
ಬಾಲಿವುಡ್ ನ ಸೂಪರ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ 6ನೇ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ದೀಪಿಕಾ ಹಾಗೂ ರಣವೀರ್ ಸಿಂಗ್ ವಿಶೇಷ ಪೋಸ್ಟನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೀಪ್ವೀರ್ ನವೆಂಬರ್ 14 , 2018 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ವರ್ಷ ತಮ್ಮ ಮೊದಲ ಮಗುವನ್ನ ದಂಪತಿ ಸ್ವಾಗತಿಸಿದ್ದಾರೆ.
ಅಕ್ಷರದ ಮೂಲಕ ಪ್ರೀತಿ ಹಂಚಿಕೊಂಡ ದೀಪಿಕಾ : ಮದುವೆ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ, ಇನ್ಸ್ಟಾದಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಅಲ್ಲಿ ರಣವೀರ್ ಮೇಲಿರುವ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ. ವ್ಯಕ್ತಿಯೊಬ್ಬ ಹಾಸಿಗೆಯಲ್ಲಿ ತೆವಳುತ್ತಿರುವ ವಿಡಿಯೋ ಹಂಚಿಕೊಂಡ ದೀಪಿಕಾ, ನನ್ನ ಪತಿ ಕೆಲಸಕ್ಕೆ ಹೋದ ತಕ್ಷಣ ನಾನು ಹಾಸಿಗೆಯ ಬದಿಗೆ ತೆವಳುತ್ತೇನೆ. ಏಕೆಂದರೆ ಅದು ಬೆಚ್ಚಗಿರುತ್ತದೆ ಮತ್ತು ಅವನಂತೆಯೇ ಅಲ್ಲಿರುವ ಸುವಾಸನೆ ಉತ್ತಮ ನಿದ್ರೆ ಬರಿಸುತ್ತದೆ ಎಂದು ಬರೆದಿರುವ ದೀಪಿಕಾ ಕೊನೆಯಲ್ಲಿ ಹ್ಯಾಪಿ ಆನಿವರ್ಸರಿ ರಣವೀರ್ ಸಿಂಗ್ ಎಂದಿದ್ದಾರೆ.
ಮಗುವಿನ ಫೋಟೋ ಹಾಕಿ ಚಿಲ್ಡ್ರನ್ಸ್ ಡೇ ಗಿಫ್ಟ್ ನೀಡಿದ ಗೊಂಬೆ ನೇಹಾ
ಪ್ರತಿದಿನವೂ ಹೆಂಡತಿಯ ಮೆಚ್ಚುಗೆಯ ದಿನ : ಇನ್ನು ರಣವೀರ್ ಸಿಂಗ್ ಕೂಡ ತಮ್ಮ ಪತ್ನಿಗೆ ವಿಶೇಷವಾಗಿ ಆನಿವರ್ಸರಿ ವಿಶ್ ಮಾಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ದೀಪಿಕಾ ಪಡುಕೋಣೆಯವರ ಕೆಲ ಅನ್ಸೀನ್ ಫೋಟೋಗಳನ್ನು ರಣವೀರ್ ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರತಿದಿನ ಹೆಂಡತಿಯ ಮೆಚ್ಚುಗೆಯ ದಿನ, ಆದರೆ ಇಂದು ಮುಖ್ಯ ದಿನ. ಐ ಲವ್ ಯು ಅಂತ ಶೀರ್ಷಿಕೆ ಹಾಕಿ, ರಣವೀರ್ ಹಂಚಿಕೊಂಡಿರುವ ದೀಪಿಕಾರ ಪ್ರತಿಯೊಂದು ಫೋಟೋ ಕೂಡ ಒಂದೊಂದು ಕಥೆ ಹೇಳುತ್ತದೆ. ಆರಂಭದಲ್ಲಿ ಮನಸ್ಸು ಬಿಚ್ಚಿ ದೀಪಿಕಾ ನಗ್ತಿರುವ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಯಾವಾಗ್ಲೂ ನಗ್ತಾ ಇರು ಎನ್ನುವ ಸಾಂಗನ್ನು ಇದಕ್ಕೆ ಹಾಕಿದ್ದು, ಕೊನೆಯಲ್ಲಿ ದೀಪಿ ಫ್ರೆಗ್ನೆನ್ಸಿ ಫೋಟೋ ಇದೆ.
