರೆ ಮಾಡಿದ ನಂತರ ಶಾರೀರಿಕ ಸಂಬಂಧ ಬೆಳೆಸಿದ್ದಾಳೆ.   

ಪತಿಯಿಂದ ಅತ್ಯಾಚಾರ ಆರೋಪ : ಪತಿ ಸುಸ್ತಾಗಿದ್ದ. ಆತ ಗಾಢ ನಿದ್ರೆ (Sleep)ಯಲ್ಲಿದ್ದ. ಕಣ್ಣು ಮುಚ್ಚಿದ್ದ ಆತನನ್ನು ಎಬ್ಬಿಸಲು ಮಹಿಳೆ ಯತ್ನಿಸಲಿಲ್ಲವಂತೆ. ದೈಹಿಕ ಸಂಬಂಧ ಬೆಳೆಸಿದ ಮಹಿಳೆ ಬೆಳಿಗ್ಗೆ ಈ ವಿಷ್ಯವನ್ನು ಪತಿಗೆ ಹೇಳಿದ್ದಾಳೆ. ಆಗ ಪತಿ ಹೇಳಿದ ಸಂಗತಿ ಕೇಳಿ ದಿಗ್ಭ್ರಮೆಯಾಗಿದೆ. ಪತಿಗೆ ವಿಷ್ಯ ತಿಳಿಯುತ್ತಿದ್ದಂತೆ ಆತ  ತುಂಬಾ ಕೋಪಗೊಂಡನಂತೆ. ಸಂಭೋಗ ಬೆಳೆಸಲು ನನ್ನ ಒಪ್ಪಿಗೆಯನ್ನು ನೀನು ಪಡೆದಿಲ್ಲ. ನನ್ನ ಮೇಲೆ ಅತ್ಯಾಚಾರವೆಸಗಿದ್ದೀಯ ಎಂದು ಪತಿ ಹೇಳಿದ್ದನಂತೆ. 

ಇದನ್ನು ಕೇಳಿ ಒಮ್ಮೆ ಮಹಿಳೆ ದಂಗಾಗಿದ್ದಾಳೆ. ನಂತರ ಆಕೆಗೆ ತಪ್ಪು ಅರಿವಿಗೆ ಬಂದಿದೆ. ಯಾವುದೇ ಸಂಬಂಧದಲ್ಲಿ ಸಮ್ಮತಿ ಅತಿ ಮುಖ್ಯ ಎಂಬುದು ನೆನಪಾಗಿದೆ. ಸಂಭೋಗ ಬೆಳೆಸುವ ವೇಳೆ ನಾನು ಪತಿಯ ಒಪ್ಪಿಗೆ ಪಡೆದಿರಲಿಲ್ಲ. ಪೊಲೀಸರಿಗೆ ದೂರು ನೀಡಿದರೂ ಪೊಲೀಸರು ನನ್ನ ಬೆಂಬಲಕ್ಕೆ ನಿಲ್ತಾರೆಂದು ಪತಿ ಹೇಳಿದ್ದನಂತೆ. ತಪ್ಪು ಗೊತ್ತಾದ ಮೇಲೆ ನಾನು ಪಶ್ಚಾತಾಪ ಪಟ್ಟಿದ್ದೆ ಎಂದು ಮಹಿಳೆ ಹೇಳಿದ್ದಾಳೆ. 

Opal Gemstone : ದಾಂಪತ್ಯದಲ್ಲಿ ಸುಖ ಬೇಕಾ? ಇದನ್ನು ಧರಿಸ್ತಿದ್ದಂತೆ ದೂರವಾಗಲಿದೆ ಪತಿ-ಪತ್ನಿ ನಡುವಿನ ಮುನಿಸು

ಸಂಬಂಧದಲ್ಲಿ ಒಪ್ಪಿಗೆ ಅಗತ್ಯ : ಮಹಿಳೆ ತನ್ನ ಕಥೆಯನ್ನು ಹೇಳ್ತಿದ್ದಂತೆ ಬಳಕೆದಾರರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮದ್ಯಪಾನ ಮಾಡಿದ್ದು ಪ್ರಜ್ಞೆ ತಪ್ಪಿದ್ದರೆ ಅಥವಾ ಯಾವುದೇ ರೀತಿಯಲ್ಲಿ ಪ್ರಜ್ಞಾಹೀನರಾಗಿದ್ದರೆ  ಅವರೊಂದಿಗೆ ಸಂಬಂಧ ಬೆಳೆಸುವುದು ತಪ್ಪು ಎಂದು ಬಳಕೆದಾರರು ಹೇಳಿದ್ದಾರೆ. ಪತಿ ಪೊಲೀಸರ ಬಳಿ ಹೋಗಿಲ್ಲ. ಇದು ನಿಮ್ಮ ಪುಣ್ಯ. ಇಲ್ಲವಾದಲ್ಲಿ ನೀವು ತೊಂದರೆ ಅನುಭವಿಸಬೇಕಾಗಿತ್ತು ಎಂದು ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಇದು ಮಹಿಳೆಯೊಬ್ಬಳ ಕಥೆಯಿರಬಹುದು. ಆದ್ರೆ ಇದು ಎಲ್ಲರಿಗೂ ಒಂದು ಸಂದೇಶ ಸಾರುತ್ತದೆ. ದಾಂಪತ್ಯದಲ್ಲಿ ಬಿರುಕು ಮೂಡಲು ಇಂಥ ವಿಷ್ಯಗಳು ಮುಖ್ಯ ಕಾರಣವಾಗುತ್ತದೆ. ಸಂಭೋಗಕ್ಕೆ ಮಾತ್ರವಲ್ಲದೆ ಪ್ರತಿಯೊಂದು ಕೆಲಸದಲ್ಲೂ ಪರಸ್ಪರ ಒಪ್ಪಿಗೆ ಅತ್ಯಗತ್ಯ,ಅನಿವಾರ್ಯವಾಗಿರುತ್ತದೆ.
 

click me!