ಮಗನ ರೂಮಿನಲ್ಲಿ ರಾತ್ರಿ ಲೈಟ್ ಉರಿಯುತ್ತಿದ್ದದ್ದು ಕಂಡು ತಾಯಿ ಒಳಗೆ ಹೋದಾಗ ಆಘಾತಕಾರಿ ಸತ್ಯ ಬಯಲಾಯಿತು. ಮಗ ಸೆಕ್ಸ್ ಚಾಟ್ ಮಾಡುತ್ತಿದ್ದ. ಇದು ಆ ತಾಯಿಗೆ ನುಂಗಲಾರದ ತುತ್ತಾಯಿತು.
ಧನುಷ್ ಎಂಬ ಕಾಲೇಜ್ ಹುಡುಗನ ತಾಯಿ ತನ್ನ ಸ್ನೇಹಿತೆ ಬಳಿ ಮಗನ ಇತ್ತೀಚಿನ ವರ್ತನೆ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಮಗ ಇತ್ತೀಚೆಗೆ ರೂಮಿಂದ ಹೊರಗೆಯೇ ಬರುತ್ತಿರಲಿಲ್ಲ. ಮನೆಯವರ ಕಣ್ಣಿಗೆ ಕಣ್ಣು ಕೊಟ್ಟು ಮಾತನಾಡುತ್ತಿರಲಿಲ್ಲ. ಸದಾ ಮೂಡಿಯಾಗಿರುತ್ತಿದ್ದ. ಆದರೆ ಮನೆಗೆ ಬರುತ್ತಿದ್ದ ಹೆಣ್ಮಕ್ಕಳಿಂದ ಆತನ ದೃಷ್ಟಿ ಸರಿಯಿಲ್ಲ, ಆತನ ಬಿಹೇವಿಯರ್ ಸರಿಯಿಲ್ಲ ಎಂಬ ಮಾತು ಕೇಳಿ ಬರುತ್ತಿತ್ತು. ಇದರಿಂದ ಆತನ ತಾಯಿಗೆ ಸಾಕಷ್ಟು ಮುಜುಗರ ಉಂಟಾಗುತ್ತಿತ್ತು. ಆದರ ಒಮ್ಮೆ ನಡೆದ ಘಟನೆ ಮಾತ್ರ ಆಕೆಗೆ ನುಂಗಲಾರದ ತುತ್ತಾಗಿತ್ತು. ಆಗ ತಾಯಿ ಮಧ್ಯರಾತ್ರಿ ಎದ್ದು ನೀರು ಕುಡಿಯಲೆಂದು ಮನೆಗೆ ಬಂದಾಗ ಮಗನ ರೂಮಲ್ಲಿ ಲೈಟ್. ಏನು ಅಂತ ನೋಡಿದರೆ ಮಗ ಯಾರ ಜೊತೆಗೋ ಮಾತನಾಡುವಂತಿತ್ತು. ಹತ್ತಿರ ಹೋಗಿ ಕೇಳಿದರೆ ಮಗ ಸೆಕ್ಸ್ ಚಾಟ್ ಮಾಡ್ತಿರೋದು ಗೊತ್ತಾಯ್ತು. ಆ ತಾಯಿ ಏನು ಮಾಡಲೂ ತೋಚದೆ ಎದ್ದು ಬಂದರು. ಇದೊಂಥರ ಉಗುಳಲೂ ಆಗದ ನುಂಗುಲೂ ಆಗದ ತುತ್ತಿನಂತಿತ್ತು. ತನ್ನ ಪತಿಯ ಬಳಿ ಹೇಳಿದರೆ ಆತ ಸಿಟ್ಟಾಗಿ ಮಗನನ್ನು ಹೊಡೆಯಬಹುದು ಎಂಬ ಭಯ. ಹೀಗಾಗಿ ಆಪ್ತ ಸ್ನೇಹಿತೆಯ ಬಳಿ ಹೇಳಿಕೊಳ್ಳಬೇಕಾಯ್ತು. ಇಂಥ ಸಮಸ್ಯೆ ಧನುಷ್ ಮನೆಯಲ್ಲಿ ಮಾತ್ರ ಅಲ್ಲ, ಈ ಕಾಲದ ಹೆಚ್ಚಿನ ಹುಡುಗ, ಹುಡುಗಿಯರ ಮನೆಯಲ್ಲಿ ಕಂಡುಬರುವ ದೃಶ್ಯ. ಇದು ಹೆತ್ತವರಿಗೆ ತರುವ ಸಂಕಟ ಅಷ್ಟಿಷ್ಟಲ್ಲ.