ದೀಪಿಕಾ ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ಈ ಜೋಡಿಯನ್ನು ಕ್ಯೂಟೆಸ್ಟ್ ಅಂಡ್ ಪರ್ಫೆಕ್ಟ್ ಎಂದು ಕಮೆಂಟ್ ಮಾಡುತ್ತಿದ್ದಾರೆ. ಒಂದು ಮಹಿಳೆ, ಪುರುಷನ ಜೊತೆ ಸಂತೋಷವಾಗಿರೋದನ್ನು ನೋಡಲು ಖುಷಿಯಾಗ್ತಿದೆ. ಯಾಕೆಂದ್ರೆ ಇದನ್ನು ನೋಡಲು ಸಿಗೋದು ಬಹಳ ಅಪರೂಪ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದಲ್ಲದೆ ರಣವೀರ್ಗೆ ಅಭಿಮಾನಿಗಳು ಅತ್ಯುತ್ತಮ ಪತಿ ಪ್ರಶಸ್ತಿ ನೀಡಿದ್ದಾರೆ. ದೀಪಿಕಾರ ಅಪರೂಪದ ಫೋಟೋ ಪೋಸ್ಟ್ ಮಾಡಿದ್ದಕ್ಕೆ ದೀಪಿ ಫ್ಯಾನ್ಸ್, ರಣವೀರ್ಗೆ ಧನ್ಯವಾದ ಹೇಳಿದ್ದಾರೆ.
ಜೊತೆಯಲ್ಲಿ ನಟಿಸಿರುವ ಡಾಲಿ ಧನಂಜಯ್ ನಟ ಶಿವಣ್ಣಗೆ 'ಅರವಟ್ಟಿಗೆ' ಅಂದಿದ್ಯಾಕೆ?
ದೀಪಿಕಾ – ರಣವೀರ್ ಲವ್ ಸ್ಟೋರಿ : ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ 2012 ರಲ್ಲಿ ಗೋಲಿಯೋನ್ ಕಿ ರಾಸ್ಲೀಲಾ ರಾಮಲೀಲಾ ಸೆಟ್‌ನಲ್ಲಿ ಇಬ್ಬರೂ ಪರಸ್ಪರ ಭೇಟಿಯಾಗಿದ್ದರು. 2015 ರಲ್ಲಿ ಅವರು ರಹಸ್ಯವಾಗಿ ನಿಶ್ಚಿತಾರ್ಥ ಮಾಡ್ಕೊಂಡಿದ್ದರು. ಇದಾದ 3 ವರ್ಷಗಳ ನಂತರ, 2018 ರಲ್ಲಿ ಇಬ್ಬರೂ ಇಟಲಿಯಲ್ಲಿ ಕಾಣಿಸಿಕೊಂಡರು. ಅಕ್ಟೋಬರ್ 2024 ರಲ್ಲಿ ಇಬ್ಬರೂ ಮುದ್ದಾದ ಮಗಳಿಗೆ ಪಾಲಕರಾಗಿದ್ದಾರೆ. ಸೆಪ್ಟೆಂಬರ್ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗಳಿಗೆ ದುವಾ ಎಂದು ಹೆಸರಿಟ್ಟಿದ್ದಾರೆ.
ರಣವೀರ್ ಹಾಗೂ ದೀಪಿಕಾ ವೃತ್ತಿ ಜೀವದಲ್ಲಿ ಬ್ಯುಸಿಯಿದ್ದಾರೆ. ಮಗುವಾದ್ಮೇಲೆ ದೀಪಿಕಾ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹಾಗೆ ಮಗುವಿನ ಮುಖ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿಲ್ಲ. ಕೆಲ ದಿನಗಳ ಹಿಂದೆ ಮಗುವಿನ ಕಾಲಿನ ಫೋಟೋವನ್ನು ಮಾತ್ರ ದೀಪಿಕಾ ಪೋಸ್ಟ್ ಮಾಡಿದ್ದರು. ರಣವೀರ್ ಹಾಗೂ ದೀಪಿಕಾ ಅಭಿನಯದ ಸಿಂಗಮ್ ಅಗೈನ್ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.