ಇನ್ನು ಈ ಅಶ್ಲೀಲ ವೀಡಿಯೋ ನೋಡುವ ಚಟ ಹೇಗೆ ಬೇಕಿದ್ರೂ ಶುರುವಾಗಬಹುದು. ಒಮ್ಮೆ ಎರಡು ಬಾರಿ ಕುತೂಹಲಕ್ಕೆ ನೋಡಿದ್ದು ನಮಗೆ ಕೂಡಲೇ ಖುಷಿ ಕೊಡುತ್ತದೆ ಎಂದರೆ ಅದು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಕೊಡುತ್ತದೆ ಎಂದೇ ಅರ್ಥ. ಅಶ್ಲೀಲ ಚಿತ್ರಗಳ ವೀಕ್ಷಣೆಯು ಯಾರದೇ ಬದುಕಿನಲ್ಲಿ ಉಪ್ಪಿನಕಾಯಿಯಷ್ಟು ಇದ್ದರೆ ಅದು ಸಹನೀಯ. ಅದೇ ಊಟದಂತೆ ಆದರೆ ದೇಹ-ಮನಸು ಎಲ್ಲವೂ ಹಾಳಾಗುತ್ತದೆ ಎಂಬುದು ಸೈಕಲಾಜಿಸ್ಟ್ ಅಭಿಪ್ರಾಯ. ಸದ್ಯ ಆನ್‌ಲೈನ್ ಪ್ರಪಂಚದಲ್ಲಿ ಅಶ್ಲೀಲ ಚಿತ್ರ / ವಿಡಿಯೊ ವೀಕ್ಷಕರ ಪಾಲು ಶೇ 30ರಷ್ಟಿದೆ. ಅದರಲ್ಲಿ ವಯಸ್ಸು, ಲಿಂಗ ಬೇಧವಿಲ್ಲ. ಆದರೆ ಶೇ 60 ರಷ್ಟು ಯುವಜನ ಇಂಥ ಚಿತ್ರ / ವಿಡಿಯೊ ನೋಡುತ್ತಾರೆ. ಈ ಪೈಕಿಯೂ ಶೇ 74 ಅವರ ಫೋನಿನ ಮೂಲಕವೇ ನೋಡುತ್ತಾರೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.
Intimacy Tips: ಮುಖಮೈಥುನದ ನಂತರ ಬಾಯಿ ತೊಳೆದುಕೊಳ್ಳಲೇಬೇಕಾ?
ಪ್ರಪಂಚದಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಒಂದು ಅಶ್ಲೀಲ ಚಲನಚಿತ್ರವನ್ನು ತಯಾರಿಸಲಾಗುತ್ತದೆ. ಪ್ರತಿ ಸೆಕೆಂಡಿಗೆ 30,000 ಜನರು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ. ಅಶ್ಲೀಲ ಚಿತ್ರಗಳನ್ನು ನೋಡುವ ಚಟ ಅಂಟಿಸಿಕೊಂಡವರು ಮದುವೆಯಾದ ಸಂಗಾತಿಗೆ ದ್ರೋಹ ಮಾಡುವ ಸಾಧ್ಯತೆ ಶೇ 300 ರಷ್ಟು ಇರುತ್ತದೆ ಇತ್ತೀಚಿನ ಸರ್ವೆ. ಇನ್ನೊಂದು ದುರಂತ ಎಂದರೆ ಅಶ್ಲೀಲ ಚಿತ್ರ / ವಿಡಿಯೊ ನೋಡುವ ಗೀಳು ಬೆಳೆಸಿಕೊಂಡ ಶೇ 40 ರಷ್ಟು ಲೈಂಗಿಕ ವ್ಯಸನಿಗಳು ತಮ್ಮ ಸಂಗಾತಿಯನ್ನು ಕಳೆದುಕೊಳ್ಳುತ್ತಾರೆ.
ಅಸಭ್ಯ ಚಿತ್ರ / ವಿಡಿಯೊಗಳನ್ನು ನೋಡಬೇಕು ಎನ್ನುವ ವ್ಯಸನ ಕಾಡುತ್ತಿರುವವರಿಗೆ ಬಿಡುಗಡೆಗೆ ಮಾರ್ಗವೇ ಇಲ್ಲವೇ ಎಂದರೆ ಖಂಡಿತ ಇದೆ.
ವ್ಯಸನದಿಂದ ಹೊರಗೆ ಬರಲು ಇಚ್ಛಿಸುವವರು ಈ ವೀಡಿಯೋ ನೋಡಬೇಕು ಎಂಬ ಟ್ರಿಗರ್‌ನಿಂದ ಉಂಟಾಗುವ ಕಡುಬಯಕೆಯನ್ನು ಕೊಂಚ ಕಾಲ ಅಂದರೆ ಐದು ನಿಮಿಷ ಅಥವಾ ಹತ್ತು ನಿಮಿಷ ಮುಂದೂಡಬೇಕು. ಬದಲಾಗಬೇಕು ಎಂದು ಹಂಬಲಿಸುವವರು ಫೋನಿನಲ್ಲಿರುವ ಹಿಸ್ಟರಿ ಮತ್ತು ಅಂಥ ಡೇಟಾ ಡಿಲೀಟ್ ಮಾಡಬೇಕು. ಕೆಲವೊಂದು ಧ್ಯಾನ ಮತ್ತು ರಿಲ್ಯಾಕ್ಸೇಶನ್ ತಂತ್ರಗಳು ವ್ಯಸನದಿಂದ ಹೊರಗೆ ಬರಲು ಸಹಾಯ ಮಾಡಬಹುದು. ಯೋಗಾಭ್ಯಾಸದಿಂದಲೂ ಸಹಾಯವಾಗುತ್ತದೆ. ಈ ಎಲ್ಲ ಪ್ರಯತ್ನಗಳಿಂದಲೂ ಸಹಾಯ ಆಗವಾಗದಿದ್ದರೆ ಮನಃಶಾಸ್ತ್ರಜ್ಞರ ಸಹಾಯ ಪಡೆದುಕೊಳ್ಳುವುದು ಅವಶ್ಯಕ.
ಚಳಿಗಾಲದಲ್ಲಿ ದೈಹಿಕ, ಮಾನಸಿಕವಾಗಿ ಫಿಟ್ ಆಗಿರಲು 7 ಬೆಳಗಿನ ಹವ್ಯಾಸಗಳು
ಹದಿಹರೆಯದವರು ಮತ್ತು ಪೋಷಕರಿಗೆ ತಿಳಿದಿರಬೇಕಾದ ಅಂಶಗಳೆಂದರೆ ಮಕ್ಕಳ ಮೊಬೈಲಿಗೆ ಪೇರೇಂಟಿಂಗ್ ಗೈಡ್ ಅಫ್ ಹಾಕಬೇಕು. ಮಕ್ಕಳ ಸ್ವಭಾವವನ್ನು ಹತ್ತಿರದಿಂದ ಗಮನಿಸಿ. ಅವರು ಯಾರೊಡನೆಯೂ ಮಾತಾಡದೇ ಇರುವುದು, ಒಂಟಿಯಾಗಿರಬಯಸುವುದು, ಅವರಲ್ಲಿ ಇದ್ದಕ್ಕಿದ್ದಂತೆ ಮೂಡ್ ಬದಲಾವಣೆ, ಖಿನ್ನತೆ, ಅಳು ಅಥವಾ ಕಿರಿಕಿರಿಯ ಸ್ವಭಾವ ಕಂಡು ಬಂದರೆ ಎಚ್ಚರವಹಿಸುವುದು ಅಗತ್ಯ. ಮುಖ್ಯವಾಗಿ ನೀವು ಇಂಥ ವ್ಯಸನದಿಂದ ದೂರ ಇರಿ. ಮಕ್ಕಳು ಹೇಳಿ ಕಲಿಯುವುದಿಲ್ಲ, ಪೋಷಕರನ್ನು ಗಮನಿಸಿ ಕಲಿಯುವುದೇ ಹೆಚ್ಚು. ಈ ಎಚ್ಚರ ಪೋಷಕರಲ್ಲಿ ಸದಾ ಇರಬೇಕು.